ಆರಂಭ ಕಾಲದ ಪತ್ರಿಕೆ ಮತ್ತು ಸಾಹಿತ್ಯ ಹತ್ತೊಂಬತ್ತನೆ ಶತಮಾನದ ಆರಂಭ ಕಾಲದ ಸಾಹಿತ್ಯ ಕೃತಿಗಳನ್ನು ಗಮನಿಸಿದಾಗ ಭಾಷೆ ನಡುಗನ್ನಡದಿಂದ ಹೊಸಗನ್ನಡದತ್ತ ಹೊರಳುತ್ತಿರುವುದನ್ನು ಕಾಣಬಹುದು. ಕನ್ನಡ ಸಾಹಿತ್ಯವು ಆಧುನಿಕ ರೂಪವನ್ನು ಪಡೆದುಕೊಳ್ಳತೊಡಗಿದ್ದು ಹಾಗೂ ಕನ್ನಡದಲ್ಲಿ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸರಿಸುಮಾರು ಒಂದೇ ಕಾಲದಲ್ಲಿ. ಇದು ಹತ್ತೊಂಬತ್ತನೆ ಶತಮಾನದ ಮಧ್ಯಭಾಗ. ೧೮೪೨ರ ಮಂಗಳೂರು ಸಮಾಚಾರ'ದ ವೇಳೆಗೆ ಕನ್ನಡ ಸಾಹಿತ್ಯ ಹಲವು ಬಗೆಗಳಲ್ಲಿ ಬೆಳೆದಿತ್ತು. ಆಧುನಿಕ ವಿದ್ಯಾಭ್ಯಾಸ, ಕ್ರೈಸ್ತ ಪಾದ್ರಿಗಳ ಧರ್ಮ ಪ್ರಚಾರ, ಅದಕ್ಕಾಗಿ ಅವರು ಮಾಡಿದ ಬೈಬಲ್ ಅನುವಾದ, ಹಿಂದೂ ಧರ್ಮವನ್ನು...
ಪ್ರಸ್ತಾವನೆ ಅಧ್ಯಯನದ ವ್ಯಾಪ್ತಿ ಮತ್ತು ಉದ್ದೇಶ: ಕನ್ನಡ ಸಾಹಿತ್ಯ ಹಲವು ಘಟ್ಟಗಳಲ್ಲಿ ಹಾಯ್ದು ಬರುವಾಗ ವಿಭಿನ್ನ ರೀತಿಯ ಪ್ರಭಾವಗಳಿಗೆ ಒಳಗಾಗುತ್ತ, ಅದರಿಂದ ಪುಷ್ಟಗೊಳ್ಳುತ್ತ ಬಂದಿದೆ. ಇಂಥ ಪ್ರಭಾವಗಳನ್ನು ಕಾಲಕಾಲಕ್ಕೆ ವಿದ್ವಾಂಸರು ಗುರುತಿಸುತ್ತ ದಾಖಲಿಸುತ್ತ ಬಂದಿದ್ದಾರೆ. ಸಾಹಿತ್ಯಕ್ಕೆ ಸಮಾಜವು ಪ್ರತಿಸ್ಪಂದಿಸಿದುದರ ಪರಿಣಾಮವಿದು ಎಂದು ಹೇಳಬಹುದು. ಇಂತಹ ಪ್ರತಿಸ್ಪಂದನ ಪತ್ರಿಕೆಗಳ ಮೂಲಕವೇ ಹೆಚ್ಚು ಪ್ರಕಟವಾಗಿ ಸಾಹಿತ್ಯವನ್ನು ಪೋಷಿಸಿವೆ. ಆಧುನಿಕ ಕಾಲದಲ್ಲಿ ಪತ್ರಿಕೆಗಳು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ. ಬದುಕಿನ ಆಗುಹೋಗುಗಳನ್ನು ದಾಖಲಿಸುತ್ತ ವರದಿ ಮಾಡುವ ಪತ್ರಿಕೆಗಳು ಒಂದು...
ಸಾಹಿತ್ಯಪತ್ರಿಕೆಗಳ ಸ್ವರೂಪ ಮತ್ತು ಇತಿಹಾಸ ೧. ಸ್ವರೂಪ: ಪತ್ರಿಕೆಗಳು ಹುಟ್ಟುವುದಕ್ಕೆ ಮುದ್ರಣ ಯಂತ್ರದ ಶೋಧ ಒಂದು ಪ್ರಬಲವಾದ ಕಾರಣವಾಗಿದೆ. ಅದೇ ರೀತಿ ಆಧುನಿಕ ಸಾಹಿತ್ಯದ ಬೆಳವಣಿಗೆಯಲ್ಲೂ ಮುದ್ರಣ ಯಂತ್ರದ ಪಾತ್ರವೂ ದೊಡ್ಡದೇ. ಐತಿಹಾಸಿಕವಾಗಿ ಗಮನಿಸಿದಾಗ ಗುಟನ್‌ಬರ್ಗ್ ಎಂಬಾತ ೧೪೪೦ರಲ್ಲಿ ಯುರೋಪಿನಲ್ಲಿ ಮೊದಲ ಮುದ್ರಣ ಯಂತ್ರವನ್ನು ಸ್ಥಾಪಿಸಿದ. ಚೀನ ದೇಶದಲ್ಲಿ ಕ್ರಿ.ಶ. ೮೬೮ರಲ್ಲಿಯೇ ಆ ದೇಶ ಭಾಷೆಯ ಅಕ್ಷರ ಮೊಳೆಗಳನ್ನು ತಯಾರಿಸಿ ಪುಸ್ತಕವೊಂದನ್ನು ಮುದ್ರಿಸಲಾಗಿತ್ತು. ಪ್ರಪಂಚದ ಮೊದಲ ಪತ್ರಿಕೆ ೧೬೧೫ರಲ್ಲಿ ಜರ್ಮನಿಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನ ಮೊದಲ ಪತ್ರಿಕೆ ೧೬೨೨ರಲ್ಲಿ...
ಆಧುನಿಕ ಕನ್ನಡ ಸಾಹಿತ್ಯದಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಾದರಪಡಿಸಿದ ಮಹಾಪ್ರಬಂಧ ಸಂಶೋಧನೆ ವಾಸುದೇವ ಶೆಟ್ಟಿ ಮಾರ್ಗದರ್ಶನ ಡಾ.ಮೋಹನ ಕುಂಟಾರ್ ಭಾಷಾಂತರ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ- ೫೮೩ ೨೭೬ ೨೦೦೨ — ದೃಢೀಕರಣ ಪತ್ರ ಶ್ರೀ ವಾಸುದೇವ ಶೆಟ್ಟಿ ಇವರು ‘ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಎಂಬ ಶೀರ್ಷಿಕೆಯ ಮಹಾಪ್ರಬಂಧವನ್ನು ನನ್ನ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಭಾಷಾ ನಿಕಾಯದ ಭಾಷಾಂತರ ವಿಭಾಗಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸುತ್ತಿರುವ...
ಶೀತಲ ಯುದ್ಧದ ಸಮಯದಲ್ಲಿ ಬ್ರಿಟನ್ನಿನ ಬೇಹುಗಾರನಾಗಿ ನಿಯುಕ್ತನಾಗಿದ್ದ ವ್ಯಕ್ತಿಯೊಬ್ಬ ರಶಿಯಾದ ಕೆಜಿಬಿಗೆ ಕೆಲಸ ಮಾಡಿ ಯುರೋಪಿನ ನೂರಾರು ಬೇಹುಗಾರರ ಪ್ರಚ್ಛನ್ನ ಬದುಕಿನ ಬಗ್ಗೆ ಮಾಹಿತಿ ನೀಡಿ ಹಲವರ ಹತ್ಯೆಗೆ ಕಾರಣನಾದ ರೋಚಕ ಕಥೆ ಇದು. ಆತ ಡಬ್ಬಲ್ ಏಜೆಂಟ್ ಜಾರ್ಜ್ ಬ್ಲೇಕ್. ಇದೀಗ ರಶಿಯಾದಲ್ಲಿ ನೆಮ್ಮದಿಯ ಬದುಕನ್ನು ಕಳೆಯುತ್ತಿರುವ ಬ್ಲೇಕ್ ಇತ್ತೀಚೆ ತಮ್ಮ 97ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ವಿದ್ರೋಹದಿಂದ ಯುರೋಪಿನ ನೂರಾರು ಗುಪ್ತ ಏಜೆಂಟರ ಹತ್ಯೆ ನಡೆದುಹೋಯಿತು. ಅವರ ಬಾಯಿಂದಲೇ ಅವರ ಕತೆಯನ್ನು ಕೇಳಿ. ಗಿಲ್ಲಿಯನ್...
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ವರ್ಷಗಳು ಉರುಳುತ್ತ ಹೋದಂತೆ ಆ ಹೋರಾಟದಲ್ಲಿ ಧೈರ್ಯವನ್ನು ಮೆರೆದು ತ್ಯಾಗ ಬಲಿದಾನ ಮಾಡಿದ ಹಲವರ ನೆನಪುಗಳು ಜನಮಾನಸದಿಂದ ಮರೆಯಾಗುತ್ತಿವೆ. ಬರೆಹಗಾರರು, ಇತಿಹಾಸಕಾರರು ಯಾವ ಪ್ರಮಾಣದಲ್ಲಿ ಮಹತ್ವವನ್ನು ನೀಡಬೇಕಿತ್ತೋ ಅಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡಿಲ್ಲ. ಕೆಲವರಿಗಷ್ಟೇ ಗೊತ್ತಿರುವ ಅಂಥ ಮಹಾನುಭಾವರಲ್ಲಿ ಒಬ್ಬಳು ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್‌ಎ)ಯಲ್ಲಿ ಗೂಢಚಾರಿಣಿಯಾಗಿ ಕೆಲಸವನ್ನು ಮಾಡಿದ ಸರಸ್ವತಿ ರಾಜಮಣಿಯೂ ಒಬ್ಬಳು. ಸರಸ್ವತಿ ರಾಜಮಮಣಿಯು 1927ರಲ್ಲಿ ಬರ್ಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದಳು. ಅವಳ ತಂದೆ ತಿರುಚಿಯವರು....
ಒಂದು ದೇಶ ಇನ್ನೊಂದು ದೇಶದ ಮೇಲೆ ದಂಡೆತ್ತಿ ಬಂದಾಗ ಅದನ್ನು ವಿರೋಧಿಸುವ ಯಾವುದೇ ವ್ಯಕ್ತಿಗೆ ಮೊದಲ ಮಹಾಯುದ್ದದ ಸಮಯದಲ್ಲಿ ನೇರವಾಗಿ ಸ್ಪೈ ಅಂದರೆ ಗೂಢಚಾರ ಎಂದು ಕರೆಯುತ್ತಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಇದಕ್ಕೆ ರೆಸಿಸ್ಟಂಟ್ ಅಂದರೆ ಪ್ರತಿರೋಧ ವ್ಯಕ್ತಪಡಿಸುವವನು ಎಂಬ ಪದ ಚಾಲನೆಗೆ ಬಂತು. ಮೊದಲ ಮಹಾಯುದ್ಧದ ಸಮಯದಲ್ಲಿ ಈ ಪ್ರತಿರೋಧಕ್ಕಾಗಿ ಯುರೋಪಿನಲ್ಲಿ ಅಲಿಸ್ ನೆಟ್‌ವರ್ಕ್ ದೊಡ್ಡ ಹೆಸರಾಗಿತ್ತು. ಇದನ್ನು ನಡೆಸುತ್ತಿದ್ದವಳು ಒಬ್ಬ ಹುಡುಗಿ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ಆ ಯುವತಿ ಲೂಯಿಸೆ ಡೆ ಬೆಟ್ಟಿಗ್ನಿಸ್....
ಒಪೆರಾ ಒಂದರಲ್ಲಿ ಹಾಡುಗಾರನಾಗಿದ್ದ ವ್ಯಕ್ತಿಯೊಬ್ಬನು ಗೂಢಚಾರನಾಗಿ ನಡೆಸಿದ ಈ ವಿಲಕ್ಷಣವಾದ ಲೈಂಗಿಕತೆ, ಗೂಢಚರ್ಯೆಯ ಹಗರಣವು ಪ್ರಾರಂಭವಾಗಿದ್ದು ಚೀನಾದ ಬೀಜಿಂಗ್‌ನಲ್ಲಿ 1964ರಲ್ಲಿ. ಶಿ ಪೀ ಪು ಎಂಬ ಹೆಸರಿನ ಈ ವ್ಯಕ್ತಿಯು ಫ್ರೆಂಚ್ ದೂತಾವಾಸದ ಗುಮಾಸ್ತ ಬೆರ್ನಾರ್ಡ್ ಬೌರ್ಸಿಕೋಟ್ ಎಂಬಾತನನ್ನು ಭೇಟಿಮಾಡುತ್ತಾನೆ. ಈ ಬೌರ್ಸಿಕೋಟ್ ತನ್ನ ನಿಯಮಿತ ಕೆಲಸದ ಜೊತೆಯಲ್ಲಿ ರಾಜತಾಂತ್ರಿಕರ ಕುಟುಂಬದವರಿಗೆ ಇಂಗ್ಲಿಷ್ ಕಲಿಸುತ್ತಿದ್ದನು. ಈ ಶಿ ಪೀ ಪು ಎಂಥ ಚಾಣಾಕ್ಷ ಎಂದರೆ ತಾನೊಬ್ಬ ಪುರುಷ ವೇಷದಲ್ಲಿರುವ ಮಹಿಳೆ ಎಂದು ನಂಬಿಸುತ್ತಾನೆ. ಇಬ್ಬರ ನಡುವೆ ಪ್ರೇಮ...
- ಇವನನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಸ್ಟಾಲಿನ್ ಕೈಬಿಟ್ಟ ಪತ್ರಕರ್ತನ ಸೋಗಿನಲ್ಲಿ ಸೋವಿಯತ್ ರಷ್ಯಾದ ಪರವಾಗಿ ಜಪಾನಿನಲ್ಲಿ ಬೇಹುಗಾರಿಕೆ ನಡೆಸಿದ ಜರ್ಮನ್ ಸಂಜಾತ ರಿಚರ್ಡ್ ಸೋರ್ಜ್ ವರ್ಣರಂಜಿತ ಬದುಕನ್ನು ಬದುಕಿದವನು. ರಸಿಕ ಶಿಖಾಮಣಿಯೇ ಆಗಿದ್ದ ಈತ ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನ ದೇಶವು ರಷ್ಯಾದ ಮೇಲೆ ಪೂರ್ವ ಭಾಗದಲ್ಲಿ ದಾಳಿ ಮಾಡುವುದಿಲ್ಲ, ಆದರೆ ಜರ್ಮನಿಯು ಮಾಸ್ಕೋ ಮೇಲೆ ದಾಳಿಗೆ ಸಿದ್ಧವಾಗಿದೆ ಎಂಬ ಮಹತ್ವದ ಸಂದೇಶವನ್ನು ತಲುಪಿಸಿದನು. ನಾಝಿ ಜರ್ಮನಿ ಮತ್ತು ಜಪಾನ್ ಚಕ್ರಾಧಿಪತ್ಯದಲ್ಲಿ ಒಬ್ಬ ಜರ್ಮನಿಯ ಪತ್ರಕರ್ತನಂತೆ...
ಹೀರೋ ಎಂಬ ಸಂಕೇತ ನಾಮ ಹೊಂದಿದ್ದ ಒಲೆಗ್ ವ್ಲಡಿಮಿರೋವಿಚ್ ಪೆಂಕೋವ್ಸಕಿ ನಿಜಕ್ಕೂ ಗೂಢಚರ್ಯ ಲೋಕದ ಒಬ್ಬ ಹೀರೋನೇ ಆಗಿದ್ದನು. ಆತ ಸೋವಿಯತ್ ಮಿಲಿಟರಿ ಇಂಟೆಲಿಜೆನ್ಸ್ (ಜಿಆರ್‌ಯು)ನಲ್ಲಿ 1950 ಮತ್ತು 60ರ ದಶಕದಲ್ಲಿ ಕರ್ನಲ್ ಆಗಿದ್ದ. ಈತ ಸೋವಿಯತ್ ಕಣ್ಣಿಗೆ ಮಣ್ಣೆರಚಿ ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ ಮಹತ್ವದ ಮಾಹಿತಿಗಳನ್ನು ಒದಗಿಸುತ್ತಿದ್ದನು. ಸೋವಿಯತ್ ಒಕ್ಕೂಟವು ಕ್ಯೂಬಾದಲ್ಲಿ ಕ್ಷಿಪಣಿಗಳನ್ನು ನೆಲೆಗೊಳಿಸಿದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿದವನು ಇವನು. ಇದರಿಂದ ಆ ಎರಡು ದೇಶಗಳು ಸೋವಿಯತ್ ಎದುರು ಸೈನಿಕವಾಗಿ ಸಜ್ಜುಗೊಳ್ಳುವುದಕ್ಕೆ ನೆರವಾಯಿತು. ಎರಡನೆ ಮಹಾಯುದ್ದದ...