*ಊರವರ ಕಣ್ಣೆಲ್ಲ ಇವಳ ಮ್ಯಾಲೆ

ಜಂಬದ ಕೋಳಿಯಂಥ ಹೆಂಗಸನ್ನು ಕಂಡಾಗ, ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಪಡುವ ಹೆಂಗಸನ್ನು ಕಂಡಾಗ, `ಊರಿಗೊಬ್ಬಳೇ ಪದ್ಮಾವತಿ ಅನ್ನುವ ಹಾಗೆ ಮೆರೆದಾಡ್ತವ್ಳೆ’ ಎಂದು ಕೊಂಡು ನುಡಿ ಆಡುವುದನ್ನು ಕೇಳಿದ್ದೇವೆ.
ಯಾರು ಇವಳು ಪದ್ಮಾವತಿ? ಪದ್ಮಾವತಿ ಸುಂದರಿ, ಸುರಸುಂದರಿ. ಊರಿನ ವೇಶ್ಯೆ. ಊರಿನ ಕಣ್ಣೆಲ್ಲ ಇವಳ ಮ್ಯಾಲೇ. ಅವಳಲ್ಲಿಗೆ ಹೋಗಬೇಕೆಂದರೆ ತುಂಬಾ ಹಣ ಇರಬೇಕು, ಚೆಲುವು ಇರಬೇಕು, ಜೊತೆಯಲ್ಲಿ ಪಾಳಿ ಹಚ್ಚಬೇಕು. ಹೀಗಾಗಿ ಪದ್ಮಾವತಿಗೆ ಡಿಮ್ಯಾಂಪ್ಪೋ ಡಿಮ್ಯಾಂಡ್‌.
ಇಷ್ಟು ಡಿಮ್ಯಾಂಡ್‌ ಇದ್ದ ಮೇಲೆ ಅವಳು ಜಂಬದ ಕೋಳಿಯಂತಾಡಿದರೆ ಸಹಜ ಎನ್ನಬಹುದು. ಇಂಥದ್ದು ಏನೂ ಇಲ್ಲದ ಸಾಮಾನ್ಯ ಹೆಂಗಸು ಹಾಗೆಲ್ಲ ಜಂಬ ತೋರಿಸಿದರೆ ಸಹಿಸಲು ಸಾಧ್ಯವೆ? ಊರಿಗೊಬ್ಬಳೇ ಪದ್ಮಾವತಿನೇ ಅವಳು?
ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ದೃಷ್ಟಿಯಿಂದ ನಮ್ಮ ಪೂರ್ವಜರು ವೇಶ್ಯೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಕೊಟ್ಟಿದ್ದರು. ವೇಶ್ಯೆಯರು ಇಲ್ಲದಿದ್ದರೆ ಕಾಮುಕರ ಕಣ್ಣು ಸಂಸಾರಸ್ಥ ಸ್ತ್ರೀಯರ ಮೇಲೆ ಬಿದ್ದುಬಿಡುವ ಅಪಾಯ ಇತ್ತು.