ಕಂಕುಳಲ್ಲೇ ಕೂಸು ಇಟ್ಟುಕೊಂಡು ಊರೆಲ್ಲ ಹುಡುಕಿದಳು

*ಹಿತ್ತಲ ಗಿಡ ಮದ್ದಲ್ಲ ಮಗು ಕಂಕುಳಲ್ಲಿಯೇ ಇದೆ. ತನ್ನ ಮಗು ಕಳೆದುಹೋಯಿತು ಎಂದು ತಾಯಿಯೊಬ್ಬಳು ಊರಲ್ಲೆಲ್ಲ ಹುಡುಕಿದಳಂತೆ. ನಾವು ಹುಡುಕಾಡುತ್ತಿರುವ ವಸ್ತು ನಮಗೆ ಕೈಗೆಟಕುವಂತೆಯೇ ಇರುತ್ತದ. ಆದರೆ ಅದು ನಮ್ಮ ಅರಿವಿಗೆ ನಿಲುಕದೆ ಮರುಳರಂತೆ ಇರುತ್ತೇವೆ ನಾವು. ಇಂಥದ್ದನ್ನೆಲ್ಲ ಕಂಡಾಗ ಈ ಮೇಲಿನ ಮಾತನ್ನು ಹೇಳುವುದು ಸಾಮಾನ್ಯ. ಹಣ ಹಣ ಎಂದು ನಾವು ಒದ್ದಾಡುತ್ತಿರುತ್ತೇವೆ. ಅದೆಷ್ಟೋ ಬಾರಿ ನಾವು ನೆಲದಲ್ಲಿರುವ ನಿಧಿಯ ಮೇಲೆಯೇ ಅಡ್ಡಾಡಿರುತ್ತೇವೆ. ಆದರೆ ನಾವು ತುಳಿದ ಜಾಗದಲ್ಲಿಯೇ ನಿಧಿ ಇದೆ ಎಂಬುದು ನಮ್ಮ ಅರಿವಿಗೆ...

ಕಂಕಣ ತೊಡು

*ವ್ರತಸ್ಥನಾಗಿ ಕಾರ್ಯ ಆರಂಭಿಸು ಕಂಕಣ ಎಂದರೆ ಬಳೆ ಎಂಬ ಅರ್ಥವಿದೆ. ಬಳೆಯನ್ನು ತೊಡುವುದು ಹೆಂಗಸರು ಮಾತ್ರವಲ್ಲವೆ? ಗಂಡಸರಿಗೆ ಬಳೆ ತೊಡು ಎಂದು ಹೇಳಿದರೆ ಅಪಮಾನ ಮಾಡಿದಂತೆ. `ಬಳೆ ಹಾಕಿಕೊಂಡಿದ್ದೀನಾ ನಾನು?’ ಎಂದು ಅಬ್ಬರಿಸುವುದನ್ನು ಕೇಳಿದ್ದೇವೆ. ಕಂಕಣಕ್ಕೆ ಬಳೆ ಅಲ್ಲದೆ ಇನ್ನೂ ಬೇರೆ ಅರ್ಥಗಳಿವೆ. ಮಂಗಳ ಕಾರ್ಯಗಳಲ್ಲಿ ಅರಿಶಿಣದ ತುಂಡಿಗೆ ಕೆಂಪು ದಾರವನ್ನು ಕಟ್ಟಿ ಅದನ್ನು ಬಲಗೈ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತಾರೆ. ಶುಭಕಾರ್ಯದ ಆರಂಭದಲ್ಲಿ ಸಂಕಲ್ಪವನ್ನು ತೊಡುವುದರ ಸಂಕೇತ ಈ ಕಂಕಣ ತೊಡುವಿಕೆ. ಬಳೆಯನ್ನು ತೊಡುವ ಸ್ಥಳದಲ್ಲಿಯೇ ಇದನ್ನು ಕಟ್ಟಿಕೊಳ್ಳುವುದರಿಂದ...

ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ?

*ಬಲಿಗೆ ಆಯ್ಕೆ ಇರುವುದಿಲ್ಲ ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ ಎಂದೋ, ಕುರಿ ಕೇಳಿ ಮಸಾಲೆ ರುಬ್ಬುತ್ತಾರಾ ಎಂದೋ ಹೇಳುವುದನ್ನು ಹಲವು ಬಾರಿ ನಾವು ಕೇಳಿದ್ದೇವೆ. ಕೋಳಿ ತಿನ್ನುವವನು ಕೋಳಿಯ ಹತ್ತಿರ ಹೋಗಿ `ಇವತ್ತು ನಿನ್ನನ್ನು ಕೊಂದು ಸಾರು ಮಾಡಿ ತಿನ್ನುತ್ತೇನೆ, ಆಗಬಹುದೆ?’ ಎಂದು ಕೇಳಿದರೆ ಕೋಳಿ ಹೂಂ ಅನ್ನಬಹುದೆ? ಇದೇ ಮಾತು ಕುರಿಗೂ ಅನ್ವಯಿಸುತ್ತದೆ. ಯಾವ ಕೋಳಿಯನ್ನು ಕತ್ತರಿಸಬೇಕು, ಹೇಗೆ ಕತ್ತರಿಸಬೇಕು, ಎಷ್ಟು ಕೋಳಿಗಳನ್ನು ಕತ್ತರಿಸಬೇಕು ಎಂದು ನಿರ್ಧರಿಸುವವನು ಕೋಳಿಯನ್ನು ತಿನ್ನುವವನೋ ಅಡುಗೆಯನ್ನು ಮಾಡುವವನೋ ಆಗಿರುತ್ತಾರೆ. ಕೋಳಿಯ...

ಕೊಟ್ರೆ ವರ ಇಟ್ರೆ ಶಾಪ

*ಅದ್ಭುತ ಸಾಮರ್ಥ್ಯ ಇದು ಸೂಚಿಸುತ್ತದೆ ಜೇನು ಸಿಹಿಯಾಗಿದೆ ಎಂದು ಎದುರು ಇದ್ದವನಿಗೆ ಸಾವಿರ ಸಲ ಹೇಳಿದರೂ ಅದರ ಅನುಭವ ಅವನಿಗೆ ಆಗುವುದಿಲ್ಲ. ಅದೇ ಒಂದು ಹನಿ ಜೇನನ್ನು ಆತನ ನಾಲಿಗೆಯ ಮೇಲೆ ಹಾಕಿದರೆ ಸಿಹಿ ಯಾವ ವಿವರಣೆ ಇಲ್ಲದೆಯೇ ಅವನಿಗೆ ಅರಿವಾಗುವುದು. ಅಕ್ಷರಗಳಿಗೆ ನಿಲುಕದ ಅದೆಷ್ಟೋ ಅದ್ಭುತಗಳು ಇವೆ. ಅವನ್ನು ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವರ್ಣಿಸುತ್ತಲೂ ಇರುತ್ತೇವೆ. ಇದಕ್ಕಾಗಿ ಶಬ್ದದ ವಾಚ್ಯಾರ್ಥವನ್ನು ಮೀರಿ ವ್ಯಂಗ್ಯಾರ್ಥದ ನೆರವನ್ನು ಪಡೆದುಕೊಳ್ಳುತ್ತೇವೆ. ಇಲ್ಲಿ ಒಬ್ಬ ವ್ಯಕ್ತಿ ಮಹಾನ್‌ ಸಾಮರ್ಥ್ಯದವನು ಎಂದು...

ಕೊಕ್ಕೆಯಲ್ಲಿ ಜೇನು ಕೊಯ್ಯುವುದು

*ಕಷ್ಟಪಡದೆ ಸುಖ ಇಲ್ಲ ಸುಖ ಪಡಬೇಕು ಎಂದರೆ ಕಷ್ಟ ಪಡಲೇಬೇಕು. `ಕೈ ಕೆಸರಾದರೆ ಬಾಯಿ ಮೊಸರು' ಎಂದು ಹೇಳುತ್ತಾರಲ್ಲ. ಹಾಗೆ ಇದು. ಕಷ್ಟಪಡದೆ ಸುಖಪಡುವ ಆಸೆಯಲ್ಲಿದ್ದವರನ್ನು ಕಂಡಾಗಕೊಕ್ಕೆಯಲ್ಲಿ ಜೇನು ಕೊಯ್ಯುವವರು ಇವರು’ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇಲ್ಲಿ ಕೊಯ್ಯುವುದು ಎದರೆ ಕೀಳುವುದು. ಕೊಕ್ಕೆಯಿಂದ ಜೇನನ್ನು ಕಿತ್ತರೆ ಅದು ನಮ್ಮ ಕೈಗೆ ಸಿಗದೆ ನೆಲಕ್ಕೆ ಬಿದ್ದು ತಿನ್ನಲು ಆಗದ ಸ್ಥಿತಿಯನ್ನು ತಲುಪುತ್ತದೆ. ಆದರೆ ಜೇನಿನ ಸ್ವಾದ ನಮಗೆ ಸಿಗಬೇಕೆಂದರೆ ಜೇನಿನ ಹುಟ್ಟಿಗೆ ನಾವು ಕೈ ಹಚ್ಚಬೇಕು. ಆಗ...

ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ

*ಸೋಲನ್ನು ಒಪ್ಪಿಕೊಳ್ಳಲಾಗದ ದೊಡ್ಡಸ್ಥಿಕೆ ಇದು ಒಬ್ಬ ಜಟ್ಟಿ ಇದ್ದನಂತೆ. ಕುಸ್ತಿ ನಡೆಯಿತು. ಎದುರಾಳಿ ಅವನನ್ನು ಎತ್ತಿ ಒಗೆದು ಚಿತ್‌ ಮಾಡಿಬಿಟ್ಟ. ಅಖಾಡಾದಿಂದ ಹೊರಕ್ಕೆ ಬಂದ ಸೋತ ಜಟ್ಟಿ, ನನ್ನನ್ನೇನೋ ಅವನು ಕೆಳಕ್ಕೆ ಹಾಕಿದ. ಆದರೆ ನನ್ನ ಮೀಸೆಗೆ ಮಾತ್ರ ಮಣ್ಣು ಹತ್ತಲಿಲ್ಲ ಎಂದು ತನ್ನ ಪೊಗದಸ್ತಾದ ಮೀಸೆಯ ಮೇಲೆ ಕೈಯಾಡಿಸಿಕೊಂಡನಂತೆ. ರಾಜಕಾರಣಿಗಳು ಚುನಾವಣೆಯ ಫಲಿತಾಂಶ ಬಂದ ಬಳಿಕ ತಮ್ಮ ಸೋಲನ್ನು ವಿಶ್ಲೇಷಿಸುವುದನ್ನು ಕೇಳಿದಾಗ ಈ ಮಾತು ನೆನಪಾಗುತ್ತದೆ. ತಮಗೆ ಸ್ಥಾನಗಳು ಕಡಿಮೆ ಬಂದಿವೆ ನಿಜ, ಆದರೆ ಪಡೆದ...

ಕೆಸರೊಳಗಿನ ಗೂಟ

*ದುರ್ಬಲ ಮನಸ್ಸಿನ ಪ್ರತೀಕ ದೃಢ ಚಿತ್ತ ಇಲ್ಲದ ವ್ಯಕ್ತಿಗಳನ್ನು, `ಅವನೊಬ್ಬ ಕೆಸರೊಳಗಿನ ಗೂಟ’ ಎಂದು ಹೇಳುವುದಿದೆ. ಗೂಟ ಗಟ್ಟಿಯಾಗಿ ನಿಲ್ಲಬೇಕಿದ್ದರೆ ಭೂಮಿ ಗಟ್ಟಿಯಾಗಿರಬೇಕು. ಭೂಮಿಯೇ ಗಟ್ಟಿಯಿಲ್ಲದಿದ್ದರೆ ಗೂಟವು ಬಲವಾಗಿ ನಿಲ್ಲುವುದು ಸಾಧ್ಯವೆ? ಯಾವ ಕಡೆಗೆ ಬೇಕಾದರೂ ಈ ಕೆಸರೊಳಗಿನ ಗೂಟ ವಾಲುತ್ತದೆ. ಆದರೆ ಗಟ್ಟಿಯಾದ ನೆಲದ ಮೇಲೆ ಹುಗಿದ ಗೂಟವನ್ನು ಬಾಗಿಸಲು ಸಾಧ್ಯವೇ ಇಲ್ಲ. ಕೆಲವರಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಸದಾ ಡೋಲಾಯಮಾನ ಸ್ಥಿತಿ. ಹಾಗೆ ಮಾಡಿದರೆ ಸರಿಯೆ, ಹೀಗೆ ಮಾಡಿದರೆ ಸರಿಯೆ ಎಂಬ ಗೊಂದಲದಲ್ಲಿ ಸದಾ...

ಕೃಷ್ಣ ಕಾರಸ್ಥಾನ

*ಷಡ್ಯಂತ್ರಗಳಿಗೆ ಭಗವಂತನ ಸಂಬಂಧ ಇಬ್ಬರು ಏನನ್ನೋ ಗುಟ್ಟಾಗಿ ಮಾತನಾಡುತ್ತಿದ್ದರೆ ಅದೇನು ಕಾರಸ್ಥಾನ ನಡೆಸುತ್ತಿದ್ದೀರಿ ಎಂದು ಕೇಳುತ್ತೇವೆ. ಕಾರಸ್ಥಾನ ಎಂದರೆ ಒಳಸಂಚು, ಕುಟಿಲ ನೀತಿ ಎಂಬ ಅರ್ಥ. ನಮ್ಮ ಪುರಾಣಪುರುಷ ಶ್ರೀಕೃಷ್ಣ ಇಂಥ ಕುಟಿಲ ನೀತಿಯಲ್ಲಿ ಎತ್ತಿದ ಕೈ. ರಾಜಕಾರಣದಲ್ಲಿ ಶ್ರೀಕೃಷ್ಣನಂಥ ಚಾಣಾಕ್ಷ ಮತ್ತೊಬ್ಬನನ್ನು ನಾವು ಕಾಣುವುದಿಲ್ಲ. ಭೂಮಿಯ ಮೇಲೆ ಜನಿಸುವಾಗಲೇ ತನ್ನ ಕಾರಸ್ಥಾನ ತೋರಿಸಿದ್ದಾನೆ. ಎಷ್ಟೆಂದರೂ ಭಗವಂತನಲ್ಲವೆ ಆತ. ಜರಾಸಂಧನ ವಿರುದ್ಧ ಯುದ್ಧ ಮಾಡುವಾಗ, ಪಾಂಡವರ ಪಕ್ಷವನ್ನು ವಹಿಸಿದಾಗ ಹೀಗೆ ಎಲ್ಲಿ ನೋಡಿದರೂ ಕೃಷ್ಣನ ರಾಜಕೀಯ ಮುತ್ಸದ್ಧಿತನ...

ಕೂಪಮಂಡೂಕ

*ಪ್ರಪಂಚದ ವಿಸ್ತಾರ ಅರಿಯದವರು ಅವನೊಳ್ಳೆ ಕೂಪಮಂಡೂಕ ಇದ್ದಂಗೆ ಅವ್ನೆ ನೋಡು' ಎಂದೋ,ಅವನೊಳ್ಳೆ ಬಾವಿ ಕಪ್ಪೆ ನೋಡು’ ಎಂದೋ ಇನ್ನೊಬ್ಬರ ಮೇಲೆ ಟಿಪ್ಪಣಿಯನ್ನು ದಾಖಲಿಸುವುದು ಸಾಮಾನ್ಯ. ಏನಿದು ಕೂಪ ಮಂಡೂಕ? ಕೂಪವೆಂದರೆ ಬಾವಿ. ಬಾವಿಯಲ್ಲಿರುವ ಕಪ್ಪೆಗೆ ಕೂಪಮಂಡೂಕ ಎಂದು ಹೇಳುತ್ತಾರೆ. ಬಾವಿಯಲ್ಲಿರುವ ಕಪ್ಪೆಗೆ ಹೊರಗಿನ ಪ್ರಪಂಚದ ವಿಸ್ತಾರವೇ ಗೊತ್ತಿರುವುದಿಲ್ಲ. ಆ ಬಾವಿಯೇ ಅದರ ಪ್ರಪಂಚವಾಗಿರುತ್ತದೆ. ಬಾವಿಗಿಂತ ದೊಡ್ಡ ಇನ್ನೊಂದು ಪ್ರಪಂಚ ಇದೆ ಎಂಬುದನ್ನು ಅದು ಒಪ್ಪುವುದಕ್ಕೆ ಸಿದ್ಧವೇ ಇರುವುದಿಲ್ಲ. ಅಲ್ಪ ಜ್ಞಾನಿಗಳಾದವರು ತಮ್ಮ ಜ್ಞಾನದ ಮಿತಿಗೆ ದಕ್ಕಿದ್ದೇ ಸತ್ಯವೆಂದುಕೊಳ್ಳುತ್ತಾರೆ....

ಕೂಚಂಭಟ್ಟ

*ಪುಸ್ತಕದ ಹುಳುಗಳನ್ನು ಹೀಗೆ ಕರೆಯುತ್ತಾರೆ ಸದಾ ಪುಸ್ತಕದಲ್ಲಿ ತಲೆ ಹುದುಗಿಸಿಕೊಂಡು ಕುಳಿತವರನ್ನು ಕಂಡಾಗ `ಒಳ್ಳೆ ಕೂಚಂಭಟ್ಟನ ಹಾಗೆ ಕುಂತಿದ್ದಾನೆ ನೋಡು' ಎಂದು ಅಪಹಾಸ್ಯ ಮಾಡುವುದನ್ನು ಕೇಳಿದ್ದೇವೆ. ಇದನ್ನೇ ಇನ್ನೂ ಸ್ವಾರಸ್ಯಕರವಾಗಿ,ಓದಿ ಓದಿ ಕೆಟ್ಟು ಹೋದ ಕೂಚು ಭಟ್ಟ, ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ’ ಎಂದು ಹೇಳುವವರೂ ಇದ್ದಾರೆ. ಅತಿಯಾದ ಓದಿನ ನಿರರ್ಥಕತೆ, ಓದಿಲ್ಲದಿದ್ದರೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಬಹುದೆಂಬ ಆಶಾದಾಯಕ ಮಾತು ಇದರಲ್ಲಿದೆ. ದೇಶ ನೋಡು ಕೋಶ ಓದು ಎಂಬ ಮಾತೇನೋ ಇದೆ. ಆದರೆ ಬರೀ ಓದಿನಿಂದಲೇ...