ಮನುಷ್ಯನು ಜಗತ್ತಿನಲ್ಲಿ ಯಾರನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ ಎಂಬ ಪ್ರಶ್ನೆಯನ್ನು ಎಸೆದರೆ ತನ್ನ ಹೆಂಡತಿಯನ್ನು, ತನ್ನ ಗಂಡನನ್ನು, ತನ್ನ ಮಗನನ್ನು, ತನ್ನ ಮಗಳನ್ನು, ತನ್ನ ತಂದೆ, ತಾಯಿಯನ್ನು…. ಹೀಗೆ ಏನೇನೋ ಉತ್ತರಗಳು ದೊರೆಯಬಹುದು. ಕೆಲವರು ಎಲ್ಲ ಸಂಬಂಧಿಗಳನ್ನು ಬಿಟ್ಟು ಸಾಕಿದ ನಾಯಿಯನ್ನೋ, ಬೆಕ್ಕನ್ನೋ ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಬಹುದು. ಇವೆಲ್ಲ ಪ್ರೀತಿಯ ಹಾದಿಯಲ್ಲಿಯ ಕೆಲವು ಹೆಜ್ಜೆಗಳ ಕ್ರಮಣ ಅಷ್ಟೇ. ಹಾಗಾದರೆ ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ಯಾರನ್ನು? ಮನುಷ್ಯ ಅತಿ ಹೆಚ್ಚು ಪ್ರೀತಿಸುವುದು ತನ್ನನ್ನೇ. ತನ್ನನ್ನೇ ತಾನು...
ಹೊನ್ನಾವರದ ಪೇಟೆಯಲ್ಲಿ ಕೋಳಿ ಕೂಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಸುಕಿನ ಐದು ಗಂಟೆ ಎಂದರೆ ಬ್ರದರ್ ಸ್ಕೂಲಿನ ದೊಡ್ಡ ಗಂಟೆ ಬಡಿದುಕೊಳ್ಳುತ್ತಿತ್ತು. ಬೆಳಗಾಯಿತು ಎಂದು ಅದು ಸಾರುತ್ತಿತ್ತು. ಬರೀ ಪೇಟೆಯೇ ಏಕೆ, ಕೆಳಗಿನ ಪಾಳ್ಯ, ಯೇಸು ಬಂದರ, ಬಿಕಾಸನ ತಾರಿ, ಮಂಜಗುಣಿಕೇರಿ, ರಾಮತೀರ್ಥ ರಸ್ತೆಯಲ್ಲೆಲ್ಲ ಈ ಗಂಟೆಯ ನಾದ ಅನುರಣಿಸುತ್ತಿತ್ತು. ಬ್ರದರ್ ಸ್ಕೂಲಿನಲ್ಲಿ ಕೇರಳ ಕಡೆಯ ಹುಡುಗರು ಓದಲೆಂದು ಬಂದು ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಸ್ಕೂಲಿನ ಗೋಪುರದಲ್ಲಿ ಒಂದು ದೊಡ್ಡ ಗಂಟೆಯನ್ನು ಕಟ್ಟಲಾಗಿತ್ತು. ಬೆಳಗಿನ ಐದು ಗಂಟೆ...
ಆ ಚೀಟಿ ಎತ್ತುವ ಹೊಣೆ ನನ್ನ ಮೇಲೆಯೇ ಬಂತು. ನಮ್ಮ ಮನೆ ಪಾಲಾಗುತ್ತಿತ್ತು. ನಮ್ಮ ತಂದೆ ಮತ್ತು ನಮ್ಮ ಚಿಕ್ಕಪ್ಪ ಬೇರೆಬೇರೆ ಉಳಿಯಲು ನಿರ್ಧರಿಸಿದ್ದರು. ಮನೆಯಲ್ಲಿಯ ಎಲ್ಲ ವಸ್ತುಗಳೂ ಪಾಲಾಗಿದ್ದವು. ಊರಿನ ಪಂಚರೆಲ್ಲ ಬಂದು ಕುಳಿತಿದ್ದರು. ಒಂದೊಂದೇ ಇರುವ ವಸ್ತುಗಳನ್ನು ಒಬ್ಬರಿಗೊಂದು ಒಬ್ಬರಿಗೊಂದು ಎಂದು ಪಂಚರು ಹಂಚಿದರು. ಕೊನೆಯಲ್ಲಿ ಉಳಿದದ್ದು ಆ ಫಿಲಿಪ್ಸ್ ರೇಡಿಯೋ ಮಾತ್ರ. ಅದಕ್ಕೆ ಸರಿಹೊಂದುವಂಥ ಬೇರೊಂದು ವಸ್ತು ಇರಲಿಲ್ಲ. ಹೀಗಾಗಿ ಅದು ಯಾರ ಸೊತ್ತಾಗಬೇಕು ಎಂಬುದನ್ನು ನಿರ್ಧರಿಸಲು ಚೀಟಿ ಎತ್ತುವುದೆಂದು ಪಂಚರಲ್ಲಿ ಒಬ್ಬರು...
ಹಾಗೆ ನೋಡಿದರೆ ಪ್ರತಿಯೊಬ್ಬರೂ ಕತೆಗಾರರೇ. ಪ್ರತಿಯೊಬ್ಬರಲ್ಲೂ ಕತೆಗಾರ ಒಳಗೆ ಅವಿತಿರುತ್ತಾನೆ. ಹೊರಗೆ ಬರುವುದಕ್ಕೆ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಕತೆ ಹೇಳುವ ಹರ್ಕತ್ತು ಎಲ್ಲರಿಗೂ ಒಂದಲ್ಲ ಒಂದು ಸಲ ಬಂದೇ ಬರುವುದು. ಮನೆಯಲ್ಲಿ ಚಿಕ್ಕಮಕ್ಕಳು ಇದ್ದಾಗಲಂತೂ ಇದು ವಿಪರೀತ. ಒಮ್ಮೊಮ್ಮೆ ಕಿರುಕುಳ ಅನ್ನಿಸಿಬಿಡುವಷ್ಟು. ಕತೆ ಕತೆ ಕಾರಣ ಬೆಕ್ಕಿಗೆ ತೋರಣ ಎಂದು ಹಾಡಿಕೊಂಡು ಚಿಕ್ಕಂದಿನಲ್ಲಿ ನಾವು ಕುಣಿದದ್ದು ಇಂದು ನೆನಪಾಗುತ್ತಿದೆ. ಕತೆಗಾಗಿ ಆಗ ನಾವು ಹಿರಿಯರನ್ನು ಕಾಡಿದ್ದೇ ಕಾಡಿದ್ದು. ಚಿಕ್ಕ ಮಕ್ಕಳು ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ಅವರನ್ನು ಕತೆ...
ತಮ್ಮದೆನ್ನುವ ಊರು ಬಿಟ್ಟ ನನ್ನಂಥವರಿಗೆ ಊರ ದಾರಿ ಬಹು ದೂರ ಮತ್ತು ಅಷ್ಟೇ ಹತ್ತಿರ ಕೂಡ. ದೂರ ಏಕೆಂದರೆ ನಾವು ಊರಿಗೆ ಹೋಗುವುದೇ ಅಪರೂಪವಾಗಿರುತ್ತದೆ. ಹೋಗಬೇಕು ಅಂದುಕೊಂಡಾಗಲೆಲ್ಲ ಏನೇನೋ ಅಡಚಣೆಗಳು ಎದುರಾಗಿ ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಹತ್ತಿರ ಏಕೆಂದರೆ ಅನಕ್ಷಣವೂ ನಾವು ನಮ್ಮೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಹೃದಯದ ಚಿಪ್ಪಿನಲ್ಲಿ ಅಡುಗಾಗಿ ವಾಸನೆಯಾಡುತ್ತಲೇ ಇರುತ್ತದೆ ನಮ್ಮೂರು. ನಮ್ಮ ಮಾತಿನಲ್ಲಿ, ಅಷ್ಟೇಕೆ ನಮ್ಮ ಇರುವಿಕೆಯಲ್ಲಿಯೇ ನಮ್ಮ ಎದುರಿನವರಿಗೆ ನಮ್ಮೂರು ಪ್ರತಿಫಲಿಸುತ್ತಿರುತ್ತದೆ. ಪ್ರತಿ ಬಾರಿ ಊರಿಗೆ ಹೋಗುವಾಗಲೂ ಒಂದು...
ದೇಶದ್ರೋಹದ ಆಪಾದನೆಯ ಮೇಲೆ ಬಂಧಿತನಾಗಿ ನಂತರ ದೆಹಲಿ ಹೈ ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಮಾಡಿದ ಭಾಷಣವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಳಿಸಿಕೊಂಡಿದ್ದಾರೆ ಎಂದೇ ಭಾವಿಸೋಣ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನೂ ಮೀರಿಸುವ ಶೈಲಿಯಲ್ಲಿ ಅಂದು ಆತ ಆಡಿದ ಮಾತು ಈ ದೇಶವನ್ನು ಆಳಿದವರನ್ನು ಆಳುವವರನ್ನು ಚಿಂತನೆಗೆ ಹಚ್ಚುವಂತಿತ್ತು. ಅದ್ಯಾವ ರಾಜಕೀಯ ಸಿದ್ಧಾಂತದ ಹಿನ್ನೆಲೆಯಿಂದ ಬಂದವನಾದರೂ ಆತ ಮುಂದಿಟ್ಟ ಕಟು ವಾಸ್ತವ ಪಕ್ಷಗಳ ಎಲ್ಲೆಯನ್ನು...
ಇದು ಎಂದಿನ ಭಾನುವಾರವಲ್ಲ. ಕಲಬುರ್ಗಿಯವರ ಹತ್ಯೆಯ ಸುದ್ದಿಯನ್ನು ಸಿದ್ದಣ್ಣನವರ ಹೇಳುತ್ತಿದ್ದಂತೆಯೇ ಒಂದು ಕ್ಷಣ ಕಂಪಿಸಿದೆ. ಬಹುಶಃ ಕಲಬುರ್ಗಿಯವರ ಎಲ್ಲ ಶಿಷ್ಯಕೋಟಿಯ ಸ್ಥಿತಿಯೂ ಅದೇ ಆಗಿರಬಹುದು. ನೆನಪುಗಳು ಕಳೆದ ಶತಮಾನದ ೮೦ರ ದಶಕಕ್ಕೆ ಜಾರಿತು. ೮೩-೮೫ರ ಅವಧಿಯಲ್ಲಿ ಅವರು ಕವಿವಿಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದರು. ಅದೇ ಅವಧಿಯಲ್ಲಿ ನಾನು ಕೂಡ ಅಲ್ಲಿ ಎಂ.ಎ.ವಿದ್ಯಾರ್ಥಿಯಾಗಿದ್ದೆ. ಅದೇ ವರ್ಷದಿಂದ ವಿವಿಧ ಡೀನ್‌ಗಳಿಗೆ ಎರಡು ವರ್ಷಗಳ ರೊಟೇಶನ್ ಪದ್ಧತಿ ಆರಂಭವಾಗಿತ್ತು. ಇವರಿಗಿಂತ ಮೊದಲು ಎಸ್.ಎಂ.ವೃಷಭೇಂದ್ರಸ್ವಾಮಿಯವರು ವಿಭಾಗದ ಮುಖ್ಯಸ್ಥರಾಗಿದ್ದರು. ಹೊಸ ಪದ್ಧತಿಯಿಂದಾಗಿ ವೃಷಭೇಂದ್ರ...
ವರ್ಷ ಜಾರಿಹೋಗುತ್ತಿದೆ. ಗೋಡೆಯಲ್ಲಿ ಕ್ಯಾಲೆಂಡರ್ ಸುಂದರಿ ಬದಲಾಗುತ್ತಾಳೆ. ಮನೆಯ ಗೇಟಲ್ಲಿ ಅದೇ ಪೇಪರ್, ಅದೇ ಹಾಲಿನ ಹುಡುಗ, ಅದೇ ತರಕಾರಿಯವನ ಸೈಕಲ್, ಅದೇ ಕಸದ ಗಾಡಿ, ಮರದ ನೆರಳಲ್ಲಿ ಇಸ್ತ್ರಿಯವನು. ಆದರೆ ಉದಯಿಸುವ ಸೂರ್ಯ ಹಲವು ಹೊಸ ಹಂಬಲಗಳನ್ನು ಹೊತ್ತು ತರುತ್ತಿದ್ದಾನೆ. ಎಲ್ಲರಲ್ಲೂ ಒಂದೊಂದು ಸಂಕಲ್ಪ ತೊಡುವ ತುಡಿತ. ಎಂಥ ಸಿನಿಕನಾದರೂ, ಛೇ ಈ ವರ್ಷವಾದರೂ ಅಂಥದ್ದೆಲ್ಲ ಆಗುವುದಕ್ಕೆ ಬಿಡುವುದಿಲ್ಲ ಎಂದೋ, ಈ ವರ್ಷದಲ್ಲಿ ಇದನ್ನು ಮಾಡಿ ಮುಗಿಸುತ್ತೇನೆ ಎಂದೋ ಅಂದುಕೊಳ್ಳದೆ ಇರಲಾರ. ಇದೇ ಭೂಮಿ, ಇದೇ...
‘ಅವಿನ್ಯೂ ರೋಡಿನಲ್ಲಿ ಮುಲ್ಲಾ’ ಆರ್.ವಿಜಯರಾಘವನ್ ಅವರು ಬರೆದಿರುವ ಲೇಖನಗಳ ಸಂಕಲನ ಅವಿನ್ಯೂ ರೋಡಿನಲ್ಲಿ ಮುಲ್ಲಾ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಅದಕ್ಕಾಗಿಯೇ ಅದನ್ನೊಂದು ಸಂಕೀರ್ಣ ಎಂದು ಕರೆಯಬಹುದು. ಏಕೆಂದರೆ ಇದರಲ್ಲಿ ಕೃತಿ ವಿಮರ್ಶೆ ಇದೆ, ಮೀಮಾಂಸೆ ಇದೆ, ವ್ಯಕ್ತಿ ಚಿತ್ರಗಳಿವೆ, ಚಿಂತನೆ ಇದೆ, ಮುನ್ನುಡಿಗಳಿವೆ. ಇದರಲ್ಲಿಯ ಮೊದಲ ಲೇಖನ ಕೆ.ಸತ್ಯನಾರಾಯಣ ಅವರ ‘ಈ ತನಕದ ಕಥೆಗಳು ಮತ್ತು ವಿಚ್ಛೇದನಾ ಪರಿಣಯ’ ಎಂಬ ಕಾದಂಬರಿಯ ಕುರಿತಿದೆ. ಸತ್ಯನಾರಾಯಣರಿಗೆ ಈ ಲೋಕದಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಬಹುಜನರು...
ಕನ್ನಡದಲ್ಲಿ ಹನಿಗವನಗಳು ಸಾಹಿತ್ಯದ ಒಂದು ಪ್ರಕಾರವಾಗಿ ಈಗಾಗಲೆ ಮನ್ನಣೆಯನ್ನು ಪಡೆದುಕೊಂಂಡಿವೆ. ಯಾವುದೋ ಒಂದು ಸುಂದರ ಕ್ಷಣವನ್ನು ಪಕ್ಕನೆ ಹಿಡಿದು ಅಕ್ಷರಗಳಲ್ಲಿ ಮೂಡಿಸುವುದಕ್ಕೆ ವಿಶೇಷ ಪ್ರತಿಭೆಯೇ ಬೇಕು. ಸಂಸ್ಕೃತ ಸಾಹಿತ್ಯದಲ್ಲಿ ಮುಕ್ತಕಗಳ ಪರಂಪರೆಯೇ ಇದೆ. ರಾಮಾಯಣದಂಥ ಮಹಾಕಾವ್ಯವನ್ನೇ ಅನುಷ್ಟುಪ್ ಎಂಬ ದ್ವಿಪದಿಯ ಛಂದಸ್ಸಿನಲ್ಲಿ ಬರೆಯಲಾಗಿದೆ. ಸುಭಾಷಿತಗಳ ದೊಡ್ಡ ಗಣಿಯೇ ಅಲ್ಲಿದೆ. ಉರ್ದುದಲ್ಲಿಯೂ ಇಂಥ ಹನಿಗವನಗಳ ಪರಂಪರೆ ಇದೆ. ಕನ್ನಡದಲ್ಲಿಯೂ ಭಾವನೆಗಳನ್ನು ಆರೆಂಟು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆದಿದೆ. ಜಪಾನಿನ ಹೈಕುಗಳ ಪ್ರಭಾವ ಇದರ ಮೇಲಿದೆ. ಈ ಪ್ರಭಾವ ಅವುಗಳ...