*ಕತ್ತಿ ಅಲಗಿನೊಂದಿಗೆ ಸರಸವಾಡಿದಂತೆ ಇದು ಕಠಿಣವಾದ ಯಾವುದಾದರೂ ಕೆಲಸವನ್ನು ಸಾಧಿಸುವುದಿದ್ದರೆ ಅದರ ಅಸಾಧ್ಯತೆಯನ್ನು ಹೇಳುವುದಕ್ಕೆ ಅದೊಂದು `ಅಸಿಧಾರಾವ್ರತ ಕಣಯ್ಯ’ ಎಂದು ಹೇಳುವುದಿದೆ. ಅಸಿಧಾರಾ ಎಂದರೆ ಖಡ್ಗದ ಅಲಗು ಎಂದರ್ಥ. ಇದೇನು ಖಡ್ಗದ ಅಲಗಿನ ವ್ರತ? ಯವ್ವನವತಿಯಾದ ಪತ್ನಿ ಹಾಸುಗೆಯಲ್ಲಿ ಪಕ್ಕದಲ್ಲಿ ಮಲಗಿರುತ್ತಾರೆ. ಗಂಡ ಹೆಂಡತಿಯ ನಡುವೆ ಒರೆಯನ್ನು ತೆಗೆದ ಹರಿತವಾದ ಖಡ್ಗವನ್ನು ಇಟ್ಟು ರಾತ್ರಿಯನ್ನು ಕಳೆಯುವುದೇ ಈ ಅಸಿಧಾರಾ ವ್ರತ. ಮನಸ್ಸು ಚಂಚಲವಾದರೆ ಖಡ್ಗದ ಮೇಲೆ ಶರೀರ ಬಿದ್ದು ಗಾಯವಾಗುವುದು ಖಂಡಿತ. ಯವ್ವನವತಿ ಹೆಂಡತಿಯ ಪಕ್ಕದಲ್ಲಿ ಮನಸ್ಸನ್ನು...
*ಮಕ್ಕಳಾಟದಿಂದ ದೊಡ್ಡವರಾಟದ ತನಕ ತನ್ನ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲನಾದ ವ್ಯಕ್ತಿ, ತಂಡದಲ್ಲಿದ್ದೂ ತಂಡದ ಒಟ್ಟಾರೆ ಪ್ರದರ್ಶನಕ್ಕೆ ಮಹತ್ವದ ಕಾಣಿಕೆ ನೀಡಲು ಅಸಮರ್ಥನಾದ ವ್ಯಕ್ತಿಯನ್ನು ಕುರಿತು, `ಆತ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯಕ್ತಿ ಆಟಕ್ಕಿದ್ದಾನೆ ಎಂದು ಯಾವಾಗ ಪರಿಗಣಿತನಾಗುತ್ತಾನೆ? ಅವನಿಂದ ಮಹತ್ವದ ಕೊಡುಗೆತಂಡಕ್ಕೆ ದೊರೆತಾಗ ಮಾತ್ರ. ಕೇವಲ ತಲೆ ಎಣಿಕೆಯಾದರೆ ಅದರಿಂದ ಪ್ರಯೋಜನವಿಲ್ಲ. ಲೆಕ್ಕದಲ್ಲಿ ಸೇರಬೇಕೆಂದರೆ ಮಹತ್ವದ ಕೊಡುಗೆ ಕೊಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ತಂಡದಿಂದಲೂ ಹೊರಬೀಳುವ ಅಪಾಯ ಇರುತ್ತದೆ. ಕಲವು ಕ್ರೀಡೆಗಳಲ್ಲಿ ಎಲ್ಲ ಪಂದ್ಯಗಳು ಮುಗಿಯುವ...
*ಅಧಿಕಾರದಿಂದ ತೆಗೆದುಹಾಕುವುದು ಬದುಕಿನ ಏಳುಬೀಳುಗಳನ್ನು ಸಂಕೇತಿಸುತ್ತಾನೆ. ಚಂದ್ರ ಶುಕ್ಲಪಕ್ಷದಲ್ಲಿ ದೊಡ್ಡವನಾಗುತ್ತ ಹೋಗಿ ಹುಣ್ಣಿಮೆಯ ದಿನ ಪೂರ್ಣಚಂದ್ರನಾಗುತ್ತಾನೆ. ಕೃಷ್ಣಪಕ್ಷದಲ್ಲಿ ಕೃಶಗೊಳ್ಳುತ್ತ ಹೋಗುವ ಚಂದ್ರ ಅಮಾವಾಸ್ಯದ ದಿನ ಮಾಯವಾಗಿಬಿಡುತ್ತಾನೆ. ಕಷ್ಟ ಸುಖಗಳು ಒಂದೇ ರೀತಿ ಇರುವುದಿಲ್ಲ ಎಂಬ ತತ್ವವನ್ನು ಸಾಂತ್ವನಕ್ಕಾಗಿ ಹೇಳುವಾಗ ಚಂದ್ರನ ಉದಾಹರಣೆ ತೆಗೆದುಕೊಳ್ಳುತ್ತಾರೆ. ಇನ್ನು, ಯಾರಾದರೂ ಸಚಿವರನ್ನು ಸಂಪುಟದಿಂದ ಕೈಬಿಟ್ಟಾಗ ಆ ಸಚಿವರಿದೆ ಅರ್ಧಚಂದ್ರ ಪ್ರಯೋಗವಾಗಿದೆ ಎಂದು ಪತ್ರಿಕೆಗಳಲ್ಲಿ ಬಳಸುತ್ತಾರೆ. ಅರ್ಧಚಂದ್ರ ಅಧಿಕಾರ ಕ್ಷಯದ ಸಂಕೇತ ಇಲ್ಲಿ. ಹಿಂದೆ ಧನುರ್ಬಾಣಗಳಲ್ಲಿ ಯುದ್ಧವನ್ನು ಮಾಡುತ್ತಿದ್ದಾಗ ಅರ್ಧಚಂದ್ರಾಕೃತಿಯ ಬಾಣವನ್ನು ಪ್ರಯೋಗಿಸುತ್ತಿದ್ದರು....
*ಪ್ರಜೆ-ಪ್ರಭುವಿನ ನಡುವಿನ ಕೊಂಡಿ ಬಹಳ ಮಾತನಾಡುವ ಹೆಣ್ಣುಮಕ್ಕಳನ್ನು ಕಂಡಾಗ `ಒಳ್ಳೆ ಅಡಗೂಳಜ್ಜಿ ಹಾಗೆ ಮಾತಾಡ್ತಾ ಇದ್ದೀಯಾ’ ಎಂದು ಮೂದಲಿಸುವವರು ಇದ್ದಾರೆ. ಯಾರು ಈ ಅಡಗೂಳಜ್ಜಿ? ಅಡುಗೆಯನ್ನು ಮಾಡಿ ಬಡಿಸುವವಳು ಅಡಗೂಳಜ್ಜಿ. ಹಿಂದಿನ ಕಾಲದಲ್ಲಿ ಈಗಿನಂತೆ ಊರುಗಳಲ್ಲಿ ಹೊಟೇಲುಗಳು ಇರಲಿಲ್ಲ. ದಾರಿಯ ಪಕ್ಕದಲ್ಲಿ ಪ್ರಯಾಣಿಕರಿಗೆ ಊಟವನ್ನು ಮಾಡಿ ಹಾಕಲು ಅಡಗೂಳಜ್ಜಿಯರು ಮನೆಗಳನ್ನು ಮಾಡಿಕೊಂಡಿರುತ್ತಿದ್ದರು. ಪ್ರಯಾಣಿಕರು ಇಂಥ ಅಡಗೂಳಜ್ಜಿಯರ ಮನೆಗಳಲ್ಲಿ ನಿಂತು ವಿಶ್ರಮಿಸಿಕೊಂಡು ಆಹಾರ ಸೇವಿಸಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು. ಪ್ರಯಾಣಿಕರು ಬರುತ್ತಾ ಹೋಗುತ್ತಾ ಇರುವುದರಿಂದ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ...
ಕಠಿಣವಾದ ಒರೆಗಲ್ಲು ಅಗ್ನಿ ಪರೀಕ್ಷೆ ಎನ್ನುವುದು ಕಠಿಣವಾದ ಒರೆಗಲ್ಲು. ಒಬ್ಬನ ಸಾಮರ್ಥ್ಯವನ್ನು ಕಠಿಣವಾದ ಸನ್ನಿವೇಶಗಳಲ್ಲಿ ಒರೆಗೆ ಹಚ್ಚಿ ನೋಡುವುದು ಅಗ್ನಿಪರೀಕ್ಷೆಯಾಗುತ್ತದೆ. ಅಗ್ನಿಯು ಎಲ್ಲವನ್ನೂ ದಹಿಸಿಹಾಕುತ್ತದೆ. ಬಂಗಾರವನ್ನು ಶುದ್ಧಗೊಳಿಸುವಾಗ ಅದನ್ನು ಬೆಂಕಿಯಲ್ಲಿ ಹಾಕುತ್ತಾರೆ. ಹೊಲಸೆಲ್ಲ ಹೋಗಿ ಶುದ್ಧ ಚಿನ್ನ ಉಳಿಯುತ್ತದೆ. ಪುಟದೆಣ್ಣೆ ಕಾಯಕಲ್ಪವೂ ಬಂಗಾರಕ್ಕಿದೆ. ಹಿಂದೆ ತಮ್ಮ ಪಾವಿತ್ರ್ಯವನ್ನು, ನಿರಪರಾಧಿತನವನ್ನು ಸಾಬೀತುಗೊಳಿಸಲು ಕೆಲವು ದಿವ್ಯಗಳನ್ನು ಪಾಲಿಸಬೇಕಿತ್ತು. ಕಾ್ದ ಗುಂಡನ್ನು ಕೈಯಿಂದ ಹಿಡಿಯುವುದು, ಅಗ್ನಿಯ ಪ್ರವೇಶ ಮಾಡುವುದು, ಬಿಸಿ ಎಣ್ಣೆಯಲ್ಲಿ ಕೈ ಅದ್ದುವುದು ಮೊದಲಾದವು ಆ ಕಾಲದ ದಿವ್ಯಗಳು. ಶ್ರೀರಾಮನು...
* ಈ ಪಾತ್ರೆ ಬರಿದಾಗುವುದೇ ಇಲ್ಲ! ಕ್ಷಯ ಎಂದರೆ ನಾಶ, ಕುಂದುವುದು, ಕಡಿಮೆಯಾಗುವುದು ಇತ್ಯಾದಿ ಅರ್ಥಗಳಿವೆ. ಅಕ್ಷಯ ಎಂದರೆ ನಾಶ ಇಲ್ಲದುದು, ಕುಂದಿಲ್ಲದಿರುವುದು, ಕಡಿಮೆಯೇ ಆಗದಿರುವುದು, ಬರಿದಾಗದೆ ಇರುವುದು ಇತ್ಯಾದಿ. ಆಗರ್ಭ ಶ್ರೀಮಂತರ ಸಂಪತ್ತನ್ನು ಅಕ್ಷಯಪಾತ್ರೆ ಎಂದು ಹೇಳುವುದನ್ನು ಕೇಳಿದ್ದೇವೆ. ಮಹಾಭಾರತದಲ್ಲಿ ದ್ರೌಪದಿಯ ಬಳಿ ಅಕ್ಷಯಪಾತ್ರೆ ಇತ್ತಂತೆ. ಸೂರ್ಯದೇವ ಪಾಂಡವರ ಕಷ್ಟವನ್ನು ದೂರ ಮಾಡಲು ದ್ರೌಪದಿಗೆ ಈ ಪಾತ್ರೆಯನ್ನು ನೀಡಿದ್ದನು. ಪಾಂಡವರನ್ನು ಪೇಚಿಗೆ ಸಿಲುಕಿಸಲು ದುರ್ಯೋಧನನು ಕೋಪಿಷ್ಠ ಮುನಿ ದೂರ್ವಾಸನನ್ನು ಅವರಲ್ಲಿಗೆ ಕಳುಹಿಸುತ್ತಾನೆ. ಅಕ್ಷಯಪಾತ್ರೆಯನ್ನು ಒಮ್ಮೆ ತೊಳೆದಿಟ್ಟಮೇಲೆ...
*ತೋರಿಕೆಯ ಸಂಭಾವಿತರು! ಹೆಣ್ಣುಗಳನ್ನು ಕಂಡಾಗ ಜೊಲ್ಲು ಸುರಿಸುವ ಚಪಲಚೆನ್ನಿಗರಾಯರನ್ನು ಕಂಡಾಗ “ಅವನ ಬಗ್ಗೆ ತುಂಬಾ ಹುಷಾರು, ಅರ್ಜುನ ಸನ್ಯಾಸಿ ಅವನು” ಎಂದು ಹಿಂದುಗಡೆಯಿಂದ ಅವನ ಬಗ್ಗೆ ಎಚ್ಚರಿಕೆಯನ್ನು ನೀಡುವುದಿದೆ. ಶ್ರೀಕೃಷ್ಣನ ಕತೆ, ಮಹಾಭಾರತದ ಕತೆ ಗೊತ್ತಿದ್ದವರಿಗೆ ಈ ಅರ್ಜುನ ಸನ್ಯಾಸಿಯ ಪರಿಚಯ ಇದ್ದೇ ಇರುತ್ತದೆ. ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜ್ಯವಾಳುತ್ತಿದ್ದರು. ರಾಕ್ಷಸನೊಬ್ಬ ರಾತ್ರಿ ವೇಳೆ ಬಂದು ತುಂಬಾ ಉಪಟಳವನ್ನು ನೀಡುತ್ತಿದ್ದಾಗ ಅವನನ್ನು ಕೊಲ್ಲಲು ಅರ್ಜುವ ತನ್ನ ಗಾಂಡೀವವನ್ನು ಹುಡುಕುತ್ತಾನೆ. ಅದು ಅಂತಃಪುರದಲ್ಲಿ ಇರುತ್ತದೆ. ಈ ಸಮಯದಲ್ಲಿ ಧರ್ಮರಾಯ ಮತ್ತು...
ಸಮಾರೋಪ `ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಮಹತ್ವದ್ದಾಗಿದೆ. ಪತ್ರಿಕೆ ಮತ್ತು ಸಾಹಿತ್ಯವನ್ನು ಜೊತೆ ಜೊತೆಯಲ್ಲಿ ಇಟ್ಟು ಅಧ್ಯಯನ ಮಾಡಿದಾಗ ಹಲವು ಹೊಸ ಅಂಶಗಳನ್ನು ಕಾಣುವುದು ಸಾಧ್ಯವಾದವು. ಆಧುನಿಕ ಕನ್ನಡ ಸಾಹಿತ್ಯ ಮತ್ತು ಪತ್ರಿಕೆ ಏಕ ಕಾಲದಲ್ಲಿ ಹುಟ್ಟು ಪಡೆದು ಬೆಳೆಯುತ್ತ ಬಂದಿದ್ದನ್ನು ಇಲ್ಲಿ ಗುರುತಿಸಲಾಗಿದೆ. ಪತ್ರಿಕೆಗಳಲ್ಲಿ ಬಳಕೆಯಾದ ಗದ್ಯವು ಹೊಸಗನ್ನಡ ಸಾಹಿತ್ಯಕ್ಕೆ ಪುಷ್ಟಿಯನ್ನು ಒದಗಿಸಿದವು. ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸಲು ಸಾಮರ್ಥ್ಯವಿಲ್ಲದ ಲೇಖಕರಿಗೆ ಅವರ ಕೃತಿಗಳು ಬೆಳಕು ಕಂಡು ಜನರನ್ನು ತಲುಪುದಕ್ಕೆ ಇವು ವಾಹಕವಾದವು. ಕನ್ನಡದಲ್ಲಿ...
ಏಕೀಕರಣದ ನಂತರದ ಪತ್ರಿಕೆ ಮತ್ತು ಸಾಹಿತ್ಯ ಕರ್ನಾಟಕ ಏಕೀಕರಣದ ಬಳಿಕ ಪತ್ರಿಕೆಗಳ ಸ್ವರೂಪ ಬದಲಾಯಿತು. ದೇಶಕ್ಕೆ ಸ್ವಾತಂತ್ಯ್ರವೂ ದೊರೆತಿತ್ತು. ನಾಡಿನ ಏಕೀಕರಣವೂ ಆಯಿತು. ಇದರಿಂದಾಗಿ ಪತ್ರಿಕೆಗಳ ಮೇಲಿದ್ದ ಒಂದು ದೊಡ್ಡ ಜವಾಬ್ದಾರಿ ಇಳಿದಂತಾಯಿತು. ಇದೇ ಸಮಯದಲ್ಲಿ ಪತ್ರಿಕೆ ನಡೆಸುವುದನ್ನು ಲಾಭದ ಉದ್ಯಮವನ್ನಾಗಿ ಪರಿಗಣಿಸಲಾಯಿತು. ಇದರಿಂದಾಗಿ ಸಾಹಿತ್ಯ ಚಳವಳಿಗಳನ್ನು ಪ್ರತಿಪಾದಿಸುವ ಪೋಷಿಸುವ ಉದ್ದೇಶಕ್ಕಾಗಿಯೇ ಪತ್ರಿಕೆಗಳನ್ನು ನಡೆಸುವುದು ಅಗತ್ಯವಾಯಿತು. ಏಕೀಕರಣದ ನಂತರದ ಅವಧಿಯಲ್ಲಿ ಇಂಥ ಸಾಹಿತ್ಯ ಪತ್ರಿಕೆಗಳು ಹೊರಟಿದ್ದನ್ನು ಕಾಣುತ್ತೇವೆ. ಇವು ಕೆಲವೊಮ್ಮೆ ಏಕವ್ಯಕ್ತಿಯ ಸಾಹಸವಾಗಿ, ಮತ್ತೆ ಕೆಲವೊಮ್ಮೆ ಸಂಘ...
ಏಕೀಕರಣದ ವರೆಗಿನ ಪತ್ರಿಕೆಗಳು ಮತ್ತು ಸಾಹಿತ್ಯ ಬಂಗಾಳ ವಿಭಜನೆಯ ಕಾಲಕ್ಕೆ ಕನ್ನಡ ಸಾಹಿತ್ಯ ಆಧುನಿಕ ರೂಪವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನು ನಡೆಸಿತ್ತು. ಅದೇ ರೀತಿ ಕನ್ನಡ ಪತ್ರಿಕೋದ್ಯಮಕ್ಕೂ ಅರವತ್ತು ವರ್ಷಗಳ ಪರಂಪರೆಯೊಂದು ನಿರ್ಮಾಣವಾಗಿತ್ತು. ಪತ್ರಿಕೆಯ ಪ್ರಯೋಜನವನ್ನು ಹಲವು ರೀತಿಗಳಲ್ಲಿ ಕಂಡುಕೊಳ್ಳಲಾಗಿತ್ತು. ಸಾಹಿತ್ಯ ಪೋಷಣೆಗಾಗಿಯೇ, ಸಾಹಿತ್ಯದಲ್ಲಿ ಹಳೆಯದಕ್ಕಿಂತ ಭಿನ್ನವಾಗಿ ಹೊಸ ರೂಪದಲ್ಲಿ ಅಭಿವ್ಯಕ್ತಿಯನ್ನು ತರಬೇಕು ಎಂಬ ಉದ್ದೇಶದಿಂದಲೇ ಪತ್ರಿಕೆಗಳೂ ಹೊರಟಿದ್ದನ್ನು ನೋಡಿದೆವು. ಸಾಹಿತ್ಯ ಪೋಷಣೆಯ ಹಂಬಲದೊಂದಿಗೆ ಪತ್ರಿಕೆಯನ್ನು ಆರಂಭಿಸುವುದು ಈಗಲೂ ಮುಂದುವರಿಯಿತು. ಆರಂಭಕಾಲದ ಪತ್ರಿಕೆಗಳಿಗೆ ಹೇಗೆ ಕರ್ನಾಟಕ...