*ಹರಿವ ನೀರಿಗೆ ಇವನ ಅಪ್ಪಣೆ ಬೇಡ

`ಹರಿವ ನೀರಿಗೆ ದೊಣೆ ನಾಯಕನ ಅಪ್ಪಣೆಯೇಕೆ?’ ಎಂಬ ಗಾದೆಯೊಂದು ರೂಢಿಯಲ್ಲಿದೆ. ದೊಣೆ ನಾಯಕ ಹರಿಯುವ ನೀರನ್ನು ಕಾಯುವವನಲ್ಲ. ನೀರು ಅದರ ಪಾಡಿಗೆ ಅದು ಹರಿದು ಹೊಗುತ್ತದೆ. ಅದರ ಮೇಲೆ ಎಲ್ಲರದೂ ಹಕ್ಕಿರುತ್ತದೆ.
ದೊಣೆ ಎಂದರೆ ಕಲ್ಲುಗಳ ಮಡುವಲ್ಲಿ ಸಂಗ್ರಹವಾದ ನೀರು. ನೀರು ಅಪರೂಪವಾಗಿರುವ ಊರುಗಳಲ್ಲಿ ಇಂಥ ದೊಣೆಗಳಲ್ಲಿ ನಿಂತ ನೀರೇ ಆಧಾರ. ಅದನ್ನು ಕಾಯುವುದಕ್ಕೆ ಒಬ್ಬನನ್ನು ನೇಮಿಸುತ್ತಿದ್ದರು. ಈ ದೊಣೆಯನ್ನು ಕಾಯುವವನೇ ದೊಣೆನಾಯಕ. ನೀರನ್ನು ಬಳಸುವಾಗ ಆತನ ಅನುಮತಿ ಪಡೆಯಬೇಕಾಗುತ್ತಿತ್ತು.
ದೊಣೆನಾಯಕ ಅನ್ನುವುದು ತಪ್ಪು ಕಲ್ಪನೆಯಿಂದ ದೊಣ್ಣೆ ನಾಯಕ ಎಂದಾಗಿದೆ. ನಾಯಕ ಅಂದ ಮೇಲೆ ಆತನ ಕೈಯಲ್ಲಿ ದೊಣ್ಣೆ ಇರಬೇಕು ಎಂಬ ಭಾವನೆಯಿಂದ ಹೀಗಾಗಿದ್ದಿರಬಹುದು.