‘ಅವಿನ್ಯೂ ರೋಡಿನಲ್ಲಿ ಮುಲ್ಲಾ’ ಆರ್.ವಿಜಯರಾಘವನ್ ಅವರು ಬರೆದಿರುವ ಲೇಖನಗಳ ಸಂಕಲನ ಅವಿನ್ಯೂ ರೋಡಿನಲ್ಲಿ ಮುಲ್ಲಾ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬುದನ್ನು ಹೇಳುವುದು ಕಷ್ಟ. ಅದಕ್ಕಾಗಿಯೇ ಅದನ್ನೊಂದು ಸಂಕೀರ್ಣ ಎಂದು ಕರೆಯಬಹುದು. ಏಕೆಂದರೆ ಇದರಲ್ಲಿ ಕೃತಿ ವಿಮರ್ಶೆ ಇದೆ, ಮೀಮಾಂಸೆ ಇದೆ, ವ್ಯಕ್ತಿ ಚಿತ್ರಗಳಿವೆ, ಚಿಂತನೆ ಇದೆ, ಮುನ್ನುಡಿಗಳಿವೆ. ಇದರಲ್ಲಿಯ ಮೊದಲ ಲೇಖನ ಕೆ.ಸತ್ಯನಾರಾಯಣ ಅವರ ‘ಈ ತನಕದ ಕಥೆಗಳು ಮತ್ತು ವಿಚ್ಛೇದನಾ ಪರಿಣಯ’ ಎಂಬ ಕಾದಂಬರಿಯ ಕುರಿತಿದೆ. ಸತ್ಯನಾರಾಯಣರಿಗೆ ಈ ಲೋಕದಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಬಹುಜನರು...
ಕನ್ನಡದಲ್ಲಿ ಹನಿಗವನಗಳು ಸಾಹಿತ್ಯದ ಒಂದು ಪ್ರಕಾರವಾಗಿ ಈಗಾಗಲೆ ಮನ್ನಣೆಯನ್ನು ಪಡೆದುಕೊಂಂಡಿವೆ. ಯಾವುದೋ ಒಂದು ಸುಂದರ ಕ್ಷಣವನ್ನು ಪಕ್ಕನೆ ಹಿಡಿದು ಅಕ್ಷರಗಳಲ್ಲಿ ಮೂಡಿಸುವುದಕ್ಕೆ ವಿಶೇಷ ಪ್ರತಿಭೆಯೇ ಬೇಕು. ಸಂಸ್ಕೃತ ಸಾಹಿತ್ಯದಲ್ಲಿ ಮುಕ್ತಕಗಳ ಪರಂಪರೆಯೇ ಇದೆ. ರಾಮಾಯಣದಂಥ ಮಹಾಕಾವ್ಯವನ್ನೇ ಅನುಷ್ಟುಪ್ ಎಂಬ ದ್ವಿಪದಿಯ ಛಂದಸ್ಸಿನಲ್ಲಿ ಬರೆಯಲಾಗಿದೆ. ಸುಭಾಷಿತಗಳ ದೊಡ್ಡ ಗಣಿಯೇ ಅಲ್ಲಿದೆ. ಉರ್ದುದಲ್ಲಿಯೂ ಇಂಥ ಹನಿಗವನಗಳ ಪರಂಪರೆ ಇದೆ. ಕನ್ನಡದಲ್ಲಿಯೂ ಭಾವನೆಗಳನ್ನು ಆರೆಂಟು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ನಡೆದಿದೆ. ಜಪಾನಿನ ಹೈಕುಗಳ ಪ್ರಭಾವ ಇದರ ಮೇಲಿದೆ. ಈ ಪ್ರಭಾವ ಅವುಗಳ...
ಅನುವಾದವೆಂದರೆ ಪುನರ್ಸೃಷ್ಟಿ. ಒಂದು ಭಾಷೆಯಲ್ಲಿರುವ ಸಾಹಿತ್ಯವನ್ನು ಇನ್ನೊಂದು ಭಾಷೆಯಲ್ಲಿ ಪುನರ್ನಿರ್ಮಾಣ ಮಾಡುವುದು. ಅನುವಾದಿಸುವವನಲ್ಲಿ ಇರಬೇಕಾದ ಪ್ರಮುಖ ಅರ್ಹತೆ ಎಂದರೆ ಎರಡೂ ಭಾಷೆಯಲ್ಲಿ ಇರಬೇಕಾದ ಸಮಾನ ಪ್ರಭುತ್ವ. ಅನುವಾದವು ಕೆಲವೊಮ್ಮೆ ಅನುಸೃಷ್ಟಿಯೂ ಆಗಬಹುದು. ಒಂದೇ ದೇಶದ ಸಮಾನ ಸಂಸ್ಕೃತಿಯ ಪಠ್ಯವೊಂದನ್ನು ಅನುವಾದಿಸುವುದು ಅಂಥ ಸವಾಲಿನ ಕೆಲಸವಾಗಲಾರದು. ಆದರೆ ಬೇರೊಂದು ದೇಶದ, ಭಿನ್ನ ಸಂಸ್ಕೃತಿಯ ಪಠ್ಯವನ್ನು ಅನುವಾದಿಸುವುದು ಕಷ್ಟದ ಕೆಲಸ. ಇಂಥ ಸಂದರ್ಭಗಳಲ್ಲಿ ಅನುವಾದಕನು ಆ ಸಂಸ್ಕೃತಿಯ ವಿಶೇಷತೆಗಳನ್ನು ಪ್ರಸ್ತಾವನೆಯ ರೂಪದಲ್ಲಿ ನೀಡುತ್ತಾನೆ. ಅಂದರೆ ಓದುಗನಿಗೆ ಅನುವಾದಿತ ಪಠ್ಯವು ಆಗಂತುಕ...
ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ಒಂದು ಪರಂಪರೆಯೇ ಇದೆ. ನವೋದಯದ ಆರಂಭದ ಕಾಲದಲ್ಲಿ ಬಂದ ಐತಿಹಾಸಿಕ ಕಾದಂಬರಿಗಳು ಪುನರುತ್ಥಾನ ಕಾಲದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿದ್ದವು. ನಾಡು-ನುಡಿ- ರಾಜ್ಯ- ದೇಶಗಳ ಬಗೆಗೆ ಅಭಿಮಾನ ಮೂಡಿಸುವಂಥ ಬರೆಹಗಳು ಬ್ರಿಟಿಷರ ವಿರುದ್ಧದ ಹೋರಾಟ ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ ಅಗತ್ಯವಾಗಿತ್ತು. ರಾಷ್ಟ್ರೀಯತೆಯ ಪ್ರಚೋದನೆಯು ಒಂದು ಉದ್ದೇಶವಾದರೆ ಹಿಂದೂ ಸನಾತನವಾದದ ಸಮರ್ಥನೆ ಮತ್ತು ವಿರೋಧ ಇನ್ನೊಂದು ಮುಖವಾಗಿತ್ತು. ವಿಜಯನಗರ ಸಾಮ್ರಾಜ್ಯದ ೪೫೦ನೆ ವರ್ಷಾಚರಣೆಯನ್ನು ವೈಭವದಿಂದ ಮಾಡಲಾಯಿತು. ಈ ಸಂದರ್ಭದಲ್ಲಿಯೇ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹೇಳುವ ಕೃತಿಗಳು ಬಂದವು. ಗಳಗನಾಥರ...
‘‘ಅಸ್ತ್ರಗಳಿಗೆ ತಮ್ಮದೇ ಆದ ಶಕ್ತಿ ಎಲ್ಲಿದೆ? ಅವುಗಳಿಗೆ ಸಾಮರ್ಥ್ಯ ಬರುವುದು ಅವುಗಳನ್ನು ಬಳಸುವ ಕೈಗಳಿಂದ. ಆ ಕೈಗಳಿಗೆ ಪ್ರಯೋಗ ನೈಪುಣ್ಯ ಬರುವುದು ಮನೋಬಲದಿಂದ. ಮಿತ್ರಾ ನಿನ್ನ ಈ ಶಕ್ತಿ ಸಾಮರ್ಥ್ಯಗಳು ನಿನ್ನ ಅಂತರಂಗದ ಮೈತ್ರಿ ಕರುಣೆಗಳಿಗಿಂತ ಬಲಶಾಲಿಗಳಲ್ಲ. ಅವು ಕೇವಲ ಅನ್ಯರ ಬಲಹೀನತೆಯನ್ನು ಅವಲಂಬಿಸಿವೆ.’’ ಇದು ಗೌತಮಬುದ್ಧನು ಅಂಗುಲಿಮಾಲನಿಗೆ ಹೇಳುವ ಮಾತುಗಳು. ಬುದ್ಧ ಗೊತ್ತಿದ್ದಾನೆ ಎಂದ ಮೇಲೆ ಅಂಗುಲಿಮಾಲನೂ ಗೊತ್ತಿರಲಿಕ್ಕೇ ಬೇಕು. ಬುದ್ಧನ ಮಹಾತ್ಮೆಯನ್ನು ಹೇಳುವುದಕ್ಕೆ ಅಂಗುಲಿಮಾಲ ಬೇಕೇಬೇಕು. ಅಂಗುಲಿಮಾಲ ಬುದ್ಧನ ಹಾಗೆ ಐತಿಹಾಸಿಕ ವ್ಯಕ್ತಿಯೋ ಅಥವಾ...
ಸಾಹಿತ್ಯದ ಪ್ರೇರಣೆಗಳಲ್ಲಿ ಅಮ್ಮ ಕೂಡ ಒಂದು. ಬಹುಶಃ ತನ್ನ ತಾಯಿಯನ್ನು ನೆನೆಯದ ಬರೆಹಗಾರ ಇಲ್ಲವೇ ಇಲ್ಲವೇನೋ. ಪ್ರತಿಯೊಬ್ಬರಿಗೂ ತಮ್ಮ ಅಮ್ಮನ ಕುರಿತು ಒಂದು ಬೆಚ್ಚಗಿನ ಕತೆ ಇರುತ್ತದೆ. ಒಂದು ಸುಂದರ ಕವನ ಇರುತ್ತದೆ. ಯಾರಿಗೂ ಹೇಳಿಕೊಳ್ಳಲಾಗದಂಥ, ಮಾತಿಗೆ ನಿಲುಕದ ಒಂದು ಆರ್ದ್ರ ಭಾವವಿರುತ್ತದೆ. ಅಮ್ಮನ ಋಣವನ್ನು ತೀರಿಸಲಾಗದ್ದು ಎಂಬ ದೈನ್ಯವಿರುತ್ತದೆ. ಈ ಕಾರಣಕ್ಕಾಗಿಯೇ ತಾಯಿಗೆ ದೇವರ ಸ್ಥಾನವನ್ನು ನಮ್ಮ ಸಂಸ್ಕೃತಿಯಲ್ಲಿ ನೀಡಿರುವುದು. ಅಮ್ಮ ಪದಕ್ಕೆ ಬೇರೆ ಅರ್ಥವಿಲ್ಲ. ಅಮ್ಮನೆಂದರೆ ಅಮ್ಮ ಎಂದೇ ಅರ್ಥ. ಇಂಥ ಅಮ್ಮನನ್ನು ಅಜರಾಮರಗೊಳಿಸಿದವನು...