*ಹಿತ್ತಲ ಗಿಡ ಮದ್ದಲ್ಲ

ಗು ಕಂಕುಳಲ್ಲಿಯೇ ಇದೆ. ತನ್ನ ಮಗು ಕಳೆದುಹೋಯಿತು ಎಂದು ತಾಯಿಯೊಬ್ಬಳು ಊರಲ್ಲೆಲ್ಲ ಹುಡುಕಿದಳಂತೆ. ನಾವು ಹುಡುಕಾಡುತ್ತಿರುವ ವಸ್ತು ನಮಗೆ ಕೈಗೆಟಕುವಂತೆಯೇ ಇರುತ್ತದ. ಆದರೆ ಅದು ನಮ್ಮ ಅರಿವಿಗೆ ನಿಲುಕದೆ ಮರುಳರಂತೆ ಇರುತ್ತೇವೆ ನಾವು. ಇಂಥದ್ದನ್ನೆಲ್ಲ ಕಂಡಾಗ ಈ ಮೇಲಿನ ಮಾತನ್ನು ಹೇಳುವುದು ಸಾಮಾನ್ಯ.
ಹಣ ಹಣ ಎಂದು ನಾವು ಒದ್ದಾಡುತ್ತಿರುತ್ತೇವೆ. ಅದೆಷ್ಟೋ ಬಾರಿ ನಾವು ನೆಲದಲ್ಲಿರುವ ನಿಧಿಯ ಮೇಲೆಯೇ ಅಡ್ಡಾಡಿರುತ್ತೇವೆ. ಆದರೆ ನಾವು ತುಳಿದ ಜಾಗದಲ್ಲಿಯೇ ನಿಧಿ ಇದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ.
ಮನೆಯಲ್ಲಿ ಯಾರಿಗೋ ಅನಾರೋಗ್ಯವೆಂದು ವೈದ್ಯರಿಗಾಗಿ ಊರೆಲ್ಲ ಸುತ್ತುತ್ತೇವೆ. ಆದರೆ ಮನೆಯಲ್ಲಿಯೇ ಇರುವ ಅಜ್ಜಿ ಒಂದು ಕಷಾಯ ಮಾಡಿಕೊಟ್ಟರೆ ವೈದ್ಯರ ಅಗತ್ಯವೇ ಬರುವುದಿಲ್ಲ. ಅದನ್ನು ಅರಿಯಬೇಕಲ್ಲವೆ? ಹಿತ್ತಲಗಿಡ ಮದ್ದಲ್ಲ ಎಂಬ ಭಾವನೆಯನ್ನು ತೊಡೆಯಬೇಕು ಮೊದಲು.
ನಮ್ಮ ಎದುರಿಗೇ ಇರುವ ಪ್ರತಿಭೆಯನ್ನು ನಾವು ಗುರುತಿಸುವುದಿಲ್ಲ. ಆದರೆ ಆ ಪ್ರತಿಭೆ ಬೇರೆ ಕಡೆಗಳಲ್ಲಿ ಹೆಸರು ಮಾಡಿದಾಗ, ಅಯ್ಯೋ, ನಮ್ಮೆದುರಿಗಿದ್ದಾಗ ನಾವು ಗುರುತಿಸಲಿಲ್ಲವಲ್ಲ ಎಂದು ಹಳಹಳಿಸುತ್ತೇವೆ.
ಒಟ್ಟಾರೆ ಇದು ಹೇಳುವುದು ಇಷ್ಟೇ, ಪರಿಹಾರವೋ ಸಾಧನವೋ ಗುರಿಯೋ ಏನೇ ಇರಲಿ ಮೊದಲು ನಿಮ್ಮ ಸನಿಹದಲ್ಲೇ ಹುಡುಕಿ, ಅಲ್ಲಿಯೇ ಸಿಗಬಹುದು ನಿಮಗೆ. ಮನೆ ಗೆದ್ದು ಮಾರು ಗೆಲ್ಲು ಎಂಬ ಮಾತಿದೆಯಲ್ಲ.