*ಬಹಳ ಸುಲಭವಾಗಿ ಸಾಧ್ಯವಾಗುವಂಥದ್ದು ಅವನಿಗೇನಪ್ಪ ಎಲ್ಲವೂ ` ನೀರು ಕುಡಿದಷ್ಟು ಸುಲಭ' ಎಂದು ಸಾಮಾನ್ಯರು ಹೇಳುತ್ತಾರೆ. ಅದನ್ನೇ ಪಂಡಿತರು, ಅವನಿಗೆ ಎಲ್ಲವೂ` ಕರತಲಾಮಲಕ’ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಬಹಳ ಪ್ರೀತಿ ಉಳ್ಳವರು ಅವನಿಗೆ ಎಲ್ಲವೂ `ಅಂಗೈ ನೆಲ್ಲಿಕಾಯಿ’ ಎಂದು ಹೇಳುತ್ತಾರೆ. ಕರತಲಾಮಲಕ ಎನ್ನುವುದು ಸಂಸ್ಕೃತ ನುಡಿ. ಕರತಲ ಎಂದರೆ ಅಂಗೈ. ಅಮಲಕ ಎಂದರೆ ನೆಲ್ಲಿಕಾಯಿ. ನೆಲ್ಲಿಕಾಯಿ ಸುಲಭದಲ್ಲಿ ಸಿಗುವಂಥದ್ದೆ? ಅಲ್ಲವೇ ಅಲ್ಲ. ಕಾಡಿಗೆ ಹೋಗಬೇಕು. ಕಲ್ಲು ಮುಳ್ಳು ತುಳಿದು ಮರ ಏರಿ ಅದನ್ನು ಕಿತ್ತು ತರುವವರೆಗೆ...
*ಶ್ರೀರಾಮನನ್ನೇ ಹಿಡಿದಿತ್ತು ಈ ಬಾಹು ಹತ್ತು ಹಲವು ವಿಷಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವವರನ್ನು ಕಂಡಾಗ `ಅದೇನು ಕಬಂಧಬಾಹು ಅವನದು' ಎಂದು ಹೇಳುವುದಿದೆ. ನೈಸರ್ಗಿಕ ಪ್ರಕೋಪಗಳನ್ನು ಹೇಳುವಾಗಲೂಕಾಲ ತನ್ನ ಕಬಂಧಬಾಹುವನ್ನು ಬಳಸಿ ಎಲ್ಲವನ್ನೂ ತನ್ನ ಒಡಲೊಳಗೆ ಸೆಳೆದುಕೊಂಡ’ ಎಂದು ವರ್ಣಿಸುವುದಿದೆ. ಸುನಾಮಿಯಂಥ ಅನಾಹುತವಾದಾಗ ಸಮುದ್ರನಿಗೆ ಕಬಂಧಬಾಹು'ವನ್ನು ಆರೋಪಿಸುವುದಿದೆ. ಯಾರೀತ ಕಬಂಧ? ಅದೇನು ಕಬಂಧಬಾಹು? ಕಬಂಧ ಎನ್ನುವವ ಒಬ್ಬ ರಾಕ್ಷಸ. ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಲಕ್ಷ್ಮಣನೊಡನೆ ಆಕೆಯನ್ನು ಹುಡುಕುತ್ತ ದಟ್ಟ ಕಾಡಿನಲ್ಲಿ ಅಲೆಯುತ್ತಿದ್ದಾಗ ಕಬಂಧ ತನ್ನ ಬಾಹುಗಳನ್ನು ಚಾಚಿ...
*ತನಗೆ ತಾನೇ ಗುರುವಾಗುವ ಸಾಧನೆ ಏಕ ಮನಸ್ಸಿನಿಂದ ಯಾರ ಸಹಾಯವೂ ಇಲ್ಲದೆ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವ ವ್ಯಕ್ತಿಯನ್ನು ಕಂಡಾಗ, `ನೋಡಿ, ಅವನದು ಎಂಥ ಏಕಲವ್ಯ ಶ್ರದ್ಧೆ’ ಎಂದು ಮೆಚ್ಚುಗೆಯ ಮಾತನ್ನು ಆಡುತ್ತೇವೆ. ಮಹಾಭಾರತದಲ್ಲಿ ಏಕಲವ್ಯ ಅತ್ಯಂತ ಚಿರಪರಿಚಿತ ಪಾತ್ರವಾಗಿದ್ದಾನೆ. ಮೂಲತಃ ಏಕಲವ್ಯ ಯಾದವ ವಂಶದವನು. ಚಿಕ್ಕಂದಿನಲ್ಲಿಯೇ ಆತ ಕಾಡನ್ನು ಸೇರಿದ ಕಾರಣ ಮೂಲ ವಂಶದ ಕುರುಹು ಮರೆಯಾಯಿತು. ಆದರೆ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ಇಚ್ಛೆ ಮಾತ್ರ ಆತನಲ್ಲಿ ಬಲವಾಗಿ ಉಳಿಯಿತು. ಆತ ದ್ರೋಣಾಚಾರ್ಯರ ಬಳಿಗೆ ಬಂದು ವಿದ್ಯೆ ಕಲಿಸುವಂತೆ...
*ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು ನಮ್ಮೂರ ಶಂಕರ ಜೀವನದಲ್ಲಿ ನೆಲೆ ನಿಲ್ಲಲು ಏನೇನೋ ಮಾಡಿದ. ಮೊದಲು ಗೇರುಬೀಜದ ವ್ಯಾಪಾರ, ನಂತರ ಚಹಾದಂಗಡಿ, ನಂತರ ಕಲ್ಲಂಗಡಿ ಬೆಳೆ, ಐಸ್‌ಕ್ಯಾಂಡಿ ಫ್ಯಾಕ್ಟರಿ ಹೀಗೆ ಒಂದಾದ ಮೇಲೆ ಒಂದನ್ನು ಮಾಡುತ್ತ ಹೋದ. ಕೊನೆಗೆ ಅವನು ಸಿನಿಮಾ ಟಾಕೀಸಿನಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟವನ್ನೂ ಮಾಡಿದ. ಊರಿನಲ್ಲಿ, ಶಂಕರ ಈಗ ಏನು ಮಾಡ್ತಿದ್ದಾನೆ ಎಂದು ಯಾರನ್ನಾದರೂ ಕೇಳಿದರೆ, `ಎಲ್ಲ ಬಿಟ್ಟ ಬಂಗಿ ನೆಟ್ಟ' ಎಂದು ಹೇಳುತ್ತಾರೆ. ಶಂಕರನ ಇತ್ಯೋಪರಿ ಎಲ್ಲ ತಿಳಿದವರಿಗೆ...
*ಸ್ಪಷ್ಟ ನಿರ್ಧಾರ ಇಲ್ಲದವರ ಪರಿ ಇದು ಪ್ರತಿಯೊಬ್ಬರ ಬದುಕಿನಲ್ಲೂ ನಿರ್ಧಾರವನ್ನು ಕೈಗೊಳ್ಳಬೇಕಾದ ಕಾಲ ಬಂದೇ ಬರುತ್ತದೆ. ಆಗ ಯಾವುದು ಸರಿ ಯಾವುದು ಸರಿಯಲ್ಲ ಎಂಬ ದ್ವಂದ್ವ ಎದುರಾಗುತ್ತದೆ. ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು? ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ ಎನ್ನುವ ಸ್ಥಿತಿ. ಅದೂ ಇರಲಿ ಇದೂ ಇರಲಿ ಎಂಬ ಡೋಲಾಯಮಾನ ಸ್ಥಿತಿ. ಮನೆಯವರ ಒತ್ತಾಯಕ್ಕೆ ಒಂದು ಮದುವೆ, ಮನಸ್ಸಿನ ಒತ್ತಾಯಕ್ಕೆ ಒಂದು ಮದುವೆ ಮಾಡಿಕೊಂಡ ಇಬ್ಬರು ಹೆಂಡಿರ ಮುದ್ದಿನ ಗಂಡನ ಗೋಳಾಟ ಇದು. ಆಯ್ಕೆ...
*ಹಳೆಯದಕ್ಕೇ ಜೋತುಬೀಳುವವನು ಅವನ್ಯಾವನಪ್ಪ ಓಬಿರಾಯನ ಕಾಲದವನು- ಎಂದು ಸಾಮಾನ್ಯವಾಗಿ ಅಂದು ಬಿಡುತ್ತಾರೆ. ಹೊಸತು ಬಂದು ಹಳೆಯದನ್ನೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದರೂ ಹಳೆಯದಕ್ಕೇ ಜೋತುಬೀಳುವವರಿಗೆ, ಬದಲಾವಣೆಯನ್ನು ಜಪ್ಪಯ್ಯ ಎಂದರೂ ಒಪ್ಪಿಕೊಳ್ಳದವರಿಗೆ ಓಬಿರಾಯನ ಪಟ್ಟ ಕಟ್ಟಿಟ್ಟ ಬುತ್ತಿ. ಓಬಿರಾಯ ಎನ್ನುವವನು ಇದ್ದನೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅವನಂತೂ ಸಂಪ್ರದಾಯದಿಂದ ಒಂದಿಂಚೂ ಈಚೆಗೆ ಬರುವುದಕ್ಕೆ ಒಲ್ಲೆ ಎಂದು ಪಟ್ಟು ಹಿಡಿದಿದ್ದಂತೂ ನಿಜವಿರಬೇಕು. ಆಡುಮಾತಿನಲ್ಲಿ ಅಲ್ಲದೆ ಗ್ರಂಥಗಳಲ್ಲಿ, ಪತ್ರಿಕೆಗಳಲ್ಲಿ ಓಬಿರಾಯ, ಓಬೀರಾಯನ ಪ್ರಸ್ತಾಪವಿದೆ. `ಓಬಿರಾಯನ ಕಥೆ ನಮಗೆ ಹೇಳಬೇಡ’ ಎಂಬ ಉಲ್ಲೇಖವನ್ನು ಹಳೆಯ ಗ್ರಂಥಗಳಲ್ಲಿ...
*ಇದು ಮಹಾಭಾರತದ ಹದಿನೆಂಟು ದಿನಗಳ ಯುದ್ಧ ಏನೋ ಒಂದನ್ನು ತುಂಬ ಕಷ್ಟಪಟ್ಟು ಸಾಧಿಸಿಕೊಂಡವರು ತಮ್ಮ ಸಾಧನೆಯ ಕಷ್ಟದ ಹಾದಿಯ ಬಗ್ಗೆ ಹೇಳುವಾಗ `ಏಳು ಹನ್ನೊಂದು ಆಯ್ತು' ಎಂದು ಹೇಳುವುದನ್ನು ಕೇಳಿದ್ದೇವೆ. ಸಾಧನೆಯ ಹಾದಿ ಹೂವಿನದಲ್ಲ, ಕಲ್ಲು ಮುಳ್ಳಿನಿಂದ ಕೂಡಿದ್ದು. ಆದನ್ನು ಸಾಧಿಸಿಯೇ ಬಿಟ್ಟೆ ಎಂದು ಹೆಚ್ಚಳವನ್ನು ಹೇಳಿಕೊಳ್ಳುವುದು ಅವರ ಉದ್ದೇಶ. ಏಳು ಹನ್ನೊಂದು’ ಅಂದರೆ ಏನು? ಮಹಾಭಾರತದಲ್ಲಿ ಕೌರವ ಪಾಂಡವರಿಗೆ ಯುದ್ಧ ಸಂಭವಿಸುತ್ತದೆಯಲ್ಲವೆ? ಆಗ ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯ ಮತ್ತು ಕೌರವರ ಕಡೆ ಹನ್ನೊಂದು...
*ಊರವರ ಕಣ್ಣೆಲ್ಲ ಇವಳ ಮ್ಯಾಲೆ ಜಂಬದ ಕೋಳಿಯಂಥ ಹೆಂಗಸನ್ನು ಕಂಡಾಗ, ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಪಡುವ ಹೆಂಗಸನ್ನು ಕಂಡಾಗ, `ಊರಿಗೊಬ್ಬಳೇ ಪದ್ಮಾವತಿ ಅನ್ನುವ ಹಾಗೆ ಮೆರೆದಾಡ್ತವ್ಳೆ’ ಎಂದು ಕೊಂಡು ನುಡಿ ಆಡುವುದನ್ನು ಕೇಳಿದ್ದೇವೆ. ಯಾರು ಇವಳು ಪದ್ಮಾವತಿ? ಪದ್ಮಾವತಿ ಸುಂದರಿ, ಸುರಸುಂದರಿ. ಊರಿನ ವೇಶ್ಯೆ. ಊರಿನ ಕಣ್ಣೆಲ್ಲ ಇವಳ ಮ್ಯಾಲೇ. ಅವಳಲ್ಲಿಗೆ ಹೋಗಬೇಕೆಂದರೆ ತುಂಬಾ ಹಣ ಇರಬೇಕು, ಚೆಲುವು ಇರಬೇಕು, ಜೊತೆಯಲ್ಲಿ ಪಾಳಿ ಹಚ್ಚಬೇಕು. ಹೀಗಾಗಿ ಪದ್ಮಾವತಿಗೆ ಡಿಮ್ಯಾಂಪ್ಪೋ ಡಿಮ್ಯಾಂಡ್. ಇಷ್ಟು ಡಿಮ್ಯಾಂಡ್ ಇದ್ದ...
*ವಿಶ್ವಾಸಕ್ಕೆ ಬಗೆಯುವ ದ್ರೋಹ ಯಾರೋ ಅಪರಿಚಿತ ಬರುತ್ತಾನೆ. ನಿಮ್ಮ ಪರಿಚಯ ಮಾಡಿಕೊಳ್ಳುತ್ತಾನೆ. ನಿಮ್ಮ ಆಶ್ರಯ ಪಡೆಯುತ್ತಾನೆ. ವಿಶ್ವಾಸಿಕನಂತೆ ಇರುತ್ತಾನೆ. ಒಂದು ದಿನ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದು ನಿಮ್ಮ ಅಮೂಲ್ಯ ವಸ್ತುವನ್ನು ಎತ್ತಿಕೊಂಡು ಪರಾರಿಯಾಗುತ್ತಾನೆ. ಆಗ ನಿಮ್ಮ ಬಾಯಿಂದ `ಉಂಡೂ ಹೋದ ಕೊಂಡೂ ಹೋದ’ ಎಂಬ ಮಾತು ಬರುತ್ತದೆ. ಯಾವುದೋ ಊರಿನಲ್ಲಿ ಅಧಿಕ ಬಡ್ಡಿದರದ ಆಮಿಷ ಒಡ್ಡುವ ಹಣಕಾಸು ಸಂಸ್ಥೆ ಹಣ ಸಂಗ್ರಹಿಸಿ ನಾಪತ್ತೆಯಾಗುವುದು, ಇಂದು ಹಣ ನೀಡಿ ಹದಿನೈದು ದಿನದ ನಂತರ ಸಾಮಾನುಗಳನ್ನು ಅರ್ಧ ಬೆಲೆಗೆ...
*ತೋಳುಬಲವಲ್ಲ, ಬಾಯಿ ಬಲ ಸುಮ್ಮನೆ ಬಡಾಯಿ ಕೊಚ್ಚುಕೊಳ್ಳುವವರನ್ನು ಕಂಡಾಗ,`ಸಾಕೋ ಗೊತ್ತಿದೆ, ನಿಂದು ಉತ್ತರನ ಪೌರುಷ’ ಎಂದು ಛೇಡಿಸುವುದನ್ನು ಕೇಳಿದ್ದೇವೆ. ಕೈಯಲ್ಲಿ ಆಗದಿದ್ದರೂ ಎಲ್ಲವನ್ನೂ ತಾನು ಮಾಡುವೆ ಎಂದು ಹೇಳುವವರಿಗೂ, ಬೇರೆಯವರು ಮಾಡಿದ್ದನ್ನು ತಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವವರಿಗೂ ಹೀಗೇ ಹೇಳುವುದು. ಯಾರೀತ ಉತ್ತರ? ಏನವನ ಪೌರುಷ? ವಿರಾಟನಗರಿಯ ಮಹಾರಾಜ ವಿರಾಟನ ಮಗ ಉತ್ತರ. ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ಬಂದದ್ದು ಅಲ್ಲಿಯೇ. ಅಜ್ಞಾತವಾಸದ ಕೊನೆಯಲ್ಲಿ ಪಾಂಡವರು ಅಲ್ಲಿರುವುದರ ಬಗ್ಗೆ ಕೌರವರಿಗೆ ಅದು ಹೇಗೋ ಗೊತ್ತಾಗಿಬಿಡುತ್ತದೆ. ಅವರು...