ಅವ್ವ ಎಂಬ ಅಪ್ರಮೇಯದ ಅನುಸಂಧಾನ

ಅವ್ವ ಎಂಬುದು ಒಂದು ಜಾಗತಿಕ ವಿಸ್ಮಯ. ಅವ್ವ ದೇಶ ಕಾಲಾತೀತವಾದ ಒಂದು ಅನುಭವ. ಅವ್ವ ನಿನ್ನೆಯ ನೆನಪು, ಇಂದಿನ ಮೆಲಕು, ನಾಳೆಯ ಕನಸು ಕೂಡ. ಕಣ್ಣರಿಯದುದನ್ನು ಕರುಳರಿಯಿತು ಎನ್ನುತ್ತಾರೆ. ಕರುಳು ಸಂಬಂಧ ಎನ್ನುತ್ತಾರೆ ಪ್ರಾಜ್ಞರು. ಕರುಳ ಬಳ್ಳಿಯಿಂದ ಹೊಕ್ಕುಳ ಹುರಿಯನ್ನು ಕತ್ತರಿಸಿ ಈ ಭೂಮಂಡಲದಲ್ಲಿ ತನ್ನ ಕುಡಿಯನ್ನು ಕಸಿ ಮಾಡುವ ಅವ್ವ ಕೆಲವರಿಗೆ ಒಗಟು, ಕೆಲವರಿಗೆ ಸುಂದರ ಕಾವ್ಯ, ಕೆಲವರಿಗೆ ಸುಭಾಷಿತ. ಅವ್ವ ಎಲ್ಲರಿಗೂ ಬೇಕು ಅದಕು ಇದಕು ಎದಕೂ. ಸಾಹಿತ್ಯ ಕ್ಷೇತ್ರದಲ್ಲಿ ಮ್ಯಾಕ್ಸಿಂ ಗಾರ್ಕಿ ತಮ್ಮ...

ಮೊಗಸಾಲೆಯಲ್ಲಿ ದೇವರ ಉತ್ಸವ

ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಡಾ.ನಾ.ಮೊಗಸಾಲೆಯವರು ಇದೀಗ ‘ದೇವರು ಮತ್ತೆ ಮತ್ತೆ’ ಎಂಬ ಹತ್ತನೆಯ ಸಂಕಲನವನ್ನು ಹೊರತಂದಿದ್ದಾರೆ. ಅವರ ಈ ಮೊದಲಿನ ಕೃತಿ ‘ಕಾಮನೆಯ ಬೆಡಗು’ ಪ್ರಕಟವಾಗಿದ್ದು ೨೦೧೦ರಲ್ಲಿ. ಅಂದರೆ ಅಲ್ಲಿಂದ ಈಚೆಗೆ ಮೂರೂವರೆ ವರ್ಷಗಳಲ್ಲಿ ಅವರು ಬರೆದ ೮೫ ಕವಿತೆಗಳು ಈ ಸಂಕಲನದಲ್ಲಿವೆ. ಸರಾಸರಿ ವರ್ಷಕ್ಕೆ ಇಪ್ಪತ್ತೈದು, ತಿಂಗಳಿಗೆ ಎರಡರಂತೆ ಅವರು ಕವಿತೆಗಳನ್ನು ಬರೆಯುತ್ತಿದ್ದಾರೆ ಎಂಬುದು ಗಣಿತದ ಲೆಕ್ಕಾಚಾರ. ಕೇವಲ ಕವಿತೆ ಮಾತ್ರವಲ್ಲ, ಕತೆಗಳು, ಕಾದಂಬರಿ, ವ್ಯಕ್ತಿಚಿತ್ರ, ಅಂಕಣ ಬರೆಹ ಹೀಗೆ ಸಾಹಿತ್ಯದ ವಿವಿಧ...

ಗ್ರಾಮಮುಖಿ ನಾಗತಿಹಳ್ಳಿ

ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು. ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ...

ಬೇಂದ್ರೆ ಸಾಹಿತ್ಯದ ವಿರಾಟ್ ದರ್ಶನ

ಕನ್ನಡಿಗರ ವಿಮರ್ಶನ ಪ್ರಜ್ಞೆಯನ್ನು ಸದಾ ಕೆಣಕುತ್ತಿರುವ ವಿಶೇಷ ಕವಿಗಳಲ್ಲಿ ವರಕವಿ ಅಂಬಿಕಾತನಯ ದತ್ತರು ಒಬ್ಬರು. ದ.ರಾ.ಬೇಂದ್ರೆ ಬದುಕಿನಲ್ಲಿ ಬಹಳ ಬೆಂದವರು. ಬೆಂದರಷ್ಟೆ ಬೇಂದ್ರೆಯಾಗುತ್ತಾರೆ ಎಂದು ಅವರು ಹೇಳುತ್ತಿದ್ದರು. ಹೀಗಿದ್ದರೂ ಅವರು ತಮ್ಮ ನೋವನ್ನು ಇತರರಿಗೆ ಹಂಚಲಿಲ್ಲ. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ !’ ಎಂದು ಅವರು ಹೇಳಿದರು. ಅವರ ಮಟ್ಟಿಗೆ ಹೇಳುವುದಾದರೆ ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಹರಿಯಿತು. ಅದು ಕನ್ನಡಿಗರ ಭಾಗ್ಯ. ಕಾವ್ಯ ಅವರ ಪಾಲಿಗೆ ನಾದ ಲೀಲೆ. ಲೀಲೆ ಎಂಬುದು...

ಲಕ್ಷ್ಮಣ ಮಾರ್ಗದ ಆಚೆಈಚೆ

ಕನ್ನಡದ ಸಮಕಾಲೀನ ಕವಿಗಳಲ್ಲಿ ಪ್ರಮುಖರಾದ ಬಿ.ಆರ್.ಲಕ್ಷ್ಮಣರಾವ್್ ಅವರು ಕವಿತೆ ಬಿಟ್ಟು ಬೇರೇನೂ ಬರೆಯುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕವಿಗಳೇ ಆಗಿದ್ದಾರೆ. ಅವರು ಕತೆಗಳನ್ನೂ ಬರೆದಿದ್ದಾರೆ. ನಾಟಕ, ವ್ಯಕ್ತಿಚಿತ್ರ ಇಷ್ಟೇ ಅಲ್ಲ ಕಾದಂಬರಿಯನ್ನೂ ಬರೆದಿದ್ದಾರೆ. ಆದರೂ ಅವರು ಕವಿಯೆಂದೇ ಪ್ರಸಿದ್ದರು. ಅವರ ಅಭಿವ್ಯಕ್ತಿ ಪ್ರಕಟಗೊಳ್ಳಲು ಕಾತರಿಸುವುದು ಕಾವ್ಯ ಮಾಧ್ಯಮದ ಮೂಲಕವೇ. ‘ಗೋಪಿ ಮತ್ತು ಗಾಂಡಲಿನಾ’ದಿಂದ ಇಲ್ಲಿಯ ವರೆಗೆ ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ಇದೀಗ ‘ನನ್ನ ಮಟ್ಟಿಗೆ’ ಎಂಬ ಹತ್ತನೆಯ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ 50 ಕವಿತೆಗಳಿವೆ....

ಕೃಷ್ಣನ ರಾಧೆಯ ಧ್ಯಾನ

ಪ್ರೇಮದ ಪರಿಕಲ್ಪನೆ ವಿಭಿನ್ನವಾದದ್ದು. ಗ್ರಹಿಸುವವರ ಮನಸ್ಥಿತಿಯನ್ನು ಇದು ಅವಲಂಬಿಸಿರುತ್ತದೆ. ಸಖ ಮತ್ತು ಸಖಿಯನ್ನು ನಾವು ಲೌಖಿಕದ ನೆಲೆಯಲ್ಲೂ ನೋಡಬಹುದು ಅಧ್ಯಾತ್ಮದ ನೆಲೆಯಲ್ಲೂ ನೋಡಬಹುದು. ಪರಮಾತ್ಮನನ್ನೇ ತಮ್ಮ ಪತಿಯೆಂದು ಬಗೆದು ಆರಾಧಿಸುವ ಶರಣ ಪರಂಪರೆ ದಾಸ ಪರಂಪರೆ ನಮ್ಮಲ್ಲಿದೆ. ಪುರುಷರೂ ಭಗವಂತನನ್ನು ಪತಿಯೆಂದು ಬಗೆದು ತಮ್ಮನ್ನು ಸತೀತ್ವದಲ್ಲಿರಿಸಿಕೊಂಡು ಆರಾಧಿಸಿದವರಿದ್ದಾರೆ. ಬೇಂದ್ರೆಯವರ ‘ಸಖೀಗೀತ’ ಲೌಖಿಕದ ಪ್ರೇಮಪ್ರಪಂಚದಿಂದ ಅಧ್ಯಾತ್ಮದ ಭಕ್ತಿಪ್ರಪಂಚದ ವರೆಗೆ ಭಾವವನ್ನು ಬೆಳಗಿದೆ. ಅಕ್ಕಮಹಾದೇವಿಯ ಹರ ಪ್ರೇಮ, ಸಂತ ಮೀರಾಳ ಹರಿ ಪ್ರೇಮ ಕಾವ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಪಡೆದುದನ್ನು ಗಮನಿಸಬಹುದು....

‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’

‘ದಾದಾಗಿರಿಯ ದಿನಗಳು’ ಮೂಲಕ ಭೂಗತ ಜಗತ್ತಿನ ಹತ್ತಿರದ ಚಿತ್ರಣವನ್ನು ಕನ್ನಡ ಸಾಹಿತ್ಯ ರಸಿಕರಿಗೆ ಉಣಬಡಿಸಿರುವ ಅಗ್ನಿ ಶ್ರೀಧರ ಅವರ ಹೊಸ ಕಾದಂಬರಿ ‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’. ಇದು ಕೂಡ ಭೂಗತ ಜಗತ್ತಿನ ವಸ್ತುವನ್ನೇ ಹೊಂದಿದೆ. ಒಬ್ಬ ಮಜೂರ್ (ಕಿಸೆಗಳ್ಳ) ಆಗಿದ್ದ ಆಸೀಫ್‌ನನ್ನು ಇಬ್ಬರು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗುವುದರೊಂದಿಗೆ ಈ ಕಾದಂಬರಿ ಆರಂಭವಾಗುತ್ತದೆ. ನಿರಪರಾಧಿಗಳೂ, ಅವಕಾಶಕೊಟ್ಟರೆ ಸುಧಾರಣೆಯ ಬದುಕನ್ನು ಬದುಕಬಲ್ಲ ಪುಡಿ ಅಪರಾಧಿಗಳು ಪೊಲೀಸರ ತಂತ್ರ ಕುತಂತ್ರಗಳಿಂದಾಗಿ ಹೇಗೆ ಸಮಾಜಘಾತಕರಾಗಬಹುದು ಎಂಬುದನ್ನ ಆಸೀಫ್, ವರದ ಮೊದಲಾದವರ...

ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ

ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ನಿಧನರಾಗಿ ಬಹು ದಿನಗಳಾಗಿಹೋದವು. ಅವರ ನಿಧನದೊಂದಿಗೆ ರಾಷ್ಟ್ರಕವಿ ಎಂಬ ಗೌರವ ಹಾಗೆಯೇ ಉಳಿದುಬಿಟ್ಟಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದ್ದಾರೆ. ಎಂ.ಗೋವಿಂದಪೈಯವರು ಮದ್ರಾಸ್ ಸರ್ಕಾರದಿಂದ ರಾಷ್ಟ್ರಕವಿ ಗೌರವವಕ್ಕೆ ಪಾತ್ರರಾಗಿದ್ದರು. ಅವರ ಬಳಿಕ ಕುವೆಂಪು ಅವರು ಕರ್ನಾಟಕ ಸರ್ಕಾರದಿಂದಲೇ ರಾಷ್ಟ್ರಕವಿಯಾದರು. ಅವರ ನಿಧನದ ಬಳಿಕ ಜಿ.ಎಸ್.ಶಿವರುದ್ರಪ್ಪನವರಿಗೆ ಆ ಗೌರವ ಬಂತು. ಈಗ ಅವರೂ ನಿಧನರಾಗಿದ್ದಾರೆ. ಈಗ ಆ ಗೌರವವನ್ನು ಯಾರಿಗೆ ನೀಡಬೇಕು? ಇದು ಇನ್ನೂ ಸಾರ್ವಜನಿಕರ ಚರ್ಚೆಯ ವಿಷಯವಾಗಿಲ್ಲ. ನಮ್ಮಲ್ಲಿ...

ಪತ್ರಿಕೋದ್ಯಮ ಮತ್ತು ಭಾವೈಕ್ಯತೆ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಜವಾಬ್ದಾರಿಯದು. ಪ್ರಭುತ್ವ ಮತ್ತು ಪ್ರಜೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕೆಗಳು ಪ್ರಜೆಗಳ ನಡುವೆ ಸೌಹಾರ್ದ ಬದುಕನ್ನು ಉಂಟುಮಾಡುವ ಕೆಲಸವನ್ನೂ ಮಾಡುತ್ತವೆ. ವಿವಿಧತೆ ಇರುವಲ್ಲಿ ಏಕತೆ. ಇದೊಂದು ಆದರ್ಶ. ಇದನ್ನು ನಮ್ಮ ರಾಷ್ಟ್ರದ ಅಗ್ಗಳಿಕೆ ಎನ್ನುವಂತೆ ಹೇಳಲಾಗುತ್ತಿದೆ. ಸಮಾಜದ ವಿವಿಧ ವರ್ಗಗಳೊಂದಿಗೆ ಸುಮಧುರ ಬಾಂಧವ್ಯವನ್ನು ಬೆಸೆಯುವ ಜವಾಬ್ದಾರಿ ತಾನೇತಾನಾಗಿ ಪತ್ರಿಕೆಯ ಹೆಗಲೇರಿರುತ್ತದೆ. ಒಂದೇ ಜನಾಂಗದ ಪ್ರಜೆಗಳಿರುವ ದೇಶದಲ್ಲಿ ಸೌಹಾರ್ದದ ಸಮಸ್ಯೆ ಇರುವುದಿಲ್ಲ. ಆದರೆ ಭಾರತದಂಥ ಹಲವು ಜನಾಂಗಗಳ, ಹಲವು ಭಾಷೆಗಳ, ಹಲವು...

ಬರಗೂರರ ಅನುಸಂಧಾನ

ನಮ್ಮ ಸಮಕಾಲೀನ ಬರಹಗಾರರಲ್ಲಿ ಸಮಕಾಲೀನ ವಿವಾದಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರು ವಿವಿಧ ಕೃತಿಗಳಿಗೆ ಬರೆದ ಮುನ್ನುಡಿ ರೂಪದ ಬರೆಹಗಳ ಸಂಕಲನ ‘ಅನುಸಂಧಾನ’. ಮುನ್ನುಡಿ ಬರೆಹವು ಸಾಹಿತ್ಯದಲ್ಲಿ ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ನಿರ್ವಚಿಸಬಹುದಾಗಿದೆ. ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರೆಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ...