*ಅಸೀಮ ತಿರಸ್ಕಾರದ ನಿರ್ಲಕ್ಷ್ಯ ನಾವು ಏನೇನೋ ನಿರೀಕ್ಷೆ ಇಟ್ಟುಕೊಂಡು ಒಬ್ಬರ ಬಳಿ ಕೆಲಸ ಮಾಡಿಸಿಕೊಳ್ಳಲು ಹೋಗುತ್ತೇವೆ. ಮೊದಲು ಪುಸಲಾಯಿಸುತ್ತೇವೆ. ಬೆಣ್ಣೆಹಚ್ಚುತ್ತೇವೆ. ಆಸೆ ತೋರಿಸುತ್ತೇವೆ. ಅದರಿಂದಲೂ ಆಗುವುದಿಲ್ಲ ಎಂದಾದರೆ ಅಂಜಿಸಲು ನೋಡುತ್ತೇವೆ. ಹೀಗೆ ಸಾಮ ದಾನ ಭೇದ ದಂಡ ಎಂಬ ಚತುರೋಪಾ.ಗಳನ್ನೂ ಉಪಯೋಗಿಸುತ್ತೇವೆ, ಆದರೆ ಆ ವ್ಯಕ್ತಿ ಯಾವುದಕ್ಕೂ ಬಗ್ಗದ ಆಸಾಮಿ. ಏನು ಬೇಕಾದರೂ ಆಗಿಹೋಗಲಿ, ನಮಗೇನೂ ಸಂಬಂಧವಿಲ್ಲ, ನಾನಂತೂ ನೀನಂದಂತೆ ಕೇಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುವಾಗ ಕುದುರೆ ಬಾಲ ಕೋಳಿ ಜುಟ್ಟು ಎಂಬ ಮಾತನ್ನು ಬಳಸುತ್ತಾನೆ....
*ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲದವರು `ಹಾಡಿದ್ದೇ ಹಾಡಿದ ಕಿಸಬಾಯಿದಾಸ’ ಎಂದು ಛೇಡಿಸುವುದು ಸಾಮಾನ್ಯ. ಒಂದೇ ಮಾತನ್ನು ಹತ್ತು ಹಲವು ಬಾರಿ ಹೇಳುವವರಿಗೆ ಹೀಗೆ ಹೇಳುತ್ತಾರೆ. ಕಿಸಬಾಯಿ ಎಂದರೆ ಅಗಲವಾಗಿ ತೆರೆದಿರುವ ಬಾಯಿ. ಬಾಯಿ ತೆರೆಯುವುದು ಎಂದರೆ ಮಾತನಾಡುವುದು ಎಂದರ್ಥ. ಸದಾ ಬಾಯಿ ತೆರೆದಿರುವುದೆಂದರೆ ಬರೀ ಮಾತನ್ನೇ ಆಡುತ್ತಿರುವ ಜನ ಅವರು ಎಂದು. ಸದಾ ಮಾತನಾಡುವವರಿಗೆ ಹೊಸ ವಿಷಯ ಎಲ್ಲಿ ಸಿಗಬೇಕು? ಅದೇ ಅದೇ…. ಅದೇ ಪ್ಲೇಟನ್ನು ತಿರುವಿ ಹಾಕಿ ಹಳೆಯ ಹಾಡನ್ನು ಮತ್ತೆ ಮತ್ತೆ ಕೇಳುವುದಿಲ್ಲವೆ, ಹಾಗೆ...
*ಸುಗ್ರೀವನ ರಾಜ್ಯ ಇಕ್ಕಟ್ಟಿನ ದಟ್ಟಣೆಗೆ ರೂಪಕ ಬಹಳ ಇಕ್ಕಟ್ಟಾದ ಪ್ರದೇಶವನ್ನು ಕಿಷ್ಕಿಂದೆ ಎಂದು ಕರೆಯುವುದಿದೆ. ಚಿಕ್ಕ ಹಾಲ್, ಒಂದೇ ಬೆಡ್‌ರೂಂ, ಅಲ್ಲೇ ಬಾತ್‌ರೂಂ, ಸಂಡಾಸ್ ಎಲ್ಲವೂ. ಒಬ್ಬರು ಒಳಗೆ ಬಂದರೆ ಇಬ್ಬರು ಹೊರಗೆ ಹೋಗಬೇಕು ಎಂಬಂಥ ಸ್ಥಿತಿ ಇರುವ ಮನೆಯನ್ನು ಕಂಡಾಗಲೂ ಅದೊಂದು ಕಿಷ್ಕಿಂದೆ, ಹೇಗೆ ಉಳಿಯುತ್ತಾರೋ ಅದರಲ್ಲಿ ಎಂದು ಮೂಗೆಳೆಯುವವರು ಇದ್ದಾರೆ. ಏನಿದು ಕಿಷ್ಕಿಂದೆ? ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಗೊತ್ತಲ್ಲವೆ? ಅವರ ರಾಜಧಾನಿಯೇ ಈ ಕಿಷ್ಕಿಂದೆ. ಇಕ್ಕಟ್ಟಾದ ಕಣಿವೆಗಳು, ಏರಲಸಾಧ್ಯವಾದ ಇಳಿಜಾರಿನ ಗುಡ್ಡಗಳು, ಗುಹೆಗಳು,...
*ಯಾಮಾರಿಸುವುದು ಯಾರನ್ನಾದರೂ ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದಾಗ, `ಏನ್ ನನ್ನ ಕಿವಿಲಿ ಹೂ ಇಡ್ತಿಯಾ?' ಎಂದು ಹೇಳುವುದಿದೆ. ಇರುವುದೊಂದು ಹೇಳುವುದೊಂದು. ಹಾಗೆ ಹೇಳಿ ಯಾಮಾರಿಸಲು ನೋಡುವವರಿಗೂ ಇದೇ ಮಾತು ಹೇಳುತ್ತಾರೆ.ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡು ಕುಳಿತಿದ್ದೇವಾ?’ ಎಂದು ಹೇಳುವುದನ್ನೂ ಕೇಳಿರುತ್ತೀರಿ. ಕಿವಿಯಲ್ಲಿ ಯಾರು ಹೂವು ಇಟ್ಟುಕೊಳ್ಳುವವರು? ದೇವಸ್ಥಾನದಲ್ಲಿ ಕೊಡುವ ಪ್ರಸಾದ ರೂಪದ ಹೂವನ್ನು ಭಕ್ತರು ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಕಿವಿಯಲ್ಲಿ ಇರುವ ಹೂವನ್ನು ನೋಡಿದ ಕೂಡಲೆ ಆತನನ್ನು ಪರಮ ದೈವಭಕ್ತ ಎಂದು ನಿರ್ಧರಿಸಿಬಿಡುವವರು ಇದ್ದಾರೆ. ಕಿವಿಯಲ್ಲಿ ಹೂವಿಟ್ಟುಕೊಳ್ಳುವವರೆಲ್ಲರೂ ನಿಜವಾದ ಭಕ್ತರಾಗಿರುವುದಿಲ್ಲ....
*ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ ಕರಿಯ ಎತ್ತು ಕಾಳ, ಬಿಳಿಯ ಎತ್ತು ಬೆಳ್ಳ. `ಕಾಳನನ್ನು ದೂರುವುದು ಬೇಡ, ಬೆಳ್ಳನನ್ನು ಹೊಗಳುವುದು ಬೇಡ’ ಎಂದರೆ ಎರಡೂ ಸಮಾನ ತಪ್ಪು ಮಾಡಿದವೇ. ಕಾಳ ಸರಿಯಾಗಿ ಮಾತು ಕೇಳುತ್ತಾನೆ ಎನ್ನುವಂತಿಲ್ಲ, ಬೆಳ್ಳ ನಡೆಯನ್ನು ತಪ್ಪುವುದಿಲ್ಲ ಎನ್ನುವಂತಿಲ್ಲ. ಇಬ್ಬರೂ ಸಮಾನ ತಪ್ಪುಗಾರರೇ. ನಮ್ಮ ನಿತ್ಯ ಜೀವನದಲ್ಲೂ ಕಾಳ, ಬೆಳ್ಳ ಎದುರಾಗುತ್ತಾರೆ. ನಾವು ಅತ್ಯುತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂದರೂ ಅವರಲ್ಲಿ ಒಂದೊಂದು ಲೋಪ. ಅವನನ್ನು ಹೊಗಳುವಂತಿಲ್ಲ, ಇವನನ್ನು ತೆಗಳುವಂತಿಲ್ಲ. ಎಲ್ಲರೂ ಒಂದೇ...
*ಮಾನಸಿಕ ಸಮತೋಲನ ಕಳೆದುಕೊಂಡವರು ತುಂಬ ಚಡಪಡಿಕೆಯ ಸ್ವಭಾವದವರನ್ನು ಕಂಡಾಗ, `ಅವ್ನ ನೋಡು, ಕಾಲು ಸುಟ್ಟ ಬೆಕ್ಕಿನಂಗೆ ಮಾಡ್ತಾ ಅವ್ನೆ' ಎಂದು ಹೇಳುವುದು ಸಾಮಾನ್ಯ. ಬೆಕ್ಕಿನ ಕಾಲು ಬಲು ಮೃದುವಾದದ್ದು. ಸದ್ದಿಲ್ಲದೆ ಹೆಜ್ಜೆಯನ್ನು ಇಕ್ಕುತ್ತ ಇಲಿಯ ಬೇಟೆಯಾಡುವುದರಲ್ಲಿ ಅದು ನಿಸ್ಸೀಮ. ಬೇಟೆಗೆ ಅದರ ಕಾಲೇ ಪ್ರಮುಖ ಸಾಧನ. ಅಂಥ ಕಾಲು ಸುಟ್ಟು ಹೋದರೆ ಅದಕ್ಕೆ ಚಡಪಡಿಕೆ ಸಹಜ. ನಿಂತಲ್ಲಿ ನಿಲ್ಲುವುದಿಲ್ಲ ಅದು. ಮನುಷ್ಯನಿಗೂ ಅಂತಹ ಚಡಪಡಿಕೆ ಶುರುವಾಗುವುದು ಯಾವಾಗ? ಆತನ ಅಹಂಗೆ ಧಕ್ಕೆಯಾದಾಗ, ಸಾಧಿಸಬೇಕು ಅಂದುಕೊಂಡಿದ್ದನ್ನು ಸಾಧಿಸಲು ಆಗದೇ...
*ಸುಳ್ಳು ಭರವಸೆಗಳ ಮೂಟೆ ನಾವು ಏನನ್ನೋ ಪಡೆದುಕೊಳ್ಳಬೇಕು ಎಂದು ಆಸೆಪಟ್ಟಿರುತ್ತೇವೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡಿರುತ್ತೇವೆ. ಆದರೆ ಅದನ್ನು ದಕ್ಕಿಸಿಕೊಳ್ಳುವುದು ನಮ್ಮಿಂದ ಆಗುವುದೇ ಇಲ್ಲ. ಅಯ್ಯೋ ಆಗಿಯೇ ಹೋಯ್ತು ಎನ್ನುವಂತೆ ಇರುತ್ತದೆ. ಆದರೆ ಏನೂ ಆಗಿಯೇ ಇರುವುದಿಲ್ಲ. ಎಟಕುತ್ತದೆ ಅಂತಿರುವಾಗ ದಕ್ಕುವುದೇ ಇಲ್ಲ. ಹೀಗೆ ಗಮ್ಯವು ಕಾಣುತ್ತಿದ್ದರೂ ಅಗರತ್ತ ಗಮನ ಸಾಧ್ಯವಾಗದೆ ಇದ್ದರೆ ಬಹಳ ನಿರಾಶೆಯಾಗುತ್ತದೆ. ಆಗ `ಕನ್ನಡಿಯೊಳಗಿನ ಗಂಟು’ ಎಂಬ ಉದ್ಗಾರ ತನ್ನಿಂದ ತಾನೇ ಹೊರಡುತ್ತದೆ. ಕನ್ನಡಿಯೊಳಗೆ ಗಂಟು ಕಾಣುತ್ತಿರುತ್ತದೆ. ಕೈಚಾಚಿದರೆ ಅದನ್ನು ನಾವು ಎತ್ತಿಕೊಳ್ಳುವುದು ಸಾಧ್ಯವಿಲ್ಲ....
*ಕ್ಷುಲ್ಲಕ ವಿಷಯ ದೊಡ್ಡದು ಮಾಡುವುದು ಏನ್ ಮಾರಾಯಾ ಅವ್ನು, ಕಡ್ಡಿಯ ಗುಡ್ಡ ಮಾಡ್ದ. ಎಲ್ಲ ಫಜೀತಿ ಆಗಿ ಹೋಯ್ತು ಎಂದು ಅಲವತ್ತುಕೊಳ್ಳುವುದನ್ನು ಕೇಳಿದ್ದೇವೆ. ಕಡ್ಡಿ ಬಹಳ ಚಿಕ್ಕದು. ಕಡ್ಡಿಗೆ ಹೋಲಿಸಿದರೆ ಗುಡ್ಡ ಬಹಳ ದೊಡ್ಡದು. ಚಿಕ್ಕ ವಿಷಯವನ್ನು, ನಿರ್ಲಕ್ಷಿಸಿಬಿಡಬಹುದಾದ ವಿಷಯವನ್ನು ದೊಡ್ಡದು ಮಾಡಿದ ಎನ್ನುವ ಅರ್ಥ ಇಲ್ಲಿದೆ. ಜೊತೆಯಲ್ಲಿಯೇ ಹಾಗೆ ಮಾಡುವ ಅಗತ್ಯವಿರಲಿಲ್ಲ ಎಂಬ ಧ್ವನಿಯೂ ಇದರ ಒಡಲಲ್ಲಿ ಇದೆ. ಇದೇ ರೀತಿಯ ಇನ್ನೂ ಹಲವು ಮಾತುಗಳು ನಮ್ಮಲ್ಲಿವೆ. ಉಗುರಿನಲ್ಲಿ ಆಗುವುದಕ್ಕೆ ಕೊಡಲಿ ಎತ್ತಿದ ಎಂಬುದು ಅವುಗಳಲ್ಲಿ...
*ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿ ಪ್ರತಿಭೆ ಅರಳಲು ಸೂಕ್ತವಾದ ಅವಕಾಶ ಬೇಕು. ಸೂಕ್ತ ಅವಕಾಶ ದೊರೆಯದೆ ಎಷ್ಟೋ ಪ್ರತಿಭೆ ಮುರುಟಿ ಹೋಗುತ್ತದೆ. ಅವಕಾಶ ಸಿಗದ ಪ್ರತಿಭೆಯನ್ನು ಕಂಡು `ಅವನ ಬದುಕು ಕಾಡ ಬೆಳದಿಂಗಳು' ಆಗಿ ಹೋಯ್ತು ಎಂದು ಅನುಕಂಪ ತೋರಿಸುತ್ತೇವೆ. ಕಾಡಿನಲ್ಲಿಯ ಬೆಳದಿಂಗಳು ಎಷ್ಟೊಂದು ಆಹ್ಲಾದಕರವಾಗಿದ್ದರೂ ಯಾರ ಗಮನಕ್ಕೂ ಬರದೆ ಹೋಗುತ್ತದೆಯಲ್ಲವೆ? ಹಾಗೆ ಇದು. ಇದನ್ನೇ ಕೆಲವರು ವನಸುಮ ಎಂದು ಹೇಳುತ್ತಾರೆ. ವನಸುಮವೆಂದರೆ ಕಾಡಿನಲ್ಲಿ ಅರಳಿದ ಹೂವು. ಈ ಹೂವು ಬೀರುವ ಸುವಾಸನೆ ಯಾರಿಗೂ ತಟ್ಟದೆ ಹೋಗುತ್ತದೆ....
*ಎರಡು ಘಟನೆಗಳ ನಡುವೆ ಸಂಬಂಧ ಇರಲೇಬೇಕಿಲ್ಲ ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು. ಅದೇ ಕಾಕತಾಳೀಯ. ಕಾಗೆಯ ಭಾರವಾದರೂ ಎಷ್ಟು? ಟೊಂಗೆ ಮುರಿಯುವಷ್ಟು ಬಾಗಿತು ಎಂದರೆ ಕಾಗೆ ಹಾರಿಯೇ ಹೋಗುತ್ತದೆ. ಮುರಿಯುವುದಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ. ಟೊಂಗೆ ಮುರಿಯುವುದಕ್ಕೆ ಕಾಗೆ ಕುಳಿತದ್ದೇ ಕಾರಣವಲ್ಲ. ಬೇರಾವುದೋ ಕಾರಣವಿರಬಹುದು. ಆದರೆ ಕಾಗೆ ಕುಳಿತೇ ಟೊಂಗೆ ಮುರಿಯಿತು ಎಂದು ಸಾಧಿಸುವುದು ತಪ್ಪು. ಸೇತುವೆಯ ಮೇಲೆ ಬಸ್ಸು ಹೋಗುತ್ತಿರುವಾಗಲೇ ಕೆಳಗೆ ನದಿಯಲ್ಲಿ ಚಲಿಸುತ್ತಿದ್ದ ದೋಣಿ ಮುಳುಗಿತು. ಈ ಎರಡೂ ಘಟನೆಗಳು ತನ್ನಷ್ಟಕ್ಕೆ ತಾನೇ...