ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಜವಾಬ್ದಾರಿಯದು. ಪ್ರಭುತ್ವ ಮತ್ತು ಪ್ರಜೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕೆಗಳು ಪ್ರಜೆಗಳ ನಡುವೆ ಸೌಹಾರ್ದ ಬದುಕನ್ನು ಉಂಟುಮಾಡುವ ಕೆಲಸವನ್ನೂ ಮಾಡುತ್ತವೆ. ವಿವಿಧತೆ ಇರುವಲ್ಲಿ ಏಕತೆ. ಇದೊಂದು ಆದರ್ಶ. ಇದನ್ನು ನಮ್ಮ ರಾಷ್ಟ್ರದ ಅಗ್ಗಳಿಕೆ ಎನ್ನುವಂತೆ ಹೇಳಲಾಗುತ್ತಿದೆ. ಸಮಾಜದ ವಿವಿಧ ವರ್ಗಗಳೊಂದಿಗೆ ಸುಮಧುರ ಬಾಂಧವ್ಯವನ್ನು ಬೆಸೆಯುವ ಜವಾಬ್ದಾರಿ ತಾನೇತಾನಾಗಿ ಪತ್ರಿಕೆಯ ಹೆಗಲೇರಿರುತ್ತದೆ. ಒಂದೇ ಜನಾಂಗದ ಪ್ರಜೆಗಳಿರುವ ದೇಶದಲ್ಲಿ ಸೌಹಾರ್ದದ ಸಮಸ್ಯೆ ಇರುವುದಿಲ್ಲ. ಆದರೆ ಭಾರತದಂಥ ಹಲವು ಜನಾಂಗಗಳ, ಹಲವು ಭಾಷೆಗಳ, ಹಲವು...
ನಮ್ಮ ಸಮಕಾಲೀನ ಬರಹಗಾರರಲ್ಲಿ ಸಮಕಾಲೀನ ವಿವಾದಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರು ವಿವಿಧ ಕೃತಿಗಳಿಗೆ ಬರೆದ ಮುನ್ನುಡಿ ರೂಪದ ಬರೆಹಗಳ ಸಂಕಲನ ‘ಅನುಸಂಧಾನ’. ಮುನ್ನುಡಿ ಬರೆಹವು ಸಾಹಿತ್ಯದಲ್ಲಿ ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ನಿರ್ವಚಿಸಬಹುದಾಗಿದೆ. ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರೆಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ...