ದೊಡ್ಡವ್ವ

ಮುದ್ದು ಮಾದೇವಿ ಕಳಚಿಟ್ಟ ಕರಿಮಣಿಯನ್ನು ಮತ್ತೊಮ್ಮೆ ನೋಡಿದಳು. ಮಲಗುವ ಕೋಣೆಯಲ್ಲಿದ್ದ ಮಂಚದ ಎದುರಿನ ಗಿಳಿಗೂಟಕ್ಕೆ ಅದನ್ನು ಹಾಕಿದ್ದಳು. ಮೂರು ದಿನದಿಂದ ಅದನ್ನೇ ನೋಡುತ್ತಿದ್ದಾಳೆ. ಅವನು ಸತ್ತ ಸುದ್ದಿ ಹೊಲಕ್ಕೆ ಸೌದೆ ತರಲು ಹೋಗಿದ್ದ ಪಕ್ಕದ ಮನೆಯ ವೆಂಕಟೇಶ ಹೇಳಿದ್ದ. ಹಾಗೆ ಹೇಳುವಾಗ ಅವನಿಗೆ ಯಾವ ಹಿಂಜರಿಕೆಯೂ ಕಾಡಲಿಲ್ಲ. ಹೇಗೆ ಹೇಳುವುದು ಎಂಬ ಸಂದಿಗ್ಧ ಎದುರಾಗಲಿಲ್ಲ. ಯಾವುದೋ ಊರಿನಲ್ಲಿ ಯಾರೋ ಸತ್ತ ಸುದ್ದಿ ಪೇಪರಿನಲ್ಲಿ ಬಂದುದನ್ನು ಓದಿ ಹೇಳುವಂತೆ ಬಹಳ ಸರಳವಾಗಿ, “ಏ ಮುದ್ದು, ನಿನ್ನ ಅವ್ನು ರಾತ್ರಿನೇ...

ಮೌಲ್ಯಮಾಪಕರ ಮಾತು

ಮೌಲ್ಯದ ಮಾತು-1ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಹೊಸ ಮಾಧ್ಯಮವಾದ ಪತ್ರಿಕೆಯ ಪಾತ್ರವನ್ನು ಕುರಿತು ಈ ಸಂಶೋಧನ ಪ್ರಬಂಧದಲ್ಲಿ, ಸಂಶೋಧಕರಾದ ವಾಸುದೇವ ಶೆಟ್ಟಿಯವರು ಚರ್ಚೆಯನ್ನು ನಡೆಸಿದ್ದಾರೆ. ಐದು ಅಧ್ಯಾಯಗಳಿರುವ ಈ ಪ್ರಬಂಧದಲ್ಲಿ ಸ್ಥೂಲವಾಗಿ ಕಾಲಾನುಕ್ರಮಣಿಕೆಯನ್ನು ಸಂಶೋಧಕರು ಅಧ್ಯಯನ ವಿಧಾನವನ್ನಾಗಿ ಬಳಸಿಕೊಳ್ಳುತ್ತಾರಾದರೂ, ಕನ್ನಡ ಭಾಷೆ ಮತ್ತು ಬದುಕನ್ನು ಚಿತ್ರಿಸಿರುವ ಸಾಹಿತ್ಯ ಮತ್ತು ಪತ್ರಿಕೆಯ ಸಂಬಂಧವನ್ನು ನಿರ್ವಚಿಸುವಾಗ ಕರ್ನಾಟಕ ಏಕೀಕರಣದ ಘಟ್ಟವನ್ನು ಒಂದು ಕೇಂದ್ರಬಿಂದುವಾಗಿ ಬಳಸಿಕೊಂಡಿದ್ದಾರೆ.ಆಧುನಿಕ ಕನ್ನಡ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಕನ್ನಡದ ಸಣ್ಣನಿಯತಕಾಲಿಕೆಗಳು ಹಾಗೂ ಪತ್ರಿಕೆಗಳು ವಹಿಸಿದ ಪಾತ್ರವು ಅಗಾಧವಾದದ್ದು....

ಪಬ್ಲಿಕ್‌ ಟಾಯ್ಲೆಟ್‌

(ಉತ್ಥಾನ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕತೆ)

ಬದಲಾಗಬೇಕು ಬದಲಾಯಿಸಬೇಕು

ಮಗಳು ಹೇಳಿದಳು-ನಿನ್ನೆಯೂ ದೋಸೆ ಇವತ್ತೂ ದೋಸೆಅಮ್ಮ ನಿನ್ನದೇನು ವರಸೆ?ನೀ ಬದಲಾಗಬೇಕುರುಚಿ ಬದಲಾಯಿಸಬೇಕು ಮಗ ಹೇಳಿದ-ಮೊನ್ನೆಯೂ ಇದೇ ಚಡ್ಡಿಇವತ್ತೂ ಇದೇ ಚಡ್ಡಿಬೆವರು ನಾರುತ್ತಿದೆಗೆಳೆಯರು ಮೂಗು ಮುಚ್ಚಿಕೊಳ್ಳುತ್ತಿದ್ದಾರೆಬದಲಾಯಿಸು ಅನ್ನುತ್ತಿದ್ದಾರೆಅಮ್ಮ ಬೇರೆಯದು ಕೊಡುಸ್ವಲ್ಪ ಹರಿದಿದ್ದರೂ ಅಡ್ಡಿಯಿಲ್ಲಕೊಳಕಾದುದು ಬೇಡವೇ ಬೇಡ ಅತ್ತೆ ಹೇಳಿದಳು-ಈ ಚಾಳೀಸು ಬದಲಿಸಬೇಕು ಮಗಳೆಹತ್ತು ವರ್ಷದ ಹಿಂದೆ ಖರೀದಿಸಿದ್ದುನಂಬರು ಬದಲಾಗಿದೆ ದೃಷ್ಟಿ ಮಂಜಾಗಿದೆಟೀವಿಯಲ್ಲಿ ಯಾರನ್ನೋ ಕಂಡರೆಯಾರನ್ನೋ ಕಂಡಂತೆಮುಖವಿದ್ದರೂ ಮಖವಾಡ ಧರಿಸಿದವರಂತೆರಾಮನ ಮಾತು ಕೇಳುತ್ತದೆಆದರೆ ಚಹರೆ ರಾವಣನದುಸೀತೆಯೋ ಶೂರ್ಪನಖಿಯೋಒಂದೂ ತಿಳಿಯುತ್ತಿಲ್ಲಚಾಳೀಸು ಮೊದಲು ಬದಲಾಯಿಸಬೇಕು ಗಂಡ ಹೇಳಿದ-ಅದೇನು ನಿನ್ನ ಹಾಡು ನಿತ್ಯಸುಳ್ಳು ಹೇಳಿದ್ದೇ...

ರತ್ನಗಳ ವ್ಯಾಪಾರ

ಡೆಲ್ಲಿಯಲ್ಲಿ ದಲ್ಲಾಳಿಗಳುಅಂಗಡಿ ತೆರೆದಿದ್ದಾರೆಅಳೆದಳೆದು ತೂಗಿ ತೂಗಿರತ್ನಗಳನ್ನು ಮಾರುತ್ತಿದ್ದಾರೆ ಕೂಗಿ ಕೂಗಿ ಕರೆಯುತ್ತಿದ್ದಾರೆಬನ್ನಿ ಬನ್ನಿಕೈ ಬದಲಾಯಿಸಿ ನೋಡಿಬೆರಳು ಬೆರಳಿಗೂಮುತ್ತು ರತ್ನ ಪಚ್ಚೆ ಪವನಿನ ಉಂಗುರ ನಿಮ್ಮಲ್ಲಿ ಎಷ್ಟಿದೆಯೋ ಅಷ್ಟೇ ತನ್ನಿಅದಕ್ಕೆ ತಕ್ಕಂತೆನಿಮ್ಮ ಬೆರಳು ಕೊರಳುಅಳತೆಗೆ ಎರಕ ಹೊಯ್ದುಸ್ಥಳದಲ್ಲೇ ಸುಂದರ ರತ್ನದ ಹಾರ ಅದನ್ನು ತೊಟ್ಟರೆನಿಮ್ಮ ಗುರುತು ನಿಮಗೇ ಹತ್ತುವುದಿಲ್ಲನಮ್ಮ ಆಭರಣವೇ ನಿಮಗೆ ಹೂರಣಎಲ್ಲ ಕಡೆ ಸಲ್ಲುವ ನಿಮಗೆಹೋದಕಡೆಗೆಲ್ಲ ತೋರಣ ನೀವು ನಡೆವ ದಾರಿಯಲಿತಾವರೆಯ ಪಕಳೆಗಳುಕಮಲ ಕೊಳದಲ್ಲಿ ಮುಳುಗೆದ್ದರೆನೀವು ತುಳಿದ ಕೊಳಚೆಯೆಲ್ಲಇಲ್ಲಿ ಮಡಿಯಾಗಿ ನೀವು ಶುದ್ಧವೋ ಶುದ್ಧ ನೀವು ಏನೇ...

ಸ್ತ್ರೀ ಚೈತನ್ಯದ ವಿವಿಧ ಮಜಲುಗಳ ಅನಾವರಣ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’

ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’. ಇದಕ್ಕೆ ಅವರು ಟೆಕ್ಸ್ಟ್‌ ಬುಕ್ ಸ್ತ್ರೀವಾದ ಮತ್ತು ಹವ್ಯಾಸಿ ಸ್ತ್ರೀವಾದಿಗಳ ಬರವಣಿಗೆಯ ಆಚೆಗೂ ಇರುವ ಹೆಣ್ಣು ಕಥೆಗಳು ಎಂದು ಉಪಶೀರ್ಷಿಕೆ ನೀಡಿದ್ದಾರೆ. ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ನನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇತಾನಾಗಿ ರೂಪುಗೊಂಡಿದೆ ಎಂದು ಲೇಖಕರು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಆ ಇನ್ನೊಂದು ಜಗತ್ತುಎಂದರೆ ಸೃಷ್ಟಿಕ್ರಿಯೆಯ ಶರೀರದ ಒಳಗಿರುವ ಆತ್ಮ. ಅದೇ ಧ್ವನಿ. ಪ್ರತಿಯೊಂದು ಕೃತಿಯೂ ಸಾರ್ಥಕವೋ ವಿಫಲವೋ ಎನ್ನುವುದು ಅದು ಹೊರಡಿಸುವ ಧ್ವನಿ...

ಗುಂಡೂಮನೆಯ ಮೂರು ಮುತ್ತು

ಜಿ.ಎಸ್‌.ಸದಾಶಿವ ಅವರು ಮೂರು ಕೃತಿಗಳು ಕನ್ನಡ ಕಾವ್ಯಲೋಕಕ್ಕೆ ಒಬ್ಬರು ಜಿಎಸ್‌ಎಸ್‌ ಇದ್ದಾರೆ. ಅದೇ ರೀತಿ ಕನ್ನಡ ಪತ್ರಿಕಾ ಲೋಕಕ್ಕೂ ಒಬ್ಬರು ಜಿಎಸ್‌ಎಸ್‌ ಇದ್ದರು. ಅವರೇ ಡೂಮನೆ ಶ್ರೀಪಾದರಾವ್‌ ಸದಾಶಿವ. ಕಾಲೇಜಿನಲ್ಲಿ ಪ್ರೊಫೆಸರ್‌ ಆಗಬೇಕು ಎಂದುಕೊಂಡಿದ್ದ ಸದಾಶಿವ ಪತ್ರಿಕಾರಂಗಕ್ಕೆ ಬಂದದ್ದು ತೀರ ಆಕಸ್ಮಿಕ. `ಸಂಯುಕ್ತ ಕರ್ನಾಟಕ'ದಲ್ಲಿ ವೃತ್ತಿ ಆರಂಭಿಸಿದ ಅವರು `ಪ್ರಜಾವಾಣಿ', `ಸುಧಾ' ಬಳಿಕ `ಕನ್ನಡಪ್ರಭ'ಕ್ಕೂ ಕಾಲಿಟ್ಟರು. ಮಹಾಮೌನಿಯಾಗಿದ್ದ ಸದಾಶಿವ ಅವರೊಳಗೊಬ್ಬ ನಗೆಗಾರ ಇದ್ದ ಎಂದರೆ ನಂಬುವುದಕ್ಕೇ ಆಗುವುದಿಲ್ಲ. ಸದಾಶಿವ ಕಥೆಗಾರರೆಂದು ಪ್ರಸಿದ್ಧರಾದವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನೂ ಅವರು...