*ಹತ್ಯೆಗೆ ನೀಡುವ ವೀಳ್ಯ

ಹಿಂದೂ ಸಂಪ್ರದಾಯದಲ್ಲಿ ಅಡಕೆಗೆ ಮಹತ್ವದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ದೇವರ ಪ್ರತಿಮೆಗೆ ಬದಲಾಗಿ ಅಡಕೆಯನ್ನೇ ಇಟ್ಟು ಪೂಜಿಸುವ ಪದ್ಧತಿಯೂ ಇದೆ.
ಹಿಂದೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸದೆ ಇದ್ದ ಕಾಲದಲ್ಲಿ ಎಲೆ ಮತ್ತು ಅಡಕೆಯನ್ನು ನೀಡಿ ಶುಭಕಾರ್ಯಗಳಿಗೆ ಆಹ್ವಾನ ನೀಡಲಾಗುತ್ತಿತ್ತು. ಇದನ್ನು ವೀಳ್ಯ ಎಂದು ಕರೆಯಲಾಗುತ್ತಿತ್ತು.
ಶತ್ರು ರಾಜನನ್ನು ಯುದ್ಧಕ್ಕೆ ಆಹ್ವಾನಿಸುವಾಗಲೂ ಎಲೆ ಅಡಕೆಯನ್ನು ಕಳುಹಿಸಲಾಗುತ್ತಿತ್ತು. ಇದು ರಣವೀಳ್ಯ.
ಅಡಕೆಗೆ ಹಿಂದಿ, ಮರಾಠಿಯಲ್ಲಿ ಸುಪಾರಿ ಎಂದು ಕರೆಯುತ್ತಾರೆ. ಅವನ ಕೊಲೆಗೆ ಇವನು ಸುಪಾರಿ ಕೊಟ್ಟಿದ್ದಾನೆ ಎಂಬ ಮಾತನ್ನು ಕೇಳಿದ್ದೇವೆ. ಸುಪಾರಿ ಹಂತಕರು ಎಂಬ ಮಾತನ್ನೂ ಕೇಳಿದ್ದೇವೆ. ಒಬ್ಬನ ಕೊಲೆ ಮಾಡಲು ಹಂತಕರಿಗೆ ನೀಡುವ ಎಲೆ ಅಡಕೆ (ವೀಳ್ಯ)ಯೇ ಸುಪಾರಿ ಎಂದು ಹೆಸರಾಗಿದೆ. ಬರೀ ಎಲೆ ಅಡಕೆ ಕೊಟ್ಟರೆ ಯಾರೂ ಯಾರನ್ನೂ ಕೊಲೆ ಮಾಡುವುದಿಲ್ಲ. ಎಲೆ ಅಡಕೆ ಜೊತೆಯಲ್ಲಿ ನಿರ್ದಿಷ್ಟ ಮೊತ್ತವನ್ನು ಹಂತಕರಿಗೆ ನೀಡಿರುತ್ತಾರೆ.
ಶುಭಕಾರ್ಯದ ಆಹ್ವಾನಕ್ಕೆ ಬಳಕೆಯಾಗುತ್ತಿದ್ದ ವೀಳ್ಯ ಹತ್ಯೆಗೆ ನೀಡುವ ಮುಂಗಡವಾಗಿಯೂ ರೂಪಾಂತರವಾಗಿದ್ದು ವಿಪರ್ಯಾಸ.