೧ ಶ್ರಾವಣದ ಹೊಳೆಸಾಲಿನಲ್ಲಿ ತೋರಣಗಳು ಏಳುವುದಿಲ್ಲ; ನಾಗಪಂಚಮಿಗೆ ಉಯ್ಯಾಲೆ ಕಟ್ಟಿ ಜೀಕುವುದಿಲ್ಲ. ಹನಿ ಕಡಿಯದ ಪುಷ್ಯ ಪುನರ್ವಸು ಗುಡ್ಡದಿಂದ ಭೋಸ್ ಎಂದು ಧುಮ್ಮಿಕ್ಕುವ ಹನಾಲು ಬೆಚ್ಚಗೆ ಕಂಬಳಿ ಹೊದ್ದು ಕುಕ್ಕುರುಗಾಲಲ್ಲಿ ಕುಳಿತು ತಟ್ಟಿ ಗಂಡಿಯಲ್ಲಿ ಹೊಳೆಯತ್ತ ನೋಟ ಸೊಂಟದಲ್ಲಿ ಕಸುವಿಲ್ಲದೆ ಬಿಮ್ಮಗೆ ಬಿದ್ದ ಮುದುಕಿಯಂತಿದ್ದ ಶರಾವತಿಗೆ ತಟ್ಟನೆ ಪ್ರಾಯ ಬಂದಂತೆ ಲಗುಬಗೆಯ ಓಟ; ಪುಂಡರಿಗೆ ಬಸಿರಾದಂತೆ ನಡದ ಬಿಗುವ ಸಡಿಲಿಸುತ್ತ ಉಬ್ಬುತ್ತ ಉಬ್ಬುತ್ತ… ಬಸುರಿ ಹೆಣ್ಣಿಗೆ ಜಗ ಮೊಗೆದು ಮುಕ್ಕಳಿಸಿ ಉಗಿವ ಬಾಯ್ಚಪಲ ಕರೆಯದಿದ್ದರೂ ಬಂದೇಬಿಟ್ಟೆ ಎಂದು...
ಸಾವು ಸಾವಲ್ಲ ಗೆಳೆಯ ಅದು ನಿನ್ನ ಮರುಹುಟ್ಟು ಸತ್ತು ನೀ ಬಿಚ್ಚಿಟ್ಟ ನೆನಪುಗಳ ಬುತ್ತಿ ಕಣ್ಣೀರಲ್ಲಿ ಕಲಸಿ ತುತ್ತು ಮಾಡಿ ಜೀವ ಹಿಡಿದಿದ್ದೇನೆ ಗೆಳೆಯ ಅದು ನಿನ್ನ ಸಾವಲ್ಲ ನಿಂತಲ್ಲಿ ನೀ ಬಂದು ಕಥೆ ಹೇಳುವೆ ಕುಂತಲ್ಲಿ ನೀ ಬಂದು ಕುರುಳು ನೇವರಿಸುವೆ ಮಲಗಿದರೆ ನೀ ಬಂದು ಮುಸುಕೆಳೆದು ಕಚಗುಳಿ ಇಡುವೆ ಗೆಳೆಯ ನಾ ಬದುಕಿಯೂ ಕ್ಷಣ ಕ್ಷಣವೂ ಸಾಯುತ್ತಿರುವೆ ಇದ್ದಾಗ ನೀ ಕಾಡಲಿಲ್ಲ ನನ್ನ ನಾನೇ ನಿನ್ನ ಗೋಳುಗೆರೆದೆ ನನ್ನ ನಗುವಿನಲ್ಲೇ ನೀ ನಿನ್ನ ಹರುಷ...
ಕವನ ಬರೆಯುವುದು ಸುಲಭವಲ್ಲ ಗೆಳೆಯ ಕವನಕ್ಕಾಗಿ ನೀ ಕಾಯಬೇಕು ಕುದಿಯಬೇಕು ಉಕ್ಕಬೇಕು ಆವಿಯಾಗಬೇಕು ಆರ್ದ್ರವಾಗಿ ಹನಿಯಬೇಕು ಅದು ನೆಲ ಸೇರಬೇಕು ಬೀಜವ ನೆನೆಸ ಬೇಕು ಸಸಿಯೊಂದು ಭೂ ಬಸಿರ ಬಗೆದು ಹೊರ ಹೊಮ್ಮಿದಾಗ ಅದು ನಿನ್ನ ಕವನ ಗೆಳೆಯ ಕವನ ಬರೆಯುವುದು ಸುಲಭವಲ್ಲ ಗೆಳೆಯ ಕವನಿಸುವ ಬೆದೆ ಹದವಾಗಿ ಇರಬೇಕು ಬೆದೆ ಸಮಯಕ್ಕೆ ಕಾಯಬೇಕು ಕ್ಷೇತ್ರ ಫಲವತ್ತಾಗಿರಬೇಕು ತನು ಬೆರೆಯಬೇಕು ಮನ ತೆರೆಯಬೇಕು ಆಗ ಬಿತ್ತಿದ ಬೀಜ ಭ್ರೂಣವಾದರೆ ಅದು ನಿನ್ನ ಕವನ ಗೆಳೆಯ 1-09-2005
ಹುಲ್ಲು ಬೆಳೆಯುಲ್ಲಿ ಮರ ನೆಟ್ಟರೆ ನಮಗೆ ನೊಬೆಲ್ ಪ್ರಶಸ್ತಿ ಬರುವುದು ಕಡಿಮೆ, ಒಲಿಂಪಿಕ್ಸ್‌ನಲ್ಲಿ ಪದಕ ಬರುವುದು ಬೆರಳೆಣಿಕೆಯಷ್ಟು ಎಂದು ಅವನು ಹೇಳುತ್ತಿದ್ದ. ಎಲ್ಲಿಂದೆಲ್ಲಿಯ ಸಂಬಂಧ? ———- ಅವನೊಬ್ಬ ಹುಡುಕಾಟದಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದ. ತಾನು ಏನನ್ನು ಹುಡುಕುತ್ತಿದ್ದೇನೆ ಎಂಬುದು ಸ್ವತಃ ಅವನಿಗೂ ಸ್ಪಷ್ಟವಿರಲಿಲ್ಲ. ಎದುರಿಗೆ ಬಂದವರನ್ನೆಲ್ಲ ಗುಮಾನಿಯಿಂದ ಎಂಬಂತೆ ನೋಡುತ್ತಿದ್ದ. ಅವನ ದೃಷ್ಟಿ ಎಷ್ಟು ತೀಕ್ಷ್ಣವಾಗಿತ್ತು ಎಂದರೆ ಅದೆಲ್ಲಿ ತಾಗಿದವರ ಮೈಯಲ್ಲಿ ಹುಣ್ಣನ್ನು ಮಾಡುವುದೋ ಎಂಬ ಆತಂಕ ಕಾಡುತ್ತಿತ್ತು. ಅವರ ಚಿತ್ತದಲ್ಲಿ ಮೂಡಿದ ಎಲ್ಲ ಆಲೋಚನೆಗಳನ್ನು ತಾನು ಓದಬಲ್ಲೆ...
ಷಡ್ಯಂತ್ರ ಎಂಬ ಪದವನ್ನು ನಾವು ನಿತ್ಯವೂ ಒಂದಲ್ಲ ಒಂದು ಸಂದರ್ಭದಲ್ಲಿ ಬಳಸುತ್ತೇವೆ. ಹೀಗಂದರೆ ಏನು? ನನ್ನ ವಿರುದ್ಧ ಅವನು ಷಡ್ಯಂತ್ರ ರಚಿಸಿದ್ದಾನೆ ಎನ್ನುತ್ತೇವೆ, ರಾಜಕೀಯ ನಾಯಕರಾದವರು ಪ್ರತಿಪಕ್ಷದವರು ತಮ್ಮ ವಿರುದ್ಧ ಷಡ್ಯಂತ್ರ ರಚಿಸಿದ್ದಾರೆ ಎನ್ನುತ್ತಾರೆ. ಇಲ್ಲೆಲ್ಲ ಸಾಮಾನ್ಯವಾಗಿ ಹೊರಹೊಮ್ಮುವ ಅರ್ಥ ಒಳಸಂಚು ಎಂದು. ಷಡ್ಯಂತ್ರ ಎಂಬುದು ಸಂಸ್ಕೃತ ಪದ. ಇದರಲ್ಲಿ ಷಟ್ ಮತ್ತು ಯಂತ್ರ ಎಂಬ ಎರಡು ಪದಗಳಿವೆ. ಷಟ್ ಅಂದರೆ ಆರು ಮತ್ತು ಯಂತ್ರ ಎಂಬುದಕ್ಕೆ ಹಲವು ರ್ಥಗಳಿವೆ. ಅವುಗಳಲ್ಲಿ ಒಂದು ಬಲ ಎಂಬುದು. ಅಂದರೆ...
ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಪ್ರೇಮ ಸಂಬಂಧವನ್ನು ಹೊಂದುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾದರ ಎಂದು ಕರೆಯುತ್ತಾರೆ. ಆದರೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಪರಿಪಾಠವೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾದರದ ಸಂಬಂಧ ಅಲ್ಲಿ ಆದರದ ಸಂಬಂಧವಾಗುತ್ತಿದೆ. ಈ ಸಂಬಂಧ ಪರಸ್ಪರ ಒಪ್ಪಿಗೆಯದು, ನೈತಿಕವಾದದ್ದು ಮತ್ತು ಜವಾಬ್ದಾರಿಯುತವಾದದ್ದು. ಒಬ್ಬರಿಗೊಬ್ಬರು ಇಲ್ಲಿ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಈ ಬಹುಮುಖಿ ಪ್ರೇಮಸಂಬಂಧದಲ್ಲಿ ಒಳಗೊಳ್ಳುವವರಿಗೆ ಪರಸ್ಪರರ ಅನ್ಯ ಸಂಬಂಧಗಳ ಕುರಿತು ಗೊತ್ತಿರುತ್ತದೆ. ಅಲ್ಲಿ...
ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರವು ಮಹಾಕಾದಂಬರಿಯ ರೂಪಕ್ಕೆ ಹಿಗ್ಗಿಕೊಂಡ ಗಳಿಗೆಯಲ್ಲಿಯೇ ಸಾಹಿತ್ಯವೆನ್ನುವುದು ತಲೆಮಾರುಗಳ ಶತಮಾನಗಳ ದೀರ್ಘ ಹರಹಿನ ಚಿತ್ರಣ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಂಡಿತು. ಮಹಾಕಾದಂಬರಿಗೆ ವ್ಯಾಖ್ಯೆಯೊಂದನ್ನು ರೂಪಿಸಿಕೊಡುವ ಪರ್ವಕಾಲ ಈಗ ಪ್ರಾಪ್ತವಾದಂತೆ ಕಾಣುತ್ತಿದೆ. ಏಕೆಂದರೆ ವಿಸ್ತಾರವಾದ ವಸ್ತುವಿನ್ಯಾಸದ ಹಲವು ಕೃತಿಗಳು ಈಗ ಬರುತ್ತಿವೆ. ಕುವೆಂಪು ಅವರ ಎರಡು ಮಹಾಕಾದಂಬರಿಗಳು, ಕಾರಂತರ ಮರಳಿ ಮಣ್ಣಿಗೆ, ಗೋಕಾಕರ ಸಮರಸವೇ ಜೀವನ, ರಾವ್‌ಬಹಾದ್ದೂರ್ ಅವರ ಗ್ರಾಮಾಯಣ, ಮಾಸ್ತಿಯವರ ಚಿಕವೀರ ರಾಜೇಂದ್ರ, ಭೈರಪ್ಪನವರ ದಾಟು, ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು, ಲಂಕೇಶರ ಮುಸ್ಸಂಜೆಯ...
ಸಹೃದಯ ವಿಮರ್ಶೆ ವಿಭಾವರಿ ಭಟ್ಟರು ರಮೇಶ ಭಟ್ ಬೆಳಗೋಡು ಎಂದು ನನಗೆ ಗೊತ್ತಾಗಿದ್ದು ಅದೆಷ್ಟೋ ದಿನಗಳ ಬಳಿಕ. `ಕನ್ನಡಪ್ರಭ’ದ `ಅಕ್ಷರ ತೋರಣ’ ಪುಟಕ್ಕೆ ನಿಯಮಿತವಾಗಿ ಅವರು ವಿಮರ್ಶೆ ಬರೆಯುತ್ತಿದ್ದರು. ಹೇಳಿದ ದಿನಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಮೇಲ್ ಮಾಡುತ್ತಿದ್ದ ವಿಭಾವರಿ ಭಟ್ಟರು ನಂತರ ಫೋನ್ ಮಾಡಿ `ಕಳುಹಿಸಿದ್ದೇನೆ’ ಎಂದೂ ಹೇಳುತ್ತಿದ್ದರು. ಇದು ಅವರ ಕಾರ್ಯತತ್ಪರತೆ ಮತ್ತು ಶ್ರದ್ಧೆಯನ್ನು ತೋರಿಸುತ್ತದೆ. ಈ `ಶ್ರದ್ಧೆ’ ಎಂಬ ಮಾತನ್ನು ನಾನು ಒತ್ತಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ, ಇದು ನಮ್ಮ ಸಸಂಸ್ಕೃತಿಯ ಪದ....
ಕರಾವಳಿಯ ಹೊಳೆಸಾಲಿನಲ್ಲಾದರೆ ಸೆಪ್ಟೆಂಬರ್ ಕೊನೆಯೆಂದರೆ ಗೊರಬು, ಕಂಬಳಿಯನ್ನೆಲ್ಲ ಹೊಗೆ ಅಟ್ಟಕ್ಕೆ ಸೇರಿಸುವ ಸಮಯ. ಆಕಾಶಕ್ಕೇ ತೂತುಬಿದ್ದಂತೆ ಹೊಯ್ಯುವ ಮಳೆ ಆಗಂತೂ ಇರುವುದೇ ಇಲ್ಲ. ಬಂದರೆ ಬಂತು ಹೊದರೆ ಹೋಯ್ತು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಒಂದೆರಡು ಜುಮುರು ಮಳೆ ಬಂದು ಹೋಗಿಬಿಡುತ್ತದೆ. ಅದೇ ಬೆಂಗಳೂರಿನಲ್ಲಿ ಮಾತ್ರ ಎಲ್ಲ ಉಲ್ಟಾಪಲ್ಟಾ. ಸೆಪ್ಟೆಂಬರ್ ತಿಂಗಳಲ್ಲೇ ಜೋರು ಮಳೆ. ಮೂರು ದಿನ ರಾತ್ರಿ ಮಳೆ ಸುರಿುತೆಂದರೆ ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅಲ್ಲೆಲ್ಲ ನೀರು ನಿಂತು ಬಿಡುತ್ತಬೆ. ಪೂರ್ವಯೋಜಿತವಲ್ಲದ ಹೊಸಹೊಸ ಬಡಾವಣೆಗಳು ಈ ಬೆಂಗಳೂರಿನಲ್ಲಿ...
ಗೋವು ಇಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಅದಕ್ಕೇ ಕೃಷ್ಣನನ್ನು ಗೋಪಾಲಕೃಷ್ಣ ಎಂದೂ ಕರೆಯುವುದು. ಬೃಂದಾವನದಲ್ಲಿ ಗೋವುಗಳನ್ನು ಕಾಯುತ್ತಲೇ ಬೆಳೆದವನು ಕೃಷ್ಣ. ಬೆಣ್ಣೆಕಳ್ಳನೆಂದು ಭಕ್ತರು ಪ್ರೀತಿಯಿಂದ ಆತನಿಗೆ ಬಿರುದನ್ನೂ ನೀಡಿದ್ದಾರೆ. ಆತನ ಬಾಲಲೀಲೆಗಳಲ್ಲಿ ಬೆಣ್ಣೆಯ ಕಳ್ಳತನ, ಮೊಸರು ಗಡಿಗೆಗಳನ್ನು ಒಡೆದು ಮೊಸರು ಕುಡಿಯುವುದು ಎಲ್ಲವೂ ಸೇರಿದೆ. ಕೃಷ್ಣ ಭಕ್ತಿಯ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಗೆ ಕೃಷ್ಣ ಬೇರೆಯಲ್ಲ ಗೋವು ಬೇರೆಯಲ್ಲ. ಗೋ ಸೇವೆಯಲ್ಲಿಯೇ ಕೃಷ್ಣನನ್ನು ಕಾಣಬಹುದು ಎಂದು ಅವರು ನಂಬಿದ್ದಾರೆ. ಇದಕ್ಕೆ ಉದಾಹರಣೆ ರಾಜಸ್ಥಾನದ ಹಿಂಗೋನಿಯಾದ ಗೋಶಾಲೆಯ ಉಸ್ತುವಾರಿಯನ್ನು...