*ಶ್ರೀಸಾಮಾನ್ಯನ ಪ್ರತಿನಿಧಿ ಈತ

ಬೆಂಗಳೂರಿಗೆ ಬಂದ ಬೋರೇಗೌಡ ಎಂಬ ಹೆಸರಿನ ಚಲನಚಿತ್ರ ಹಿಂದೆ ಬಹಳ ಪ್ರಸಿದ್ಧವಾಗಿತ್ತು. ಬೋರೇಗೌಡ ಏನೂ ಅರಿಯದ ಮುಗ್ಧ. ಶ್ರೀಸಾಮಾನ್ಯ ಈತ. ಇಂಥ ಶ್ರೀಸಾಮಾನ್ಯ ರಾಜ್ಯದ ಆಡಳಿತ ಕೇಂದ್ರಕ್ಕೆ ಬಂದಾಗ ಏನೇನು ಅವ್ಯವಸ್ಥೆ ಅನುಭವಿಸಿದ ಎಂಬುದು ಚಿತ್ರದ ಕತೆ.
ಆ ಬಳಿಕ ಬೋರೇಗೌಡ ಎಂಬುದು ದಿನಬಳಕೆಯ ಪದವಾಗಿಬಿಟ್ಟಿತು. ಬೋರೇಗೌಡ ಶ್ರೀಸಾಮಾನ್ಯನ ಪ್ರತೀಕವಾಗಿಬಿಟ್ಟ. ಶೋಷಣೆಗೆ ಒಳಗಾದ ವ್ಯಕ್ತಿಯಾದ. ನಿರಕ್ಷರಿಯ ಪ್ರತಿನಿಧಿಯಾದ. ಹಾಲುಮನಸ್ಸಿನ ನಿಷ್ಕಪಟಿಯ ಪ್ರತಿನಿಧಿಯಾದ. ಶಾಸನ ಸಭೆಯಲ್ಲಿ ಸರ್ಕಾರವನ್ನು ಚುಚ್ಚುವ ಪ್ರಸಂಗ ಪ್ರತಿಪಕ್ಷಗಳಿಗೆ ಬಂದಾಗ, ಈ ರಾಜ್ಯದ ಬಡ ಬೋರೇಗೌಡನಿಗೆ ಈ ಸರ್ಕಾರ ಏನು ಮಾಡಿದೆ ಎಂಬ ಪ್ರಶ್ನೆಯನ್ನು ಹಾಕುತ್ತಿದ್ದರು. ಪತ್ರಿಕೆಗಳಲ್ಲೂ ಬೋರೇಗೌಡ ವಿಜೃಂಭಿಸಿದ. ವ್ಯಂಗ್ಯಚಿತ್ರಗಳಿಗೆ ಸರಕಾದ ಈ ಬೋರೇಗೌಡ.
ಇತ್ತೀಚಿನ ದಿನಗಳಲ್ಲಿ ಬೋರೇಗೌಡನ ಮಾತು ಕೇಳಿಬರುತ್ತಿಲ್ಲ. ಗೌಡರೇ ಅಧಿಕಾರ ಚಲಾಯಿಸಿದ್ದು ಇದಕ್ಕೆ ಕಾರಣವಾಗಿರಬಹುದು.