*ಮನಬಂದಂತೆ ನಡೆಸುವ ಆಡಳಿತ
ಮನಸ್ಸಿಗೆ ಬಂದುದನ್ನು ಮಾಡುವವರನ್ನು ಕಂಡಾಗ,
ತುಘಲಕ್ ದರ್ಬಾರ್’ ಮಾತು ಚಲಾವಣೆಗೆ ಬಂದುಬಿಟ್ಟಿದೆ. ಅದೇನು ತುಘಲಕ್ ದರ್ಬಾರ್ ಆಗಿಹೋಯ್ತೆ?' ಎಂದು ಉದ್ಗಾರ ತೆಗೆಯುವವರನ್ನು ಕಾಣುತ್ತೇವೆ. ಹೀಗೆ ಮನಸ್ಸಿಗೆ ಬಂದುದನ್ನು ಮಾಡುವಾಗ ಅದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿಗೆ ಇರುತ್ತದೆ. ಯಾರೀತ ತುಘಲಕ್? ಕ್ರಿ.ಶ. 1325-1351ರ ವರೆಗೆ ದೆಹಲಿಯನ್ನು ಆಳಿದ ಸುಲ್ತಾನರಲ್ಲಿ ಒಬ್ಬ. ಇವನಲ್ಲಿ ಉದಾತ್ತವಾದ ಆಲೋಚನೆಗಳು ಇದ್ದವು. ಆದರೆ ಅವನ್ನು ಕಾರ್ಯರೂಪಕ್ಕೆ ತಂದಾಗ ಅವು ಯಶಸ್ವಿಯಾಗದೆ ಅವನಿಗೆ ಕೆಟ್ಟ ಹೆಸರನ್ನು ತಂದವು. ತನ್ನ ರಾಜಧಾನಿಯು ಕೇಂದ್ರ ಸ್ಥಳದಲ್ಲಿ ಇರಬೇಕು ಎಂದು ಆತ ಬಯಸಿದ. ಅದು ಸೂಕ್ತವಾದ ಯೋಚನೆಯೇ ಆಗಿತ್ತು. ಕಾರಣ ಆತ ಅದನ್ನು ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್) ಬದಲಾಯಿಸಿದ. ಭೀಕರ ಪ್ಲೇಗ್ನಿಂದ ಆತನ ಅರ್ಧದಷ್ಟು ಸೇನೆ ನಾಶವಾಯಿತು. ಹೀಗಾಗಿ ಆತ ಮತ್ತೆ ತನ್ನ ರಾಜಧಾನಿಯನ್ನು ದೆಹಲಿಗೇ ವರ್ಗಾಯಿಸಿದ. ಚಿನ್ನ, ಬೆಳ್ಳಿಯ ನಾಣ್ಯಗಳ ಬದಲಿಗೆ ಚರ್ಮದ ನಾಣ್ಯಗಳನ್ನು ಆತ ಬಳಕೆಗೆ ತಂದ. ಅದೊಂದು ಅಪೂರ್ವವಾದ ಯೋಜನೆಯಾಗಿದ್ದರೂ ಯಶಸ್ವಿಯಾಗಲಿಲ್ಲ. ಏನೋ ಮಾಡುವುದು, ಅದು ಯಶಸ್ವಿಯಾಗದೆ ಇದ್ದಾಗ ಹಳೆಯದಕ್ಕೇ ಮರಳುವುದಕ್ಕೆ`
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.