ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 90ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು.– ಜೈಲು ಸಿಬ್ಬಂದಿಯೊಬ್ಬರು ನನ್ನನ್ನು ಸಂದರ್ಶಕರ ಕೊಠಡಿಗೆ ಕರೆದುಕೊಂಡು...
ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ...
ಲೋಕದಲ್ಲಿ ಜನಿಸಿದಾ ಬಳಿಕ.. ನಮ್ಮ ಬದುಕಿನ ಕಥೆಯನ್ನು ನಾವೇ ಬರೆದುಕೊಂಡರೆ ಅದು ಆತ್ಮಕಥನವಾಗುತ್ತದೆ. ನಮ್ಮ ಜೀವನ ಕಥೆಯನ್ನು ಬೇರೆಯವರು ಬರೆದಾಗ ಅದು ಜೀವನ ಚರಿತ್ರೆಯಾಗುತ್ತದೆ. ಈ ಎರಡೂ ಪ್ರಕಾರಗಳಲ್ಲಿ ಕೆಲವು ಲೋಪಗಳು ತಲೆದೋರುವ ಸಾಧ್ಯತೆಗಳಿವೆ. ಆತ್ಮಕಥನದಲ್ಲಿ ಲೇಖಕ ತನ್ನ ಮೂಗಿನ ನೇರಕ್ಕೆ ಸರಿ ಎನಿಸಿದ್ದನ್ನಷ್ಟೇ ಬರೆಯುತ್ತಾನೆ. ಬದುಕಿನ ಘಟನೆಗಳಿಗೆ ಎರಡನೆಯ ಮಗ್ಗಲೂ ಇರುತ್ತದೆ. ಆ ಮಗ್ಗಲು ಇಲ್ಲಿ ತಪ್ಪಿಹೋಗುತ್ತದೆ. ಜೀವನಚರಿತ್ರಕಾರನಿಗೆ ಬರೆಯುವಾಗ ಆಯ್ಕೆಗಳಿರುತ್ತವೆ. ಈ ಆಯ್ಕೆಯಲ್ಲಿ ಕೆಲವು ಬಿಟ್ಟುಹೋಗುವ ಸಾಧ್ಯತೆಯೂ ಇರುತ್ತದೆ. ಆತ್ಮಕಥನಗಳು ಒಂದು ಸಾಹಿತ್ಯ ಪ್ರಕಾರ ಎನ್ನುವಷ್ಟು...
ಮಾತನಾಡಬೇಡ.(Don`t Speak) ಇದು ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಚೀನದ ಸಾಹಿತಿ ಗುಆನ್ ಮೋಯೆಯ ಕಾವ್ಯನಾಮ “ಮೋ ಯಾನ್” ಎಂಬುದರ ಅರ್ಥ. ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತಿನ ಮಹತ್ವವನ್ನು ವರ್ಣಿಸಿದ ನಾಡು ನಮ್ಮದು. ಆದರೆ ಚೀನದಂಥ ಕಮ್ಯುನಿಸ್ಟ್ ದೇಶದಲ್ಲಿ ಇಲ್ಲವೆ ಮಿಲಿಟರಿ ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಸೃಜನಶೀಲ ಬರೆಹಗಾರನೊಬ್ಬನ ಸ್ಥಿತಿ ಇದು. ಈ ಸ್ಥಿತಿಯನ್ನೇ ತನ್ನ ಕಾವ್ಯನಾಮ ಮಾಡಿಕೊಂಡ ಗೋಆನ್ ಮೋಯೆ ಒಂದರ್ಥದಲ್ಲಿ ವ್ಯವಸ್ಥೆಗೆ ಧಿಕ್ಕಾರ ಹೇಳಿದವರು. ತಮ್ಮ ದೇಶದ ಸಾಮಾಜಿಕ ಮತ್ತು...
ಕಾಲದ ಎದುರು ಎಚ್ಚರ ತಪ್ಪಿದರೆ ಕಾಲವೇ ಕಾಲನೇಮಿಯೂ ಆಗಬಹುದು! ಪಂಚಾಂಗದಲ್ಲಿ ಇನ್ನೊಂದು ವರ್ಷ ಸಂದುಹೋಗಿದೆ. ಗೋಡೆಯ ಮೊಳೆಗೆ ಹೊಸ ಕ್ಯಾಲೆಂಡರ್ ಬಂದು ಕುಂತಿದೆ. ಹೋಗಿಯೇ ಬಿಟ್ಟಿತೇ ಒಂದು ವರ್ಷ ಎಂಬ ಉದ್ಗಾರದಲ್ಲಿಯೇ ಬೇಸರವೋ ಆತಂಕವೋ ಅವರವರ ಭಾವಕ್ಕೆ ತಕ್ಕಂತೆ ಅಭಿವ್ಯಕ್ತಿಗೊಂಡಿರುತ್ತದೆ. ಕಾಲವನ್ನು ಖಂಡಖಂಡವಾಗಿ ನೋಡಿ ಇಲ್ಲವೆ ಅಖಂಡವಾಗಿಯೇ ನೋಡಿ ಅದೇನೋ ನಿಗೂಢತೆ ಅದರಲ್ಲಿ ತುಂಬಿರುತ್ತದೆ.ಕಾಲಮಾನವು ಈಗ ಇದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಕಾಲ ಮತ್ತು ಮನಸ್ಸು ಇವುಗಳಲ್ಲಿ ಯಾವಾಗಲೂ ಒಂದು ರೀತಿಯ ಹೊಯ್ದಾಟ ಇದ್ದೇ ಇರುತ್ತದೆ. ಭವಿಷ್ಯದ...
ಸಾವಿರ ನಿರೀಕ್ಷೆಗಳೊಂದಿಗೆ ನೂರು ನೋವುಗಳನ್ನು ಮರೆಯುವಾ…. ಇದು ಸಂದ ವರ್ಷಕ್ಕೊಂದು ಬೆನ್ನುಡಿ ಹೊಸ ವರ್ಷಕ್ಕೊಂದು ಮುನ್ನುಡಿ. ನಿನ್ನೆ ನಾಳೆಗಳ ಈ ಮಧ್ಯಬಿಂದುವಿನಲ್ಲಿ ಬದುಕೊಂದು ಬಯಲು. ಈ ಬಯಲನ್ನು ಬೆಳಗುವುದು ಹೇಗೆ? ಮಧ್ಯಬಿಂದುವಿನಿಂದ ಬೆಳಕು ಮುಂದೆ ಹರಿಯುವುದು ಹೇಗೆ? ಇದೆಂಥ ಕ್ರಿಯೆ? ಆರುತ್ತಿರುವ ಮೇಣದ ಬತ್ತಿಯಿಂದ ಇನ್ನೊಂದು ಮೇಣದ ಬತ್ತಿಯನ್ನು ಹಚ್ಚಿದಂತೆ ಇದು. ಈ ಬೆಳಕಿನ ಬತ್ತಿಯನ್ನು ಯಾರೂ ಒಯ್ಯದೆ ಹೋದರೆ ಬಯಲು ತುಂಬಾ ಕತ್ತಲೆಯೋ ಕತ್ತಲೆ. ಕಾರಣ ಬೆಳಕಿನ ಬತ್ತಿಯನ್ನು ಒಯ್ಯುವ ಅನಿವಾರ್ಯತೆ ನಮಗೆಲ್ಲರಿಗೂ ಇದೆ.ನಿರೀಕ್ಷೆಗಳು ಸಾಗರದಷ್ಟು...
ಅಖಂಡವಾದ ಕಾಲ ಪ್ರವಾಹದಲ್ಲಿ ಅದೆಷ್ಟೋ ಅಸಂಖ್ಯ ಅಲೆಗಳು. ಈ ಅಲೆಗಳನ್ನು ಲೆಕ್ಕವಿಟ್ಟವರಾರು? ಅಖಂಡ ಕಾಲವನ್ನು ಖಂಡಗಳಲ್ಲಿ ವಿಂಗಡಿಸಿ ನೋಡುವುದು ಅವರವರ ಅನುಕೂಲಕ್ಕೆ. ಒಂದೊಂದು ದೇಶಕ್ಕೆ, ಒಂದೊಂದು ಪ್ರದೇಶಕ್ಕೆ, ಒಂದೊಂದು ಧರ್ಮಕ್ಕೆ, ಒಂದೊಂದು ಮನಸ್ಸಿಗೆ ಈ ಕಾಲಖಂಡ ವಿಭಿನ್ನವಾದುದು. ಕ್ಯಾಲೆಂಡರಿಗೊಂದು, ಪಂಚಾಂಗಕ್ಕೆ ಇನ್ನೊಂದು. ಒಂದೇ ಕಾಲ, ಎಷ್ಟೊಂದು ರೂಪ!ಇರುಳಿರುಳಳಿದು ಬರುತ್ತಿರೆ ಬೆಳಗು ದಿನದಿನವೂ ಹೊಸತು! ಈ ಕ್ಷಣದಲ್ಲಿ ಇನ್ನೊಂದು ಕ್ಷಣದಲ್ಲಿ ಇನ್ನೇನೋ ಸಂಭವಿಸಿ ಬಿಡಬಹುದು ಎಂಬ ನಿರೀಕ್ಷೆ. ಆ ಹೊಸದರ ಒಡಲಲ್ಲಿ ನಮ್ಮೆಲ್ಲ ನೋವಿನಂಧಕಾರವನ್ನು ದೂರಮಾಡುವ ಸೂರ್ಯ ಉದಯಿಸಬಹುದೆಂಬ...
ನಮ್ಮೂರಿನ ರಾಮಯ್ಯನವರು ಅವತ್ತು ಮೂರು ಬಾರಿ ಮನೆಯಲ್ಲಿದ್ದ ಜನರನ್ನು ಪೋಸ್ಟ್್ಮನ್ ಬಂದುಹೋದನೆ ಎಂದು ವಿಚಾರಿಸಿದ್ದರು. ಕೊನೆಗೂ ತಡೆದುಕೊಳ್ಳುವುದು ಆಗದೆ ಅಂಚೆಕಚೇರಿಗೇ ಹೋದರು. ತಮ್ಮ ವಿಳಾಸದ ಪತ್ರ ಏನಾದರೂ ಬಂದಿದೆಯೆ ಎಂದು ವಿಚಾರಿಸಿದರು. `ಇಲ್ಲ’ ಎಂಬ ಪೋಸ್ಟ್್ಮಾಸ್ತರನ ಉತ್ತರದಿಂದ ನಿರಾಶೆಗೊಂಡವರಂತೆ ಕಂಡುಬಂದರು. ಮಾರನೆ ದಿನವೂ ಮತ್ತೆ ಅದೇ ಕಾತರ. ಮೂರು ದಿನದ ನಂತರ ಅಂಚೆಯವನು ಅವರು ನಿರೀಕ್ಷಿಸುತ್ತಿದ್ದ ಪತ್ರ ತಂದು ಕೊಟ್ಟನು. ಓದುವುದಕ್ಕೆಂದು ಧಾರವಾಡಕ್ಕೆ ಹೋಗಿದ್ದ ಅವರ ಮಗ ಬರೆದ ಪತ್ರ ಅದು. ಅವನ ಯೋಗಕ್ಷೇಮದ ಬಗ್ಗೆ, ಅಲ್ಲಿಯ...
ಆಷಾಢ ಕಳೆದೇ ಬಿಟ್ಟಿತು, ಬಂತು ಶ್ರಾವಣ. ಇನ್ನೇನು ಹಬ್ಬಗಳದೇ ಸುಗ್ಗಿ. ಜಿನುಗುವ ಮಳೆ, ಇಳೆಯೊಡಲಿಗೆ ಹಸಿರ ಉಡುಗೆ, ತಂಪು ಗಾಳಿ. ಪ್ರಕೃತಿಯ ಸಂದಿ ಸಂದಿಗಳಲ್ಲೂ ಜೀವ ಚೈತನ್ಯದ ಚಿಲುಮೆ. ಹೊರಗೆಲ್ಲ ಆಹ್ಲಾದ ತುಂಬಿರಲು ಮನೆಯೊಳಗೂ ಖುಷಿ ಅನ್ನುವುದು ಬೇಡವೆ? ಅದಕ್ಕಾಗಿಯೇ ಸಾಲುಸಾಲು ಹಬ್ಬಗಳು.ಹಾಗೆ ನೋಡಿದರೆ ಆಷಾಢವೇ ಹಬ್ಬಗಳಿಗೆ ಖೋ ಕೊಟ್ಟಿರುತ್ತದೆ. ಆಷಾಢದ ಅಮಾವಾಸ್ಯೆಯೇ ಅಳಿಯನ ಅಮಾವಾಸ್ಯೆ. ಹೊಸದಾಗಿ ಮದುವೆಯಾದವರಿಗೆ ಇದು ದೊಡ್ಡ ಹಬ್ಬ. ಈ ಹಬ್ಬವನ್ನು ತಪ್ಪಿಸುವ ಅಳಿಯಂದಿರು ಕಡಿಮೆ. ಮಾವನ ಮನೆಗೆ ಹೋಗಿ ಹಬ್ಬದ ಊಟ...
ಬುದುವಂತ ಕಂಬಳಿಕೊಪ್ಪೆ ಝಾಡಿಸಿ ಮಾಡಿಗೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟ. `ನಿನ್ನೆ ರಾತ್ರಿ ಹಿಡ್ಕಂಡ ಮಳೆ ಇವತ್ತು ಇಷ್ಟೊತ್ತಾದ್ರೂ ಹನಿ ಕಡಿಲಿಲ್ಲ. ಆಕಾಶಕ್ಕೆ ತೂತು ಬಿದ್ದಂಗೆ ಹೊಯ್ದೇ ಹೊಯ್ಯುಕೆ ಹತ್ತಿದೆ’. ಇಂಥದ್ರಲ್ಲಿ ಸಣ್ಣಯ್ಯ ಯಾವ ಕೆಲಸ ಇಟ್ಕೊಂಡು ತನಗೆ ಬರೂಕೆ ಹೇಳಿದ್ದಾರೋ ಅಂದುಕೊಳ್ಳುತ್ತ ಸಣ್ಣಯ್ಯನವರ ಮನೆ ಹೊಸ್ತಿಲು ತುಳಿದ. ಸಣ್ಣಯ್ಯ ಕವಳಕ್ಕೆ ನೀರಡಿಕೆ ಸುಲಿದು ಕೆರಿಸುತ್ತ ಕುಳಿತಿದ್ದರು. ಬುದುವಂತನನ್ನು ನೋಡಿ, ಬಂದ್ಯಾ, ಬಾ ಬಾ, ಈ ಮಳೆ ನೋಡಿ ಮನೆಯಿಂದ ಹೊರಗೆ ಬೀಳುತ್ತಿಯೋ ಇಲ್ಲವೋ ಅಂದ್ಕಂಡಿದ್ದೆ ಅಂದರು.ಅಲ್ಲ,...