ಸಾಮಾನ್ಯ ಚಿತ್ರಕ್ಕೆ ಭಾಷೆಯ ಸುವರ್ಣ ಚೌಕಟ್ಟು

ನಾಟಕಕಾರ ಮತ್ತು ವರ್ಣಚಿತ್ರ ಕಲಾವಿದ ಡಿ.ಎಸ್‌. ಚೌಗಲೆವರು ತಮ್ಮ ಸ್ವತಂತ್ರ ನಾಟಕ ‘ದಿಶಾಂತರ'ದ ಎರಡನೆಯ ಆವೃತ್ತಿಗೆ ನಾನೇ ವಿಮರ್ಶೆ ಬರೆಯಬೇಕು ಎಂದು ಒತ್ತಾಯ ಮಾಡಿದ ಕಾರಣ ಬಹು ದಿನಗಳ ಬಳಿಕ ನಾಟಕವೊಂದನ್ನು ಓದುವ ಅವಕಾಶ ದೊರೆಯಿತು. ನಾಟಕ 76 ಪುಟಗಳಲ್ಲಿದ್ದರೆ ಇತರರು ಈ ನಾಟಕದ ಬಗ್ಗೆ ಲೇಖನ ಇತ್ಯಾದಿ 43 ಪುಟಗಳಲ್ಲಿವೆ. ಸಾಹಿತಿ ಚಂದ್ರಕಾಂತ ಕುಸನೂರರ ಅನಿಸಿಕೆ, ಲೇಖಕರ ನನ್ನ ಮಾತು, ರಂಗಕರ್ಮಿ ಸಿ.ಬಸವಲಿಂಗಯ್ಯನವರ ದಿಶಾಂತರದ ಜಾಡಿನಲ್ಲಿ...., ರಂಗನಿರ್ದೇಶಕ ಬಿ.ಸುರೇಶ ಅವರು ನಾಟಕ ಕುರಿತು ಮಾಹಿತಿಗಾಗಿ ಮಾಡಿಕೊಂಡ...

ಬಲೆ

ಕಾದಂಬರಿ ಬಲೆ ನಾನು ಬರೆದ ಮೊದಲ ಕಾದಂಬರಿ. ಎಂ.ಎ. ಅಂತಿಮ ವರ್ಷದಲ್ಲಿ ಸೃಜನ ಸಾಹಿತ್ಯದ ಪತ್ರಿಕೆಗೆ ಡೆಸರ್ಟೇಷನ್‌ಗಾಗಿ ಬರೆದ ಕಾದಂಬರಿ ಇದು. ನಮ್ಮ ಗುರುಗಳಾಗಿದ್ದ ಡಾ.ಬುದ್ದಣ್ಣಹಿಂಗಮಿರೆಯವರ ಪ್ರೋತ್ಸಾಹ ಇದಕ್ಕೆ ಕಾರಣ. ನಮ್ಮ ಗುರುಗಳೂ ಮತ್ತು ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎಂ.ಎಂ. ಕಲಬುರ್ಗಿಯವರೂ ಇದನ್ನು ಮೆಚ್ಚಿಕೊಂಡಿದ್ದರು.. ಇದು 1984ರಲ್ಲಿ. ನಂತರ ಇದನ್ನು ಹೊನ್ನಾವರ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದ ಜಿ.ಎಸ್. ಅವಧಾನಿಯವರ ಸಹಾಯದಿಂದ, ಹಿರಿಯ ಪತ್ರಕರ್ತ ಜಿ.ಯು.ಭಟ್‌ ಅವರ ಪ್ರೋತ್ಸಾಹದಿಂದ ಕರಾವಳಿ ಗ್ರಾಮವಿಕಾಸ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ನಂತರ ಇದನ್ನು...

ಸಲಿಂಗಿಗಳ ಒಳ ಬದುಕಿನ ಚಿತ್ರಣ ನೀಡುವ ಲೈಂಗಿಕ ಜಾತಕ

ಕನ್ನಡದ ಈಗಿನ ಗದ್ಯ ಬರೆಹಗಾರರಲ್ಲಿ ಕೆ.ಸತ್ಯನಾರಾಯಣ ಅವರು ಪ್ರಮುಖರು. ಗದ್ಯ ಬರೆಹಗಾರರು ಎಂದು ಉದ್ದೇಶಪೂರ್ವಕವಾಗಿ ನಾನು ಇಲ್ಲಿ ಹೇಳಿದ್ದೇನೆ. ಅವರು ಕವಿತೆ ಬರೆದಿಲ್ಲ. ಆದರೆ ಇದುವರೆಗೆ ಒಂಬತ್ತು ಕಾದಂಬರಿ, ಹದಿನಾಲ್ಕು ಕಥಾಸಂಕಲನಗಳು, ಆರು ಪ್ರಬಂಧ ಸಂಕಲನಗಳು, ವಿಮರ್ಶೆ-ಸಾಂಸ್ಕೃತಿಕ ಬರೆಹ ಎಂದು ಆರು ಸಂಕಲನಗಳು, ನಾಲ್ಕು ಅಂಕಣ ಬರೆಹಗಳ ಕೃತಿಗಳು, ಒಂದು ಪ್ರವಾಸ ಕಥನ, ಒಂದು ವ್ಯಕ್ತಿ ಚಿತ್ರ, ಮೂರು ಆತ್ಮಚರಿತ್ರೆ ಹೀಗೆ ಇಷ್ಟೊಂದು ವೈವಿಧ್ಯಮಯ ಬರೆಹಗಳನ್ನು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಮೂರು ಸಂಪಾದನೆ ಕೃತಿಗಳನ್ನು ಪ್ರಕಟಿಸಿದ್ದಾರೆ....

ದುಂಡುಮೇಜಿನ ಪರಿಷತ್ತು

ಮನುಷ್ಯನ ವ್ಯಾವಹಾರಿಕ ಕ್ಷೇತ್ರ ದೊಡ್ಡದಾದಂತೆ ಆತನ ಸಂಪರ್ಕಗಳು ಹೆಚ್ಚುತ್ತವೆ. ಅದಕ್ಕಾಗಿ ಆತನ ಸಂವಹನದ ಕ್ಷಮತೆ ಹೆಚ್ಚಬೇಕಾಗುತ್ತದೆ. ಇದಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು, ತನ್ನ ಭಾಷೆಯಲ್ಲಿಲ್ಲದ ಆ ಭಾಷೆಯ ಪದಗಳನ್ನು ತನ್ನ ಭಾಷೆಗೆ ತರುವುದು ಇವೆಲ್ಲ ಮಾಡಬೇಕಾಗುತ್ತದೆ. ಬ್ರಿಟಿಷರು ನಮ್ಮ ದೇಶವನ್ನು ಎರಡು ಶತಮಾನಗಳ ಕಾಲ ಆಳಿದ್ದರಿಂದ ಇಂಗ್ಲಿಷ್ ಈ ದೇಶದಲ್ಲಿ ಸಂಪರ್ಕ ಭಾಷೆಯಾಗಿದೆ. ಹೀಗಾಗಿ ಆ ಭಾಷೆಯ ಹಲವು ಪದಗಳನ್ನು ನಮ್ಮ ಭಾಷೆಗೆ ಹೊಂದುವಂತೆ ಪರಿವರ್ತಿಸಿ ಬಳಸಲಾಗುತ್ತಿದೆ. ಅಂಥ ಪದಗಳಲ್ಲಿ ಒಂದು ರೌಡ್ ಟೇಬಲ್ ಕಾನ್ಫರೆನ್ಸ್. ಸ್ವಾತಂತ್ರ್ಯ...

ಪೂರ್ಣಚಂದ್ರ ತೇಜಸ್ವಿಯವರ ‘‘ಹುಲಿಯೂರಿನ ಸರಹದ್ದು’’

ನವ್ಯ ಸಾಹಿತ್ಯ ತನ್ನ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕತೆಗಳನ್ನು ಬರೆಯಲು ತೊಡಗಿದ ಪೂರ್ಣಚಂದ್ರತೇಜಸ್ವಿಯವರು ‘‘ಅಬಚೂರಿನ ಪೋಸ್ಟಾಫೀಸು’’ ಕಥಾ ಸಂಕಲನಕ್ಕೆ ‘‘ಹೊಸದಿಗಂತದ ಕಡೆಗೆ’’ ಎನ್ನುವ ಮುನ್ನುಡಿ ಬರೆಯುತ್ತ, ‘‘ಕನ್ನಡ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸ ದಿಕ್ಕಿನಲ್ಲಿ ನಾವೀಗ ಅನ್ವೇಷಿಸಬೇಕಾಗಿದೆ’’ ಎಂದು ಹೇಳಿದ್ದಾರೆ. ಇದನ್ನು ಲಕ್ಷಿಸಿ ಕೆಲವು ವಿಮರ್ಶಕರು ತೇಜಸ್ವಿಯವರನ್ನು ನವ್ಯೋತ್ತರ ಕಾಲದ ಶ್ರೇಷ್ಠ ಕತೆಗಾರ ಎಂದು ಗುರುತಿಸುತ್ತಾರೆ. ನವ್ಯದ ವ್ಯಾಖ್ಯೆ ವಿಮರ್ಶೆಯ ನಿಲುಕು- ನೆಲೆಯಲ್ಲಿ ನಿಷ್ಕೃಷ್ಟವಾಗಿ ನಿರ್ಣಯಿಸಲ್ಪಡುವವರೆಗೆ ಅವರನ್ನು ನವ್ಯರಲ್ಲೇ ಒಬ್ಬರೆಂದು ಪರಿಗಣಿಸುವುದು ಸೂಕ್ತ. ಏಕೆಂದರೆ...

ಅವಸ್ಥೆ ಕವನ ಸಂಕಲನ

ಅವಸ್ಥೆ ಕವನಗಳ ಸಂಕಲನ ವಾಸುದೇವ ಶೆಟ್ಟಿ ಸತ್ಯವಾನ ಪ್ರಕಾಶನ ಜಲವಳ್ಳಿ ಅರ್ಪಣೆ ನಾನು ನಾನಾಗಿಯೇ ಉಳಿದು ಬೆಳೆಯಲು ಕಾರಣರಾದ ನನ್ನ ದಿವಂಗತ ತೀರ್ಥರೂಪರ ನೆನಪುಗಳಿಗೆ ಪ್ರಥಮ ಮುದ್ರಣ- ೧೯೮೭ ಪ್ರತಿಗಳು ೫೦೦, ಬೆಲೆ ೫ ರು. ಮುದ್ರಕರು- ಆದರ್ಶ ಸಹಕಾರಿ ಮುದ್ರಣಾಲಯ, ಕಾರವಾರ ————————— ಗೋಧೂಳಿಜಯಲಕ್ಷ್ಮೀಪುರಂಮೈಸೂರು 570012ಮಾರ್ಚ್ 23, 1987 ಪ್ರಿಯ ಮಿತ್ರರೆ,ನೀವು ಕೃಪೆಮಾಡಿ ಕಳಿಸಿದ ಕವನ ಸಂಗ್ರಹ ಬಂದಿದೆ. ಅದಕ್ಕಾಗಿ ವಂದನೆಗಳು. ನಿಮ್ಮ ಕವನಗಳನ್ನು ಓದಿದ್ದೇನೆ. ಕಡಲನ್ನು ಕುರಿತ ಕವಿತೆಗಳು ನನಗೆ ಇಷ್ಟವಾದವು. ನೀವು ಇನ್ನೂ...

ಮಳೆಗಾಲದ ನನ್ನೂರು

ಅಶ್ವಿನಿ ಇಲ್ಲ ಭರಣಿ ಇಲ್ಲ ಕೃತ್ತಿಕೆಯಲ್ಲಿ ಬಿಳಿ ಮೋಡ ಕರಿದಾಗತೊಡಗಿದೆ ನೆಲದೊಳಗಿನ ಕಪ್ಪೆ ಮುಗಿಲು ಹನಿಸುವ ಹನಿಗೆ ಕೂಗಿಯೇ ಕೂಗುತ್ತ್ತದೆ ಕಪ್ಪೆ ಕೂಗಿಗೆ ಮನಕರಗಿತೋ ಎಂಬಂತೆ ರೋಹಿಣಿಯು ಹನಿಸುವುದು ನಾಲ್ಕೇ ನಾಲ್ಕು ಹನಿ ಆಗ, ಗಡುಗಾಲ ಬಂತೆಂದು ಗಡಿಬಿಡಿಯ ಮಾಡುವರು ನಮ್ಮೂರ ಜನರು ಹೊದಿಕೆ ಹೂಂಟಿಯು ಎಂದು ಬಿದಿರು ಬೀಜವು ಎಂದು ಧೂಳು ತುಂಬಿದ ಹಾಳೆಯಲ್ಲಿ ಇನಿತು ಬೇಸರ ಪಡದೆ ಮೂಡಿಸುವರು ಹೆಜ್ಜೆ ಗುರುತು ಮೃಗ- ಶಿರ ಬಿತ್ತೆನ್ನುವದೇ ತಡ ನಮ್ಮೂರಲ್ಲಿ ದೊಡ್ಡ ಬೊಬ್ಬೆ ಎತ್ತು, ಕೋಣ...

ಕವನ ಕಾಡು

ನನ್ನ ಕವನಗಳನ್ನೆಲ್ಲ ಕಾಡು ಆಗಿಸುವ ಬಯಕೆ ನನ್ನದು ವ್ಯಾಘ್ರ ಕೇಸರಿಗಳು, ಜೊತೆಗೆ ಚಿರತೆ ಚಿಗರೆಗಳಿಹುದು. ಮತ್ತೆ ಆಡು- ಆನೆ, ಮೊಲಗಳಿಗೆ ಆಡುಂಬೊಲವು ಆಲಸಿಗಳ ಬೀಡಲ್ಲ, ನಿತ್ಯ ಕರ್ಮಯೋಗಿಗಳ ತಾಣವದು ಬದುಕು ಹೆರರ ಹೆಗಲ ಮೇಲಿನ ಹೊರೆಯಲ್ಲ ನಿತ್ಯ ಹಸುರಿನ ಮರವು, ಬಳಲಿದವರಿಗೆ ನೆರಳು, ಕೂರುವವೆ ಕಣ್ಣು? ಕೇಳಿ, ಹಕ್ಕಿಗಳ ನಿನದ ಒತ್ತೊತ್ತಿ ಹೇರಿಟ್ಟ ಬಂಡೆಗಳ ತೇರುಂಟು ಅದನೆ ಒಡೆದು ಹರಿಯುವ ಹಳ್ಳ ಸುತ್ತು ಬಳಸಿಹೆ ಮುಳ್ಳು ನಡುವೆ ಬಿರಿದೊಗೆದ ಸುಮವು ಸೂಸಿಹುದು ಗಂಧ ತೀಡಿ ತೀಡಿ ಗಿಳಿ...

ಗೆ,

ಗೆಳತಿ, ನಿನ್ನ ಪ್ರೀತಿ ಪುಂಡ ಮಳೆ ಇದ್ದ ಹಾಗೆ ಸುರಿದರೆ ಬಿಟ್ಟೂ ಬಿಡದೆ ದಿನ ಪೂರ್ತಿ ಮಹಾಪೂರದ ಭೀತಿ ಇಲ್ಲದಿರೆ ಇಲ್ಲವೇ ಇಲ್ಲ ಬರಿ ಬಿಸಿಲು ಕುಡಿದ ನೀರೂ ಮತ್ತ್ತೆ ಬೆವರು

ಜೀವವೃಕ್ಷ

ನಾನು ಒಂದು ಮರ ನನಗೆ ಗೊತ್ತಾಗುವ ಮೊದಲೇ ಈ ಮಣ್ಣಿನೊಳಗೆ ನನ್ನ ಬೇರು ಇಳಿಸಿ ಬಿಟ್ಟಿದ್ದೆ ದಿನವೂ ಇಳಿಯುತ್ತಿದ್ದೇನೆ ಪಾತಾಳಕ್ಕೆ ಮತ್ತೆ ಬೆಳೆಯುತ್ತಿದ್ದೇನೆ ಆಕಾಶಕ್ಕೆ ಆಶೆ ತಳೆಯುತ್ತೇನೆ ಸದಾ ಹಸಿರಾಗಿರಲು ತಳಿರಿಸಲು, ಹೂವಿಸಲು ಕನಸ ಕಾಣುವೆ ಎಲೆಗೊಂದು ಕಾಯಿ ಪಡೆವ ಬಯಕೆ, ಬಸಿರು ನನ್ನದು ಆದರೆ, ನಾ ಬೆಳೆಯುತ್ತಿದ್ದಂತೆ ಕಾಗೆ, ಗೂಗೆ, ಗಿಡುಗಗಳು ಚೇಳು ಹಾವುಗಳೆಲ್ಲ ನನ್ನನ್ನೇರಿವೆ ಇದಕ್ಕೂ ಭಯಂಕರ, ಜೀವ ಕೋಶ ಕೋಶಗಳೆಲ್ಲ ವರಲೆಗಳ ಜೀವ ಕ್ಷೇತ್ರಗಳಾಗಿ ಬಿಟ್ಟಿವೆ. ಬೇರ ಜಾಲವ ಬೀಸಿ ನೀರು, ಕ್ಷಾರವ...