ಚಿತ್ರಗುಪ್ತನ ಕತೆಗಳು

ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರ ಹೊಸ ಕತೆಗಳ ಸಂಕಲನ ‘ಚಿತ್ರಗುಪ್ತನ ಕತೆಗಳು’ ಈಗ ಬಂದಿದೆ. ಇದರಲ್ಲಿ ಒಟ್ಟೂ ೩೦ ಕತೆಗಳು ಇವೆ. ಸಂಕಲನದಿಂದ ಸಂಕಲನಕ್ಕೆ ಹೊಸತನ್ನು – ರೂಪ, ಗಾತ್ರ, ಸತ್ವ, ಸ್ವರೂಪದಲ್ಲಿ- ನೀಡಲು ಸದಾ ತುಡಿಯುವ ಸತ್ಯನಾರಾಯಣ ಅವರ ಈ ಸಂಕಲನ ಕೂಡ ನಿರಾಶೆ ಮೂಡಿಸುವುದಿಲ್ಲ. ಇದರಲ್ಲಿ ಅವರು ಕತೆಯ ಗಾತ್ರವನ್ನು ಕಿರಿದುಗೊಳಿಸಿದ್ದಾರೆ. ಕವಿತೆಯ ಬಿಗಿಯಲ್ಲಿ ಕತೆಯನ್ನು ಕಟ್ಟುವ ಅವರ ಕುಶಲತೆಗೆ ಈ ಸಂಕಲನ ಒಂದು ಪುರಾವೆ. ಸಾಮಾನ್ಯವಾಗಿ ಸತ್ಯನಾರಾಯಣ ಅವರು ದೀರ್ಘ...

ಭಾರತೀಯರ ಬೌದ್ಧಿಕ ದಾಸ್ಯ

ಪ್ರೊ.ಎಸ್.ಎನ್.ಬಾಲಗಂಗಾಧರ ಅವರ ಸಂಶೋಧನ ಗ್ರಂಥ ‘ದಿ ಹೀದನ್ ಇನ್ ಹೀಸ್ ಬ್ಲೈಂಡ್‌ನೆಸ್’ನ ವಿಚಾರಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆಯವರು ಬರೆದಿರುವ ಕೃತಿ ‘ಬೌದ್ಧಿಕ ದಾಸ್ಯದಲ್ಲಿ ಭಾರತ’. ವಸಾಹತುಶಾಹಿ ಪ್ರಜ್ಞೆಯು ಭಾರತೀಯ ಚಿಂತನಾಕ್ರಮವನ್ನು ಹೇಗೆ ಪ್ರಭಾವಿಸಿವೆ, ಪಾಶ್ಚಾತ್ಯ ಪ್ರಜ್ಞೆಯಿಂದ ಭಾರತೀಯ ಜೀವನವನ್ನು ಹೇಗೆ ಅರ್ಥೈಸಲು ಯತ್ನಿಸಲಾಗಿದೆ ಮತ್ತು ಅವೆಲ್ಲ ಹೇಗೆ ನಿರರ್ಥಕವಾದವು ಎಂಬುದನ್ನು ಈ ಕೃತಿಯಲ್ಲಿ ಮನಗಾಣಿಸಲು ಪ್ರಯತ್ನಿಸಲಾಗಿದೆ. ಭಾರತೀಯ ಚಿಂತಕರು ಶತಮಾನದ ಹಿಂದಿನಿಂದಲೂ ಎದುರಿಸುತ್ತಿರುವ ಬೌದ್ಧಿಕ ಸಮಸ್ಯೆಯನ್ನು ಬಾಲಗಂಗಾಧರರು ತಮ್ಮ ಸಂಶೋಧನೆಯ ಮೂಲಕ ಪರಿಹರಿಸಲು ಯತ್ನಿಸಿದ ಫಲ ಈ...

ಧರಣೀದೇವಿ ಕೃತ ಇಳಾಭಾರತಂ

ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂದು ವಿ.ಕೃ.ಗೋಕಾಕರು ಪರ್ಮಾನು ಹೊರಡಿಸಿ ಅರ್ಧ ಶತಮಾನವೇ ಕಳೆದುಹೋಯಿತು. ಮುಕ್ತ ಛಂದದ ರಚನೆಯ ಸುಖವನ್ನು ನವ್ಯ, ನವ್ಯೋತ್ತರ ಕವಿಗಳು ತುಂಬ ಚೆನ್ನಾಗಿಯೇ ಅನುಭವಿಸಿದ್ದಾರೆ. ಇಂಥ ಕಾಲಘಟ್ಟದಲ್ಲಿ ತಮ್ಮ ಭಾವನೆಗಳಿಗೆ ಛಂದಸ್ಸಿನ ಚೌಕಟ್ಟನ್ನು ನಿರ್ಮಿಸಿಕೊಂಡು ಕಾವ್ಯ ರಚನೆಯಲ್ಲಿ ತೊಡಗುವುದೆಂದರೆ ಅದೊಂದು ಸಾಹಸದ ಕೆಲಸವೆಂದೇ ಹೇಳಬೇಕು. ಅಂಥ ಒಂದು ಸಾಹಸವನ್ನು ಡಾ.ಧರಣೀದೇವಿ ಮಾಲಗತ್ತಿಯವರು ತಮ್ಮ ‘ಇಳಾಭಾರತಂ’ ಕೃತಿಯಲ್ಲಿ ಮಾಡಿದ್ದಾರೆ. ಬಿರುದು ಬಾವಲಿಗಳ ಪಡೆಯಲಿದ ಬರೆದುದಲ್ಲವು ಬರೆಹ ಲೋಕದಿ ಮರೆತ ದನಿಗಳ ಹುಡುಕಿ ಕೇಳಿಸೆ ಸಹೃದಯಗಳಿಗೆ...

ಮಾಯಾಕನ್ನಡಿಯಲ್ಲಿ ಬೋದಿಲೇರ್

ಒಂದು ಹೂವು ಹಾದಿಯಲ್ಲಿ ಬಿದ್ದಿದ್ದರೆ ಅದನ್ನು ಮೆಟ್ಟಿ ಮುಂದೆ ಹೋಗದಂಥ ಮಾರ್ದವತೆ, ತನ್ನತ್ತ ಕೆಕ್ಕರಿಸಿ ನೋಡಿದವನ ಕತ್ತು ಚೆಂಡಾಡುವಂಥ ಕೋಪ, ಹೆಣ್ಣಿನ ಮುಗುಳ್ನಗೆಯಲ್ಲಿ ಕರಗಿ ಹೋಗುವಂಥ ಆಪ್ತತೆ ಇಂಥ ಭಾವಗಳ ಮಿಶ್ರಣವಾಗಿದ್ದ ಹಾಗೂ ತನ್ನ ಕೃತಿಗಳಲ್ಲಿ ಅವನ್ನೇ ಚಿತ್ರಿಸಿದ ದೊಡ್ಡ ಲೇಖಕ ಚಾರ್ಲ್ಸ್ ಬೋದಿಲೇರ್ ತೀವ್ರವಾಗಿ ಅನುಭವಿಸಿ ಬರೆಯಬಲ್ಲವನಾಗಿದ್ದ. ಆತನ ಗದ್ಯರೂಪದ ಐವತ್ತು ಪದ್ಯಗಳನ್ನು, ಬೇಕಾದರೆ ಗಪದ್ಯವೆನ್ನಿ, ಎಸ್.ಎಫ್.ಯೋಗಪ್ಪನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೋದಿಲೇರನ ಕವಿತೆಗಳನ್ನು ‘ಪಾಪದ ಹೂಗಳು’ ಹೆಸರಿನಲ್ಲಿ ಲಂಕೇಶ್ ಕನ್ನಡಕ್ಕೆ ತಂದಿದ್ದರು. ಅವರ ಗರಡಿಯಲ್ಲಿಯೇ ತಯಾರಾದ...

ಬೆಳದಿಂಗಳಲ್ಲಿ ಬದುಕಿನ ಅರ್ಥದ ಹುಡುಕಾಟ

ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ...

ವೈದ್ಯಲೋಕದಲ್ಲೊಂದು ಸತ್ಯನೋಟ

ಸತ್ಯಮೇವ ಜಯತೆ ಎಂಬುದು ಸನಾತನವಾದ ನುಡಿ. ನಮ್ಮ ನಂಬಿಕೆ, ಕ್ರಿಯೆಗಳು ಎಲ್ಲವೂ ಇದರ ಸುತ್ತಲೇ ಗಿರಕಿಹೊಡೆಯುತ್ತ ಇರುತ್ತವೆ. ಯಾವಾಗ ಈ ನಂಬಿಕೆಗೆ ಧಕ್ಕೆ ಉಂಟಾಗುತ್ತದೋ, ಅದಕ್ಕೆ ವ್ಯತಿರಿಕ್ತವಾಗಿ ಕ್ರಿಯೆಗಳು ಜರುಗಲಾರಂಭಿಸುತ್ತವೋ ಅದು ನಮ್ಮ ಪತನವನ್ನು ಸೂಚಿಸುತ್ತದೆ. ನಂಬಿಕೆ ಎಷ್ಟೊಂದು ಪರಿಣಾಮಕಾರಿ ಎಂದರೆ ವೈದ್ಯಕೀಯದಲ್ಲಿ ರೋಗಿಯ ಗುಣವಾಗುವಿಕೆಯಲ್ಲಿ ಶೇಕಡಾ ಮೂವತ್ತು ಭಾಗ ಈ ನಂಬಿಕೆಯನ್ನು ಅವಲಂಬಿಸಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಪ್ಲಾಸಿಬೋ ಎಫೆಕ್ಟ್ ಎಂದು ಹೇಳುತ್ತಾರೆ. ಕೆಲವರಿಗೆ ರೋಗವೇ ಇರುವುದಿಲ್ಲ. ತಮಗೆ ಯಾವುದೋ ರೋಗ ಬಂದಿದೆ ಎಂಬ ಭ್ರಮೆಯಲ್ಲಿ...

ಮಗ ಕೆತ್ತಿದ ಅಪ್ಪನ ಅಕ್ಷರ ಶಿಲ್ಪ

ದಲಿತ ಆತ್ಮಕಥನಗಳು ಮರಾಠಿಯಲ್ಲಿ ವಿಶಿಷ್ಟವಾದದ್ದು. ಒಂದು ತಳ ಸಮುದಾಯದ ನಿಗಿ ನಿಗಿ ಕೆಂಡದಂಥ ನೋವನ್ನು ಅಲ್ಲಿ ದಾಖಲಿಸುವ ರೀತಿ ಎದೆಯನ್ನು ಜಲ್ಲೆನ್ನಿಸುತ್ತದೆ. ಆರಂಭದ ರೋಷ, ರೊಚ್ಚು ಮಾಯವಾಗಿ ಸಮಾಹಿತವಾದ ಮನಃಸ್ಥಿತಿಯಲ್ಲಿ ತಮ್ಮ ಪಾಡು ತಮ್ಮದು ಎಂಬಂತೆ, ದಟ್ಟ ಕಾಡಿನ ನಡುವೆ ಮೈತುಂಬಿ ಹರಿವ ನದಿಯಂಥ ಪಕ್ವಗೊಂಡ ಶೈಲಿಯನ್ನು ಇತ್ತೀಚಿನ ಅಲ್ಲಿಯ ಇಂಥ ಬರೆಹಗಳಲ್ಲಿ ಕಾಣಬಹುದು. ಇತ್ತೀಚೆಗೆ ನಾನು ಭಾಲಚಂದ್ರ ಮುಣಗೇಕರ ಅವರ ‘ಮೀ ಅಸಾ ಘಡಲೋ’ ಎಂಬುದರ ಕನ್ನಡ ಅನುವಾದ ‘ನಾನು ಹೀಗೆ ರೂಪುಗೊಂಡೆ’ ಎಂಬುದನ್ನು ಓದಿದ್ದೆ....

ಆಡುಕಳ, ಆಕಾಶಕ್ಕೆ ಹಚ್ಚಿದ ಏಣಿ

ಸ್ವಾರ್ಥವು ಮನುಷ್ಯನ ಕ್ರಿಯಾಶಕ್ತಿಯನ್ನು, ಮನುಷ್ಯತ್ವವನ್ನು ಹೇಗೆ ಕಳೆದುಬಿಡುತ್ತದೆ, ವ್ಯಕ್ತಿಯ ಸ್ವಾತಂತ್ರ್ಯ ಹೇಗೆ ಹರಣವಾಗುತ್ತ ಹೋಗುತ್ತದೆ ಎಂಬುದನ್ನು ಶ್ರೀಧರ ಬಳಗಾರ ಅವರು ತಮ್ಮ ‘ಆಡುಕಳ’ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಬಿದ್ರಳ್ಳಿಯ ಮಣ್ಮನೆಯ ಕೃಷ್ಣಪ್ಪ ಮತ್ತು ದಶರಥ ಅಣ್ಣ ತಮ್ಮಂದಿರು. ದಶರಥ ತನ್ನ ಪಿತ್ರಾರ್ಜಿತ ಸ್ವತ್ತನ್ನು ಹಿಸ್ಸೆ ಮಾಡಿಕೊಂಂಡು, ಬಿದ್ರಳ್ಳಿಯ ಸಂಪರ್ಕಹೀನ ದ್ವೀಪದಂತೆ ಇದ್ದ ಆಡುಕಳದ ಆಸ್ತಿಯನ್ನು ಪಡೆದುಕೊಂಡ. ಹವ್ಯಕರಾದ ಇವರಿಗೆ ಕೃಷಿಯಲ್ಲಿ ಪ್ರೀತಿ ಇತ್ತು. ಆಡುಕಳದ ಪ್ರಶಾಂತ ಪರಿಸರ ಸ್ವಭಾವತಃ ನಿಸ್ಸಂಗಿಯಾಗಿದ್ದ ದಶರಥನಿಗೆ ಖುಷಿ ತಂದಿತ್ತು. ಆತನ...

ನೆನಪಿನಿಂದಳಿಯದ ‘ನೆನಪಿನ ಹಳ್ಳಿ’

ಪ್ರೊ.ಎಂ.ಎನ್.ಶ್ರೀನಿವಾಸ್ ಅವರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞರು. ‘ದಿ ರಿಮೆಂಬರ್ಡ್ ವಿಲೇಜ್’ ಎಂಬುದು ಅವರ ಶ್ರೇಷ್ಠ ಕೃತಿ. ಶ್ರೀನಿವಾಸ್ ಅವರು ಅಮೆರಿಕದ ಸ್ಟಾನ್ಸ್‌ಫರ್ಡ್‌ನ ‘ಸೆಂಟರ್ ಫಾರ್ ಅಡ್‌ವಾನ್ಸ್ ಸ್ಟಡೀ ಇನ್ ಬಿಹೇವಿಯರಲ್ ಸೈಯನ್ಸಸ್’ನಲ್ಲಿ ಇದ್ದಾಗ ಅವರು ಮಾಡಿಟ್ಟುಕೊಂಡ ಟಿಪ್ಪಣಿಗಳೆಲ್ಲ ಬೆಂಕಿಗೆ ಆಹುತಿಯಾದವು. ಬಳಿಕ ಅವರು ತಮ್ಮ ಕ್ಷೇತ್ರಾನುಭವದ ನೆನಪಿನ ಆಧಾರದ ಮೇಲೆಯೇ ಬರೆದ ಕೃತಿ ಇದು. ಇದನ್ನು ‘ನೆನಪಿನ ಹಳ್ಳಿ’ ಹೆಸರಿನಲ್ಲಿ ಟಿ.ಆರ್.ಶಾಮಭಟ್ಟ ಅವರು ಕನ್ನಡಕ್ಕೆ ತಂದಿರುವರು. ಇಲ್ಲಿಯ ಕೇಂದ್ರ ಪಾತ್ರ ರಾಮಪುರ ಎಂಬ ಹಳ್ಳಿ. ಒಬ್ಬ ವ್ಯಕ್ತಿಗೆ...

ರೆಕ್ಕೆ ಬಿಚ್ಚಿದ ಕಥನಗಾರಿಕೆ

ಇನ್ನು ಒಳಗಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲವೇನೋ ಎನ್ನುವಂಥ ಒತ್ತಡದಲ್ಲಿ ಸೃಜನಕ್ರಿಯೆಗೆ ತೊಡಗಿಕೊಳ್ಳುವ ಟಿ.ಕೆ.ದಯಾನಂದ ಅವರು ತಮ್ಮ ಕಥಾಸಂಕಲನ ‘ರೆಕ್ಕೆ ಹಾವು’ದಲ್ಲಿ ಎಂಟು ವಿಶಿಷ್ಟವಾದ ಕತೆಗಳನ್ನು ನೀಡಿದ್ದಾರೆ. ಈ ಎಲ್ಲ ಕತೆಗಳ ವಸ್ತು ಮತ್ತು ಪಾತ್ರಗಳು ತಳ ಸಮುದಾಯದ ಜನರು. ಒಂದೆಡೆ ಕೋಲಾರ, ಮತ್ತೊಂದೆಡೆ ತುಮಕೂರು, ಇನ್ನೊಂದೆಡೆ ಅಂಕೋಲಾ, ಹಾಗೆಯೇ ದ.ಕ.ದ ಪರಿಸರದಲ್ಲಿ ಹುಟ್ಟಿಕೊಳ್ಳುವ ಕತೆಗಳು ಒಂದೇ ಆವೇಗದಲ್ಲಿ, ಒಂದರಿಂದ ಇಪ್ಪತ್ತರ ವರೆಗಿನ ಮಗ್ಗಿಯನ್ನು ಕಂಠಪಾಠ ಮಾಡಿದ ಮಕ್ಕಳು ಅದನ್ನೆಲ್ಲ ಒಂದೇ ಉಸುರಿಗೆ ಕಕ್ಕಿ ನಿರುಂಬಳವಾಗುವ ರೀತಿಯಲ್ಲಿ, ಇನ್ನೇನೋ ಮಾಡುವುದು...