ಅವತರಿಸುವ ಮುನ್ನ (1995ರ ಸುಮಾರಿಗೆ ಬರೆದ ನಾಟಕ ಇದು. ಆಗ ನಾನು ಬೆಳಗಾವಿಯ ನಾಡೋಜ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ.) ಅವತಾರದ ರಚನಾ ಶಿಲ್ಪದಲ್ಲಿ ಪೌರಾಣಿಕ ಕಲ್ಪನೆ ಇದ್ದರೂ ಅದು ಸ್ಫೋಟಗೊಳಿಸುವ ಬೀಜಾಣುಗಳು ತೀರ ಸಮಕಾಲೀನವಾದುದಾಗಿದೆ. ಅದು ಹೇಳಹೊರಟ ಗುರಿಯತ್ತ ತಡೆಯಿಲ್ಲದೆ ಸಾಗಿದೆ ಎಂಬುದು ನನ್ನ ಭಾವನೆ. ಜಾನಪದ ಗೇಯತೆಯುಳ್ಳ ಪದ್ಯಗಳ ಬಾಹುಳ್ಯತೆಯಿಂದಾಗಿ ಇದೊಂದು ಸಂಗೀತ ನಾಟಕವೇನೋ ಎನ್ನುವ ಗುಮಾನಿಯೂ ಬರಬಹುದು.ವಿಶೇಷ ಸಲಕರಣೆಗಳಿಲ್ಲದೆ, ರಂಗದಲ್ಲಿಯೇ ಜೋಡಿಸಬಹುದಾದ ಖುರ್ಚಿಯೊಂದನ್ನುಳಿದು, ಇದನ್ನು ಬೀದಿ ನಾಟಕವನ್ನಾಗಿಯೂ ನಟಿಸಬಹುದಾದ ಸಾಧ್ಯತೆ ಇದೆ. ರಂಗಪ್ರಯೋಗದ ವೇಳೆಯಲ್ಲಿ...