*ಬಹಳ ಕಷ್ಟಪಡುವುದು

ಗಲೂ ರಾತ್ರಿ ದುಡಿದ, ಎಷ್ಟೋ ಕಷ್ಟಪಟ್ಟ, ಆದ್ರೂ ಅವನ ವನವಾಸ ತಪ್ಪಲಿಲ್ಲ, ಅವನಿಗೆ ವನವಾಸ ತಪ್ಪಲಿಲ್ಲ, ಇಷ್ಟು ದಿನ ವನವಾಸದಲ್ಲಿದ್ದ, ಈಗ ಅವನಿಗೆ ಸೂಕ್ತ ಸ್ಥಾನ ದೊರೆತಿದೆ ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ.
ಇದನ್ನೆಲ್ಲ ನೋಡಿದಾಗ, ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕೆ ಯೋಗ್ಯನಿರುತ್ತಾನೆ. ಆದರೆ ಕಾರಣಾಂತರಗಳಿಂದ ಅದರಿಂದ ವಂಚಿತನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಎರಡು ಪ್ರಸಿದ್ಧ ವನವಾಸಗಳಿವೆ. ಅವೆರಡೂ ನಮ್ಮ ಎರಡು ಮಹಾಕಾವ್ಯಗಳಲ್ಲಿ ಮಹತ್ವದ ಭಾಗವಾಗಿ ಬಂದಿವೆ. ಒಂದು ರಾಮಾಯಣದ ಶ್ರೀರಾಮನ ವನವಾಸ, ಇನ್ನೊಂದು ಮಹಾಭಾರತದ ಪಾಂಡವರ ವನವಾಸ. ರಾಮಾಯಣದಲ್ಲಿಯೇ ಇನ್ನೊಂದು ವನವಾಸ ವೃತ್ತಾಂತವಿದೆ. ಅದು ಉತ್ತರ ರಾಮಾಯಣದ ಸೀತಾ ವನವಾಸ.
ಇಲ್ಲೆಲ್ಲ ಇವರು ಸಮರ್ಥರಿದ್ದರೂ ಅನ್ಯಕಾರಣದಿಂದ ವನವಾಸಕ್ಕೆ ತೆರಳಿ ಕಷ್ಟಪಡಬೇಕಾಗುತ್ತದೆ. ಇವರೆಲ್ಲರ ವನವಾಸ ಶಾಶ್ವತವಲ್ಲ. ಒಂದು ಸಮಯದ ಬಳಿಕ ಇವರು ತಮಗೆ ಸಲ್ಲಬೇಕಾದ ಸ್ಥಾನವನ್ನು ಪಡೆದುಕೊಂಡವರು.
ಅದಕ್ಕೇ, ಅವನ ವನವಾಸ ಮುಗಿಯಿತು ಎಂದು ಹೇಳುತ್ತಾರೆ. ಅಂದರೆ ಅವನಿಗೆ ತಕ್ಕ ಸ್ಥಾನಮಾನ ದೊರೆಯಿತು ಎಂದು ಅರ್ಥ.