ಶಬ್ದಪುರಾಣ

ನಡುರಾತ್ರೀಲಿ ಕೊಡೆ ಹಿಡಿದ

*ಅಸಹಜ ಶ್ರೀಮಂತಿಕೆ ಪ್ರದರ್ಶನಕ್ಕೆ ದಾರಿ ಕೊಡೆ ಅಂದರೆ ಛತ್ರಿಗೆ ಸಂಸ್ಕೃತದಲ್ಲಿ ಆತಪತ್ರ ಎಂದು ಹೇಳುತ್ತಾರೆ. ಅಂದರೆ ಬಿಸಿಲಿಗೆ ನೆರಳನ್ನು ಒದಗಿಸುವಂಥದ್ದು ಎಂಬ ಅರ್ಥ. ಅಂದರೆ ಕೊಡೆಯನ್ನು ಬಿಸಿಲಿನಲ್ಲಿ ಮಾತ್ರ ಹಿಡಿಯುವಂಥದ್ದು. ಬಿಸಿಲಿನಲ್ಲಿ ಹಿಡಿಯಬೇಕಾದ ಕೊಡೆಯನ್ನು ನಡುರಾತ್ರಿಯಲ್ಲಿ ಹಿಡಿದರೆ ಏನೋ ಸರಿ ಇಲ್ಲ ಎಂದು ಅರ್ಥ. ಅಲ್ಪನಿಗೆ ಐಶ್ವರ್ಯ ಬಂದಾಗ ನಡುರಾತ್ರೀಲಿ ಕೊಡೆ ಹಿಡಿದ ಎಂಬುದು ಲೋಕೋಕ್ತಿ. ಸಹಜ ಶ್ರೀಮಂತನಿದ್ದರೆ ಅವನು ಅದನ್ನು ತೋರಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ತುಂಬ ಬಡತನದಲ್ಲಿದ್ದವನಿಗೆ ಒಮ್ಮೆಲೇ ಶ್ರೀಮಂತಿಕೆ ಬಂದರೆ ನಾಲ್ಕು ಜನರಿಗೆ ತನ್ನ ಡೌಲು...

ನಕಲಿಶ್ಯಾಮ

*ಜಗವೆಲ್ಲ ನಗುತ್ತಿರಲಿ, ಜಗದಳಲು ನನಗಿರಲಿ ಎನ್ನುವವರು ಅವನೊಬ್ಬ ನಕಲಿ ಶ್ಯಾಮ ಎಂದು ಟೀಕಿಸುವುದನ್ನು ಕೇಳಿದ್ದೇವೆ. ನೀಲಮೇಘ ಶ್ಯಾಮ ಗೊತ್ತು. ಏನಿದು ನಕಲಿ ಶ್ಯಾಮ? ಸರ್ಕಸ್‌ಗಳಲ್ಲಿ ಇರುವ ಜೋಕರ್‌ಗಳನ್ನು ನಕಲಿ ಶ್ಯಾಮ ಎಂದು ಕರೆಯುತ್ತಾರೆ. ಸರ್ಕಸ್‌ಗಳಲ್ಲಿ ನಗಿಸುವುದೇ ಇವರ ಕೆಲಸ. ಫಜೀತಿಯ ಪ್ರಸಂಗಗಳಲ್ಲಿ ತಮ್ಮನ್ನು ತಾವೇ ಬೀಳಿಸಿಕೊಂಡು ಪ್ರೇಕ್ಷಕರಲ್ಲಿ ನಗುವನ್ನು ಉಕ್ಕಿಸುವುದು ಅವರ ಕಾಯಕ. ಶ್ಯಾಮ ಎಂದರೆ ಕೃಷ್ಣ. ತುಂಟಾಟಗಳನ್ನು ಮಾಡುವುದರಲ್ಲಿ ಕೃಷ್ಣ ಹೆಸರುವಾಸಿ. ಈ ಜೋಕರ್‌ಗಳೂ ಆರಂಭದಲ್ಲಿ ಕೃಷ್ಣನ ವೇಷವನ್ನು ಧರಿಸಿಕೊಂಡು ಬರುತ್ತಿದ್ದರೋ ಏನೋ? ಯಕ್ಷಗಾನದಲ್ಲಿ ಬಾಲಗೋಪಾಲರು...

ಧ್ರುವತಾರೆ

*ಶಾಶ್ವತ ಕೀರ್ತಿವಂತನಾಗು ದೇಶದ ಇತಿಹಾಸದಲ್ಲಿ ಅವರು ಧ್ರುವತಾರೆಯಾದರು ಎಂದು ವಿಶೇಷ ಸಾಧನೆ ಮಾಡಿದವರನ್ನು ವರ್ಣಿಸುವುದನ್ನು ಕೇಳಿದ್ದೇವೆ. ಧ್ರುವ ಎಂದರೆ ಸ್ಥಿರವಾದದ್ದು ಎಂಬ ಅರ್ಥವಿದೆ. ನಮ್ಮ ಪುರಾಣದಲ್ಲಿ ಧ್ರುವ ಎಂಬ ಬಾಲಕನ ಕತೆ ಬರುತ್ತದೆ. ಈತ ಉತ್ತಾನಪಾದರಾಯನ ಮಗ. ತಾಯಿ ಸುನೀತಿ. ಮಲತಾಯಿ ಸುರುಚಿ. ಮಲತಾಯಿಯ ಹಿಂಸೆಯಿಂದ ನೊಂದು ಕಾಡಿಗೆ ತೆರಳಿ ಶ್ರೀಹರಿಯನ್ನು ಕುರಿತು ತಪಸ್ಸನ್ನು ಮಾಡಿ ನಕ್ಷತ್ರ ಪದವಿಗೆ ಏರುತ್ತಾನೆ ಧ್ರುವ. ಆಗಸದಲ್ಲಿ ಧ್ರುವ ನಕ್ಷತ್ರ ದಿಕ್ಸೂಚಿಯಾಗಿ ಇಂದಿಗೂ ಇದೆ. ದಿಕ್ಕನ್ನು ತಿಳಿಯಬೇಕೆಂದರೆ ಧ್ರುವ ನಕ್ಷತ್ರವನ್ನು ನೋಡಿ...

ಧೃತರಾಷ್ಟ್ರಾಲಿಂಗನ

*ಹತ್ತಿರ ಹೋದರೆ ಅಪಾಯ ಧೃತರಾಷ್ಟ್ರನು ದುರ್ಯೋಧನ ಮೊದಲಾದ ಕೌರವರ ತಂದೆ. ಹುಟ್ಟು ಕುರುಡ. ಆತ ಕುರುಡನಾಗಿದ್ದ ಕಾರಣಕ್ಕಾಗಿಯೇ ಅವನ ತಮ್ಮನಾದ ಪಾಂಡು ಹಸ್ತಿನಾಪುರದ ರಾಜನಾಗಿದ್ದುದು ಮತ್ತು ಪಾಂಡವರಿಗೆ ರಾಜ್ಯದ ಮೇಲೆ ಹಕ್ಕು ಪ್ರಾಪ್ತವಾದದ್ದು. ಪಾಂಡು ಸತ್ತಮೇಲೆ ಅನಿವಾರ್ಯವಾಗಿ ಧೃತರಾಷ್ಟ್ರ ರಾಜನಾಗುತ್ತಾನೆ. ಈ ಧೃತರಾಷ್ಟ್ರನಲ್ಲಿ ಸಾವಿರ ಆನೆಗಳ ಬಲವಿತ್ತು. ಅವನು ಯಾರನ್ನಾದರೂ ಅಪ್ಪಿದನೆಂದರೆ ಅವರು ಸತ್ತೇ ಹೋಗುತ್ತಿದ್ದರು. ಕೌರವರೆಲ್ಲ ಸತ್ತ ಮೇಲೆ ಪಾಂಡವರು ಧೃತರಾಷ್ಟ್ರನನ್ನು ನೋಡಲು ಹೋಗುತ್ತಾರೆ. ತನ್ನ ಮಕ್ಕಳ ಸಾವಿಗೆ ಕಾರಣನಾದ ಭೀಮನ ಮೇಲೆ ಧೃತರಾಷ್ಟ್ರನಿಗೆ ಅಪಾರ...

ದ್ರಾವಿಡ ಪ್ರಾಣಾಯಾಮ

*ಸುತ್ತಿ ಬಳಸಿ ಮಾತನಾಡುವುದು ನೇರವಾಗಿ ಹೇಳಬೇಕಾದುದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುವವರನ್ನು ಕಂಡಾಗ ಅದೇನು ದ್ರಾವಿಡ ಪ್ರಾಣಾಯಾಮ ಮಾಡುತ್ತಾನಪ್ಪ ಎಂದು ಮೂಗೆಳೆಯುತ್ತೇವೆ. ಸುಲಭದಲ್ಲಿ ಮಾಡುವ ಕೆಲಸವನ್ನು ಕಷ್ಟಪಟ್ಟು ಮಾಡುತ್ತಾರಲ್ಲ, ಆಗಲೂ ಇದೇ ರೀತಿ ಟೀಕಿಸುತ್ತೇವೆ. ಉಗುರಿನಲ್ಲಿ ಆಗುವ ಕಲಸಕ್ಕೆ ಕೊಡಲಿ ತಗೆದುಕೊಳ್ಳುತ್ತಾರಲ್ಲ ಹಾಗೆ ಇದು. ದ್ರಾವಿಡ ಪ್ರಾಣಾಯಾಮದ ವಿಶೇಷವೇನು? ಮೂಗನ್ನು ಹಿಡಿಯಲು ಕೈಯನ್ನು ತಲೆಯ ಹಿಂದಿನಿಂದ ತರುತ್ತಾರೆ. ನೇರವಾಗಿ ಎದುರಿನಿಂದಲೇ ಮೂಗನ್ನು ಹಿಡಿಯಬಹುದಲ್ಲವೆ? ಹೀಗೆ ಮಾಡುವುದಕ್ಕೂ ಒಂದು ಕಾರಣ ಇರಬಹುದು. ಶರೀರಕ್ಕೆ ವ್ಯಾಯಾಮ ದೊರೆಯಲಿ ಎಂಬುದು...

ದೊಣೆನಾಯಕ

*ಹರಿವ ನೀರಿಗೆ ಇವನ ಅಪ್ಪಣೆ ಬೇಡ `ಹರಿವ ನೀರಿಗೆ ದೊಣೆ ನಾಯಕನ ಅಪ್ಪಣೆಯೇಕೆ?’ ಎಂಬ ಗಾದೆಯೊಂದು ರೂಢಿಯಲ್ಲಿದೆ. ದೊಣೆ ನಾಯಕ ಹರಿಯುವ ನೀರನ್ನು ಕಾಯುವವನಲ್ಲ. ನೀರು ಅದರ ಪಾಡಿಗೆ ಅದು ಹರಿದು ಹೊಗುತ್ತದೆ. ಅದರ ಮೇಲೆ ಎಲ್ಲರದೂ ಹಕ್ಕಿರುತ್ತದೆ. ದೊಣೆ ಎಂದರೆ ಕಲ್ಲುಗಳ ಮಡುವಲ್ಲಿ ಸಂಗ್ರಹವಾದ ನೀರು. ನೀರು ಅಪರೂಪವಾಗಿರುವ ಊರುಗಳಲ್ಲಿ ಇಂಥ ದೊಣೆಗಳಲ್ಲಿ ನಿಂತ ನೀರೇ ಆಧಾರ. ಅದನ್ನು ಕಾಯುವುದಕ್ಕೆ ಒಬ್ಬನನ್ನು ನೇಮಿಸುತ್ತಿದ್ದರು. ಈ ದೊಣೆಯನ್ನು ಕಾಯುವವನೇ ದೊಣೆನಾಯಕ. ನೀರನ್ನು ಬಳಸುವಾಗ ಆತನ ಅನುಮತಿ ಪಡೆಯಬೇಕಾಗುತ್ತಿತ್ತು....

ದೇವದಾಸ

*ಹೆಂಡಗುಡುಕರೆಲ್ಲ ಈಗ ದೇವದಾಸರು ಹೆಂಡ ಕುಡಿದು ರಸ್ತೆಯಲ್ಲಿ ಬಿದ್ದವರನ್ನು ಕಂಡಾಗ, ಇವನೊಬ್ಬ ದೇವದಾಸ, ಬೆಳಿಗ್ಗೆ ಎದ್ದ ಕೂಡಲೇ ಶುರು ಮಾಡಿದ್ರೆ ಎಚ್ಚರ ತಪ್ಪೋವರೆಗೂ ಕುಡೀತಾನೆ ಇರ್ತಾನೆ ಎಂದು ವ್ಯಾಖ್ಯಾನ ಮಾಡುವವರು ಇದ್ದಾರೆ. ಕತೆಯ ಪಾತ್ರಗಳೋ ಪುರಾಣದ ಪಾತ್ರಗಳೋ ಪ್ರತಿಮೆಗಳಾಗಿ ಆಡು ಭಾಷೆಯಲ್ಲಿ ಸೇರಿಹೋದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಸತ್ಯಹರಿಶ್ಚಂದ್ರ ಅವನು, ದಾನಶೂರ ಕರ್ಣ ನೋಡು, ಶಕುನಿ ಇದ್ದಹಾಗೆ ಇದ್ದಾನೆ, ಹಚ್ಚಿಹಾಕುವುದರಲ್ಲಿ ನಾರದ ಮುನಿ…. ಹೀಗೆ ಹೇಳುತ್ತಲೇ ಹೋಗಬಹುದು. ದೇವದಾಸ ಎಂಬುದು ಶರತ್‌ಚಂದ್ರ ಚಟ್ಟೋಪಾಧ್ಯಾಯರು ಬಂಗಾಳಿಯಲ್ಲಿ ಬರೆದ...

ದೀಪದ ಬುಡಕ್ಕೆ ಕತ್ತಲು

*ಹತ್ತಿರದಲ್ಲಿರುವವರೇ ನಿರ್ಲಕ್ಷ್ಯಕ್ಕೆ ಈಡಾಗುವವರು ದೀಪ ಜಗತ್ತಿಗೆಲ್ಲ ಬೆಳಕನ್ನು ಕೊಡುತ್ತದೆ. ಆದರೆ ಆ ದೀಪದ ಬುಡಕ್ಕೇ ಕತ್ತಲು. ಇದೆಂಥ ವಿಪರ್ಯಾಸ? ಇಂಥ ವಿಪರ್ಯಾಸಗಳನ್ನು ಹೇಳುವುದಕ್ಕಾಗಿಯೇ ದೀಪದ ಬುಡಕ್ಕೆ ಕತ್ತಲು ಎಂದು ಹೇಳುವುದು. ಕಡಲಿನ ನಂಟು, ಉಪ್ಪಿಗೆ ಬಡತನ ಎಂಬ ಮಾತೂ ಇದೇ ಅರ್ಥವನ್ನು ವಿಸ್ತರಿಸುವಂಥದ್ದು. ಇಂಥ ಬಡತನವನ್ನು ಅನುಭವಿಸುವವರು ನಮ್ಮ ಸುತ್ತೆಲ್ಲ ಇದ್ದಾರೆ. ಹೆಸರು ಕ್ಷೀರಸಾಗರ ಚಹಾಗೆ ಹಾಲಿಲ್ಲ ಎಂದು ಹೇಳುವುದನ್ನು ಕೇಳಿಲ್ಲವೆ? ಹೊರಗಿನ ತೋರಿಕೆಗೆ, ಓ ಅವನಿಗೇನು? ಬಳ್ಳದಲ್ಲಿಯೇ ಮುತ್ತು ರತ್ನ ಅಳೆಯುವ ಭಾಗ್ಯ ಅವನಿಗೆ ಎಂದು...

ತ್ರಿಶಂಕು ಸ್ವರ್ಗ

*ಗುರಿ ತಲುಪದ ಅತಂತ್ರ ಸ್ಥಿತಿ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸ್ಥಿತಿಯನ್ನು ಅನುಭವಿಸುವವರಿಗೆ ತ್ರಿಶಂಕು ಎಂದು ಹೇಳುತ್ತಾರೆ. ತ್ರಿಶಂಕು ಸ್ವರ್ಗವಾಯಿತು ಅವನ ಸ್ಥಿತಿ ಎಂದು ಹಾಸ್ಯ ಮಾಡುತ್ತಾರೆ ಇಲ್ಲವೇ ಮರುಕ ಪಡುತ್ತಾರೆ. ಏನಿದು ತ್ರಿಶಂಕು? ಮೂರು ಪಾಪಗಳೇ ತ್ರಿಶಂಕು. ಇದನ್ನು ಮಾಡಿದವನೇ ತ್ರಿಶಂಕು. ಪುರಾಣ ಪ್ರಸಿದ್ಧ ತ್ರಿಶಂಕು ಮಹಾರಾಜನ ಕತೆ ಯಾರಿಗೆ ಗೊತ್ತಿಲ್ಲ? ಈ ಮಹಾತ್ಮನ ತಂದೆ ಸತ್ಯವ್ರತನೇ ತ್ರಿಶಂಕು. ಈತ ತನ್ನ ಯವ್ವನದಲ್ಲಿ ವಿವಾಹಿತ ಸ್ತ್ರೀಯೊಬ್ಬಳನ್ನು ಮೋಹಿಸಿ ಆಕೆಯ ಅಪಹರಣ ಮಾಡಿದ್ದ. ಇದರಿಂದ ಆತನ ತಂದೆ...

ತೌಡುಕುಟ್ಟು

*ಪ್ರಯೋಜನಕ್ಕೆ ಬಾರದ ಮಾತನಾಡುವುದು ಒಬ್ಬ ತಾಸುಗಟ್ಟಲೆ ಭಾಷಣವನ್ನು ಮಾಡುತ್ತಲೇ ಇರುತ್ತಾನೆ. ಅದರಲ್ಲಿ ವಿಷಯವೇನೂ ಇರುವುದಿಲ್ಲ. ಹೇಳಿದ್ದನ್ನೇ ಹಿಂದೆ ಮುಂದೆ ಮಾಡಿ ಉಂಡೆಗೆ ನೂಲು ಸುತ್ತುವಂತೆ ಸುತ್ತುತ್ತಿರುತ್ತಾನೆ. ಅದನ್ನು ಕೇಳಿದವರು, ಬೇಸರ ಬಂದು, ಅದೇನು ತೌಡುಕುಟ್ಟುತ್ತಾನಲ್ಲ ಎನ್ನುತ್ತಾರೆ. ಅರ್ಥವಿಲ್ಲದ, ಪ್ರಯೋಜನಕ್ಕೆ ಬಾರದ ಮಾತನಾಡುವುದು ಹೇಗೆ ತೌಡು ಕುಟ್ಟುವ ಕೆಲಸವೋ ಅದೇ ರೀತಿ ಯಾವುದೇ ಪ್ರಯೋಜನಕ್ಕೆ ಬಾರದ ಕೆಲಸ ಮಾಡುವುದೂ ತೌಡುಕುಟ್ಟುವ ಕಾಯಕವೇ. ತೌಡು ಎಂದರೆ ಬತ್ತದ ಮೇಲಿನ ಕವಚ. ಈ ಕವಚವನ್ನು ತೆಗೆದಾಗ ಅದು ಅಕ್ಕಿ ಎನಿಸಿಕೊಳ್ಳುತ್ತದೆ. ಈ...