ಲೇಖನ

ಕಂಬಾರರಿಗೇ ಏಕೆ ಜ್ಞಾನಪೀಠ, ಭೈರಪ್ಪಗೇಕಿಲ್ಲ?

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ  ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು. ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ...

ಮಾತನಾಡದೆ ಸಾಹಿತ್ಯ ವಿಶ್ವ ಗೆದ್ದ ಗುಆನ ಮೋಯೆ

ಮಾತನಾಡಬೇಡ.(Don`t Speak) ಇದು ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಚೀನದ ಸಾಹಿತಿ ಗುಆನ್ ಮೋಯೆಯ ಕಾವ್ಯನಾಮ “ಮೋ ಯಾನ್” ಎಂಬುದರ ಅರ್ಥ. ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತಿನ ಮಹತ್ವವನ್ನು ವರ್ಣಿಸಿದ ನಾಡು ನಮ್ಮದು. ಆದರೆ ಚೀನದಂಥ ಕಮ್ಯುನಿಸ್ಟ್ ದೇಶದಲ್ಲಿ ಇಲ್ಲವೆ ಮಿಲಿಟರಿ ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಸೃಜನಶೀಲ ಬರೆಹಗಾರನೊಬ್ಬನ ಸ್ಥಿತಿ ಇದು. ಈ ಸ್ಥಿತಿಯನ್ನೇ ತನ್ನ ಕಾವ್ಯನಾಮ ಮಾಡಿಕೊಂಡ ಗೋಆನ್ ಮೋಯೆ ಒಂದರ್ಥದಲ್ಲಿ ವ್ಯವಸ್ಥೆಗೆ ಧಿಕ್ಕಾರ ಹೇಳಿದವರು. ತಮ್ಮ ದೇಶದ ಸಾಮಾಜಿಕ ಮತ್ತು...

ಎದೆಯೊಳಗೆ ಬಿಚ್ಚಿಟ್ಟ ಮುತ್ತು: ಕನ್ನಡ

ಕನ್ನಡದ ಮೇಲೆ ಅನ್ಯ ಭಾಷೆಗಳು, ಕರ್ನಾಟಕದ ಮೇಲೆ ಕನ್ನಡೇತರ ದೊರೆಗಳು ಆಡಳಿತ ನಡೆಸುತ್ತ ಬಂದಿದ್ದರು. ‘ಭಾಷೆ’ ಎನ್ನುವುದೇ ಕನ್ನಡವಲ್ಲ. ‘ನುಡಿ’ ಎಂಬುದು ಕನ್ನಡ. ಕನ್ನಡ ನುಡಿಯ ಮೇಲೆ ಅನ್ಯ ಭಾಷೆಗಳ ಆಕ್ರಮಣವನ್ನುವಿರೋಧಿಸುವ ಪ್ರಯತ್ನ ಕಾಲಕಾಲಕ್ಕೆ ನಡೆಯುತ್ತಲೇ ಬಂದಿದೆ. ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಪಣ ತೊಡುವ ಇನ್ನೊಂದು ಮುಹೂರ್ತ ನಿಗದಿಯಾಗಿದೆ. ಅಯ್ಯೋ, ಈ ವಾಕ್ಯವನ್ನೂ ಇಡಿಯಾಗಿ ಕನ್ನಡದಲ್ಲೇ ಹೇಳುವುದಕ್ಕೆ ಆಗುತ್ತಿಲ್ಲವಲ್ಲ. ಈ ಮುಹೂರ್ತ ಎಲ್ಲಿಂದ ಬಂತು? ಮುಹೂರ್ತಕ್ಕೆ ಕನ್ನಡದಲ್ಲಿಯೇ ಪದ ಇಲ್ಲವೆ? ಗಳಿಗೆಯೆ, ಕ್ಷಣವೆ, ಕಾಲವೆ.. ಓಹೋ! ಇವು ಒಂದೂ ಕನ್ನಡವಲ್ಲವಲ್ಲ!...

ಆಮರಣ ಉಪವಾಸ ಸತ್ಯಾಗ್ರಹ ಎಷ್ಟು ಸರಿ?

ಈ ದೇಶದ ಕಾನೂನು ಯಾರಿಗೂ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿಲ್ಲ. ಬೇರೆಯವರ ಜೀವವನ್ನು ತೆಗೆಯುವುದು ಹೇಗೆ ಅಪರಾಧವೋ ತಮ್ಮ ಜೀವವನ್ನು ತೆಗೆದುಕೊಳ್ಳುವುದೂ ಅಪರಾಧವೇ. ಇಂಥ ಕಾನೂನಿನ ವ್ಯವಸ್ಥೆ ಇರುವ ದೇಶದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಎನ್ನುವ ಮಾತು ಅಪರಾಧವೇ. ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ.ಗಾಂಧೀಜಿಯ ನಾಡಿನಲ್ಲಿ ಉಪವಾಸ ಸತ್ಯಾಗ್ರಹ ಹಾದಿ ತಪ್ಪುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ಉಪವಾಸ ಸತ್ಯಾಗ್ರಹ ಗಾಂಧೀಜಿಯವರ ದೃಷ್ಟಿಯಲ್ಲಿ ಆತ್ಮಶುದ್ಧಿಯ ಸಾಧನವಾಗಿತ್ತು. ಅವರು ಯಾವುದೇ ಬೇಡಿಕೆ ಇಲ್ಲದೆಯೂ, ಕೆಲವೊಮ್ಮೆ ಪ್ರಾಯಶ್ಚಿತ್ತ ರೂಪದಲ್ಲಿ...