ಕಾಲುಬಂದ ಕುರುವ ಕಥಾಸಂಕಲನ ಇದರಲ್ಲಿ 10 ಕತೆಗಳು ಇವೆ. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಇದನ್ನು 2011ರಲ್ಲಿ ಪ್ರಕಟಿಸಿತು. 1.ಚಂಪಾಲು ಸೆಟ್ಟಿಯೂ ಲಕುಮವ್ವಿಯೂ 2.ಬೆಟ್ಟದ ನೆಲ್ಲಿಕಾಯ ಸಮುದ್ರದೊಳಗಣ ಉಪ್ಪು 3.ಕುನ್ನಿಯೊಂದು ದಾಸನಾಗಿ ಸತ್ತುದರ ವಿವರಗಳು 4.ಗೋಕರ್ಣದಲ್ಲಿ ಹೀಗೊಂದು ಲಿಂಗಪೂಜೆ 5.ಕಾಲುಬಂದ ಕುರುವ 6.ಸಂಕರ 7.ವಿಲೋಮ 8.ಪತ್ತೆ 9.ಕ್ಷೇತ್ರೋತ್ಸವ 10.ನಿರಾಕರಣ ನನ್ನ ಬಗೆಗೆ ನಾನು ನಾನು ಒಬ್ಬ ಬರೆಹಗಾರ ಆಗುವ ಪೂರ್ವದಲ್ಲಿ ನಾನೊಬ್ಬ ಒಳ್ಳೆಯ ಓದುಗ ಆಗಿದ್ದೆ. ಈಗಲೂ ಒಳ್ಳೆಯ ಗ್ರಂಥಗಳನ್ನು ಓದಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ. ಹೊನ್ನಾವರ...
ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆ.ಸತ್ಯನಾರಾಯಯಣ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರು. ಸೃಜನ ಶಕ್ತಿಯ ಜೊತೆಯಲ್ಲಿ ವಿಮರ್ಶನ ಶಕ್ತಿಯನ್ನೂ ಮೇಳೈಸಿಕೊಂಡವರು. ಅವರ ಹೊಸ ಕೃತಿ `ಅವರವರ ಭವಕ್ಕೆ ಓದುಗರ ಭಕುತಿಗೆ' ಅವರ ಸೃಷ್ಟಿಕ್ರಿಯೆಯ ಹೊಸ ಸಾಮರ್ಥ್ಯದ ಕಡೆಗೆ ಬೆರಳು ತೋರಿಸುತ್ತದೆ. ಈ ಕೃತಿಯಲ್ಲಿ ಅವರು ಕನ್ನಡದ ಏಳು ಜನ ಹೆಸರಾಂತ ಸಾಹಿತಿಗಳು ರಚಿಸಿರುವ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಅದರ ಮೂಲಕ ಅವರು ಆತ್ಮಚರಿತ್ರೆ ಪ್ರಕಾರಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿರುವುದನ್ನು ಗಮನಿಸಬಹುದು. ಈ...
ಕೆ.ಸತ್ಯನಾರಾಯಣ ಅವರ ಕಪಾಳಮೋಕ್ಷ ಪ್ರವೀಣ ತಮ್ಮ ನಿರಂತರ ಬರೆಹಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಿರುವ ಕೆ.ಸತ್ಯನಾರಾಯಣ ಅವರು ಇದೀಗ ಕಪಾಳಮೋಕ್ಷ ಪ್ರವೀಣ' ಎಂಬ ನೂತನ ಕೃತಿಯಲ್ಲಿ ಕೆಲವು ಸ್ವಭಾವ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಈ ಬರೆಹಗಳ ಹೊಳಹು ಹೊಳೆದದ್ದು ಡಿವಿಜಿಯವರಜ್ಞಾಪಕ ಚಿತ್ರಶಾಲೆ’ ಎಂಬ ಕೃತಿಯಿಂದ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಗೆಯೇ ಜಾರ್ಜ್ ಆರ್ವೆಲ್ಲರ ಬರೆಹಗಳೂ ಅವರ ಮೇಲೆ ಪ್ರಭಾವ ಬೀರಿರಬಹುದು. ತುದಿವಾದಿಗಳು' ಬರೆಹದಲ್ಲಿ ಅವರು ಆರ್ವೆಲ್‌ರ,ಒಬ್ಬ ಮನುಷ್ಯ ನಮಗೆ ವೈಯಕ್ತಿಕ ಸ್ತರದಲ್ಲಿ ಪರಿಚಯವಾದಮೇಲೆ, ಆತ್ಮೀಯತೆ ಮೂಡಿದ...
ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಪುರಾಣಿಕರ ಕೊನ್ನಾರ ಕಿಂಕಿಣಿ' ಕಾದಂಬರಿಯು ಅವರ ಬರೆವಣಿಗೆಯ ಆರಂಭದ ದಿನಗಳಲ್ಲಿ ರಚನೆಗೊಂಡಿದ್ದು. ಇದು ಪ್ರಕಟವಾದದ್ದು 1961ರ ಆಗಸ್ಟ್ ತಿಂಗಳಿನಲ್ಲಿ. ಸರಿಸುಮಾರು ಅರವತ್ತು ವರ್ಷಗಳ ನಂತರ ಈ ಕಾದಂಬರಿಯ ಮರು ಅವಲೋಕನ ಮಾಡುವಾಗ ಕೆಲವು ಹೊಳಹುಗಳು ನಮಗೆ ಇರಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ನವೋದಯ ಮತ್ತು ಪ್ರಗತಿಶೀಲ ಲೇಖಕರು ಕಾದಂಬರಿ ಪ್ರಕಾರಕ್ಕೆ ಒಂದು ಗಟ್ಟಿಯಾದ ಪರಂಪರೆಯನ್ನು ಹಾಕಿಕೊಟ್ಟಿದ್ದರು. ಐತಿಹಾಸಿಕ ಕಾದಂಬರಿಗಳು, ಸಾಮಾಜಿಕ ಕಾದಂಬರಿಗಳು, ಅನ್ಯಭಾಷೆಯಿಂದ ಅನುವಾದಗೊಂಡ ಕಾದಂಬರಿಗಳು ಎಲ್ಲವೂ ಹುಲುಸಾಗಿ ಎಂಬಂತೆ...
ನನಗೆ ಅರ್ಥವಾಗದ ಅದೆಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಇವೆ ಎಂಬುದು ನನಗೆ ಅರ್ಥವಾಗಿದ್ದು ಅವತ್ತೇ, ಅದೇಕ್ಷಣದಲ್ಲಿ. ಅದು ಅರಿವಾದೊಡನೆಯೇ ನನ್ನ ಬಗೆಗೇ ನನಗೆ ಕ್ಷುಲ್ಲಕ ಅನ್ನಿಸಿಬಿಟ್ಟಿತು. ಬಾವಿಯೊಳಗಿನ ಕಪ್ಪೆಯಂತೆ ಬದುಕಿದ್ದೆನಲ್ಲ ಇಷ್ಟು ದಿನ ಅನ್ನಿಸಿತು. ಮೆಲ್ಲನೆ ಅತ್ತ ಇತ್ತ ಕಣ್ಣು ಹೊರಳಿಸಿದೆ. ನಿಜಕ್ಕೂ ಆ ಕ್ಷಣದಲ್ಲಿ ನಿನ್ನ ನೆನಪು ಬಂದುಬಿಟ್ಟಿತು. ಇದೀಗ ನೀನು ನನ್ನ ಜೊತೆಯಲ್ಲಿ ಇದ್ದಿದ್ದರೆ.. ನಿನ್ನ ಕೋಮಲ ಕೈ ಬೆರಳುಗಳು ನನ್ನ ಭುಜವನ್ನು ಮೆಲ್ಲಾತಿಮೆಲ್ಲನೆ ಅದುಮದೆ ಇರುತ್ತಿರಲಿಲ್ಲ. ಭರವಸೆಯ ಬೆಳಕಿನ ಕಿಡಿ ನಿನ್ನ ಕಣ್ಣಿಂದ...
ಅವನು ಮೈತುಂಬಿಕೊಂಡ ನಾಗಬೆತ್ತದ ಹಾಗೆ ಇದ್ದ. ತುಂಬ ಸಣಕಲು. ನೆಟ್ಟಗೆ ಅಂದರೆ ನೆಟ್ಟಗೆ ನಿಲವು. ನಾಗಬೆತ್ತದ ಮೇಲಿನ ಕಪ್ಪು ಬಳೆಗಳಂತೆ ಅವನ ಪಕ್ಕೆಲಬುಗಳೆಲ್ಲವೂ ಕಾಣಿಸುತ್ತಿದ್ದವು. ಕೆಂಪಗಿನ ದಪ್ಪಗಿರುವ ಒಂದು ದಾರವನ್ನು ಉಡಿದಾರ ಮಾಡಿಕೊಂಡಿದ್ದ. ಆರು ಮೊಳದ ಮಗ್ಗದ ಪಂಚೆಯ ಒಂದು ತುದಿಯನ್ನು ಕಚ್ಚೆಯಾಗಿ ಹಿಂಬದಿಗೆ ಸಿಕ್ಕಿಸಿಕೊಂಡು ಅದರ ಉಳಿದ ಭಾಗವನ್ನು ಲುಂಗಿಯಂತೆ ಅಡ್ಡ ಸುತ್ತಿಕೊಳ್ಳುತ್ತಿದ್ದ. ಅದು ಬಿಟ್ಟರೆ ಮೈಯೆಲ್ಲ ಬೋಳು ಬೋಳು. ಸೊಂಟಕ್ಕೆ ಕತ್ತಿ ಸಿಕ್ಕಿಸಿಕೊಳ್ಳುವ ಒಂದು ಕೊಕ್ಕೆಯನ್ನು ಕಟ್ಟಿಕೊಳ್ಳುತ್ತಿದ್ದ. ಆದರೆ ಮನೆಯಿಂದ ಅವನು ಕತ್ತಿಯನ್ನು ತರುತ್ತಿರಲಿಲ್ಲ....
ನೇಮಯ್ಯನದು ಇದು ಮರುಹುಟ್ಟು ಎಂದು ಹೊಳೆಸಾಲಿನವರು ಮಾತನಾಡಿಕೊಳ್ಳುತ್ತಾರೆ. ತನ್ನ ಬಗ್ಗೆ ಈ ಜನ ಹೀಗೆಲ್ಲ ಮಾತನಾಡುತ್ತಾರೆ ಎಂಬುದು ಸ್ವತಃ ನೇಮಯ್ಯನಿಗೇ ಗೊತ್ತಿರಲಿಲ್ಲ. ಈ ನೇಮಯ್ಯನನ್ನು ಒಂದು ಪದದಲ್ಲಿ ಹೇಳಬೇಕೆಂದರೆ ಅದು ಸಾಧ್ಯವೇ ಇಲ್ಲ. ವೃತ್ತಿಯಿಂದ ಹೇಳೋಣವೆ? ಒಂದೆಕರೆಯಷ್ಟು ಬಾಗಾಯ್ತ ಇತ್ತು. ಹೀಗಾಗಿ ಅವನನ್ನು ರೈತ ಎನ್ನಬಹುದೆ? ಊರಲ್ಲಿಯ ಮಾಸ್ತಿಮನೆಯ ಪೂಜೆಯನ್ನು ಅವನೇ ಮಾಡಿಕೊಂಡು ಬಂದಿದ್ದ. ಅಂದರೆ ಅವನನ್ನು ಪೂಜಾರಿ ಎನ್ನಬಹುದೆ? ಊರಲ್ಲಿಯ ಮಕ್ಕಳಿಗೆ ಮುದುಕರಿಗೆ ದೆವ್ವದ ಕಾಟ ಇದೆ ಎಂದು ಯಾರಾದರೂ ಅವನ ಬಳಿಗೆ ಬಂದರೆ ಅವನು...
ಕೆ.ಸತ್ಯನಾರಾಯಣ ಅವರ- ಮಹಾ ಕಥನದ ಮಾಸ್ತಿ ಕನ್ನಡದ ಪ್ರಮುಖ ಗದ್ಯ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಆಸ್ತಿ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಓದುತ್ತ, ಅವರ ಪ್ರಭಾವಕ್ಕೆ ಒಳಗಾಗುತ್ತ, ಆ ಪ್ರಭಾವವನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತ, ತಮ್ಮದೇ ಒಂದು ಕಥನ ಶೈಲಿಯನ್ನು ರೂಢಿಸಿಕೊಂಡವರು. ಮಾಸ್ತಿಯವರ ಪ್ರಥಮ ಕಥಾ ಸಂಕಲನ ಪ್ರಕಟವಾಗಿ ನೂರು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ಮಾಸ್ತಿಯವರ ಕತೆಗಳನ್ನು ಸುದೀರ್ಘವಾಗಿ ಅಧ್ಯಯನ ಮಾಡಿ `ಮಹಾ ಕಥನದ ಮಾಸ್ತಿ’ ಎಂಬ...
ಮರಾಠಿ ಸಾಹಿತ್ಯದಲ್ಲಿ ಆತ್ಮಕಥನವು ಅತ್ಯಂತ ಪ್ರಬಲವಾದ ಅಭಿವ್ಯಕ್ತಿಯಾಗಿದೆ. ಅಲ್ಲಿಯ ಸತ್ವಶಾಲಿ ಮತ್ತು ಬೆಂಕಿಯುಂಡೆಯಂಥ ಬರೆಹಗಳು ಅವತರಿಸಿದ್ದು ಆತ್ಮಕಥನದ ರೂಪದಲ್ಲಿಯೇ. ಅದರಲ್ಲಿಯೂ ದಲಿತ ವರ್ಗದವರು ಬರೆದಿರುವ ಆತ್ಮಕಥನಗಳು ಅದರಲ್ಲಿಯ ಹಸಿಹಸಿಯಾದ ಮತ್ತು ಅಕ್ಷರಲೋಕಕ್ಕೆ ಮುಖಾಮುಖಿಯಾದವರ ತಾಜಾತನದಿಂದಾಗಿ ಉತ್ಕೃಷ್ಟ ಸಾಹಿತ್ಯವಾಗಿಯೂ ಮನ್ನಣೆ ಗಳಿಸಿದವು. ಆ ಸಾಲಿನಲ್ಲಿ ನಿಲ್ಲುವ ಆತ್ಮಕಥನ ಪ್ರಸಿದ್ಧ ವಿಜ್ಞಾನಿ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ’. ಇದಕ್ಕೊಂದು ಉಪಶೀರ್ಷಿಕೆ ‘ಅಂಬೇಡ್ಕರ್‌ವಾದಿಯ ಆತ್ಮಕಥೆ’ ಎಂದು. ಇದನ್ನು ಬಿ.ಶ್ರೀಪಾದ ಅವರು ಭಾವಾನುವಾದ ಮಾಡಿದ್ದಾರೆ. ಮೂಲ ಆತ್ಮಕತೆಯನ್ನು ಓದುವಾಗ ತಮಗೆ ಮುಖ್ಯವೆನಿಸಿದ್ದು ಕನ್ನಡದ...
ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್.ಎಲ್. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.ಆದರೆ ಈ ಎಲ್ಲ...