*ರಾಜಕಾರಣದ ಕೂಟ ನೀತಿ ಇದು
ರಾಜಕಾರಣದ ತಂತ್ರ ಪ್ರತಿತಂತ್ರಗಳಲ್ಲಿ ಚಾಣಕ್ಯತಂತ್ರ ಪ್ರಸಿದ್ಧವಾದದ್ದು. ಬಹಳ ಚಾಣಾಕ್ಷ ರಾಜಕೀಯ ನಡೆಯನ್ನು ಚಾಣಕ್ಯ ತಂತ್ರ ಎಂದು ಕರೆಯುತ್ತಾರೆ. ಚತುರ ರಾಜಕಾರಣಿಯನ್ನು ಚಾಣಕ್ಯ ಎಂದು ಕರೆಯುವುದನ್ನು ಕೇಳಿದ್ದೇವೆ. ಒಬ್ಬನ ರಾಜಕೀಯ ಚಾತುರ್ಯವನ್ನು ಹೊಗಳಬೇಕೆಂದರೆ,
ಅರ್ಥಶಾಸ್ತ್ರ’ ಕೃತಿಯು ರಾಜಕೀಯ ಪ್ರವೇಶಕ್ಕೊಂದು ಮಾರ್ಗದರ್ಶಿ. ಹೇಗೆ ರಾಜಕೀಯವನ್ನು ಮಾಡಬೇಕು, ಶತ್ರುಗಳನ್ನು ಹೇಗೆ ಬೇರುಮಟ್ಟದಿಂದ ನಾಶಮಾಡಬೇಕು ಎಂಬುದನ್ನು ಅರಿಯಬೇಕೆಂದರೆ ಕೌಟಿಲ್ಯನನ್ನು ಓದಬೇಕು.ಅವನು ಚಾಣಕ್ಯ ಕಣ್ರಿ' ಎಂದು ಹೇಳುವುದನ್ನು ಕೇಳಿದ್ದೇವೆ. ಯಾರು ಈ ಚಾಣಕ್ಯ? ಚಂದ್ರಗುಪ್ತ ಮೌರ್ಯನಿಗೆ ನಂದರ ವಿರುದ್ಧ ಗೆಲವು ತಂದುಕೊಟ್ಟುಚಕ್ರವರ್ತಿಯನ್ನಾಗಿ ಮಾಡಿದವನು. ಕೌಟಿಲ್ಯ ಎಂಬುದು ಇವನ ಮೂಲ ಹೆಸರು. ಇವನ `
ಕೌಟಿಲ್ಯನಿಂದಾಗಿಯೇ ಕುಟಿಲ ನೀತಿ ಎಂಬುದು ಚಲಾವಣೆಗೆ ಬಂದಿದೆ.
ರಾಜಕಾರಣದಲ್ಲಿ ಕೃಷ್ಣ ಕಾರಸ್ಥಾನ, ಚಾಣಕ್ಯ ನೀತಿ, ಶಕುನಿ ತಂತ್ರ ಪ್ರಸಿದ್ಧವಾದದ್ದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.