*ಆಲಸಿಯಾದ ಆಡಳಿತ ಯಂತ್ರ ತುಂಬ ನಿದ್ದೆ ಮಾಡುವವರನ್ನು ಕುಂಭಕರ್ಣ ಎಂದೋ, `ಅವನದು ಕುಂಭಕರ್ಣ ನಿದ್ದೆ’ ಎಂದೋ ಹೇಳುವುದಿದೆ. ಆಲಸಿಯಾದ ಆಡಳಿತ ಯಂತ್ರವನ್ನೂ ಕುಂಭಕರ್ಣ ನಿದ್ದೆಗೆ ಹೋಲಿಸುವುದಿದೆ. ಕುಂಭಕರ್ಣ ಯಾರಿಗೆ ಗೊತ್ತಿಲ್ಲ ಹೇಳಿ? ಮಡಕೆಯಂಥ ಕಿವಿಗಳನ್ನು ಹೊಂದಿದವನು ಎಂಬ ಅರ್ಥದ ನಾಮ ರಾವಣನ ತಮ್ಮನಿಗೆ ಅನ್ವರ್ಥವಾಗಿಯೇ ಬಂದದ್ದು. ಪರ್ವತಕಾಯದ ಕುಂಭಕರ್ಣ ನಿದ್ದೆಗೆ ಹೇಗೆ ಪ್ರಸಿದ್ಧನಾದ? ಅದರ ಹಿಂದಿನ ಪುರಾಣವೇನು? ರಾವಣ, ಕುಂಭಕರ್ಣ, ವಿಭೀಷಣ ಸಹೋದರರು. ಮಹಾನ್ ಶಕ್ತಿಶಾಲಿಗಳು. ಇವರೆಲ್ಲ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸಿದ್ದರು. ಈ ಅಸಾಮಾನ್ಯ...
*ಕುರುಕ್ಷೇತ್ರ ನಡೆಯದ ಮನೆ ಇದೆಯೆ? ಅದೇನು ಮಾರಾಯ, ಅವರ ಮನೆ ಒಂದು ಕುರುಕ್ಷೇತ್ರ ಆಗಿದೆ ಎಂದೋ, ಅವರ ಸಂಸಾರ ಕುರುಕ್ಷೇತ್ರ ಎಂದೋ ತೀರ ಸಹಜವಾಗಿ ಹೇಳಿಬಿಡುತ್ತೇವೆ. ಕೇಳಿಸಿಕೊಂಡವನಿಗೆ, ಆ ಮನೆಯಲ್ಲಿ ಎಲ್ಲವೂ ಸರಿ ಇಲ್ಲ, ನಿತ್ಯ ಜಗಳ, ಒಳಸಂಚು ನಡೆಯುತ್ತಿದೆ ಎಂಬ ಅರ್ಥವನ್ನು ರವಾನಿಸುತ್ತದೆ. `ಅದೇನು ಮಹಾಭಾರತ ನಡೆಸಿದ್ದೀರೋ?'ಅದೆಲ್ಲ ರಾಮಾಯಣ ನನಗೆ ಹೇಳಬೇಡ’ ಎಂದು ಹೇಳುವುದನ್ನೂ ಕೇಳಿದ್ದೇವೆ. ಈ ಎರಡು ಮಹಾಕಾವ್ಯಗಳು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೇವಲ ಹಿಂದೂಗಳಷ್ಟೇ ಅಲ್ಲ, ಇತರ ಧರ್ಮದವರೂ ಈ ಎರಡು ಮಹಾಕಾವ್ಯದ...
*ಬಹಳ ಅವಸರ ಮಾಡುವ ವ್ಯಕ್ತಿ ಬಹಳ ಅವಸರ ಮಾಡುವ, ದರ್ಪ ತೋರುವ ವ್ಯಕ್ತಿಯನ್ನು ನೋಡಿದಾಗ, `ಏನು, ಕುದುರೆ ಮೇಲೆ ಬಂದವನ ಹಾಗೆ ಮಾಡ್ತಾ ಇದ್ದೀಯಲ್ಲೋ, ಸ್ವಲ್ಪ ತಡ್ಕೋ' ಎಂದು ಹೇಳುವುದನ್ನು ಕೇಳಿದ್ದೇವೆ. ನಾವೇ ಎಷ್ಟೋ ಸಲ ಇದನ್ನು ಬಳಸಿರಬಹುದು. ಮಾವನ ಮನೆಗೆ ಬಂದ ಅಳಿಯ ತಿರುಗಿ ಹೋಗಲು ಗಡಿಬಿಡಿ ಮಾಡತೊಡಗಿದರೆ,ಕುದುರೆ ಕಟ್ಟಿಹಾಕಿ ಬಂದೆಯೋ ಇಲ್ಲ ಹಾಗೇ ಬಿಟ್ಟು ಇಟ್ಟಿದ್ದೀಯೋ’ ಎಂದು ಹೇಳುವುದನ್ನೂ ಕೇಳಿರಬಹುದು. ಬಸ್ಸು, ಕಾರುಗಳು ಇಲ್ಲದ ಕಾಲದಲ್ಲಿ ಕುದುರೆಯೇ ಬಹಳ ವೇಗದ ಸಂಚಾರ ವ್ಯವಸ್ಥೆಯಾಗಿತ್ತು. ಕುದುರೆಯ...
*ಮೌಲ್ಯಮಾಪನ ಕಷ್ಟವಾಗಿರುವ ವ್ಯಾಪಾರ ಕುದುರೆ ವ್ಯಾಪಾರ ಎಂಬ ಪದಗುಚ್ಛ ಬಳಕೆ ರಾಜಕೀಯಕ್ಕೆ ಸಂಬಂಧಿಸಿದಂತೆ ಬಳಕೆಯಾಗುತ್ತಿದೆ. ಒಂದು ಪಕ್ಷದ ಚುನಾಯಿತ ಪ್ರತಿನಿಧಿಯನ್ನು ಇನ್ನೊಂದು ಪಕ್ಷಕ್ಕೆ ಸೇರಿಸಿಕೊಳ್ಳಲು ನಡೆಸುವ ವ್ಯವಹಾರವನ್ನು ಕುದುರೆ ವ್ಯಾಪಾರ ಎಂದು ಕರೆಯಲಾಗುತ್ತದೆ. ಬೇರೆ ಪಕ್ಷದವರ ಮತವನ್ನು ತಮ್ಮ ಪಕ್ಷದ ಕಡೆ ಸೆಳೆದುಕೊಳ್ಳಲು ಕುದುರಿಸುವ ವ್ಯವಹಾರವನ್ನೂ ಕುದುರೆ ವ್ಯಾಪಾರ ಎನ್ನುವರು. ಕುದುರೆ ವ್ಯಾಪಾರ ತುಂಬ ಕಷ್ಟದ್ದು. ಇದರಲ್ಲಿ ದಲ್ಲಾಳಿಗಳು ಗ್ರಾಹಕರನ್ನು ಮೋಸಗೊಳಿಸುವ ಸಾಧ್ಯತೆ ತುಂಬ ಇರುತ್ತದೆ. ಕುದುರೆಯ ಗುಣ ಸ್ವಭಾವ, ಅದರ ವಯಸ್ಸು ಇತ್ಯಾದಿಗಳ ಸಂಬಂಧದಲ್ಲಿ ಸುಳ್ಳನ್ನು...
*ಅಸೀಮ ತಿರಸ್ಕಾರದ ನಿರ್ಲಕ್ಷ್ಯ ನಾವು ಏನೇನೋ ನಿರೀಕ್ಷೆ ಇಟ್ಟುಕೊಂಡು ಒಬ್ಬರ ಬಳಿ ಕೆಲಸ ಮಾಡಿಸಿಕೊಳ್ಳಲು ಹೋಗುತ್ತೇವೆ. ಮೊದಲು ಪುಸಲಾಯಿಸುತ್ತೇವೆ. ಬೆಣ್ಣೆಹಚ್ಚುತ್ತೇವೆ. ಆಸೆ ತೋರಿಸುತ್ತೇವೆ. ಅದರಿಂದಲೂ ಆಗುವುದಿಲ್ಲ ಎಂದಾದರೆ ಅಂಜಿಸಲು ನೋಡುತ್ತೇವೆ. ಹೀಗೆ ಸಾಮ ದಾನ ಭೇದ ದಂಡ ಎಂಬ ಚತುರೋಪಾ.ಗಳನ್ನೂ ಉಪಯೋಗಿಸುತ್ತೇವೆ, ಆದರೆ ಆ ವ್ಯಕ್ತಿ ಯಾವುದಕ್ಕೂ ಬಗ್ಗದ ಆಸಾಮಿ. ಏನು ಬೇಕಾದರೂ ಆಗಿಹೋಗಲಿ, ನಮಗೇನೂ ಸಂಬಂಧವಿಲ್ಲ, ನಾನಂತೂ ನೀನಂದಂತೆ ಕೇಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುವಾಗ ಕುದುರೆ ಬಾಲ ಕೋಳಿ ಜುಟ್ಟು ಎಂಬ ಮಾತನ್ನು ಬಳಸುತ್ತಾನೆ....
*ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲದವರು `ಹಾಡಿದ್ದೇ ಹಾಡಿದ ಕಿಸಬಾಯಿದಾಸ’ ಎಂದು ಛೇಡಿಸುವುದು ಸಾಮಾನ್ಯ. ಒಂದೇ ಮಾತನ್ನು ಹತ್ತು ಹಲವು ಬಾರಿ ಹೇಳುವವರಿಗೆ ಹೀಗೆ ಹೇಳುತ್ತಾರೆ. ಕಿಸಬಾಯಿ ಎಂದರೆ ಅಗಲವಾಗಿ ತೆರೆದಿರುವ ಬಾಯಿ. ಬಾಯಿ ತೆರೆಯುವುದು ಎಂದರೆ ಮಾತನಾಡುವುದು ಎಂದರ್ಥ. ಸದಾ ಬಾಯಿ ತೆರೆದಿರುವುದೆಂದರೆ ಬರೀ ಮಾತನ್ನೇ ಆಡುತ್ತಿರುವ ಜನ ಅವರು ಎಂದು. ಸದಾ ಮಾತನಾಡುವವರಿಗೆ ಹೊಸ ವಿಷಯ ಎಲ್ಲಿ ಸಿಗಬೇಕು? ಅದೇ ಅದೇ…. ಅದೇ ಪ್ಲೇಟನ್ನು ತಿರುವಿ ಹಾಕಿ ಹಳೆಯ ಹಾಡನ್ನು ಮತ್ತೆ ಮತ್ತೆ ಕೇಳುವುದಿಲ್ಲವೆ, ಹಾಗೆ...
*ಸುಗ್ರೀವನ ರಾಜ್ಯ ಇಕ್ಕಟ್ಟಿನ ದಟ್ಟಣೆಗೆ ರೂಪಕ ಬಹಳ ಇಕ್ಕಟ್ಟಾದ ಪ್ರದೇಶವನ್ನು ಕಿಷ್ಕಿಂದೆ ಎಂದು ಕರೆಯುವುದಿದೆ. ಚಿಕ್ಕ ಹಾಲ್, ಒಂದೇ ಬೆಡ್‌ರೂಂ, ಅಲ್ಲೇ ಬಾತ್‌ರೂಂ, ಸಂಡಾಸ್ ಎಲ್ಲವೂ. ಒಬ್ಬರು ಒಳಗೆ ಬಂದರೆ ಇಬ್ಬರು ಹೊರಗೆ ಹೋಗಬೇಕು ಎಂಬಂಥ ಸ್ಥಿತಿ ಇರುವ ಮನೆಯನ್ನು ಕಂಡಾಗಲೂ ಅದೊಂದು ಕಿಷ್ಕಿಂದೆ, ಹೇಗೆ ಉಳಿಯುತ್ತಾರೋ ಅದರಲ್ಲಿ ಎಂದು ಮೂಗೆಳೆಯುವವರು ಇದ್ದಾರೆ. ಏನಿದು ಕಿಷ್ಕಿಂದೆ? ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಗೊತ್ತಲ್ಲವೆ? ಅವರ ರಾಜಧಾನಿಯೇ ಈ ಕಿಷ್ಕಿಂದೆ. ಇಕ್ಕಟ್ಟಾದ ಕಣಿವೆಗಳು, ಏರಲಸಾಧ್ಯವಾದ ಇಳಿಜಾರಿನ ಗುಡ್ಡಗಳು, ಗುಹೆಗಳು,...
*ಯಾಮಾರಿಸುವುದು ಯಾರನ್ನಾದರೂ ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದಾಗ, `ಏನ್ ನನ್ನ ಕಿವಿಲಿ ಹೂ ಇಡ್ತಿಯಾ?' ಎಂದು ಹೇಳುವುದಿದೆ. ಇರುವುದೊಂದು ಹೇಳುವುದೊಂದು. ಹಾಗೆ ಹೇಳಿ ಯಾಮಾರಿಸಲು ನೋಡುವವರಿಗೂ ಇದೇ ಮಾತು ಹೇಳುತ್ತಾರೆ.ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡು ಕುಳಿತಿದ್ದೇವಾ?’ ಎಂದು ಹೇಳುವುದನ್ನೂ ಕೇಳಿರುತ್ತೀರಿ. ಕಿವಿಯಲ್ಲಿ ಯಾರು ಹೂವು ಇಟ್ಟುಕೊಳ್ಳುವವರು? ದೇವಸ್ಥಾನದಲ್ಲಿ ಕೊಡುವ ಪ್ರಸಾದ ರೂಪದ ಹೂವನ್ನು ಭಕ್ತರು ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಕಿವಿಯಲ್ಲಿ ಇರುವ ಹೂವನ್ನು ನೋಡಿದ ಕೂಡಲೆ ಆತನನ್ನು ಪರಮ ದೈವಭಕ್ತ ಎಂದು ನಿರ್ಧರಿಸಿಬಿಡುವವರು ಇದ್ದಾರೆ. ಕಿವಿಯಲ್ಲಿ ಹೂವಿಟ್ಟುಕೊಳ್ಳುವವರೆಲ್ಲರೂ ನಿಜವಾದ ಭಕ್ತರಾಗಿರುವುದಿಲ್ಲ....
*ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ ಕರಿಯ ಎತ್ತು ಕಾಳ, ಬಿಳಿಯ ಎತ್ತು ಬೆಳ್ಳ. `ಕಾಳನನ್ನು ದೂರುವುದು ಬೇಡ, ಬೆಳ್ಳನನ್ನು ಹೊಗಳುವುದು ಬೇಡ’ ಎಂದರೆ ಎರಡೂ ಸಮಾನ ತಪ್ಪು ಮಾಡಿದವೇ. ಕಾಳ ಸರಿಯಾಗಿ ಮಾತು ಕೇಳುತ್ತಾನೆ ಎನ್ನುವಂತಿಲ್ಲ, ಬೆಳ್ಳ ನಡೆಯನ್ನು ತಪ್ಪುವುದಿಲ್ಲ ಎನ್ನುವಂತಿಲ್ಲ. ಇಬ್ಬರೂ ಸಮಾನ ತಪ್ಪುಗಾರರೇ. ನಮ್ಮ ನಿತ್ಯ ಜೀವನದಲ್ಲೂ ಕಾಳ, ಬೆಳ್ಳ ಎದುರಾಗುತ್ತಾರೆ. ನಾವು ಅತ್ಯುತ್ತಮವಾದುದನ್ನೇ ಆಯ್ಕೆಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ಯಾರನ್ನು ಆಯ್ಕೆ ಮಾಡಬೇಕೆಂದರೂ ಅವರಲ್ಲಿ ಒಂದೊಂದು ಲೋಪ. ಅವನನ್ನು ಹೊಗಳುವಂತಿಲ್ಲ, ಇವನನ್ನು ತೆಗಳುವಂತಿಲ್ಲ. ಎಲ್ಲರೂ ಒಂದೇ...
*ಮಾನಸಿಕ ಸಮತೋಲನ ಕಳೆದುಕೊಂಡವರು ತುಂಬ ಚಡಪಡಿಕೆಯ ಸ್ವಭಾವದವರನ್ನು ಕಂಡಾಗ, `ಅವ್ನ ನೋಡು, ಕಾಲು ಸುಟ್ಟ ಬೆಕ್ಕಿನಂಗೆ ಮಾಡ್ತಾ ಅವ್ನೆ' ಎಂದು ಹೇಳುವುದು ಸಾಮಾನ್ಯ. ಬೆಕ್ಕಿನ ಕಾಲು ಬಲು ಮೃದುವಾದದ್ದು. ಸದ್ದಿಲ್ಲದೆ ಹೆಜ್ಜೆಯನ್ನು ಇಕ್ಕುತ್ತ ಇಲಿಯ ಬೇಟೆಯಾಡುವುದರಲ್ಲಿ ಅದು ನಿಸ್ಸೀಮ. ಬೇಟೆಗೆ ಅದರ ಕಾಲೇ ಪ್ರಮುಖ ಸಾಧನ. ಅಂಥ ಕಾಲು ಸುಟ್ಟು ಹೋದರೆ ಅದಕ್ಕೆ ಚಡಪಡಿಕೆ ಸಹಜ. ನಿಂತಲ್ಲಿ ನಿಲ್ಲುವುದಿಲ್ಲ ಅದು. ಮನುಷ್ಯನಿಗೂ ಅಂತಹ ಚಡಪಡಿಕೆ ಶುರುವಾಗುವುದು ಯಾವಾಗ? ಆತನ ಅಹಂಗೆ ಧಕ್ಕೆಯಾದಾಗ, ಸಾಧಿಸಬೇಕು ಅಂದುಕೊಂಡಿದ್ದನ್ನು ಸಾಧಿಸಲು ಆಗದೇ...