ಮೊಸಳೆ ಕಣ್ಣೀರು

*ತೋರಿಕೆಯ ದುಃಖ ಪ್ರದರ್ಶನ ಮೊಸಳೆ ಕಣ್ಣೀರು ಸುರಿಸುತ್ತಾನೆ ಅವನು, ನಂಬಬೇಡಿ ಅವನನ್ನು ಎಂದೋ, ನಿನ್ನ ಮೊಸಳೆ ಕಣ್ಣೀರಿಗೆ ನಾವೇನು ಕರಗಿ ಬಿಡುತ್ತೇವೆ ಅಂದುಕೊಂಡಿದ್ದೀಯಾ ಎಂದೋ ಹೇಳುವುದನ್ನು ಕೇಳಿದ್ದೇವೆ. ಏನಿದು ಮೊಸಳೆ ಕಣ್ಣೀರು? ಯಾವುದಾದರೂ ಮೃಗಾಲಯಕ್ಕೆ ಹೋದಾಗ ನೀವು ಮೊಸಳೆಯನ್ನು ನೋಡಿರಬಹುದು. ಕಣ್ಣು ಮುಚ್ಚಿ ಮಲಗಿರುವ ಮೊಸಳೆಯ ಕಣ್ಣಿಂದ ನೀರು ಹರಿಯುತ್ತಿರುವುದನ್ನೂ ನೀವು ಕಂಡಿರಬಹುದು. ಮೊಸಳೆ ತನ್ನ ಆಹಾರವನ್ನು ಆಕರ್ಷಿಸಲು ಕಣ್ಣೀರು ಸುರಿಸುತ್ತದೆ ಎಂಬ ಕತೆ ಇದೆ. ಮೊಸಳೆಯ ಕಣ್ಣಿಂದ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಮೊಸಳೆಗೆ ದುಃಖವಾಗಿ ಅದು...

ಮೊಣಕೈಗೆ ಹತ್ತಿದ ಬೆಲ್ಲ

*ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ, ಆದರೆ ಸಿಗದು ಬೆಲ್ಲವೆಂದರೆ ಬಾಯಲ್ಲಿ ನೀರೂರದೆ ಇರುತ್ತದೆಯೇ? ತಿನ್ನಬೇಕೆಂಬ ಆಸೆ. ಬೆಲ್ಲದ ವಾಸನೆಯೇ ತಿನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆದರೆ ಬೆಲ್ಲ ಇರುವುದು ಎಲ್ಲಿ? ಮೊಣಕೈಗೆ ಮೆತ್ತಿಕೊಂಡಿದೆ. ನಾಲಿಗೆಯನ್ನು ಚಾಚಿ ನೆಕ್ಕೋಣವೆಂದರೆ ನಾಲಿಗೆಯನ್ನು ಅಲ್ಲಿಗೆ ಒಯ್ಯುವುದು ಸಾಧ್ಯವೇ ಇಲ್ಲ. ಮಾಯದ ಜಿಂಕೆಯ ಹಾಗೆ ಕಣ್ಣೆದುರಿಗೆ ಇರುತ್ತದೆ. ಆದರೆ ಕೈಗೆ ಎಟಕುವುದೇ ಇಲ್ಲ. ಅನೇಕ ವಿಷಯಗಳು ನಮ್ಮ ಜೀವನದಲ್ಲೂ ಇದೇ ರೀತಿ ಇರುತ್ತವೆ. ಯಾವುದಕ್ಕೋ ಪ್ರಯತ್ನಿಸುತ್ತಿರುತ್ತೇವೆ. ಸಿಕ್ಕಿಯೇ ಬಿಟ್ಟಿತು ಎನ್ನುವಂತಿರುತ್ತದೆ. ಆದರೆ ಅದು ಎಂದಿಗೂ ನಮಗೆ...

ಮಣೆ ಹಾಕು

*ಮನ್ನಣೆ ನೀಡುವುದು ಅವನು ಹೇಳಿದ್ದಕ್ಕೆಲ್ಲ ಇವನು ಮಣೆ ಹಾಕುತ್ತಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಮಣೆ ಹಾಕುವುದೆಂದರೆ ಇಲ್ಲಿ ಎರಡು ಮಾತಿಲ್ಲದೆ ಒಪ್ಪಿಕೊಳ್ಳುವುದು ಎಂದರ್ಥ. ಅವನ ಮಾತಿಗೆ ಇವನು ಸಂಪೂರ್ಣ ಮನ್ನಣೆ ನೀಡಿದ ಎನ್ನುವುದು ತಾತ್ಪರ್ಯ. ನಮ್ಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕುರ್ಚಿಗಳಿಲ್ಲದೆ ಇರುವ ಮನೆಗಳು ತುಂಬಾ ಇವೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ, ಅವರು ಕುಳಿತುಕೊಳ್ಳುವುದಕ್ಕೆ, ತಂಗಿ, ಮಣೆ ತಂದುಕೊಂಡು ಎಂದು ಹೇಳುತ್ತಾರೆ. ಬಂದವರನ್ನು ಆದರಿಸುವ ಕ್ರಿಯೆಗಳಲ್ಲಿ ಇದೂ ಒಂದು. ಮಣೆ ಹಾಕುವುದು ನಮ್ಮ ಸಂಸ್ಕೃತಿಯ ಒಂದು...

ಮಣ್ಣಿನ ವಾಸನೆ

*ಸಾಹಿತ್ಯ ಮತ್ತು ನೆಲದ ಸಂಬಂಧವನ್ನು ಇದು ಹೇಳುತ್ತದೆ ಅವನ ಕಾವ್ಯದಲ್ಲಿ ಮಣ್ಣಿನ ವಾಸನೆಯೇ ಇಲ್ಲ ಎಂದು ಹೇಳುವುದನ್ನು ಕೇಳಿದ್ದೇವೆ. ಮಣ್ಣಿನ ವಾಸನೆ ಎಂಬ ನುಡಿಗಟ್ಟು ನವ್ಯ ಸಾಹಿತ್ಯ ವಿಮರ್ಶೆಯಲ್ಲಿ ಹೆಚ್ಚಾಗಿ ಪ್ರಚಾರಕ್ಕೆ ಬಂತು. ಸಾಮಾನ್ಯ ಜನರ ಮಾತಿನಲ್ಲಿ ಇದು ಬಳಕೆಯಾಗದಿದ್ದರೂ ಸಾಹಿತಿಗಳು ಪರಸ್ಪರ ಮಾತನಾಡುವಾಗ ಇದನ್ನು ಬಳಸುತ್ತಾರೆ. ಅವನ ಸಾಹಿತ್ಯದಂತೆ ಅವನ ಬದುಕಿಗೂ ಮಣ್ಣಿನ ವಾಸನೆ ಇಲ್ಲ ಎಂದೋ, ಅವನ ಮಾತಿನಲ್ಲಿ ಮಣ್ಣಿನ ವಾಸನೆಯ ಘಾಟು ಹೆಚ್ಚಾಗಿದೆ ಎಂದೋ ಹೇಳುವುದನ್ನು ಕೇಳಿದ್ದೇವೆ. ನವೋದಯ ಸಾಹಿತ್ಯಕ್ಕೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದ...

ಮಡಕೆಯಲ್ಲಿ ದೀಪ ಬೆಳಗುವುದು

*ಬದುಕು ಹಲವರಿಗೆ ಉಪಯುಕ್ತವಾಗುವಂತಿರಬೇಕು ಕೆಲವು ಲೋಭಿಗಳನ್ನು ಕಂಡಾಗ ಮಡಕೆಯಲ್ಲಿ ದೀಪ ಬೆಳಗುವವರು ಎಂದು ಅವರನ್ನು ಟೀಕಿಸುವುದನ್ನು ಕೇಳಿದ್ದೇವೆ. ಏನು ಹಾಗಂದರೆ? ದೀಪವನ್ನು ಬೆಳಗುವುದು ಜಗದ ಕತ್ತಲೆಯನ್ನು ಕಳೆಯಲೆಂದು. ಅದು ಬಯಲಿನಲ್ಲಿ ಇರಬೇಕು. ಪ್ರಕಾಶದ ವ್ಯಾಪ್ತಿ ದೂರದವರೆಗೂ ಬೀಳುತ್ತದೆ. ಚಿಕ್ಕ ಮಡಕೆಯಲ್ಲಿ ದೀಪವನ್ನು ಬೆಳಗಿ ಇಟ್ಟರೆ ಮಡಕೆಯೊಳಗಷ್ಟೇ ಪ್ರಕಾಶ ಬೀಳುತ್ತದೆ. ಅದರಿಂದ ಮಡಕೆಗೂ ಪ್ರಯೋಜನವಿಲ್ಲ. ಬೆಳಗಿದವರಿಗೂ ಪ್ರಯೋಜನವಿಲ್ಲ. ಇದ್ದೂ ಇಲ್ಲದಂತೆ ಅದು. ಕಾಡಿನಲ್ಲಿ ಅರಳಿದ ಕುಸುಮ ಅತ್ತ ದೇವರ ಅಡಿಗೂ ಇಲ್ಲ, ಹೆಣ್ಣಿನ ಮುಡಿಗೂ ಇಲ್ಲ. ಪರಿಮಳವನ್ನು ಆಘ್ರಾಣಿಸುವವರಿಗೂ...

ಮಠದೊಳಗಿನ ಬೆಕ್ಕು

*ಚಂಚಲ ಮನಸ್ಸಿನ ಮಾರ್ಜಾಲ ಅತಿಯಾದ ಚಂಚಲ ಬುದ್ಧಿಯವರನ್ನು ಕಂಡಾಗ, ಮಠದೊಳಗಿನ ಬೆಕ್ಕು ಇದ್ದಾಂಗ ಅವ್ನೆ ನೋಡು ಎಂದು ಟೀಕೆಯನ್ನು ಮಾಡುವುದನ್ನು ಕೇಳಿದ್ದೇವೆ. ಮಠದೊಳಗಿನ ಬೆಕ್ಕಿಗೆ ಅದೇನು ವಿಶೇಷ? ಸನ್ಯಾಸಿಯೊಬ್ಬರು ಮಠದಲ್ಲಿ ಬೆಕ್ಕನ್ನು ಸಾಕಿದ್ದರಂತೆ. ಬಂದವರಿಗೆಲ್ಲ ಆ ಸನ್ಯಾಸಿ ಅಹಿಂಸೆಯನ್ನು ಬೋಧಿಸುತ್ತಿದ್ದರು. ಆ ಬೋಧನೆ ಬೆಕ್ಕಿನ ಕಿವಿಗೂ ಬೀಳುತ್ತಿತ್ತು. ಸನ್ಯಾಸಿಯ ಪಕ್ಕದಲ್ಲಿಯೇ ಬೆಕ್ಕು ಕಣ್ಣು ಮುಚ್ಚಿಕೊಂಡು ಕುಳಿತಿರುತ್ತಿತ್ತು. ಸನ್ಯಾಸಿಯ ಸಾಮೀಪ್ಯದಿಂದ ಬೆಕ್ಕು ತನ್ನ ಮೂಲ ಸ್ವಭಾವವನ್ನು ಬಿಟ್ಟುಕೊಟ್ಟಿದೆಯೇನೋ ಎಂಬ ಅನುಮಾನ ಬರುವ ಹಾಗಿತ್ತು. ಹೀಗಿರುವಾಗ ಮಠದ ಮೂಲೆಯಲ್ಲಿ ಇಲಿಯೊಂದು...

ಭರತ ವಾಕ್ಯ

*ಪರದೆ ಬಿದ್ದರೂ ಅಭಿನಯ ನಿಲ್ಲಿಸದವರು ಭರತ ಎಂದರೆ ನಟ. ನಾಟಕದ ಕೊನೆಯಲ್ಲಿ ನಟನಾದವನು ದೇಶಕ್ಕೆ, ಜನತೆಗೆ ಒಳಿತಾಗಲಿ ಎಂದು ಶುಭವನ್ನು ಕೋರುವ ವಾಕ್ಯವನ್ನು ಹೇಳುತ್ತಾನೆ. ಅದೇ ಭರತ ವಾಕ್ಯ. ಭರತ ವಾಕ್ಯ ಮುಗಿದ ಮೇಲೆ ನಾಟಕ ಮುಗಿದ ಹಾಗೆ. ಕೆಲವೊಮ್ಮೆ, ಅವನದೇನು ಭರತ ವಾಕ್ಯವೆ?' ಎಂದು ಪ್ರಶ್ನಿಸುವುದಿದೆ. ಅಂದರೆ ಆತನೇನು ಪ್ರಶ್ನಾತೀತನೆ? ಅವನ ಮಾತನ್ನು ಮೀರಿ ಬೇರೆಯವರ ಮಾತು ಅಲ್ಲಿ ನಡೆಯುವುದಿಲ್ಲವೆ ಎಂದು ಕೇಳುವ ರೀತಿ ಅದು. ಕೆಲವೊಮ್ಮೆಭರತ ವಾಕ್ಯ ಮುಗಿದರೂ ನಾಟಕ ಮುಗಿದೇ ಇಲ್ಲ ನೋಡು...

ಭಟ್ಟಿ ಇಳಿಸು

*ಯಥಾವತ್ತಾಗಿ ನಕಲು ಮಾಡು ಏನಿದೆ ಇವಂದು? ಎಲ್ಲ ಅವನದ್ದೇ ಭಟ್ಟಿ ಇಳಿಸಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಂದರೆ ಎಲ್ಲವನ್ನೂ ಯಥಾವತ್ತಾಗಿ ಸ್ವೀಕರಿಸಿದ್ದಾನೆ ಎಂಬ ಅರ್ಥ ಇಲ್ಲಿದೆ. ಬೇರೆಯವರದ್ದನ್ನು ಕದ್ದು ತಮ್ಮದೆಂದು ಹೇಳಿಕೊಳ್ಳುವಲ್ಲೂ ಈ ಭಟ್ಟಿ ಇಳಿಸುವಿಕೆ ಬಳಕೆಯಾಗುತ್ತದೆ. ಇದು ಚೌರ್ಯ. ಭಟ್ಟಿ ಇಳಿಸುವುದರ ಮೂಲ ಅರ್ಥ ಶುದ್ಧೀಕರಿಸು ಎನ್ನುವುದು. ಶುದ್ಧ ನೀರನ್ನು ತಯಾರಿಸುವ ವಿಧಾನಗಳಲ್ಲಿ ಭಟ್ಟಿ ಇಳಿಸುವುದೂ ಒಂದು. ನೀರನ್ನು ಕಾಯಿಸಿ ಅದರ ಹಬೆಯನ್ನು ಬೇರೊಂದು ಪಾತ್ರೆಯಲ್ಲಿ ಸಂಗ್ರಹಿಸಿ ಅದನ್ನು ತಂಪುಗೊಳಿಸಿದಾಗ ಶುದ್ಧ ನೀರು ದೊರೆಯುತ್ತದೆ. ಇದು...

ಭಗೀರಥ ಪ್ರಯತ್ನ

*ಪಟ್ಟುಬಿಡದೆ ಕೆಲಸವನ್ನು ಸಾಧಿಸುವುದು ಶ್ರೀರಾಮಚಂದ್ರ ಹುಟ್ಟಿದ ಇಕ್ಷ್ವಾಕು ವಂಶದಲ್ಲಿ ಸಗರನೆಂಬ ಅರಸ ಇದ್ದ. ಸಗರನ ಅರವತ್ತು ಸಾವಿರ ಮಕ್ಕಳು ಮುನಿ ಶಾಪದಿಂದ ಸುಟ್ಟು ಭಸ್ಮವಾಗುತ್ತಾರೆ. ಅವರಿಗೆ ಸದ್ಗತಿ ಬರಬೇಕೆಂದರೆ ದೇವಗಂಗೆಯನ್ನು ಅವರ ಬೂದಿಯ ಮೇಲೆ ಹರಿಸಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಅವರ ಸಹೋದರ ದಿಲೀಪ ಪ್ರಯತ್ನ ಮಾಡುತ್ತಾನೆ. ಅವನಿಂದ ಅದು ಸಾಧ್ಯವಾಗುವುದಿಲ್ಲ. ದಿಲೀಪನ ಮಗ ಭಗೀರಥ ದೇವಗಂಗೆಯನ್ನು ಕುರಿತು ತಪಸ್ಸು ಮಾಡುತ್ತಾನೆ. ಗಂಗೆ ಧರೆಗಿಳಿಯಲು ಒಪ್ಪುತ್ತಾಳೆ. ದೇವಗಂಗೆಯ ರಭಸವನ್ನು ತಡೆಯುವುದು ಹೇಗೆ? ಭಗೀರಥ ಶಿವನನ್ನು ಒಲಿಸಿ ಗಂಗೆಯ...

ಬ್ರಹ್ಮವಿದ್ಯೆ

*ವಿದ್ಯೆಯ ದೇವತೆಯೆಂದು ಸರಸ್ವತಿಯನ್ನು ಪೂಜಿಸುತ್ತಾರೆ ಏನೋ ಒಂದನ್ನು ಸಾಧಿಸಬೇಕು, ಸಿದ್ಧಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತೇವೆ. ನಮ್ಮ ಪ್ರಯತ್ನವನ್ನು ನೋಡಿ ಕೆಲವರು, ಅದು ನಿನ್ನಿಂದ ಸಾಧ್ಯವಾಗದು ಎಂದು ಸವಾಲಿನ ರೀತಿಯಲ್ಲಿ ಹೇಳಬಹುದು. ಆಗ ನಾವು, `ಅದೇನು ಬ್ರಹ್ಮ ವಿದ್ಯೆಯೇ?’ ಎಂದು ಅವರನ್ನು ಪ್ರಶ್ನಿಸುತ್ತೇವೆ. ಬ್ರಹ್ಮವಿದ್ಯೆ ಎಂದರೇನು? ಇದು ಬಹಳ ಶ್ರೇಷ್ಠವಾದ ವಿದ್ಯೆ. ಗಳಿಸಲು ಕಷ್ಟವಾದ ವಿದ್ಯೆ ಎಂಬ ಅಭಿಪ್ರಾಯವಿದೆ. ಬ್ರಹ್ಮನನ್ನು ವೇದಬ್ರಹ್ಮ ಎಂದು ಕರೆಯುತ್ತಾರೆ. ಬ್ರಹ್ಮನ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಹೊರಬಿದ್ದವು ಎಂದು ನಂಬುತ್ತಾರೆ. ವೇದ ಎಂಬುದು...