*ಈ ಮದುವೆಗೆ ಎಂದೂ ಮುಹೂರ್ತ ಕೂಡಿಬರಲೇ ಇಲ್ಲ
ಗಣಪತಿ ಬ್ರಹ್ಮಚಾರಿಯೋ ಅಥವಾ ಗೃಹಸ್ಥನೋ ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿ ಬಂದಿಲ್ಲ. ಕೆಲವರು ಆತ ಬ್ರಹ್ಮಚಾರಿ ಎಂದರೆ ಇನ್ನು ಕೆಲವರು ಆತನಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಹೆಂಡತಿಯರು ಎಂದು ಹೇಳುತ್ತಾರೆ.
ಗಣಪತಿಯ ಜನ್ಮಕ್ಕೆ ಕಾರಣಳಾದ ಪಾರ್ವತಿಗೆ ಆತನ ಮೇಲೆ ಷಣ್ಮುಖನಿಗಂತ ಒಂದು ಗುಂಜಿ ಪ್ರೀತಿ ಹೆಚ್ಚಿಗೆ ಎಂದೇ ಹೇಳಬಹುದು. ಪ್ರೀತಿಯ ಮಗನಿಗೆ ಮದುವೆ ಮಾಡುವ ಮನಸ್ಸು ಆಕೆಗೆ. ಗಣಪತಿ ನಿನ್ನ ಮದುವೆ ಯಾವಾಗ ಮಾಡೋಣ ಎಂದು ಅಮ್ಮ ಕೇಳಿದರೆ, ಗಣಪತಿ
ಇಂದು’ ಆಗಿರುತ್ತದೆ. ಇಂದು ಕೇಳಿದಾಗಲೂ ಗಣಪತಿಯದು ನಾಳೆ ಎನ್ನುವುದೇ ಉತ್ತರ.ನಾಳೆ' ಎಂದು ಹೇಳುತ್ತಾನೆ. ನಾಳೆ ಎನ್ನುವುದು ರಾತ್ರಿ ಕಳೆದಾಗ
ಎಷ್ಟೋ ಸಲ ನಾವು ಒಂದು ಕಲಸವನ್ನು ಮಾಡಬೇಕು ಎಂದುಕೊಂಡಿರುತ್ತೇವೆ. ಕೊನೆಗೆ ನಾಳೆ ಮಾಡಿದರಾಯಿತು ಎಂದು ಸುಮ್ಮನಾಗುತ್ತೇವೆ. ನಾಳೆಯೂ ಮತ್ತೆ ಅದೇ ಮನೋಭಾವ. ಹೀಗೆ ಮುಂದೂಡುವುದು ಇನ್ನೊಬ್ಬರಿಗೆ ಕಿರಿಕಿರಿಯಾಗಾದ ಅವರ ಬಾಯಿಂದ, ಒಳ್ಳೆ ಗಣಪತಿ ಮದುವೆಯಂಗೆ ಆಯ್ತಲ್ಲ' ಎಂಬ ಉದ್ಗಾರ ಹೊರಬೀಳುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಯಾವುದಾದರೂ ಕೆಲಸಕ್ಕೆ ಹೋದರೆ,
ನಾಳೆ ಬಾ’ ಎಂದು ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಆಗೆಲ್ಲ, `ಗಣಪತಿ ಮದುವೆ ಹಾಗೆ ಆಯ್ತಲ್ಲ ಇದು’ ಎಂಬ ಮಾತು ಸಹಜವಾಗಿ ಹೊರಡುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.