ಸಮಾರೋಪ `ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಮಹತ್ವದ್ದಾಗಿದೆ. ಪತ್ರಿಕೆ ಮತ್ತು ಸಾಹಿತ್ಯವನ್ನು ಜೊತೆ ಜೊತೆಯಲ್ಲಿ ಇಟ್ಟು ಅಧ್ಯಯನ ಮಾಡಿದಾಗ ಹಲವು ಹೊಸ ಅಂಶಗಳನ್ನು ಕಾಣುವುದು ಸಾಧ್ಯವಾದವು. ಆಧುನಿಕ ಕನ್ನಡ ಸಾಹಿತ್ಯ ಮತ್ತು ಪತ್ರಿಕೆ ಏಕ ಕಾಲದಲ್ಲಿ ಹುಟ್ಟು ಪಡೆದು ಬೆಳೆಯುತ್ತ ಬಂದಿದ್ದನ್ನು ಇಲ್ಲಿ ಗುರುತಿಸಲಾಗಿದೆ. ಪತ್ರಿಕೆಗಳಲ್ಲಿ ಬಳಕೆಯಾದ ಗದ್ಯವು ಹೊಸಗನ್ನಡ ಸಾಹಿತ್ಯಕ್ಕೆ ಪುಷ್ಟಿಯನ್ನು ಒದಗಿಸಿದವು. ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸಲು ಸಾಮರ್ಥ್ಯವಿಲ್ಲದ ಲೇಖಕರಿಗೆ ಅವರ ಕೃತಿಗಳು ಬೆಳಕು ಕಂಡು ಜನರನ್ನು ತಲುಪುದಕ್ಕೆ ಇವು ವಾಹಕವಾದವು. ಕನ್ನಡದಲ್ಲಿ...
ಏಕೀಕರಣದ ನಂತರದ ಪತ್ರಿಕೆ ಮತ್ತು ಸಾಹಿತ್ಯ ಕರ್ನಾಟಕ ಏಕೀಕರಣದ ಬಳಿಕ ಪತ್ರಿಕೆಗಳ ಸ್ವರೂಪ ಬದಲಾಯಿತು. ದೇಶಕ್ಕೆ ಸ್ವಾತಂತ್ಯ್ರವೂ ದೊರೆತಿತ್ತು. ನಾಡಿನ ಏಕೀಕರಣವೂ ಆಯಿತು. ಇದರಿಂದಾಗಿ ಪತ್ರಿಕೆಗಳ ಮೇಲಿದ್ದ ಒಂದು ದೊಡ್ಡ ಜವಾಬ್ದಾರಿ ಇಳಿದಂತಾಯಿತು. ಇದೇ ಸಮಯದಲ್ಲಿ ಪತ್ರಿಕೆ ನಡೆಸುವುದನ್ನು ಲಾಭದ ಉದ್ಯಮವನ್ನಾಗಿ ಪರಿಗಣಿಸಲಾಯಿತು. ಇದರಿಂದಾಗಿ ಸಾಹಿತ್ಯ ಚಳವಳಿಗಳನ್ನು ಪ್ರತಿಪಾದಿಸುವ ಪೋಷಿಸುವ ಉದ್ದೇಶಕ್ಕಾಗಿಯೇ ಪತ್ರಿಕೆಗಳನ್ನು ನಡೆಸುವುದು ಅಗತ್ಯವಾಯಿತು. ಏಕೀಕರಣದ ನಂತರದ ಅವಧಿಯಲ್ಲಿ ಇಂಥ ಸಾಹಿತ್ಯ ಪತ್ರಿಕೆಗಳು ಹೊರಟಿದ್ದನ್ನು ಕಾಣುತ್ತೇವೆ. ಇವು ಕೆಲವೊಮ್ಮೆ ಏಕವ್ಯಕ್ತಿಯ ಸಾಹಸವಾಗಿ, ಮತ್ತೆ ಕೆಲವೊಮ್ಮೆ ಸಂಘ...
ಏಕೀಕರಣದ ವರೆಗಿನ ಪತ್ರಿಕೆಗಳು ಮತ್ತು ಸಾಹಿತ್ಯ ಬಂಗಾಳ ವಿಭಜನೆಯ ಕಾಲಕ್ಕೆ ಕನ್ನಡ ಸಾಹಿತ್ಯ ಆಧುನಿಕ ರೂಪವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನು ನಡೆಸಿತ್ತು. ಅದೇ ರೀತಿ ಕನ್ನಡ ಪತ್ರಿಕೋದ್ಯಮಕ್ಕೂ ಅರವತ್ತು ವರ್ಷಗಳ ಪರಂಪರೆಯೊಂದು ನಿರ್ಮಾಣವಾಗಿತ್ತು. ಪತ್ರಿಕೆಯ ಪ್ರಯೋಜನವನ್ನು ಹಲವು ರೀತಿಗಳಲ್ಲಿ ಕಂಡುಕೊಳ್ಳಲಾಗಿತ್ತು. ಸಾಹಿತ್ಯ ಪೋಷಣೆಗಾಗಿಯೇ, ಸಾಹಿತ್ಯದಲ್ಲಿ ಹಳೆಯದಕ್ಕಿಂತ ಭಿನ್ನವಾಗಿ ಹೊಸ ರೂಪದಲ್ಲಿ ಅಭಿವ್ಯಕ್ತಿಯನ್ನು ತರಬೇಕು ಎಂಬ ಉದ್ದೇಶದಿಂದಲೇ ಪತ್ರಿಕೆಗಳೂ ಹೊರಟಿದ್ದನ್ನು ನೋಡಿದೆವು. ಸಾಹಿತ್ಯ ಪೋಷಣೆಯ ಹಂಬಲದೊಂದಿಗೆ ಪತ್ರಿಕೆಯನ್ನು ಆರಂಭಿಸುವುದು ಈಗಲೂ ಮುಂದುವರಿಯಿತು. ಆರಂಭಕಾಲದ ಪತ್ರಿಕೆಗಳಿಗೆ ಹೇಗೆ ಕರ್ನಾಟಕ...
ಆರಂಭ ಕಾಲದ ಪತ್ರಿಕೆ ಮತ್ತು ಸಾಹಿತ್ಯ ಹತ್ತೊಂಬತ್ತನೆ ಶತಮಾನದ ಆರಂಭ ಕಾಲದ ಸಾಹಿತ್ಯ ಕೃತಿಗಳನ್ನು ಗಮನಿಸಿದಾಗ ಭಾಷೆ ನಡುಗನ್ನಡದಿಂದ ಹೊಸಗನ್ನಡದತ್ತ ಹೊರಳುತ್ತಿರುವುದನ್ನು ಕಾಣಬಹುದು. ಕನ್ನಡ ಸಾಹಿತ್ಯವು ಆಧುನಿಕ ರೂಪವನ್ನು ಪಡೆದುಕೊಳ್ಳತೊಡಗಿದ್ದು ಹಾಗೂ ಕನ್ನಡದಲ್ಲಿ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸರಿಸುಮಾರು ಒಂದೇ ಕಾಲದಲ್ಲಿ. ಇದು ಹತ್ತೊಂಬತ್ತನೆ ಶತಮಾನದ ಮಧ್ಯಭಾಗ. ೧೮೪೨ರ ಮಂಗಳೂರು ಸಮಾಚಾರ'ದ ವೇಳೆಗೆ ಕನ್ನಡ ಸಾಹಿತ್ಯ ಹಲವು ಬಗೆಗಳಲ್ಲಿ ಬೆಳೆದಿತ್ತು. ಆಧುನಿಕ ವಿದ್ಯಾಭ್ಯಾಸ, ಕ್ರೈಸ್ತ ಪಾದ್ರಿಗಳ ಧರ್ಮ ಪ್ರಚಾರ, ಅದಕ್ಕಾಗಿ ಅವರು ಮಾಡಿದ ಬೈಬಲ್ ಅನುವಾದ, ಹಿಂದೂ ಧರ್ಮವನ್ನು...
ಪ್ರಸ್ತಾವನೆ ಅಧ್ಯಯನದ ವ್ಯಾಪ್ತಿ ಮತ್ತು ಉದ್ದೇಶ: ಕನ್ನಡ ಸಾಹಿತ್ಯ ಹಲವು ಘಟ್ಟಗಳಲ್ಲಿ ಹಾಯ್ದು ಬರುವಾಗ ವಿಭಿನ್ನ ರೀತಿಯ ಪ್ರಭಾವಗಳಿಗೆ ಒಳಗಾಗುತ್ತ, ಅದರಿಂದ ಪುಷ್ಟಗೊಳ್ಳುತ್ತ ಬಂದಿದೆ. ಇಂಥ ಪ್ರಭಾವಗಳನ್ನು ಕಾಲಕಾಲಕ್ಕೆ ವಿದ್ವಾಂಸರು ಗುರುತಿಸುತ್ತ ದಾಖಲಿಸುತ್ತ ಬಂದಿದ್ದಾರೆ. ಸಾಹಿತ್ಯಕ್ಕೆ ಸಮಾಜವು ಪ್ರತಿಸ್ಪಂದಿಸಿದುದರ ಪರಿಣಾಮವಿದು ಎಂದು ಹೇಳಬಹುದು. ಇಂತಹ ಪ್ರತಿಸ್ಪಂದನ ಪತ್ರಿಕೆಗಳ ಮೂಲಕವೇ ಹೆಚ್ಚು ಪ್ರಕಟವಾಗಿ ಸಾಹಿತ್ಯವನ್ನು ಪೋಷಿಸಿವೆ. ಆಧುನಿಕ ಕಾಲದಲ್ಲಿ ಪತ್ರಿಕೆಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ಬದುಕಿನ ಆಗುಹೋಗುಗಳನ್ನು ದಾಖಲಿಸುತ್ತ ವರದಿ ಮಾಡುವ ಪತ್ರಿಕೆಗಳು ಒಂದು...
ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸ ೧. ಸ್ವರೂಪ: ಪತ್ರಿಕೆಗಳು ಹುಟ್ಟುವುದಕ್ಕೆ ಮುದ್ರಣ ಯಂತ್ರದ ಶೋಧ ಒಂದು ಪ್ರಬಲವಾದ ಕಾರಣವಾಗಿದೆ. ಅದೇ ರೀತಿ ಆಧುನಿಕ ಸಾಹಿತ್ಯದ ಬೆಳವಣಿಗೆಯಲ್ಲೂ ಮುದ್ರಣ ಯಂತ್ರದ ಪಾತ್ರವೂ ದೊಡ್ಡದೇ. ಐತಿಹಾಸಿಕವಾಗಿ ಗಮನಿಸಿದಾಗ ಗುಟನ್ಬರ್ಗ್ ಎಂಬಾತ ೧೪೪೦ರಲ್ಲಿ ಯುರೋಪಿನಲ್ಲಿ ಮೊದಲ ಮುದ್ರಣ ಯಂತ್ರವನ್ನು ಸ್ಥಾಪಿಸಿದ. ಚೀನ ದೇಶದಲ್ಲಿ ಕ್ರಿ.ಶ. ೮೬೮ರಲ್ಲಿಯೇ ಆ ದೇಶ ಭಾಷೆಯ ಅಕ್ಷರ ಮೊಳೆಗಳನ್ನು ತಯಾರಿಸಿ ಪುಸ್ತಕವೊಂದನ್ನು ಮುದ್ರಿಸಲಾಗಿತ್ತು. ಪ್ರಪಂಚದ ಮೊದಲ ಪತ್ರಿಕೆ ೧೬೧೫ರಲ್ಲಿ ಜರ್ಮನಿಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನ ಮೊದಲ ಪತ್ರಿಕೆ ೧೬೨೨ರಲ್ಲಿ...
ಆಧುನಿಕ ಕನ್ನಡ ಸಾಹಿತ್ಯದಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಾದರಪಡಿಸಿದ ಮಹಾಪ್ರಬಂಧ ಸಂಶೋಧನೆ ವಾಸುದೇವ ಶೆಟ್ಟಿ ಮಾರ್ಗದರ್ಶನ ಡಾ.ಮೋಹನ ಕುಂಟಾರ್ ಭಾಷಾಂತರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ- ೫೮೩ ೨೭೬ ೨೦೦೨ — ದೃಢೀಕರಣ ಪತ್ರ ಶ್ರೀ ವಾಸುದೇವ ಶೆಟ್ಟಿ ಇವರು ‘ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಎಂಬ ಶೀರ್ಷಿಕೆಯ ಮಹಾಪ್ರಬಂಧವನ್ನು ನನ್ನ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಭಾಷಾ ನಿಕಾಯದ ಭಾಷಾಂತರ ವಿಭಾಗಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸುತ್ತಿರುವ...