ಶಾಂತಾದೇವಿ ಕಣವಿಯವರು ತಮ್ಮ ಮೊದಲ ಕತೆಯನ್ನು ಬರೆದದ್ದು 1958ರಲ್ಲಿ. ಅಲ್ಲಿಂದ ಇಲ್ಲಿಗೆ ಸರಿಸುಮಾರು ಐವತ್ತೈದು ವರ್ಷಗಳೇ ಕಳೆದುಹೋಗಿವೆ. ಈ ನಡುವೆ ಅವರು ಬರೆದು ಪ್ರಕಟಿಸಿದ ಕಥಾಸಂಕಲನಗಳು ಏಳು. ಕಥಾ ಸಂಕಲನದಲ್ಲಿ ಬಾರದೆ ಇರುವ ಕೆಲವು ಕತೆಗಳನ್ನು ಸೇರಿಸಿದರೆ ನೂರಹತ್ತರಷ್ಟು ಕತೆಗಳನ್ನು ಶಾಂತಾದೇವಿಯವರು ಬರೆದಿರುವರು. ಹೆಚ್ಚೂಕಡಿಮೆ ವರ್ಷಕ್ಕೆ ಎರಡು ಕತೆಗಳಂತೆ ಅನ್ನಿ. ಶಾಂತಾದೇವಿ ಕಣವಿಯವರ ಈ ವರೆಗಿನ ಎಲ್ಲ ಕತೆಗಳನ್ನು ಸೇರಿಸಿ ಸಮಗ್ರ ಸಂಪುಟವನ್ನು ಬೆಂಗಳೂರಿನ ಸಪ್ನ ಬುಕ್ ಹೌಸ್ ಹೊರತಂದಿದೆ. ಅವರಿಗೆ ಸರಿಯಾದ ವಿಮರ್ಶನ ನ್ಯಾಯವನ್ನು ಒದಗಿಸುವ ರೀತಿಯಲ್ಲಿ...
ವಿವೇಕ ಶಾನಭಾಗ ಅವರ ಹೊಸ ಕತೆಗಳ ಸಂಕಲನ ‘ಘಾಚರ್ ಘೋಚರ್’. ಇದರಲ್ಲಿ ಆರು ಕತೆಗಳಿವೆ. ಮೊದಲ ಕತೆ ಘಾಚರ್ ಘೋಚರ್ 63 ಪುಟಗಳಷ್ಟು ದೀರ್ಘವಾಗಿರುವುದರಿಂದ ಅದೊಂದು ಕಿರುಕಾದಂಬರಿಯೇ ಸೈ. ಇದರಲ್ಲಿ ಕಥಾನಾಯಕ, ಆತನ ಪತ್ನಿ ಅನಿತಾ, ಆತನ ತಂದೆ, ಚಿಕ್ಕಪ್ಪ, ತಾಯಿ, ಗಂಡನ ಬಿಟ್ಟು ಬಂದಿರುವ ತಂಗಿ ಮಾಲತಿ ಇವರನ್ನೊಳಗೊಂಡ ಒಂದು ಕೂಡು ಕುಟುಂಬವಿದೆ. ಚಿಕ್ಕಪ್ಪ ವೆಂಕಟಾಚಲನೇ ಕುಟುಂಬದ ಕೇಂದ್ರ ವ್ಯಕ್ತಿ. ಏಕೆಂದರೆ ಅವನು ಕುಟುಂಬದ ಆದಾಯ ಮೂಲ. ಬಡತನದಲ್ಲಿದ್ದ ಕುಟುಂಬವು ಈ ವೆಂಕಟಾಚಲ ಸೋನಾ ಮಸಾಲಾ ಕಾರ್ಖಾನೆಯನ್ನು...
ಕ ಹೊಸ ತಲೆಮಾರಿನ ಕತೆಗಾರರಲ್ಲಿ ಬಹಳ ಭರವಸೆ ಮೂಡಿಸಿರುವ ವಿಕ್ರಮ ಹತ್ವಾರ ಅವರ ‘ಝೀರೋ ಮತ್ತು ಒಂದು’ ಕಥಾಸಂಕಲನದ ಒಂದು ಕತೆಯಲ್ಲಿ ‘ನಾನು ಬರೆಯುತ್ತಿರುವ ಕಥೆ ನಿಜದಲ್ಲಿ ಕಾಣಿಸತೊಡಗಿದೆ. ಕಲ್ಪಿಸಿಕೊಂಡ ಪಾತ್ರಗಳೆಲ್ಲ ನಿಜದಲ್ಲಿ ಕಾಣಿಸುತ್ತಿವೆ. ನಿಜದಲ್ಲಿ ಕಾಣಿಸುತ್ತಿದ್ದವೆಲ್ಲ ಕಥೆಯೆನಿಸತೊಡಗಿದೆ. ಬದುಕು, ಸತ್ಯ, ಕಥೆ, ಮಿಥ್ಯೆ ಎಲ್ಲವೂ ಮಿಲತಗೊಂಡಿವೆ. ಕಥೆಯಲ್ಲಿ ಸತ್ಯವೂ ಇಲ್ಲ; ಮಿಥ್ಯೆಯೂ ಇಲ್ಲ’.ಬಹುಶಃ ಎಲ್ಲ ಕಥೆಗಾರ ಅನುಭವಿಸುವ ಒಳತೋಟಿ ಇದಾಗಿರಬಹುದು ಮತ್ತು ಈ ಮೂಲಕ ಕಥೆಗಳಿಗೊಂದು ವ್ಯಾಖ್ಯೆಯನ್ನು ನೀಡಲು ಹತ್ವಾರ ಇಲ್ಲಿ ಪ್ರಯತ್ನಿಸಿರಬಹುದು.ಬದುಕಿನ ಸಾರ್ಥಕತೆಯ ಬಗ್ಗೆ...
ಲೋಕದಲ್ಲಿ ಜನಿಸಿದಾ ಬಳಿಕ.. ನಮ್ಮ ಬದುಕಿನ ಕಥೆಯನ್ನು ನಾವೇ ಬರೆದುಕೊಂಡರೆ ಅದು ಆತ್ಮಕಥನವಾಗುತ್ತದೆ. ನಮ್ಮ ಜೀವನ ಕಥೆಯನ್ನು ಬೇರೆಯವರು ಬರೆದಾಗ ಅದು ಜೀವನ ಚರಿತ್ರೆಯಾಗುತ್ತದೆ. ಈ ಎರಡೂ ಪ್ರಕಾರಗಳಲ್ಲಿ ಕೆಲವು ಲೋಪಗಳು ತಲೆದೋರುವ ಸಾಧ್ಯತೆಗಳಿವೆ. ಆತ್ಮಕಥನದಲ್ಲಿ ಲೇಖಕ ತನ್ನ ಮೂಗಿನ ನೇರಕ್ಕೆ ಸರಿ ಎನಿಸಿದ್ದನ್ನಷ್ಟೇ ಬರೆಯುತ್ತಾನೆ. ಬದುಕಿನ ಘಟನೆಗಳಿಗೆ ಎರಡನೆಯ ಮಗ್ಗಲೂ ಇರುತ್ತದೆ. ಆ ಮಗ್ಗಲು ಇಲ್ಲಿ ತಪ್ಪಿಹೋಗುತ್ತದೆ. ಜೀವನಚರಿತ್ರಕಾರನಿಗೆ ಬರೆಯುವಾಗ ಆಯ್ಕೆಗಳಿರುತ್ತವೆ. ಈ ಆಯ್ಕೆಯಲ್ಲಿ ಕೆಲವು ಬಿಟ್ಟುಹೋಗುವ ಸಾಧ್ಯತೆಯೂ ಇರುತ್ತದೆ. ಆತ್ಮಕಥನಗಳು ಒಂದು ಸಾಹಿತ್ಯ ಪ್ರಕಾರ ಎನ್ನುವಷ್ಟು...