ದಿ ಗ್ರೇಟ್‌ ಸ್ಪೈ ಬ್ಲ್ಯಾಕ್‌ ಟೈಗರ್‌ ರವೀಂದ್ರ ಕೌಶಿಕ್‌

ಆತನ ಹೆಸರು ರವೀಂದ್ರ ಕೌಶಿಕ್‌. ಸ್ಪುರದ್ರೂಪಿ ತರುಣ. ಕಾಲೇಜಿನಲ್ಲಿ ಆತನ ಸ್ನೇಹಿತರೆಲ್ಲ ಅವನನ್ನು ದೇವಾನಂದ ಎಂದೋ ವಿನೋದ ಖನ್ನಾ ಎಂದೋ ಪ್ರೀತಿಯಿಂದ ಕರೆಯುತ್ತಿದ್ದರು. ಸಾಲದ್ದಕ್ಕೆ ಆತ ಶಾಲೆಯ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ. ಅವನೊಳಗೊಬ್ಬ ನಟನಿದ್ದ. ಅವನಿಗೆ ಏನಾದರೂ ಅವಕಾಶಗಳು ಒದಗಿ ಬಂದಿದ್ದರೆ ಬಾಲಿವುಡ್‌ನಲ್ಲಿ ಒಬ್ಬ ಉತ್ತಮ ನಟನಾಗಿ ಆತ ಮಿಂಚುತ್ತಿದ್ದ. ಮಾನವ ಒಂದು ಬಗೆದರೆ ದೈವ ಇನ್ನೊಂದು ಬಗೆಯಿತಂತೆ. ರವೀಂದ್ರ ಕೌಶಿಕ್‌ ಅಲಿಯಾಸ್‌ ನಬಿ ಅಹ್ಮದ್‌ ಶಕೀರ್‌ ರಾಜಸ್ಥಾನದ ಪಂಜಾಬ್‌ ಗಡಿ ಭಾಗದ ಶ್ರೀ ಗಂಗಾನಗರ ಎಂಬಲ್ಲಿ...

ಪರಮಾಣು ಯುದ್ಧ ತಡೆದ ಗೋರ್ಡಿಯೆವ್ಸಕಿ

ಓಲೆಗ್‌ ಆಂಟೋನಿಯೋವಿಚ್‌ ಗೋರ್ಡಿಯೆವ್ಸಕಿ ಸೋವಿಯತ್‌ ರಷ್ಯಾದ ಕೆಜಿಬಿಯ ಮಾಜಿ ಕರ್ನಲ್‌ ಮತ್ತು ಕೆಜಿಬಿಯ ಕೆಲಸ ಮಾಡಲು ಲಂಡನ್ನಿಗೆ ನೇಮಕಗೊಂಡಿದ್ದ ಅಧಿಕಾರಿ ಹಾಗೂ ಲಂಡನ್‌ ಕಚೇರಿಯ ಮುಖ್ಯಸ್ಥ. ಆತ ಬ್ರಿಟಿಷ್‌ ರಹಸ್ಯ ಬೇಹುಗಾರಿಕೆ ಸೇವೆಯ ಸೀಕ್ರೆಟ್‌ ಏಜೆಂಟ್‌ ಆಗಿ 1974ರಿಂದ 1985ರ ವರೆಗೆ ಕೆಲಸ ಮಾಡಿದ್ದನು. ಒಬ್ಬ ಎನ್‌ಕೆವಿಡಿ (ರಷ್ಯಾದ ಒಳಾಡಳಿತ ಸಚಿವಾಲಯ) ಅಧಿಕಾರಿಯ ಮಗನಾಗಿ 1938ರ ಅಕ್ಟೋಬರ್‌ 10ರಂದು ಜನಿಸಿದ ಓಲೆಗ್‌ ಶಾಲೆಯಲ್ಲಿ ಅದ್ಭುತ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರು ಮಾಡಿದ್ದನು. ಅಲ್ಲಿ ಆತ ಜರ್ಮನ್‌ ಭಾಷೆಯನ್ನು ಮಾತನಾಡುವುದಕ್ಕೆ...

ಸೋವಿಯತ್‌ಗೆ ಪರಮಾಣು ಬಾಂಬ್‌ ತಯಾರಿಕೆ ರಹಸ್ಯ ಕದ್ದು ಕೊಟ್ಟ ಫುಕ್ಸ್‌

ಎಮಿಲ್‌ ಕ್ಲೌಸ್‌ ಫುಕ್ಸ್‌ ಜರ್ಮನಿಯ ನಾಗರಿಕ. ಲುಥೆರನ್‌ದ ಪಾಸ್ಟರ್‌ ಒಬ್ಬರ ಮಗ. 1911ರ ಡಿಸೆಂಬರ್‌ 29ರಂದು ಜನಿಸಿದ ಅವರು ಐಸೆನಾಚ್‌ ಎಂಬಲ್ಲಿ ತಮ್ಮ ಒಡಹುಟ್ಟಿದವರೊಂದಿಗೆ ಶಾಲೆಗೆ ಹೋಗಿದ್ದರು. ಅಲ್ಲಿ ಅವರ ತಂದೆಯ ಜನಪ್ರಿಯವಲ್ಲದ ರಾಜಕೀಯ ನಿಲವುಗಳಿಗಾಗಿ ಇವರನ್ನು ರೆಡ್‌ ಫಾಕ್ಸಸ್‌ ಎಂದು ಸ್ನೇಹಿತರು ಹೀಗಳೆಯುತ್ತಿದ್ದರು. ಫುಕ್ಸ್‌ ಎಂಬುದು ಫಾಕ್ಸ್‌ ಎಂಬುದರ ಜರ್ಮನ್‌ ಪದ. ಫುಕ್ಸ್‌ ಲೀಪ್‌ಝಿಗ್‌ ಯುನಿವರ್ಸಿಟಿಗೆ ಹೋಗಿದ್ದರು. ಅವರು ಜರ್ಮನ್‌ ಕಮ್ಯುನಿಸ್ಟ್‌ ಪಾರ್ಟಿಯನ್ನು 1930ರಲ್ಲಿ ಸೇರಿದರು. ನಾಝಿಗಳು ಅಧಿಕಾರಕ್ಕೆ ಬಂದಾಗ ಅವರು 1933ರಲ್ಲಿ ಬಲವಂತವಾಗಿ ಬ್ರಿಟನ್ನಿಗೆ...

ಅಮೆರಿಕದ ವಿಮಾನ ಬೇಹುಗಾರಿಕೆ

ರಷ್ಯಾದೆದುರು ತಪ್ಪೊಪ್ಪಿಕೊಂಡ ಅಮೆರಿಕದ ಅಧ್ಯಕ್ಷ ಐಸೆನ್‌ಹೋವರ್‌ ಪ್ರತಿಯೊಂದು ದೇಶವೂ ತನ್ನ ಸೌರ್ವಭೌಮತ್ವವನ್ನು ಅಖಂಡವಾಗಿ ಉಳಿಸಿಕೊಳ್ಳಲು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ದೇಶದ ಗಡಿಗಳನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ ಇತರ ದೇಶದವರು ಯಾವ ರೀತಿಯ ಸನ್ನದ್ಧತೆಯಲ್ಲಿದ್ದಾರೆ ಎಂದು ಅರಿತುಕೊಳ್ಳುವುದೂ ಅಷ್ಟೇ ಮಹತ್ವದ್ದು. ಜಗತ್ತಿನ ಎರಡು ಬಲಾಢ್ಯ ರಾಷ್ಟ್ರಗಳು ಅಮೆರಿಕ ಮತ್ತು ರಷ್ಯಾ. ರಷ್ಯಾ ಈ ಮೊದಲು ಸೋವಿಯತ್‌ ಒಕ್ಕೂಟವಾಗಿತ್ತು. ಒಂದು ಬಲಿಷ್ಠವಾದ ಪ್ರಜಾಪ್ರಭುತ್ವ ರಾಷ್ಟ್ರವಾದರೆ ಇನ್ನೊಂದು ಕಮ್ಯುನಿಸ್ಟ್‌ ರಾಷ್ಟ್ರ. ಎರಡನೆ ಮಹಾಯುದ್ದದ ಬಳಿಕ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ಹಾವು...

ಗೂಢಚರ್ಯದ ಮೇಲೊಂದು ಬೇಹುಗಾರಿಕೆ

ಪೀಠಿಕೆ ಒಂ ದು ರಾಷ್ಟ್ರದ ಸುರಕ್ಷತೆಯ ವಿಷಯದಲ್ಲಿ ಬೇಹುಗಾರಿಕೆ ಅರ್ಥಾತ್‌ ಗೂಢಚರ್ಯ ಅತ್ಯಂತ ಮಹತ್ವದ್ದು. ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಅವಿಭಾಜ್ಯ ಅಂಗ ಗೂಢಚರ್ಯ. ಒಂದು ದೇಶ ತನ್ನ ಸೈನ್ಯವನ್ನು, ವ್ಯೂಹಾತ್ಮಕ ತಂತ್ರಗಳನ್ನು, ಶಸ್ತ್ರಸಂಗ್ರಹಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ ತನಗೆ ಸವಾಲೆಸೆಯಬಲ್ಲ ದೇಶ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದೆ ಎಂದು ಅರಿಯುವುದೂ ಅಷ್ಟೇ ಮುಖ್ಯ. ಇದನ್ನು ಅರಿಯುವುದಕ್ಕೆ ಬೇಹುಗಾರಿಕೆ ಅತ್ಯಗತ್ಯ. ಪುರಾತನ ಕಾಲದಲ್ಲಿ ಸಾಂದ್ರದಾಯಿಕ ರೀತಿಯಲ್ಲಿ ಬೇಹುಗಾರಿಕೆಯನ್ನು ನಡೆಸಲಾಗುತ್ತಿತ್ತು. ಇಂದು ವಿಜ್ಞಾನ ತಂತ್ರಜ್ಞಾನಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು ಅದರ...

ನಾಝಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಒಂಟಿ ಕಾಲಿನ ಮಹಿಳೆ

ವರ್ಜಿನಿಯಾ ಹಾಲ್‌ ಅಮೆರಿಕದ ಅತ್ಯಂತ ಮಹತ್ವದ ಬೇಹುಗಾರರಲ್ಲಿ ಒಬ್ಬಳು. ಆದರೆ ಬಹುತೇಕರಿಗೆ ಅವಳ ಕುರಿತು ಗೊತ್ತೇ ಇಲ್ಲ. ಅಮೆರಿಕದ ಬೇಹುಗಾರಿಕೆಯ ಕೇಂದ್ರ ಕಚೇರಿ ಲಾಂಗ್ಲೆಯಲ್ಲಿಯ ಸಿಐಎ ಮ್ಯೂಸಿಯಂನ ಒಳಗೆ ಆಕೆಯ ಸಾಹಸಗಾಥೆಯ ಪ್ರದರ್ಶನವಿದೆ. ಆದರೆ ಇದು ಸಾರ್ವಜನಿಕರಿಗೆ ಸುಲಭದಲ್ಲಿ ಲಭ್ಯವಿಲ್ಲ. ಎರಡನೆ ಮಹಾಯುದ್ದದ ಸಮಯದಲ್ಲಿಯ ಅತ್ಯಂತ ವರ್ಣರಂಜಿತ ಮಹಿಳಾ ನಾಗರಿಕಳು ವರ್ಜಿನಿಯಾ ಹಾಲ್‌. ಹಾಗೆಂದು ಪ್ರವಾಸಿಗಳಿಗೆ ಮ್ಯೂಸಿಯಂನ ಡೆಪ್ಯೂಟಿ ಡೈರೆಕ್ಟರ್‌ ಜೆನೆಲ್ಲೆ ನೀಸೆಸ್‌ ಹೇಳುತ್ತಾರೆ. ಹಾಗಾದರೆ ವರ್ಜಿನಿಯಾ ಹಾಲ್‌ ಬಗ್ಗೆ ಬಹಳ ಜನರಿಗೆ ಗೊತ್ತಿರದೆ ಇರುವುದಕ್ಕೆ ಕಾರಣವೇನು?...