ತಮ್ಮದೆನ್ನುವ ಊರು ಬಿಟ್ಟ ನನ್ನಂಥವರಿಗೆ ಊರ ದಾರಿ ಬಹು ದೂರ ಮತ್ತು ಅಷ್ಟೇ ಹತ್ತಿರ ಕೂಡ. ದೂರ ಏಕೆಂದರೆ ನಾವು ಊರಿಗೆ ಹೋಗುವುದೇ ಅಪರೂಪವಾಗಿರುತ್ತದೆ. ಹೋಗಬೇಕು ಅಂದುಕೊಂಡಾಗಲೆಲ್ಲ ಏನೇನೋ ಅಡಚಣೆಗಳು ಎದುರಾಗಿ ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಹತ್ತಿರ ಏಕೆಂದರೆ ಅನಕ್ಷಣವೂ ನಾವು ನಮ್ಮೂರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ನಮ್ಮ ಹೃದಯದ ಚಿಪ್ಪಿನಲ್ಲಿ ಅಡುಗಾಗಿ ವಾಸನೆಯಾಡುತ್ತಲೇ ಇರುತ್ತದೆ ನಮ್ಮೂರು. ನಮ್ಮ ಮಾತಿನಲ್ಲಿ, ಅಷ್ಟೇಕೆ ನಮ್ಮ ಇರುವಿಕೆಯಲ್ಲಿಯೇ ನಮ್ಮ ಎದುರಿನವರಿಗೆ ನಮ್ಮೂರು ಪ್ರತಿಫಲಿಸುತ್ತಿರುತ್ತದೆ. ಪ್ರತಿ ಬಾರಿ ಊರಿಗೆ ಹೋಗುವಾಗಲೂ ಒಂದು...