ಏಳು ಹನ್ನೊಂದು

*ಇದು ಮಹಾಭಾರತದ ಹದಿನೆಂಟು ದಿನಗಳ ಯುದ್ಧ ಏನೋ ಒಂದನ್ನು ತುಂಬ ಕಷ್ಟಪಟ್ಟು ಸಾಧಿಸಿಕೊಂಡವರು ತಮ್ಮ ಸಾಧನೆಯ ಕಷ್ಟದ ಹಾದಿಯ ಬಗ್ಗೆ ಹೇಳುವಾಗ `ಏಳು ಹನ್ನೊಂದು ಆಯ್ತು' ಎಂದು ಹೇಳುವುದನ್ನು ಕೇಳಿದ್ದೇವೆ. ಸಾಧನೆಯ ಹಾದಿ ಹೂವಿನದಲ್ಲ, ಕಲ್ಲು ಮುಳ್ಳಿನಿಂದ ಕೂಡಿದ್ದು. ಆದನ್ನು ಸಾಧಿಸಿಯೇ ಬಿಟ್ಟೆ ಎಂದು ಹೆಚ್ಚಳವನ್ನು ಹೇಳಿಕೊಳ್ಳುವುದು ಅವರ ಉದ್ದೇಶ. ಏಳು ಹನ್ನೊಂದು’ ಅಂದರೆ ಏನು? ಮಹಾಭಾರತದಲ್ಲಿ ಕೌರವ ಪಾಂಡವರಿಗೆ ಯುದ್ಧ ಸಂಭವಿಸುತ್ತದೆಯಲ್ಲವೆ? ಆಗ ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯ ಮತ್ತು ಕೌರವರ ಕಡೆ ಹನ್ನೊಂದು...

ಊರಿಗೊಬ್ಬಳೇ ಪದ್ಮಾವತಿ

*ಊರವರ ಕಣ್ಣೆಲ್ಲ ಇವಳ ಮ್ಯಾಲೆ ಜಂಬದ ಕೋಳಿಯಂಥ ಹೆಂಗಸನ್ನು ಕಂಡಾಗ, ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಪಡುವ ಹೆಂಗಸನ್ನು ಕಂಡಾಗ, `ಊರಿಗೊಬ್ಬಳೇ ಪದ್ಮಾವತಿ ಅನ್ನುವ ಹಾಗೆ ಮೆರೆದಾಡ್ತವ್ಳೆ’ ಎಂದು ಕೊಂಡು ನುಡಿ ಆಡುವುದನ್ನು ಕೇಳಿದ್ದೇವೆ. ಯಾರು ಇವಳು ಪದ್ಮಾವತಿ? ಪದ್ಮಾವತಿ ಸುಂದರಿ, ಸುರಸುಂದರಿ. ಊರಿನ ವೇಶ್ಯೆ. ಊರಿನ ಕಣ್ಣೆಲ್ಲ ಇವಳ ಮ್ಯಾಲೇ. ಅವಳಲ್ಲಿಗೆ ಹೋಗಬೇಕೆಂದರೆ ತುಂಬಾ ಹಣ ಇರಬೇಕು, ಚೆಲುವು ಇರಬೇಕು, ಜೊತೆಯಲ್ಲಿ ಪಾಳಿ ಹಚ್ಚಬೇಕು. ಹೀಗಾಗಿ ಪದ್ಮಾವತಿಗೆ ಡಿಮ್ಯಾಂಪ್ಪೋ ಡಿಮ್ಯಾಂಡ್‌. ಇಷ್ಟು ಡಿಮ್ಯಾಂಡ್‌ ಇದ್ದ...

ಉಂಡೂ ಹೋದ ಕೊಂಡೂ ಹೋದ

*ವಿಶ್ವಾಸಕ್ಕೆ ಬಗೆಯುವ ದ್ರೋಹ ಯಾರೋ ಅಪರಿಚಿತ ಬರುತ್ತಾನೆ. ನಿಮ್ಮ ಪರಿಚಯ ಮಾಡಿಕೊಳ್ಳುತ್ತಾನೆ. ನಿಮ್ಮ ಆಶ್ರಯ ಪಡೆಯುತ್ತಾನೆ. ವಿಶ್ವಾಸಿಕನಂತೆ ಇರುತ್ತಾನೆ. ಒಂದು ದಿನ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದು ನಿಮ್ಮ ಅಮೂಲ್ಯ ವಸ್ತುವನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಆಗ ನಿಮ್ಮ ಬಾಯಿಂದ `ಉಂಡೂ ಹೋದ ಕೊಂಡೂ ಹೋದ’ ಎಂಬ ಮಾತು ಬರುತ್ತದೆ. ಯಾವುದೋ ಊರಿನಲ್ಲಿ ಅಧಿಕ ಬಡ್ಡಿದರದ ಆಮಿಷ ಒಡ್ಡುವ ಹಣಕಾಸು ಸಂಸ್ಥೆ ಹಣ ಸಂಗ್ರಹಿಸಿ ನಾಪತ್ತೆಯಾಗುವುದು, ಇಂದು ಹಣ ನೀಡಿ ಹದಿನೈದು ದಿನದ ನಂತರ ಸಾಮಾನುಗಳನ್ನು ಅರ್ಧ ಬೆಲೆಗೆ...

ಉತ್ತರನ ಪೌರುಷ

*ತೋಳುಬಲವಲ್ಲ, ಬಾಯಿ ಬಲ ಸುಮ್ಮನೆ ಬಡಾಯಿ ಕೊಚ್ಚುಕೊಳ್ಳುವವರನ್ನು ಕಂಡಾಗ,`ಸಾಕೋ ಗೊತ್ತಿದೆ, ನಿಂದು ಉತ್ತರನ ಪೌರುಷ’ ಎಂದು ಛೇಡಿಸುವುದನ್ನು ಕೇಳಿದ್ದೇವೆ. ಕೈಯಲ್ಲಿ ಆಗದಿದ್ದರೂ ಎಲ್ಲವನ್ನೂ ತಾನು ಮಾಡುವೆ ಎಂದು ಹೇಳುವವರಿಗೂ, ಬೇರೆಯವರು ಮಾಡಿದ್ದನ್ನು ತಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವವರಿಗೂ ಹೀಗೇ ಹೇಳುವುದು. ಯಾರೀತ ಉತ್ತರ? ಏನವನ ಪೌರುಷ? ವಿರಾಟನಗರಿಯ ಮಹಾರಾಜ ವಿರಾಟನ ಮಗ ಉತ್ತರ. ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ಬಂದದ್ದು ಅಲ್ಲಿಯೇ. ಅಜ್ಞಾತವಾಸದ ಕೊನೆಯಲ್ಲಿ ಪಾಂಡವರು ಅಲ್ಲಿರುವುದರ ಬಗ್ಗೆ ಕೌರವರಿಗೆ ಅದು ಹೇಗೋ ಗೊತ್ತಾಗಿಬಿಡುತ್ತದೆ. ಅವರು...

ಈಚಲುಮರದ ಕೆಳಗೆ ಮಜ್ಜಿಗೆ ಕುಡಿಯುವುದು

*ಪ್ರಾಮಾಣಿಕತೆಗೆ ಪುರಾವೆ ಒದಗಿಸುವ ಸ್ಥಿತಿ ಬರಬಾರದು ಈಚಲುಮರ ಯಾವುದಕ್ಕೆ ಪ್ರಸಿದ್ಧ ಹೇಳಿ? ಈ ಮರದಿಂದ ಶೇಂದಿಯನ್ನು ಇಳಿಸುತ್ತಾರೆ. ಈ ಮರದ ಬುಡದಲ್ಲಿ ಕುಳಿತು ಏನನ್ನಾದರೂ ಕುಡಿದರೆ ಅದು ಶೇಂದಿಯಲ್ಲದೆ ಮತ್ತೇನು ಇದ್ದೀತು? ಇದು ಸಾಮಾನ್ಯವಾದ ತರ್ಕ. ಈ ರೀತಿ ತರ್ಕ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಮಜ್ಜಿಗೆಯನ್ನು ಮಾಡುವುದು ಮನೆಯಲ್ಲಿ ತಾನೆ? ಮನೆಯಲ್ಲಿ ಮಜ್ಜಿಗೆ ಕುಡಿಯದೆ ಈಚಲುಮರದ ಬುಡಕ್ಕೆ ಹೋಗಿ ಏಕೆ ಕುಡಿಯಬೇಕು? ನಾವು ಯಾವುದೇ ಕೆಲಸವನ್ನು ಮಾಡಿದರೂ ಅದು ಪಾರದರ್ಶಕವಾಗಿರಬೇಕು. ಯಾರೂ ನಮ್ಮನ್ನು ಅನುಮಾನಿಸುವುದಕ್ಕೆ ಅವಕಾಶವನ್ನು...

ಇಂಗು ತಿಂದ ಮಂಗ

*ಮಾಡಬಾರದ್ದನ್ನು ಮಾಡಿ ಫಜೀತಿಗಿಟ್ಟುಕೊಳ್ಳುವುದು ಮಾಡಬಾರದ್ದನ್ನು ಮಾಡಲು ಹೋಗಿ ಪೆಟ್ಟು ತಿಂದವರನ್ನು ಕಂಡಾಗ ಇಂಗು ತಿಂದ ಮಂಗನಂತಾದ ಎದು ಹೇಳುವುದನ್ನು ಕೇಳಿದ್ದೇವೆ. ಮಂಗ ಯಾವತ್ತಾದರೂ ಇಂಗನ್ನು ತಿಂದುದನ್ನು ಕಂಡಿದ್ದೀರಾ? ಇಂಗು ನಮ್ಮ ನೆಲದ ಬೆಳೆ ಏನಲ್ಲ. ಹೀಗಿರುವಾಗ ಮಂಗ ಇಂಗು ತಿನ್ನುವುದಾದರೂ ಹೇಗೆ? ಇಂಗು ತಿಂದರೆ ಮಂಗನಿಗೆ ಏನಾಗುತ್ತದೆ? ಇಂಗಿನ ಮೂಲ ಇರಾನ್‌. ಅಫ್ಘಾನಿಸ್ತಾನದಲ್ಲೂ ಇಂಗನ್ನು ಬೆಳೆಯುತ್ತಾರೆ. ಅದೇ ರೀತಿ ಟೆಕ್ಸಾಸ್‌- ಮೆಕ್ಸಿಕೋದ ಗಡಿಯಲ್ಲೂ ಇಂಗನ್ನು ಬೆಳೆಯುತ್ತಾರೆ. ಸುಮಾರು ಎರಡು ಮೀಟರ್‌ ಎತ್ತರಕ್ಕೆ ಬೆಳೆಯುವ ಇಂಗದ ಗಿಡದ ಕಾಂಡ...

ಆಯಾರಾಂ ಗಯಾರಾಂ

*ಪಕ್ಷಾಂತರಿಗಳು ಅವತಾರ ಪುರುಷರು ರಾಜಕೀಯದಲ್ಲಿ ತತ್ವ ಆದರ್ಶಗಳು ಮುಖ್ಯವಾಗಿದ್ದ ಕಾಲ ಒಂದಿತ್ತು. ಅಧಿಕಾರವೇ ಮುಖ್ಯ ಎನ್ನುವ ಕಾಲವೂ ಬಂತು. ಅಧಿಕಾರ ರಾಜಕಾರಣಿಗಳಿಗೆ ಮುಖ್ಯವಾಗತೊಡಗಿದಾಗ ತತ್ವಗಳಿಗೆ ತಿಲಾಂಜಲಿ ಬಿಟ್ಟರು. ಬೆಳಿಗ್ಗೆ ಒಂದು ಪಕ್ಷ, ಸಂಜೆ ಇನ್ನೊಂದು ಪಕ್ಷ, ರಾತ್ರಿ ಮಗದೊಂದು ಪಕ್ಷ ಎನ್ನುವ ಮಟ್ಟಿಗೆ ರಾಜಕಾರಣ ಕುಲಗೆಟ್ಟು ಹೋಯಿತು. 1977ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹಿಂದಕ್ಕೆ ಪಡೆದು ಚುನಾವಣೆಯನ್ನು ಘೋಷಣೆ ಮಾಡಿದ ಬಳಿಕ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನರಾಂ ಅವರು ಪಕ್ಷವನ್ನು ತೊರೆದು ಹೊಸ...

ಆನೆ ನಡೆದುದೇ ದಾರಿ

*ಮಾರ್ಗಪ್ರವರ್ತಕರಿಗೆ ಹೀಗೆನ್ನುತ್ತಾರೆ ಹೇಳಿಕೇಳಿ ಆನೆ ದೊಡ್ಡ ಪ್ರಾಣಿ. ದೊಡ್ಡದನ್ನು ವರ್ಣಿಸುವಾಗಲೆಲ್ಲ ಗಜಗಾತ್ರ ಎಂದು ಹೇಳುವುದು ರೂಢಿ. ಇಂಥ ಆನೆಗೆ ನಡೆಯುವುದಕ್ಕೆ ಯಾರೂ ದಾರಿಯನ್ನು ನಿರ್ಮಿಸಿಕೊಡಬೇಕಾಗಿಲ್ಲ. ಅದು ಯಾವ ದಿಸೆಯಲ್ಲಿ ಹೋಗುತ್ತದೋ ಅಲ್ಲೊಂದು ಹೊಸ ಮಾರ್ಗ ನಿರ್ಮಾಣವಾಗಿಬಿಡುತ್ತದೆ. ಮುಂದೆ ಉಳಿದವರು ಆ ಮಾರ್ಗದಲ್ಲಿಯೇ ನಡೆಯಲು ಆರಂಭಿಸುತ್ತಾರೆ. ಹೀಗಾಗಿ ಆನೆ ನಡೆದುದೇ ಮಾರ್ಗ ಎಂಬ ಮಾತು ಚಾಲನೆಗೆ ಬಂತು. ಯಾವುದಾದರೂ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದವರು ಯಾರನ್ನೂ ಅನುಕರಿಸುವುದಿಲ್ಲ. ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡು ಮಾರ್ಗಪ್ರವರ್ತಕರು ಎನ್ನಿಸಿಕೊಂಡುಬಿಡುತ್ತಾರೆ. ಸಾಹಿತ್ಯ...

ಅಳಿಲು ಸೇವೆ

*ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಮುಖ್ಯ ಅಳಿಲು ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟದಾದ ಮುದ್ದುಮುದ್ದಾಗಿರುವ ಪ್ರಾಣಿ. ಈ ಪುಟ್ಟ ಪ್ರಾಣಿಯು ಏನಾದರೂ ಸೇವೆ ಮಾಡುವುದು ಸಾಧ್ಯವೆ? ಯಾರಾದರೂ ದೊಡ್ಡ ಕಾರ್ಯ ನಡೆಯುತ್ತಿರುವಲ್ಲಿ ಹೋಗಿ ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಟ್ಟು ತಮ್ಮ ಅಳಿಲು ಸೇವೆ ಸಂದಿತು ಎಂದು ಸಮಾಧಾನಪಟ್ಟುಕೊಳ್ಳುವುದು ಇದೆ. `ನಿಮ್ಮದೂ ನಡೆಯಲಿ ಅಳಿಲು ಸೇವೆ’ ಎಂದು ಕರೆ ಕೊಡುವುದನ್ನು ಕೇಳಿದ್ದೇವೆ. ಏನಿದು ಅಳಿಲು ಸೇವೆ ಎಂದು ಕೇಳಿದರೆ ಹಲವರಿಗೆ ಅದು ಗೊತ್ತಿರುವುದಿಲ್ಲ. ರಾಮಾಯಣ ಗೊತ್ತಲ್ಲವೆ? ರಾವಣ ಸೀತೆಯನ್ನು ಅಪಹರಿಸಿಕೊಂಡು...

ಅಳಲೆಕಾಯಿ ಪಂಡಿತ

*ಅಲ್ಪ ಅರಿವನ್ನೇ ಎಲ್ಲೆಡೆಗೂ ಬಳಸುವವನು ಹಳ್ಳಿಗಳಲ್ಲಿ ನಾಟಿ ವೈದ್ಯರು ಇರುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆಲ್ಲ ಅವರೇ ಔಷಧವನ್ನು ನೀಡುವವರು. ತರಾವರಿ ಕಾಯಿಲೆಗಳಿಗೆ ಅವರಲ್ಲಿರುವುದು ಎರಡು ಮೂರು ಗಿಡಮೂಲಿಕೆಗಳ ಔಷಧ ಮಾತ್ರ. ಅವರ ಜ್ಞಾನ ಸೀಮಿತವಾದದ್ದು. ಆದರೆ ಏನು ಮಾಡುವುದು? ಅವರನ್ನು ಬಿಟ್ಟರೆ ಹಳ್ಳಿಯಲ್ಲಿ ಅನ್ಯರ ಗತಿ ಇಲ್ಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅಳಲೆಕಾಯಿಯ ಔಷಧೀಯ ಗುಣ. ಅದು ಬಹು ರೋಗಗಳಿಗೆ ಔಷಧವಾಗುತ್ತದೆ. ಈ ಕಾರಣಕ್ಕಾಗಿಯೇ ಹಳ್ಳಿಯ ವೈದ್ಯರನ್ನು ಅಳಲೆಕಾಯಿ ಪಂಡಿತರು ಎಂದು ಕರೆಯುವುದು. ಅದೇ ರೀತಿ ಹಳ್ಳಿಯಲ್ಲಿ...