*ಮತ್ತೆ ಇದನ್ನು ಬಳಸುವಂತಿಲ್ಲ

ವಳ ಬದುಕು ನಾಯಿ ಮುಟ್ಟಿದ ಮಡಕೆಯಂತಾಯ್ತು ಎಂದು ಹೇಳುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಶೀಲ ಕಳೆದುಕೊಂಡ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಕುರಿತು ಈ ಮಾತು ಒಮ್ಮೊಮ್ಮೆ ಅನುಕಂಪವಾಗಿ ಕೆಲವೊಮ್ಮೆ ಕಟಕಿಯಾಗಿ ಹೊರಬೀಳುತ್ತದೆ. ಹಾಗೆ ನೋಡಿದರೆ ಇದನ್ನು ಪುರುಷ ಪ್ರಧಾನ ಸಮಾಜ ರೂಢಿಗೆ ತಂದದ್ದು ಎಂದು ಹೇಳಬಹುದು.
ಮಡಕೆಯಲ್ಲಿ ಮಾಡಿದ ಅಡುಗೆಯನ್ನು ನಾಯಿ ಬಂದು ತಿಂದುಬಿಟ್ಟರೆ ಆ ಅಡುಗೆಯನ್ನು ತಿನ್ನುವಂತಿಲ್ಲ. ಅಷ್ಟೇ ಅಲ್ಲ ಮಡಕೆಯನ್ನೂ ಅನ್ಯ ಕೆಲಸಕ್ಕೆ ಬಳಸುವುದಿಲ್ಲ. ಮಡಕೆ ಮಾತ್ರ ತ್ಯಾಜ್ಯ. ತಾಮ್ರ ಹಿತ್ತಾಳೆ ಪಾತ್ರೆಯಲ್ಲಿದ್ದುದನ್ನು ನಾಯಿ ತಿಂದರೆ? ಮಡಕೆ ಸುಲಭವಾಗಿ ದೊರೆಯುವ ಅಲ್ಪ ಮೌಲ್ಯದ ವಸ್ತು. ಉಳಿದವು ಹಾಗಲ್ಲವಲ್ಲ.
ಮಡಕೆ ಕೆಳಗೆ ಬಿದ್ದರೆ ಒಡೆದು ಹೋಗುತ್ತದೆ. ಉಳಿದ ಪಾತ್ರಗಳಲ್ಲ. ಹೆಣ್ಣಿನ ಶೀಲವೂ ಜನತದಿಂದ ಕಾಯ್ದುಕೊಳ್ಳಬೇಕಾದದ್ದು ಎನ್ನುವ ಅಭಿಪ್ರಾಯ ಇಲ್ಲಿ ಇರಬಹುದು. ಹೆಣ್ಣು ಶೀಲ ಕಳೆದುಕೊಂಡರೆ ಅವಳನ್ನು ಯಾರೂ ತನ್ನವಳನ್ನಾಗಿ ಮಾಡಿಕೊಳ್ಳುವುದಿಲ್ಲ. ಹೆಣ್ಣಿನ ಶೀಲಕ್ಕೆ ಪ್ರಾಧಾನ್ಯತೆ ಇರುವಷ್ಟು ಕಾಲವೂ ಇಂಥ ನುಡಿಗಟ್ಟುಗಳು ಚಲಾವಣೆಯಲ್ಲಿರುತ್ತವೆ.