*ಪ್ರಾಮಾಣಿಕತೆಗೆ ಪುರಾವೆ ಒದಗಿಸುವ ಸ್ಥಿತಿ ಬರಬಾರದು ಈಚಲುಮರ ಯಾವುದಕ್ಕೆ ಪ್ರಸಿದ್ಧ ಹೇಳಿ? ಈ ಮರದಿಂದ ಶೇಂದಿಯನ್ನು ಇಳಿಸುತ್ತಾರೆ. ಈ ಮರದ ಬುಡದಲ್ಲಿ ಕುಳಿತು ಏನನ್ನಾದರೂ ಕುಡಿದರೆ ಅದು ಶೇಂದಿಯಲ್ಲದೆ ಮತ್ತೇನು ಇದ್ದೀತು? ಇದು ಸಾಮಾನ್ಯವಾದ ತರ್ಕ. ಈ ರೀತಿ ತರ್ಕ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ. ಮಜ್ಜಿಗೆಯನ್ನು ಮಾಡುವುದು ಮನೆಯಲ್ಲಿ ತಾನೆ? ಮನೆಯಲ್ಲಿ ಮಜ್ಜಿಗೆ ಕುಡಿಯದೆ ಈಚಲುಮರದ ಬುಡಕ್ಕೆ ಹೋಗಿ ಏಕೆ ಕುಡಿಯಬೇಕು? ನಾವು ಯಾವುದೇ ಕೆಲಸವನ್ನು ಮಾಡಿದರೂ ಅದು ಪಾರದರ್ಶಕವಾಗಿರಬೇಕು. ಯಾರೂ ನಮ್ಮನ್ನು ಅನುಮಾನಿಸುವುದಕ್ಕೆ ಅವಕಾಶವನ್ನು...
*ಮಾಡಬಾರದ್ದನ್ನು ಮಾಡಿ ಫಜೀತಿಗಿಟ್ಟುಕೊಳ್ಳುವುದು ಮಾಡಬಾರದ್ದನ್ನು ಮಾಡಲು ಹೋಗಿ ಪೆಟ್ಟು ತಿಂದವರನ್ನು ಕಂಡಾಗ ಇಂಗು ತಿಂದ ಮಂಗನಂತಾದ ಎದು ಹೇಳುವುದನ್ನು ಕೇಳಿದ್ದೇವೆ. ಮಂಗ ಯಾವತ್ತಾದರೂ ಇಂಗನ್ನು ತಿಂದುದನ್ನು ಕಂಡಿದ್ದೀರಾ? ಇಂಗು ನಮ್ಮ ನೆಲದ ಬೆಳೆ ಏನಲ್ಲ. ಹೀಗಿರುವಾಗ ಮಂಗ ಇಂಗು ತಿನ್ನುವುದಾದರೂ ಹೇಗೆ? ಇಂಗು ತಿಂದರೆ ಮಂಗನಿಗೆ ಏನಾಗುತ್ತದೆ? ಇಂಗಿನ ಮೂಲ ಇರಾನ್. ಅಫ್ಘಾನಿಸ್ತಾನದಲ್ಲೂ ಇಂಗನ್ನು ಬೆಳೆಯುತ್ತಾರೆ. ಅದೇ ರೀತಿ ಟೆಕ್ಸಾಸ್- ಮೆಕ್ಸಿಕೋದ ಗಡಿಯಲ್ಲೂ ಇಂಗನ್ನು ಬೆಳೆಯುತ್ತಾರೆ. ಸುಮಾರು ಎರಡು ಮೀಟರ್ ಎತ್ತರಕ್ಕೆ ಬೆಳೆಯುವ ಇಂಗದ ಗಿಡದ ಕಾಂಡ...
*ಪಕ್ಷಾಂತರಿಗಳು ಅವತಾರ ಪುರುಷರು ರಾಜಕೀಯದಲ್ಲಿ ತತ್ವ ಆದರ್ಶಗಳು ಮುಖ್ಯವಾಗಿದ್ದ ಕಾಲ ಒಂದಿತ್ತು. ಅಧಿಕಾರವೇ ಮುಖ್ಯ ಎನ್ನುವ ಕಾಲವೂ ಬಂತು. ಅಧಿಕಾರ ರಾಜಕಾರಣಿಗಳಿಗೆ ಮುಖ್ಯವಾಗತೊಡಗಿದಾಗ ತತ್ವಗಳಿಗೆ ತಿಲಾಂಜಲಿ ಬಿಟ್ಟರು. ಬೆಳಿಗ್ಗೆ ಒಂದು ಪಕ್ಷ, ಸಂಜೆ ಇನ್ನೊಂದು ಪಕ್ಷ, ರಾತ್ರಿ ಮಗದೊಂದು ಪಕ್ಷ ಎನ್ನುವ ಮಟ್ಟಿಗೆ ರಾಜಕಾರಣ ಕುಲಗೆಟ್ಟು ಹೋಯಿತು. 1977ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹಿಂದಕ್ಕೆ ಪಡೆದು ಚುನಾವಣೆಯನ್ನು ಘೋಷಣೆ ಮಾಡಿದ ಬಳಿಕ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನರಾಂ ಅವರು ಪಕ್ಷವನ್ನು ತೊರೆದು ಹೊಸ...
*ಮಾರ್ಗಪ್ರವರ್ತಕರಿಗೆ ಹೀಗೆನ್ನುತ್ತಾರೆ ಹೇಳಿಕೇಳಿ ಆನೆ ದೊಡ್ಡ ಪ್ರಾಣಿ. ದೊಡ್ಡದನ್ನು ವರ್ಣಿಸುವಾಗಲೆಲ್ಲ ಗಜಗಾತ್ರ ಎಂದು ಹೇಳುವುದು ರೂಢಿ. ಇಂಥ ಆನೆಗೆ ನಡೆಯುವುದಕ್ಕೆ ಯಾರೂ ದಾರಿಯನ್ನು ನಿರ್ಮಿಸಿಕೊಡಬೇಕಾಗಿಲ್ಲ. ಅದು ಯಾವ ದಿಸೆಯಲ್ಲಿ ಹೋಗುತ್ತದೋ ಅಲ್ಲೊಂದು ಹೊಸ ಮಾರ್ಗ ನಿರ್ಮಾಣವಾಗಿಬಿಡುತ್ತದೆ. ಮುಂದೆ ಉಳಿದವರು ಆ ಮಾರ್ಗದಲ್ಲಿಯೇ ನಡೆಯಲು ಆರಂಭಿಸುತ್ತಾರೆ. ಹೀಗಾಗಿ ಆನೆ ನಡೆದುದೇ ಮಾರ್ಗ ಎಂಬ ಮಾತು ಚಾಲನೆಗೆ ಬಂತು. ಯಾವುದಾದರೂ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದವರು ಯಾರನ್ನೂ ಅನುಕರಿಸುವುದಿಲ್ಲ. ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡು ಮಾರ್ಗಪ್ರವರ್ತಕರು ಎನ್ನಿಸಿಕೊಂಡುಬಿಡುತ್ತಾರೆ. ಸಾಹಿತ್ಯ...
*ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಮನೋಭಾವ ಮುಖ್ಯ ಅಳಿಲು ಯಾರಿಗೆ ಗೊತ್ತಿಲ್ಲ ಹೇಳಿ? ಪುಟ್ಟದಾದ ಮುದ್ದುಮುದ್ದಾಗಿರುವ ಪ್ರಾಣಿ. ಈ ಪುಟ್ಟ ಪ್ರಾಣಿಯು ಏನಾದರೂ ಸೇವೆ ಮಾಡುವುದು ಸಾಧ್ಯವೆ? ಯಾರಾದರೂ ದೊಡ್ಡ ಕಾರ್ಯ ನಡೆಯುತ್ತಿರುವಲ್ಲಿ ಹೋಗಿ ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಟ್ಟು ತಮ್ಮ ಅಳಿಲು ಸೇವೆ ಸಂದಿತು ಎಂದು ಸಮಾಧಾನಪಟ್ಟುಕೊಳ್ಳುವುದು ಇದೆ. `ನಿಮ್ಮದೂ ನಡೆಯಲಿ ಅಳಿಲು ಸೇವೆ’ ಎಂದು ಕರೆ ಕೊಡುವುದನ್ನು ಕೇಳಿದ್ದೇವೆ. ಏನಿದು ಅಳಿಲು ಸೇವೆ ಎಂದು ಕೇಳಿದರೆ ಹಲವರಿಗೆ ಅದು ಗೊತ್ತಿರುವುದಿಲ್ಲ. ರಾಮಾಯಣ ಗೊತ್ತಲ್ಲವೆ? ರಾವಣ ಸೀತೆಯನ್ನು ಅಪಹರಿಸಿಕೊಂಡು...
*ಅಲ್ಪ ಅರಿವನ್ನೇ ಎಲ್ಲೆಡೆಗೂ ಬಳಸುವವನು ಹಳ್ಳಿಗಳಲ್ಲಿ ನಾಟಿ ವೈದ್ಯರು ಇರುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆಲ್ಲ ಅವರೇ ಔಷಧವನ್ನು ನೀಡುವವರು. ತರಾವರಿ ಕಾಯಿಲೆಗಳಿಗೆ ಅವರಲ್ಲಿರುವುದು ಎರಡು ಮೂರು ಗಿಡಮೂಲಿಕೆಗಳ ಔಷಧ ಮಾತ್ರ. ಅವರ ಜ್ಞಾನ ಸೀಮಿತವಾದದ್ದು. ಆದರೆ ಏನು ಮಾಡುವುದು? ಅವರನ್ನು ಬಿಟ್ಟರೆ ಹಳ್ಳಿಯಲ್ಲಿ ಅನ್ಯರ ಗತಿ ಇಲ್ಲ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಅಳಲೆಕಾಯಿಯ ಔಷಧೀಯ ಗುಣ. ಅದು ಬಹು ರೋಗಗಳಿಗೆ ಔಷಧವಾಗುತ್ತದೆ. ಈ ಕಾರಣಕ್ಕಾಗಿಯೇ ಹಳ್ಳಿಯ ವೈದ್ಯರನ್ನು ಅಳಲೆಕಾಯಿ ಪಂಡಿತರು ಎಂದು ಕರೆಯುವುದು. ಅದೇ ರೀತಿ ಹಳ್ಳಿಯಲ್ಲಿ...
*ಕತ್ತಿ ಅಲಗಿನೊಂದಿಗೆ ಸರಸವಾಡಿದಂತೆ ಇದು ಕಠಿಣವಾದ ಯಾವುದಾದರೂ ಕೆಲಸವನ್ನು ಸಾಧಿಸುವುದಿದ್ದರೆ ಅದರ ಅಸಾಧ್ಯತೆಯನ್ನು ಹೇಳುವುದಕ್ಕೆ ಅದೊಂದು `ಅಸಿಧಾರಾವ್ರತ ಕಣಯ್ಯ’ ಎಂದು ಹೇಳುವುದಿದೆ. ಅಸಿಧಾರಾ ಎಂದರೆ ಖಡ್ಗದ ಅಲಗು ಎಂದರ್ಥ. ಇದೇನು ಖಡ್ಗದ ಅಲಗಿನ ವ್ರತ? ಯವ್ವನವತಿಯಾದ ಪತ್ನಿ ಹಾಸುಗೆಯಲ್ಲಿ ಪಕ್ಕದಲ್ಲಿ ಮಲಗಿರುತ್ತಾರೆ. ಗಂಡ ಹೆಂಡತಿಯ ನಡುವೆ ಒರೆಯನ್ನು ತೆಗೆದ ಹರಿತವಾದ ಖಡ್ಗವನ್ನು ಇಟ್ಟು ರಾತ್ರಿಯನ್ನು ಕಳೆಯುವುದೇ ಈ ಅಸಿಧಾರಾ ವ್ರತ. ಮನಸ್ಸು ಚಂಚಲವಾದರೆ ಖಡ್ಗದ ಮೇಲೆ ಶರೀರ ಬಿದ್ದು ಗಾಯವಾಗುವುದು ಖಂಡಿತ. ಯವ್ವನವತಿ ಹೆಂಡತಿಯ ಪಕ್ಕದಲ್ಲಿ ಮನಸ್ಸನ್ನು...
*ಮಕ್ಕಳಾಟದಿಂದ ದೊಡ್ಡವರಾಟದ ತನಕ ತನ್ನ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲನಾದ ವ್ಯಕ್ತಿ, ತಂಡದಲ್ಲಿದ್ದೂ ತಂಡದ ಒಟ್ಟಾರೆ ಪ್ರದರ್ಶನಕ್ಕೆ ಮಹತ್ವದ ಕಾಣಿಕೆ ನೀಡಲು ಅಸಮರ್ಥನಾದ ವ್ಯಕ್ತಿಯನ್ನು ಕುರಿತು, `ಆತ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯಕ್ತಿ ಆಟಕ್ಕಿದ್ದಾನೆ ಎಂದು ಯಾವಾಗ ಪರಿಗಣಿತನಾಗುತ್ತಾನೆ? ಅವನಿಂದ ಮಹತ್ವದ ಕೊಡುಗೆತಂಡಕ್ಕೆ ದೊರೆತಾಗ ಮಾತ್ರ. ಕೇವಲ ತಲೆ ಎಣಿಕೆಯಾದರೆ ಅದರಿಂದ ಪ್ರಯೋಜನವಿಲ್ಲ. ಲೆಕ್ಕದಲ್ಲಿ ಸೇರಬೇಕೆಂದರೆ ಮಹತ್ವದ ಕೊಡುಗೆ ಕೊಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ತಂಡದಿಂದಲೂ ಹೊರಬೀಳುವ ಅಪಾಯ ಇರುತ್ತದೆ. ಕಲವು ಕ್ರೀಡೆಗಳಲ್ಲಿ ಎಲ್ಲ ಪಂದ್ಯಗಳು ಮುಗಿಯುವ...
*ಅಧಿಕಾರದಿಂದ ತೆಗೆದುಹಾಕುವುದು ಬದುಕಿನ ಏಳುಬೀಳುಗಳನ್ನು ಸಂಕೇತಿಸುತ್ತಾನೆ. ಚಂದ್ರ ಶುಕ್ಲಪಕ್ಷದಲ್ಲಿ ದೊಡ್ಡವನಾಗುತ್ತ ಹೋಗಿ ಹುಣ್ಣಿಮೆಯ ದಿನ ಪೂರ್ಣಚಂದ್ರನಾಗುತ್ತಾನೆ. ಕೃಷ್ಣಪಕ್ಷದಲ್ಲಿ ಕೃಶಗೊಳ್ಳುತ್ತ ಹೋಗುವ ಚಂದ್ರ ಅಮಾವಾಸ್ಯದ ದಿನ ಮಾಯವಾಗಿಬಿಡುತ್ತಾನೆ. ಕಷ್ಟ ಸುಖಗಳು ಒಂದೇ ರೀತಿ ಇರುವುದಿಲ್ಲ ಎಂಬ ತತ್ವವನ್ನು ಸಾಂತ್ವನಕ್ಕಾಗಿ ಹೇಳುವಾಗ ಚಂದ್ರನ ಉದಾಹರಣೆ ತೆಗೆದುಕೊಳ್ಳುತ್ತಾರೆ. ಇನ್ನು, ಯಾರಾದರೂ ಸಚಿವರನ್ನು ಸಂಪುಟದಿಂದ ಕೈಬಿಟ್ಟಾಗ ಆ ಸಚಿವರಿದೆ ಅರ್ಧಚಂದ್ರ ಪ್ರಯೋಗವಾಗಿದೆ ಎಂದು ಪತ್ರಿಕೆಗಳಲ್ಲಿ ಬಳಸುತ್ತಾರೆ. ಅರ್ಧಚಂದ್ರ ಅಧಿಕಾರ ಕ್ಷಯದ ಸಂಕೇತ ಇಲ್ಲಿ. ಹಿಂದೆ ಧನುರ್ಬಾಣಗಳಲ್ಲಿ ಯುದ್ಧವನ್ನು ಮಾಡುತ್ತಿದ್ದಾಗ ಅರ್ಧಚಂದ್ರಾಕೃತಿಯ ಬಾಣವನ್ನು ಪ್ರಯೋಗಿಸುತ್ತಿದ್ದರು....
*ಪ್ರಜೆ-ಪ್ರಭುವಿನ ನಡುವಿನ ಕೊಂಡಿ ಬಹಳ ಮಾತನಾಡುವ ಹೆಣ್ಣುಮಕ್ಕಳನ್ನು ಕಂಡಾಗ `ಒಳ್ಳೆ ಅಡಗೂಳಜ್ಜಿ ಹಾಗೆ ಮಾತಾಡ್ತಾ ಇದ್ದೀಯಾ’ ಎಂದು ಮೂದಲಿಸುವವರು ಇದ್ದಾರೆ. ಯಾರು ಈ ಅಡಗೂಳಜ್ಜಿ? ಅಡುಗೆಯನ್ನು ಮಾಡಿ ಬಡಿಸುವವಳು ಅಡಗೂಳಜ್ಜಿ. ಹಿಂದಿನ ಕಾಲದಲ್ಲಿ ಈಗಿನಂತೆ ಊರುಗಳಲ್ಲಿ ಹೊಟೇಲುಗಳು ಇರಲಿಲ್ಲ. ದಾರಿಯ ಪಕ್ಕದಲ್ಲಿ ಪ್ರಯಾಣಿಕರಿಗೆ ಊಟವನ್ನು ಮಾಡಿ ಹಾಕಲು ಅಡಗೂಳಜ್ಜಿಯರು ಮನೆಗಳನ್ನು ಮಾಡಿಕೊಂಡಿರುತ್ತಿದ್ದರು. ಪ್ರಯಾಣಿಕರು ಇಂಥ ಅಡಗೂಳಜ್ಜಿಯರ ಮನೆಗಳಲ್ಲಿ ನಿಂತು ವಿಶ್ರಮಿಸಿಕೊಂಡು ಆಹಾರ ಸೇವಿಸಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು. ಪ್ರಯಾಣಿಕರು ಬರುತ್ತಾ ಹೋಗುತ್ತಾ ಇರುವುದರಿಂದ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ...