ತೆಲುಗಿನ ಜನಪ್ರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರು ಕನ್ನಡದಲ್ಲಿಯೂ ಜನಪ್ರಿಯರಾಗಿದ್ದಾರೆ. ಇದಕ್ಕೆ ಅವರ ಕೃತಿಗಳ ಅನುವಾದವೇ ಕಾರಣವಾಗಿದೆ. ಅವರ ಕೃತಿಗಳನ್ನು ಕನ್ನಡಿಸುತ್ತಿರುವವರಲ್ಲಿ ಯತಿರಾಜ್ ವೀರಾಂಬುಧಿಯವರು ಪ್ರಮುಖರು. ಇದೀಗ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ‘ಕಣಿವೆಯಿಂದ ಶಿಖರಕ್ಕೆ’ ಕನ್ನಡ ಓದುಗರಿಗೆ ದೊರೆಯುವಂತೆ ಮಾಡಿದ್ದಾರೆ ವೀರಾಂಬುಧಿಯವರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷತೆಗಳಿರುತ್ತವೆ. ಮರೆವೆಯಿಂದಲೋ ಆಲಸ್ಯದಿಂದಲೋ ಆ ವಿಶೇಷತೆಗಳು ಹೊರಬರುವುದೇ ಇಲ್ಲ. ಹನುಮಂತನಿಗೆ ಆತನ ಸಾಮರ್ಥ್ಯವನ್ನು ಬೇರೆಯವರು ಹೇಳಿದ ಮೇಲಷ್ಟೆ ಅರಿವಿಗೆ ಬರುತ್ತಿತ್ತಂತೆ. ಋಷಿಗಳ ಶಾಪದಿಂದ ಆತನಿಗೆ ಹಾಗೆ ಆಗಿತ್ತು. ತಮ್ಮ ನೈಜ...
ಭಗವಂತನನ್ನು ಸಾಮಾನ್ಯ ಮಾನವನಂತೆ ಭಾವಿಸಿ ಆತನ ಲೀಲಾವಿನೋದಗಳನ್ನು ಪ್ರೇಮ ಕಾಮ ವಿರಹಗಳನ್ನು ಚಿತ್ರಿಸುವ ಸಾಹಿತ್ಯದ ಪರಂಪರೆ ನಮ್ಮಲ್ಲಿದೆ. ಇಂಥ ಲೀಲೆಗಳನ್ನು ತೋರಿದವರಲ್ಲಿ ಶ್ರೀಕೃಷ್ಣನಿಗೆ ಅಗ್ರಸ್ಥಾನವಿದೆ. ಶ್ರೀಕೃಷ್ಣ ಹಾಗೂ ರಾಧೆಯರ ಪ್ರೇಮ, ವಿರಹಗಳು ಕವಿಗಳಿಗೆ ನಿತ್ಯನೂತನ ವಸ್ತು. ಸ.ರಘುನಾಥ ಅವರು ತಮ್ಮ ‘ಸುರಳಿ’ ಕವನ ಸಂಕಲನದಲ್ಲಿ ಇದೇ ಕೃಷ್ಣ-ರಾಧೆಯರ ಹಂಬಲ, ನೆನೆಕೆಗಳನ್ನೇ ಕಾವ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ಕೃಷ್ಣನು ಗೋಕುಲದಿಂದ ಮಥುರಾ ನಗರಕ್ಕೆ ತೆರಳಿದ ಸಂದರ್ಭವನ್ನು ವರ್ಣಿಸುತ್ತದೆ. ಕೃಷ್ಣ ಲೀಲೆಯ ಬಗ್ಗೆ ಕನ್ನಡದ ಅನೇಕ ಕವಿಗಳು...
ಮರಾಠಿ ಸಾಹಿತ್ಯದಲ್ಲಿ ಆತ್ಮಕಥನಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ದಲಿತ ಸಾಹಿತ್ಯದ ಸಂದರ್ಭದಲ್ಲಿ ಬೆಂಕಿಉಂಡೆಯಂಥ ಹಲವು ಆತ್ಮಕಥನಗಳು ಬಂದವು. ಮರಾಠಿ ದಲಿತ ಸಾಹಿತ್ಯ ದೇಶದ ಉಳಿದ ಭಾಷೆಗಳ ದಲಿತ ಸಾಹಿತ್ಯವನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದಿದೆ. ಮರಾಠಿಯ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾಗಿರುವ ಭಾಲಚಂದ್ರ ಮುಣಗೇಕರ್ ‘ಮೀ ಅಸಾ ಘಡಲೋ’ ಎಂಬ ಆತ್ಮಕಥನವನ್ನು ಬರೆದಿರುವರು. ಅವರ ಬಾಲ್ಯದಿಂದ ಹೈಸ್ಕೂಲು ಶಿಕ್ಷಣ ಮುಗಿಯುವ ವರೆಗಿನ ಅವರ ಬದುಕಿನ ವಿವರಗಳು ಇದರಲ್ಲಿವೆ. ಕನ್ನಡದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಇದನ್ನು ‘ನಾನು ಹೀಗೆ ರೂಪುಗೊಂಡೆ’...
ಪುರಾಣವನ್ನು ಇತಿಹಾಸದಂತೆ ನೋಡುವ, ಆ ಇತಿಹಾಸವನ್ನು ಜನಸಾಮಾನ್ಯರ ಬದುಕಿನ ರೀತಿ ನೀತಿಯಂತೆ ಕಾಣುವ ಅರ್ಥೈಸುವ ಸಾಹಿತ್ಯದ ಅನುಸಂಧಾನ ಪರಂಪರೆ ನಮ್ಮಲ್ಲಿ ಬಹು ಹಿಂದಿನಿಂದಲೂ ಇದೆ. ಮಹಾಭಾರತ, ಭಾಗವತಗಳ ಪ್ರಸಂಗಗಳನ್ನು ಹೀಗೆ ನೋಡಿದ ಕಥಾಪ್ರಪಂಚವನ್ನು ಹಿಂದಿಯಲ್ಲಿ ನಾವು ಮೊದಲು ನೋಡಿದ್ದು ಕೆ.ಎಂ.ಮುನ್ಷಿಯವರ ಕೃಷ್ಣಾವತಾರ ಸರಣಿ ಬರೆಹಗಳಲ್ಲಿ. ಅದೇ ರೀತಿ ಎಸ್.ಎಲ್.ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಕೃಷ್ಣ ಸಹಿತವಾಗಿ ವ್ಯಾಸನ ಪಾತ್ರ ಪ್ರಪಂಚದ ಪೌರಾಣಿಕ ಕವಚವನ್ನು ಕಳಚಿಹಾಕಿ ಸಾಮಾಜಿಕ ನೆಲೆಯಲ್ಲಿ ಚಿತ್ರಿಸಿದರು. ಅಮೀಶ್ ಅವರು ಇಂಗ್ಲಿಷಿನಲ್ಲಿ ಶಿವನನ್ನು ಒಬ್ಬ ಸಾಮಾನ್ಯ ನರನಂತೆ...
‘ಆವರ್ತ’ ಇದು ಆಶಾ ರಘು ಅವರ ಬೃಹತ್ ಕಾದಂಬರಿ. ಮೊದಲ ಪ್ರಯತ್ನದಲ್ಲಿಯೇ ಅವರು ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡಿದ್ದಾರೆ. ಇತಿಹಾಸವೂ ಅಲ್ಲದ, ಪೌರಾಣಿಕವೂ ಅಲ್ಲದ ತಮ್ಮದೇ ಆದ ವಿಶ್ವಾಮಿತ್ರ ಸೃಷ್ಟಿಯೊಂದನ್ನು ಅವರು ಈ ಕೃತಿಯಲ್ಲಿ ಸಾಧಿಸಿದ್ದಾರೆ. ಇತಿಹಾಸವೆಂದೇ ಭ್ರಮೆ ಹುಟ್ಟಿಸುವ ಕಾಲ್ಪನಿಕ ಕಥಾನಕಗಳು ಕನ್ನಡಕ್ಕೆ ಹೊಸತೇನೂ ಅಲ್ಲ. ಆದರೆ ಈ ಕೃತಿಯ ಘಟನೆಗಳು ನಡೆಯುವುದು ಕ್ರಿಸ್ತನಿಗೂ ಪೂರ್ವ ಕಾಲದಲ್ಲಿ. ಅಪಾರವಾದ ಪಾತ್ರಪ್ರಪಂಚ, ಅವುಗಳ ನಡುವಿನ ಸಂಬಂಧಗಳನ್ನು ನಿರ್ವಹಿಸುವಲ್ಲಿಯ ಶ್ರದ್ಧೆ ಗಮನ ಸೆಳೆಯುತ್ತದೆ. ಮನುಷ್ಯನ ಮನೋವ್ಯಾಪಾರವೇ ಆವರ್ತ ಕಾದಂಬರಿಯ...
ಅವ್ವ ಎಂಬುದು ಒಂದು ಜಾಗತಿಕ ವಿಸ್ಮಯ. ಅವ್ವ ದೇಶ ಕಾಲಾತೀತವಾದ ಒಂದು ಅನುಭವ. ಅವ್ವ ನಿನ್ನೆಯ ನೆನಪು, ಇಂದಿನ ಮೆಲಕು, ನಾಳೆಯ ಕನಸು ಕೂಡ. ಕಣ್ಣರಿಯದುದನ್ನು ಕರುಳರಿಯಿತು ಎನ್ನುತ್ತಾರೆ. ಕರುಳು ಸಂಬಂಧ ಎನ್ನುತ್ತಾರೆ ಪ್ರಾಜ್ಞರು. ಕರುಳ ಬಳ್ಳಿಯಿಂದ ಹೊಕ್ಕುಳ ಹುರಿಯನ್ನು ಕತ್ತರಿಸಿ ಈ ಭೂಮಂಡಲದಲ್ಲಿ ತನ್ನ ಕುಡಿಯನ್ನು ಕಸಿ ಮಾಡುವ ಅವ್ವ ಕೆಲವರಿಗೆ ಒಗಟು, ಕೆಲವರಿಗೆ ಸುಂದರ ಕಾವ್ಯ, ಕೆಲವರಿಗೆ ಸುಭಾಷಿತ. ಅವ್ವ ಎಲ್ಲರಿಗೂ ಬೇಕು ಅದಕು ಇದಕು ಎದಕೂ. ಸಾಹಿತ್ಯ ಕ್ಷೇತ್ರದಲ್ಲಿ ಮ್ಯಾಕ್ಸಿಂ ಗಾರ್ಕಿ ತಮ್ಮ...
ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಡಾ.ನಾ.ಮೊಗಸಾಲೆಯವರು ಇದೀಗ ‘ದೇವರು ಮತ್ತೆ ಮತ್ತೆ’ ಎಂಬ ಹತ್ತನೆಯ ಸಂಕಲನವನ್ನು ಹೊರತಂದಿದ್ದಾರೆ. ಅವರ ಈ ಮೊದಲಿನ ಕೃತಿ ‘ಕಾಮನೆಯ ಬೆಡಗು’ ಪ್ರಕಟವಾಗಿದ್ದು ೨೦೧೦ರಲ್ಲಿ. ಅಂದರೆ ಅಲ್ಲಿಂದ ಈಚೆಗೆ ಮೂರೂವರೆ ವರ್ಷಗಳಲ್ಲಿ ಅವರು ಬರೆದ ೮೫ ಕವಿತೆಗಳು ಈ ಸಂಕಲನದಲ್ಲಿವೆ. ಸರಾಸರಿ ವರ್ಷಕ್ಕೆ ಇಪ್ಪತ್ತೈದು, ತಿಂಗಳಿಗೆ ಎರಡರಂತೆ ಅವರು ಕವಿತೆಗಳನ್ನು ಬರೆಯುತ್ತಿದ್ದಾರೆ ಎಂಬುದು ಗಣಿತದ ಲೆಕ್ಕಾಚಾರ. ಕೇವಲ ಕವಿತೆ ಮಾತ್ರವಲ್ಲ, ಕತೆಗಳು, ಕಾದಂಬರಿ, ವ್ಯಕ್ತಿಚಿತ್ರ, ಅಂಕಣ ಬರೆಹ ಹೀಗೆ ಸಾಹಿತ್ಯದ ವಿವಿಧ...
ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು. ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ...
ಕನ್ನಡಿಗರ ವಿಮರ್ಶನ ಪ್ರಜ್ಞೆಯನ್ನು ಸದಾ ಕೆಣಕುತ್ತಿರುವ ವಿಶೇಷ ಕವಿಗಳಲ್ಲಿ ವರಕವಿ ಅಂಬಿಕಾತನಯ ದತ್ತರು ಒಬ್ಬರು. ದ.ರಾ.ಬೇಂದ್ರೆ ಬದುಕಿನಲ್ಲಿ ಬಹಳ ಬೆಂದವರು. ಬೆಂದರಷ್ಟೆ ಬೇಂದ್ರೆಯಾಗುತ್ತಾರೆ ಎಂದು ಅವರು ಹೇಳುತ್ತಿದ್ದರು. ಹೀಗಿದ್ದರೂ ಅವರು ತಮ್ಮ ನೋವನ್ನು ಇತರರಿಗೆ ಹಂಚಲಿಲ್ಲ. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ !’ ಎಂದು ಅವರು ಹೇಳಿದರು. ಅವರ ಮಟ್ಟಿಗೆ ಹೇಳುವುದಾದರೆ ಪಟ್ಟ ಪಾಡೆಲ್ಲವೂ ಹುಟ್ಟು ಹಾಡಾಗಿ ಹರಿಯಿತು. ಅದು ಕನ್ನಡಿಗರ ಭಾಗ್ಯ. ಕಾವ್ಯ ಅವರ ಪಾಲಿಗೆ ನಾದ ಲೀಲೆ. ಲೀಲೆ ಎಂಬುದು...
ಕನ್ನಡದ ಸಮಕಾಲೀನ ಕವಿಗಳಲ್ಲಿ ಪ್ರಮುಖರಾದ ಬಿ.ಆರ್.ಲಕ್ಷ್ಮಣರಾವ್್ ಅವರು ಕವಿತೆ ಬಿಟ್ಟು ಬೇರೇನೂ ಬರೆಯುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕವಿಗಳೇ ಆಗಿದ್ದಾರೆ. ಅವರು ಕತೆಗಳನ್ನೂ ಬರೆದಿದ್ದಾರೆ. ನಾಟಕ, ವ್ಯಕ್ತಿಚಿತ್ರ ಇಷ್ಟೇ ಅಲ್ಲ ಕಾದಂಬರಿಯನ್ನೂ ಬರೆದಿದ್ದಾರೆ. ಆದರೂ ಅವರು ಕವಿಯೆಂದೇ ಪ್ರಸಿದ್ದರು. ಅವರ ಅಭಿವ್ಯಕ್ತಿ ಪ್ರಕಟಗೊಳ್ಳಲು ಕಾತರಿಸುವುದು ಕಾವ್ಯ ಮಾಧ್ಯಮದ ಮೂಲಕವೇ. ‘ಗೋಪಿ ಮತ್ತು ಗಾಂಡಲಿನಾ’ದಿಂದ ಇಲ್ಲಿಯ ವರೆಗೆ ಈಗಾಗಲೆ ಒಂಬತ್ತು ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ಇದೀಗ ‘ನನ್ನ ಮಟ್ಟಿಗೆ’ ಎಂಬ ಹತ್ತನೆಯ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ 50 ಕವಿತೆಗಳಿವೆ....