*ಸತ್ಯಹರಿಶ್ಚಂದ್ರ ಇಲ್ಲಿ ಕಾವಲುಗಾರನಾಗಿದ್ದ

ಯಾರ ಮೇಲಾದರೂ ತುಂಬಾ ಕೋಪ ಬಂದಾಗ, ನಿನ್ನ ಹರಿಶ್ಚಂದ್ರ ಘಾಟ್‌ಗೆ ಕಳುಹಿಸುತ್ತೇನೆ ಎಂದು ಹೇಳುವವರಿದ್ದಾರೆ. ಅಂದರೆ ಶ್ಮಶಾನಕ್ಕೆ ಕಳುಹಿಸುತ್ತೇನೆ ಎಂದೇ ಅರ್ಥ. ಎಷ್ಟೋ ಊರುಗಳಲ್ಲಿ ಶ್ಮಶಾನಗಳಿಗೆ ಹರಿಶ್ಚಂದ್ರ ಘಾಟ್‌ ಎಂದು ಫಲಕದಲ್ಲಿ ಬರೆದಿರುವುದನ್ನು ಕಂಡಿದ್ದೇವೆ.
ಏನಪ್ಪಾ ಸೈಟುಗೀಟು ಮಾಡಿದ್ಯಾ? ಎಂದು ಪ್ರಶ್ನಿಸಿದರೆ, ಹರಿಶ್ಚಂದ್ರ ಘಾಟ್‌ನಲ್ಲಿ ಆರಡಿ ಮೂರಡಿ ಸೈಟ್‌ ಮಾಡಿದ್ದೀನಿ ಎಂದು ಹೇಳುವವರನ್ನು ಕಂಡಿದ್ದೇವೆ.
ಪುಣ್ಯಕ್ಷೇತ್ರ ಕಾಶಿಯಲ್ಲಿ ಅಪರಕರ್ಮವನ್ನು ಮಾಡುವ ಸ್ಥಳಕ್ಕೆ ಹರಿಶ್ಚಂದ್ರ ಘಾಟ್‌ ಎಂದು ಹೇಳುತ್ತಾರೆ. ಕಾಶಿಗೆ ಹತ್ತಿರದವರೆಲ್ಲ ಸತ್ತರೆ ಈ ಹರಿಶ್ಚಂದ್ರ ಘಾಟ್‌ಗೇ ತಂದು ಸುಡುವುದು. ಇಲ್ಲಿ ಸುಟ್ಟರೆ ನೇರವಾಗಿ ಶಿವನ ಪಾದ ಸೇರುತ್ತಾರೆ ಎಂಬ ನಂಬಿಕೆ ಇದೆ.
ಶ್ಮಶಾನಕ್ಕೂ ಹರಿಶ್ಚಂದ್ರನಿಗೂ ಏನು ಸಂಬಂಧ? ಸತ್ಯಹರಿಶ್ಚಂದ್ರ ವಿಶ್ವಾಮಿತ್ರನಿಂದ ಪರೀಕ್ಷೆಗೆ ಒಳಗಾಗಿ ತನ್ನ ರಾಜ್ಯವನ್ನೆಲ್ಲ ಆತನಿಗೆ ದಾನಮಾಡಿ ಹೊರಡುತ್ತಾನೆ. ಹೆಂಡತಿ, ಮಗನನ್ನೂ ಮಾರಾಟ ಮಾಡುತ್ತಾನೆ. ಕೊನೆಗೆ ತನ್ನನ್ನು ತಾನು ಮಾರಿಕೊಂಡು ವೀರಬಾಹುಕ ಎಂಬ ಹೆಸರಿನಲ್ಲಿ ಶ್ಮಶಾನ ಕಾಯುವ ಕೆಲಸಕ್ಕೆ ಸೇರುತ್ತಾನೆ. ಇದರಿಂದಾಗಿ ಶ್ಮಶಾನಗಳಿಗೆಲ್ಲ ಹರಿಶ್ಚಂದ್ರ ಘಾಟ್‌ ಎಂಬ ಹೆಸರು ಬಂದಿರುವುದು.