ನಿನ್ನ ನೆನಪಾಗುವುದು

ನಿನ್ನ ನೆನಪಾಗುವುದು, ಹಬ್ಬದೂಟಗಳಲ್ಲಿ ಶ್ಯಾವಿಗೆಯ ಎಳೆಗಳಲ್ಲಿ ನಿನ್ನ ತೂಗುವಾಗ ಹಾಲ ಹನಿಗಳಲ್ಲಿ ನಿನ್ನ ತೇಲಿಸುವಾಗ ಹಾಲು-ಶ್ಯಾವಿಗೆ ರುಚಿಗೆ ಪುಟಿದ ಲಾಲಾರಸದಿ ನಾ ತೊಯ್ದು ತೊಪ್ಪೆಯಾದಾಗ ನಿನ್ನ ನೆನಪಾಗುವುದು, ಮುಳ್ಳುಗಳ ನಡುವೆ ನಳನಳಿಸಿ ಬಿರಿದ ಗುಲಾಬಿಯ ಕಂಡಾಗ ಪಕಳೆಗಳೆಲ್ಲ ಉದುರಿ ಉಳಿದ ಬರಿ ತೊಟ್ಟು ಕಂಡಾಗ ನಿನ್ನ ನೆನಪಾಗುವುದು ಗಾಳಿಪಟವ ಹಾರಿಸುವಾಗ ಸೂತ್ರ ಹರಿದ ಪಟವು ಸಿಡಿಲ್ಬೆಂಕಿಗೆ ಸುಟ್ಟು ಕಣ್ಣಿಗೆ ಕಾಣದಾದಾಗ ನಿನ್ನ ನೆನಪಾಗುವುದು ಕಡಲಂಚಿಗೆ ನಿಂತಾಗ ಹಕ್ಕಿಯೊಂದು ತಟ್ಟನೆರಗಿ ನೀರ ಮೀನ ಗಕ್ಕನೆತ್ತಿ ಹಾರಿದಾಗ ನಿನ್ನ ನೆನಪಾಗುವುದು.....

ದೇವಿಯಾಗಿಸಿದರು

ಇಲ್ಲಿ, ಕಾಲಕ್ಕೆ ಉಸಿರುಗಟ್ಟಿದೆ ಅಪ್ರಸಿದ್ಧರೆಲ್ಲ ಕ್ಷಣದಲ್ಲಿ ಸಿದ್ಧಪ್ರಸಿದ್ಧರು ಸ್ಥಳ ಮಹಿಮೆ. ದೇವ ರಾಲ; ಇದರ ಆಳ ಲೆಕ್ಕಹಾಕಿ ನಿ ರಾಳವಾಗಿ ಬದುಕುವುದು ಸಾಧ್ಯವಿಲ್ಲ ರೂಪಾ, ನಿನ್ನ ರೂಪ ಅಪರೂಪ ನಿನ್ನ ದೇವಿಯಾಗಿಸ ಹೊರಟವರಿಗೆ ಅದೇ ನಿನ್ನ ‘ಅರ್ಹತೆ’ಯಾಗಿ ಕಂಡಿರಬೇಕು! ನೀನು ಕನಸಿದ ಸೌಧಗಳೆಲ್ಲ ಇವರ ಬುಲ್‌ಡೋಜರ್‌ಗೆ ಸಿಕ್ಕಿ ಪುಡಿ ಪುಡಿಯಾದಾಗ ನೀ ನಕ್ಕೆ ಅಂದು ಕೊಂಡದ್ದು ನನ್ನ ಭ್ರಮೆ ಇದ್ದಿರಬೇಕು ಕನ್ವರ್, ಇದು ನಿನ್ನೊಬ್ಬಳ ಇಂದು ನಿನ್ನಿನ ಕಣ್ಣೀರ ಕಥೆಯಲ್ಲ ಶತಶತಮಾನಗಳ ಕಾಲ ಕೆಂಪು ಮಸಿಯಲ್ಲಿ ಹರಿದು...

ಬಕ ಧ್ಯಾನ

ಕಟ್ಟೀಮನಿ ನೀವು ಸ್ವಂತಕ್ಕೆ ಮನೆ ಕಟ್ಟಿದಿರೋ ಇಲ್ಲವೋ ಆದರೆ, ಕಟ್ಟುಗಳನ್ನೆಲ್ಲ ಮೆಟ್ಟಿ ಮುರಿದಿಕ್ಕುವುದಕ್ಕೇ ಹುಟ್ಟಿ ಬಂದವರು ನೀವು ಎಂಬುದಂತೂ ನಿಜ ಮೊನ್ನೆ ಖಾನಾವಳಿಯ ನೀಲಾ ಸಿಕ್ಕಿದ್ದಳು ಎಳ್ಳಷ್ಟೂ ಬದಲಾಗಿಲ್ಲ; ಇನ್ನಷ್ಟು ಸೊರಗಿದ್ದಾಳೆ ಅಷ್ಟೇ ಕಳೆದ ವಾರ ಹಳ್ಳಿಗೆ ಹೋದಾಗ ಗ್ರಾಮ ಸೇವಿಕಾ ಭೆಟ್ಟಿ ಆಗಿದ್ದಳು ಜ್ವಾಲಾಮುಖಿಯ ಮೇಲೆ ನಿಂತವಳಂತೆ ಮಾತನಾಡಿದಳು ಬೆಂಗಳೂರಿಗೊಂದು ಟಿಕೆಟ್ ಪಡೆದವರೆಲ್ಲ ಕಿಸಿದದ್ದು ಏನು? ಅಂತೆ ಕಂತೆ ಸಂತೆ ಎಲ್ಲ ಒದರಿಬಿಟ್ಟಳು ವಿಕೇಂದ್ರೀಕರಣ ಆಗಿದ್ದು ನಿಜ ಮೊದಲು ಗೌಡ ಒಬ್ಬ ಸುಲೀತಿದ್ದ ಈಗ ಅವನ...

ಗೋಯ್ದಜ್ಜನ ಹಾಡು

ಇವತ್ತು ಗೋಯ್ದಜ್ಜ ಹಪ್ಪು ಮುದುಕ ಹಿಡಿಗೋಲಿನೊಡೆಯನವ, ನಡು ನಡುಗಿ ನಡೆವ ಧೂಳು ಕೆಸರಿನ ದಾರಿಯಲಿ ಮೂಡಿದ ಅವನ ಹೆಜ್ಜೆ ಗುರುತು ನೆನಪ ಚಿತ್ತಾರವ ಬಿಡಿಸುತ್ತ ಹೋಗುವವು ಗೋಯ್ದಜ್ಜ ಪೊಕಳೆ ಹೊಡೆಯುವುದರಲ್ಲಿ ನಿಸ್ಸೀಮ. ಗಾಂಧೀಜಿಯ ಐವತ್ತನೆ ಹುಟ್ಟಿದ ವರ್ಷವೇ ನಾನು ಹುಟ್ಟಿದವನು ಎನ್ನುತ್ತಿರುತ್ತಾನೆ. ಬೆಟ್ಟದ ಗೋವಿಂದನ ಹೆಸರಿರಲಿ ಎಂದು ಅವನಪ್ಪನಿಟ್ಟ ಹೆಸರು ಸಾಲ ಕೊಡುವ ಧಣಿಗಳಿಗೆ, ಅವನ ನರ ಹರಿಯುವವರೆಗೆ ಕೆಲಸ ಕೊಳ್ಳುವ ಪ್ರಭುಗಳಿಗೆ ಕರೆಯಲು ದೊಡ್ಡದೆನಿಸಿ ‘ಗೋಯ್ದ’ ಅಂತಾಯ್ತು ಸರೀಕರು ಗೋಯ್ದಣ್ಣ ಅಂದರೆ ಗಡ್ಡ ನೆರೆತ ಅವನನ್ನು...

ಕಸಿ ಗಿಡ

ಹೆಮ್ಮರವೊಂದು ಹೂ ತಳೆದಿರಲು ಪುಂಕೇಶರ ಸ್ತ್ರೀ ಕೇಶರಗಳ ಸಾಮೀಪ್ಯಕ್ಕಾಗಲಿ ಸಹಜ ಪರಾಗಸ್ಪರ್ಶ ಕ್ರಿಯೆಗಾಗಲಿ ನಾ ಕಾರಣನಲ್ಲ. ನಾ ಜವಾಬುದಾರನಾಗದೆ ಅಂಡದೊಳಗೆ ಅಂಕುರಿಸಿ ಬಿಟ್ಟೆ ಮರದ ತುತ್ತತುದಿಯ ಹೆಣೆಯಲ್ಲಿ ಮಿಜರಾದೆ, ಮಿಡಿಯಾಗಿ ಬೆಳೆದೆ ದೋರಗಾಯಾಗಿ ಕೆಂಪಡರುವ ಹೊತ್ತಿಗೆ ನನ್ನ ಹೊತ್ತ ಮರಕ್ಕೆ ಹೆಮ್ಮೆಯೋ ಹೆಮ್ಮೆ ನಾಲ್ಕು ಜನ ಕಾಣುವ ಹಾಗೆ ಹೆಣೆಯನ್ನು ಜೀಕಿದ್ದೇ ಜೀಕಿದ್ದು ಜೀಕಿದ್ದು ಹೆಚ್ಚಾಗಿಯೋ ಏನೋ ಒಂದು ದಿನ ನಾನು ತೊಟ್ಟು ಹರಿದುಕೊಂಡು ಕೆಳಕ್ಕೆ ಬಿದ್ದೆ ಅಲ್ಲಿಗೇ ನನ್ನದೆಲ್ಲ ಮುಗಿಯಿತು ಅಂದುಕೊಂಡರೆ ಆಗತಾನೆ ಬದುಕು ಆರಂಭ...

ವರ್ತಮಾನ

ಪತ್ರಿಕಾಲಯದಲ್ಲಿ ಪತ್ರಗಳದ್ದೇ ರಾಶಿ ರಾಶಿ ಬಿಡಿಸಿ ಇಡತೊಡಗಿದರೆ ಸುದ್ದಿಗಳ ಗುಡ್ಡ ಅಪಘಾತ, ಸಾವು, ಕೊಲೆ, ಬೆದರಿಕೆ, ವರದಕ್ಷಿಣೆ ಕಿರುಕುಳ ಗೋಲೀಬಾರು, ಲಾಠಿ ಛಾರ್ಜು, ನಿಷೇಧಾಜ್ಞೆ ಬರೀ ಕ್ರಿಮಿನಲ್ಲು ನೀರಿಲ್ಲ, ರಸ್ತೆಯಲ್ಲಿ ಹೊಂಡಗಳು ಬೀದಿ ದೀಪದ ಕಂಬಕ್ಕೆ ಬಲ್ಬುಗಳೇ ಇಲ್ಲ ಶಾಲೆಗೆ ಮಾಸ್ತರು ಇಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಇವೆಲ್ಲ ಇಲ್ಲಗಳ ಸಂತೆ ರಸ್ತೆ ತಡೆ, ರೈಲು ತಡೆ, ಜೈಲ್ ಭರೋ ಕಪ್ಪು ಬಾವುಟದ ಪ್ರದರ್ಶನ ಆತ್ಮಾಹುತಿಗೆ ಯತ್ನ ಆಮರಣ ಉಪವಾಸ ಸರದಿ ಅನ್ನ ಸತ್ಯಾಗ್ರಹ ತನಗಾಗಿ, ಅವರಿಗಾಗಿ,...

ಹೊಳೆಸಾಲಿನ ಶ್ರಾವಣ

೧ ಶ್ರಾವಣದ ಹೊಳೆಸಾಲಿನಲ್ಲಿ ತೋರಣಗಳು ಏಳುವುದಿಲ್ಲ; ನಾಗಪಂಚಮಿಗೆ ಉಯ್ಯಾಲೆ ಕಟ್ಟಿ ಜೀಕುವುದಿಲ್ಲ. ಹನಿ ಕಡಿಯದ ಪುಷ್ಯ ಪುನರ್ವಸು ಗುಡ್ಡದಿಂದ ಭೋಸ್ ಎಂದು ಧುಮ್ಮಿಕ್ಕುವ ಹನಾಲು ಬೆಚ್ಚಗೆ ಕಂಬಳಿ ಹೊದ್ದು ಕುಕ್ಕುರುಗಾಲಲ್ಲಿ ಕುಳಿತು ತಟ್ಟಿ ಗಂಡಿಯಲ್ಲಿ ಹೊಳೆಯತ್ತ ನೋಟ ಸೊಂಟದಲ್ಲಿ ಕಸುವಿಲ್ಲದೆ ಬಿಮ್ಮಗೆ ಬಿದ್ದ ಮುದುಕಿಯಂತಿದ್ದ ಶರಾವತಿಗೆ ತಟ್ಟನೆ ಪ್ರಾಯ ಬಂದಂತೆ ಲಗುಬಗೆಯ ಓಟ; ಪುಂಡರಿಗೆ ಬಸಿರಾದಂತೆ ನಡದ ಬಿಗುವ ಸಡಿಲಿಸುತ್ತ ಉಬ್ಬುತ್ತ ಉಬ್ಬುತ್ತ… ಬಸುರಿ ಹೆಣ್ಣಿಗೆ ಜಗ ಮೊಗೆದು ಮುಕ್ಕಳಿಸಿ ಉಗಿವ ಬಾಯ್ಚಪಲ ಕರೆಯದಿದ್ದರೂ ಬಂದೇಬಿಟ್ಟೆ ಎಂದು...

ಸಾವು ಸಾವಲ್ಲ ಗೆಳೆಯ

ಸಾವು ಸಾವಲ್ಲ ಗೆಳೆಯ ಅದು ನಿನ್ನ ಮರುಹುಟ್ಟು ಸತ್ತು ನೀ ಬಿಚ್ಚಿಟ್ಟ ನೆನಪುಗಳ ಬುತ್ತಿ ಕಣ್ಣೀರಲ್ಲಿ ಕಲಸಿ ತುತ್ತು ಮಾಡಿ ಜೀವ ಹಿಡಿದಿದ್ದೇನೆ ಗೆಳೆಯ ಅದು ನಿನ್ನ ಸಾವಲ್ಲ ನಿಂತಲ್ಲಿ ನೀ ಬಂದು ಕಥೆ ಹೇಳುವೆ ಕುಂತಲ್ಲಿ ನೀ ಬಂದು ಕುರುಳು ನೇವರಿಸುವೆ ಮಲಗಿದರೆ ನೀ ಬಂದು ಮುಸುಕೆಳೆದು ಕಚಗುಳಿ ಇಡುವೆ ಗೆಳೆಯ ನಾ ಬದುಕಿಯೂ ಕ್ಷಣ ಕ್ಷಣವೂ ಸಾಯುತ್ತಿರುವೆ ಇದ್ದಾಗ ನೀ ಕಾಡಲಿಲ್ಲ ನನ್ನ ನಾನೇ ನಿನ್ನ ಗೋಳುಗೆರೆದೆ ನನ್ನ ನಗುವಿನಲ್ಲೇ ನೀ ನಿನ್ನ ಹರುಷ...

ಕವನ ಬರೆಯುವುದು ಸುಲಭವಲ್ಲ

ಕವನ ಬರೆಯುವುದು ಸುಲಭವಲ್ಲ ಗೆಳೆಯ ಕವನಕ್ಕಾಗಿ ನೀ ಕಾಯಬೇಕು ಕುದಿಯಬೇಕು ಉಕ್ಕಬೇಕು ಆವಿಯಾಗಬೇಕು ಆರ್ದ್ರವಾಗಿ ಹನಿಯಬೇಕು ಅದು ನೆಲ ಸೇರಬೇಕು ಬೀಜವ ನೆನೆಸ ಬೇಕು ಸಸಿಯೊಂದು ಭೂ ಬಸಿರ ಬಗೆದು ಹೊರ ಹೊಮ್ಮಿದಾಗ ಅದು ನಿನ್ನ ಕವನ ಗೆಳೆಯ ಕವನ ಬರೆಯುವುದು ಸುಲಭವಲ್ಲ ಗೆಳೆಯ ಕವನಿಸುವ ಬೆದೆ ಹದವಾಗಿ ಇರಬೇಕು ಬೆದೆ ಸಮಯಕ್ಕೆ ಕಾಯಬೇಕು ಕ್ಷೇತ್ರ ಫಲವತ್ತಾಗಿರಬೇಕು ತನು ಬೆರೆಯಬೇಕು ಮನ ತೆರೆಯಬೇಕು ಆಗ ಬಿತ್ತಿದ ಬೀಜ ಭ್ರೂಣವಾದರೆ ಅದು ನಿನ್ನ ಕವನ ಗೆಳೆಯ 1-09-2005

ಮತ್ತೆ ಅವನು ಬಂದೇ ಬರ್ತಾನೆ…

ಹುಲ್ಲು ಬೆಳೆಯುಲ್ಲಿ ಮರ ನೆಟ್ಟರೆ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಅವನು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ———- ಅವನೊಬ್ಬ ಹುಡುಕಾಟದಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದ. ತಾನು ಏನನ್ನು ಹುಡುಕುತ್ತಿದ್ದೇನೆ ಎಂಬುದು ಸ್ವತಃ ಅವನಿಗೂ ಸ್ಪಷ್ಟವಿರಲಿಲ್ಲ. ಎದುರಿಗೆ ಬಂದವರನ್ನೆಲ್ಲ ಗುಮಾನಿಯಿಂದ ಎಂಬಂತೆ ನೋಡುತ್ತಿದ್ದ. ಅವನ ದೃಷ್ಟಿ ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಅದೆಲ್ಲಿ ತಾಗಿದವರ ಮೈಯಲ್ಲಿ ಹುಣ್ಣನ್ನು ಮಾಡುವುದೋ ಎಂಬ ಆತಂಕ ಕಾಡುತ್ತಿತ್ತು. ಅವರ ಚಿತ್ತದಲ್ಲಿ ಮೂಡಿದ ಎಲ್ಲ ಆಲೋಚನೆಗಳನ್ನು ತಾನು ಓದಬಲ್ಲೆ...