ಮೊದಲ ಮಹಾಯುದ್ಧದ ಯುವ ಸಾಹಸಿ ಲೂಯಿಸೆ ಡೆ ಬೆಟ್ಟಿಗ್ನಿಸ್‌

ಒಂದು ದೇಶ ಇನ್ನೊಂದು ದೇಶದ ಮೇಲೆ ದಂಡೆತ್ತಿ ಬಂದಾಗ ಅದನ್ನು ವಿರೋಧಿಸುವ ಯಾವುದೇ ವ್ಯಕ್ತಿಗೆ ಮೊದಲ ಮಹಾಯುದ್ದದ ಸಮಯದಲ್ಲಿ ನೇರವಾಗಿ ಸ್ಪೈ ಅಂದರೆ ಗೂಢಚಾರ ಎಂದು ಕರೆಯುತ್ತಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಇದಕ್ಕೆ ರೆಸಿಸ್ಟಂಟ್‌ ಅಂದರೆ ಪ್ರತಿರೋಧ ವ್ಯಕ್ತಪಡಿಸುವವನು ಎಂಬ ಪದ ಚಾಲನೆಗೆ ಬಂತು. ಮೊದಲ ಮಹಾಯುದ್ಧದ ಸಮಯದಲ್ಲಿ ಈ ಪ್ರತಿರೋಧಕ್ಕಾಗಿ ಯುರೋಪಿನಲ್ಲಿ ಅಲಿಸ್‌ ನೆಟ್‌ವರ್ಕ್‌ ದೊಡ್ಡ ಹೆಸರಾಗಿತ್ತು. ಇದನ್ನು ನಡೆಸುತ್ತಿದ್ದವಳು ಒಬ್ಬ ಹುಡುಗಿ ಎಂಬುದು ಇನ್ನೂ ಆಶ್ಚರ್ಯದ ಸಂಗತಿ. ಆ ಯುವತಿ ಲೂಯಿಸೆ ಡೆ ಬೆಟ್ಟಿಗ್ನಿಸ್‌....

ಚೀನಾದ ಈ ಗಂಡು ತಾನು ಹೆಣ್ಣೆಂದು ನಂಬಿಸಿ ಗೂಢಚರ್ಯೆ ನಡೆಸಿದ

ಒಪೆರಾ ಒಂದರಲ್ಲಿ ಹಾಡುಗಾರನಾಗಿದ್ದ ವ್ಯಕ್ತಿಯೊಬ್ಬನು ಗೂಢಚಾರನಾಗಿ ನಡೆಸಿದ ಈ ವಿಲಕ್ಷಣವಾದ ಲೈಂಗಿಕತೆ, ಗೂಢಚರ್ಯೆಯ ಹಗರಣವು ಪ್ರಾರಂಭವಾಗಿದ್ದು ಚೀನಾದ ಬೀಜಿಂಗ್‌ನಲ್ಲಿ 1964ರಲ್ಲಿ. ಶಿ ಪೀ ಪು ಎಂಬ ಹೆಸರಿನ ಈ ವ್ಯಕ್ತಿಯು ಫ್ರೆಂಚ್‌ ದೂತಾವಾಸದ ಗುಮಾಸ್ತ ಬೆರ್ನಾರ್ಡ್‌ ಬೌರ್ಸಿಕೋಟ್‌ ಎಂಬಾತನನ್ನು ಭೇಟಿಮಾಡುತ್ತಾನೆ. ಈ ಬೌರ್ಸಿಕೋಟ್‌ ತನ್ನ ನಿಯಮಿತ ಕೆಲಸದ ಜೊತೆಯಲ್ಲಿ ರಾಜತಾಂತ್ರಿಕರ ಕುಟುಂಬದವರಿಗೆ ಇಂಗ್ಲಿಷ್‌ ಕಲಿಸುತ್ತಿದ್ದನು. ಈ ಶಿ ಪೀ ಪು ಎಂಥ ಚಾಣಾಕ್ಷ ಎಂದರೆ ತಾನೊಬ್ಬ ಪುರುಷ ವೇಷದಲ್ಲಿರುವ ಮಹಿಳೆ ಎಂದು ನಂಬಿಸುತ್ತಾನೆ. ಇಬ್ಬರ ನಡುವೆ ಪ್ರೇಮ...

ರಿಚರ್ಡ್‌ ಸೋರ್ಜ್

‌- ಇವನನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಸ್ಟಾಲಿನ್‌ ಕೈಬಿಟ್ಟ ಪತ್ರಕರ್ತನ ಸೋಗಿನಲ್ಲಿ ಸೋವಿಯತ್‌ ರಷ್ಯಾದ ಪರವಾಗಿ ಜಪಾನಿನಲ್ಲಿ ಬೇಹುಗಾರಿಕೆ ನಡೆಸಿದ ಜರ್ಮನ್‌ ಸಂಜಾತ ರಿಚರ್ಡ್‌ ಸೋರ್ಜ್‌ ವರ್ಣರಂಜಿತ ಬದುಕನ್ನು ಬದುಕಿದವನು. ರಸಿಕ ಶಿಖಾಮಣಿಯೇ ಆಗಿದ್ದ ಈತ ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನ ದೇಶವು ರಷ್ಯಾದ ಮೇಲೆ ಪೂರ್ವ ಭಾಗದಲ್ಲಿ ದಾಳಿ ಮಾಡುವುದಿಲ್ಲ, ಆದರೆ ಜರ್ಮನಿಯು ಮಾಸ್ಕೋ ಮೇಲೆ ದಾಳಿಗೆ ಸಿದ್ಧವಾಗಿದೆ ಎಂಬ ಮಹತ್ವದ ಸಂದೇಶವನ್ನು ತಲುಪಿಸಿದನು. ನಾಝಿ ಜರ್ಮನಿ ಮತ್ತು ಜಪಾನ್‌ ಚಕ್ರಾಧಿಪತ್ಯದಲ್ಲಿ ಒಬ್ಬ ಜರ್ಮನಿಯ ಪತ್ರಕರ್ತನಂತೆ...

ಮೂರನೆ ಜಾಗತಿಕ ಯುದ್ಧ ತಡೆದ ರಷ್ಯಾದ ಸುಪ್ರೀಂ ಸ್ಪೈ ಒಲೆಗ್‌ ಪೆಂಕೋವ್ಸಕಿ

ಹೀರೋ ಎಂಬ ಸಂಕೇತ ನಾಮ ಹೊಂದಿದ್ದ ಒಲೆಗ್‌ ವ್ಲಡಿಮಿರೋವಿಚ್‌ ಪೆಂಕೋವ್ಸಕಿ ನಿಜಕ್ಕೂ ಗೂಢಚರ್ಯ ಲೋಕದ ಒಬ್ಬ ಹೀರೋನೇ ಆಗಿದ್ದನು. ಆತ ಸೋವಿಯತ್‌ ಮಿಲಿಟರಿ ಇಂಟೆಲಿಜೆನ್ಸ್‌ (ಜಿಆರ್‌ಯು)ನಲ್ಲಿ 1950 ಮತ್ತು 60ರ ದಶಕದಲ್ಲಿ ಕರ್ನಲ್‌ ಆಗಿದ್ದ. ಈತ ಸೋವಿಯತ್‌ ಕಣ್ಣಿಗೆ ಮಣ್ಣೆರಚಿ ಇಂಗ್ಲೆಂಡ್‌ ಮತ್ತು ಅಮೆರಿಕಕ್ಕೆ ಮಹತ್ವದ ಮಾಹಿತಿಗಳನ್ನು ಒದಗಿಸುತ್ತಿದ್ದನು. ಸೋವಿಯತ್‌ ಒಕ್ಕೂಟವು ಕ್ಯೂಬಾದಲ್ಲಿ ಕ್ಷಿಪಣಿಗಳನ್ನು ನೆಲೆಗೊಳಿಸಿದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿದವನು ಇವನು. ಇದರಿಂದ ಆ ಎರಡು ದೇಶಗಳು ಸೋವಿಯತ್‌ ಎದುರು ಸೈನಿಕವಾಗಿ ಸಜ್ಜುಗೊಳ್ಳುವುದಕ್ಕೆ ನೆರವಾಯಿತು. ಎರಡನೆ ಮಹಾಯುದ್ದದ...

ದಿ ಗ್ರೇಟ್‌ ಸ್ಪೈ ಬ್ಲ್ಯಾಕ್‌ ಟೈಗರ್‌ ರವೀಂದ್ರ ಕೌಶಿಕ್‌

ಆತನ ಹೆಸರು ರವೀಂದ್ರ ಕೌಶಿಕ್‌. ಸ್ಪುರದ್ರೂಪಿ ತರುಣ. ಕಾಲೇಜಿನಲ್ಲಿ ಆತನ ಸ್ನೇಹಿತರೆಲ್ಲ ಅವನನ್ನು ದೇವಾನಂದ ಎಂದೋ ವಿನೋದ ಖನ್ನಾ ಎಂದೋ ಪ್ರೀತಿಯಿಂದ ಕರೆಯುತ್ತಿದ್ದರು. ಸಾಲದ್ದಕ್ಕೆ ಆತ ಶಾಲೆಯ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದ. ಅವನೊಳಗೊಬ್ಬ ನಟನಿದ್ದ. ಅವನಿಗೆ ಏನಾದರೂ ಅವಕಾಶಗಳು ಒದಗಿ ಬಂದಿದ್ದರೆ ಬಾಲಿವುಡ್‌ನಲ್ಲಿ ಒಬ್ಬ ಉತ್ತಮ ನಟನಾಗಿ ಆತ ಮಿಂಚುತ್ತಿದ್ದ. ಮಾನವ ಒಂದು ಬಗೆದರೆ ದೈವ ಇನ್ನೊಂದು ಬಗೆಯಿತಂತೆ. ರವೀಂದ್ರ ಕೌಶಿಕ್‌ ಅಲಿಯಾಸ್‌ ನಬಿ ಅಹ್ಮದ್‌ ಶಕೀರ್‌ ರಾಜಸ್ಥಾನದ ಪಂಜಾಬ್‌ ಗಡಿ ಭಾಗದ ಶ್ರೀ ಗಂಗಾನಗರ ಎಂಬಲ್ಲಿ...

ಪರಮಾಣು ಯುದ್ಧ ತಡೆದ ಗೋರ್ಡಿಯೆವ್ಸಕಿ

ಓಲೆಗ್‌ ಆಂಟೋನಿಯೋವಿಚ್‌ ಗೋರ್ಡಿಯೆವ್ಸಕಿ ಸೋವಿಯತ್‌ ರಷ್ಯಾದ ಕೆಜಿಬಿಯ ಮಾಜಿ ಕರ್ನಲ್‌ ಮತ್ತು ಕೆಜಿಬಿಯ ಕೆಲಸ ಮಾಡಲು ಲಂಡನ್ನಿಗೆ ನೇಮಕಗೊಂಡಿದ್ದ ಅಧಿಕಾರಿ ಹಾಗೂ ಲಂಡನ್‌ ಕಚೇರಿಯ ಮುಖ್ಯಸ್ಥ. ಆತ ಬ್ರಿಟಿಷ್‌ ರಹಸ್ಯ ಬೇಹುಗಾರಿಕೆ ಸೇವೆಯ ಸೀಕ್ರೆಟ್‌ ಏಜೆಂಟ್‌ ಆಗಿ 1974ರಿಂದ 1985ರ ವರೆಗೆ ಕೆಲಸ ಮಾಡಿದ್ದನು. ಒಬ್ಬ ಎನ್‌ಕೆವಿಡಿ (ರಷ್ಯಾದ ಒಳಾಡಳಿತ ಸಚಿವಾಲಯ) ಅಧಿಕಾರಿಯ ಮಗನಾಗಿ 1938ರ ಅಕ್ಟೋಬರ್‌ 10ರಂದು ಜನಿಸಿದ ಓಲೆಗ್‌ ಶಾಲೆಯಲ್ಲಿ ಅದ್ಭುತ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರು ಮಾಡಿದ್ದನು. ಅಲ್ಲಿ ಆತ ಜರ್ಮನ್‌ ಭಾಷೆಯನ್ನು ಮಾತನಾಡುವುದಕ್ಕೆ...

ಸೋವಿಯತ್‌ಗೆ ಪರಮಾಣು ಬಾಂಬ್‌ ತಯಾರಿಕೆ ರಹಸ್ಯ ಕದ್ದು ಕೊಟ್ಟ ಫುಕ್ಸ್‌

ಎಮಿಲ್‌ ಕ್ಲೌಸ್‌ ಫುಕ್ಸ್‌ ಜರ್ಮನಿಯ ನಾಗರಿಕ. ಲುಥೆರನ್‌ದ ಪಾಸ್ಟರ್‌ ಒಬ್ಬರ ಮಗ. 1911ರ ಡಿಸೆಂಬರ್‌ 29ರಂದು ಜನಿಸಿದ ಅವರು ಐಸೆನಾಚ್‌ ಎಂಬಲ್ಲಿ ತಮ್ಮ ಒಡಹುಟ್ಟಿದವರೊಂದಿಗೆ ಶಾಲೆಗೆ ಹೋಗಿದ್ದರು. ಅಲ್ಲಿ ಅವರ ತಂದೆಯ ಜನಪ್ರಿಯವಲ್ಲದ ರಾಜಕೀಯ ನಿಲವುಗಳಿಗಾಗಿ ಇವರನ್ನು ರೆಡ್‌ ಫಾಕ್ಸಸ್‌ ಎಂದು ಸ್ನೇಹಿತರು ಹೀಗಳೆಯುತ್ತಿದ್ದರು. ಫುಕ್ಸ್‌ ಎಂಬುದು ಫಾಕ್ಸ್‌ ಎಂಬುದರ ಜರ್ಮನ್‌ ಪದ. ಫುಕ್ಸ್‌ ಲೀಪ್‌ಝಿಗ್‌ ಯುನಿವರ್ಸಿಟಿಗೆ ಹೋಗಿದ್ದರು. ಅವರು ಜರ್ಮನ್‌ ಕಮ್ಯುನಿಸ್ಟ್‌ ಪಾರ್ಟಿಯನ್ನು 1930ರಲ್ಲಿ ಸೇರಿದರು. ನಾಝಿಗಳು ಅಧಿಕಾರಕ್ಕೆ ಬಂದಾಗ ಅವರು 1933ರಲ್ಲಿ ಬಲವಂತವಾಗಿ ಬ್ರಿಟನ್ನಿಗೆ...

ಅಮೆರಿಕದ ವಿಮಾನ ಬೇಹುಗಾರಿಕೆ

ರಷ್ಯಾದೆದುರು ತಪ್ಪೊಪ್ಪಿಕೊಂಡ ಅಮೆರಿಕದ ಅಧ್ಯಕ್ಷ ಐಸೆನ್‌ಹೋವರ್‌ ಪ್ರತಿಯೊಂದು ದೇಶವೂ ತನ್ನ ಸೌರ್ವಭೌಮತ್ವವನ್ನು ಅಖಂಡವಾಗಿ ಉಳಿಸಿಕೊಳ್ಳಲು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ದೇಶದ ಗಡಿಗಳನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ ಇತರ ದೇಶದವರು ಯಾವ ರೀತಿಯ ಸನ್ನದ್ಧತೆಯಲ್ಲಿದ್ದಾರೆ ಎಂದು ಅರಿತುಕೊಳ್ಳುವುದೂ ಅಷ್ಟೇ ಮಹತ್ವದ್ದು. ಜಗತ್ತಿನ ಎರಡು ಬಲಾಢ್ಯ ರಾಷ್ಟ್ರಗಳು ಅಮೆರಿಕ ಮತ್ತು ರಷ್ಯಾ. ರಷ್ಯಾ ಈ ಮೊದಲು ಸೋವಿಯತ್‌ ಒಕ್ಕೂಟವಾಗಿತ್ತು. ಒಂದು ಬಲಿಷ್ಠವಾದ ಪ್ರಜಾಪ್ರಭುತ್ವ ರಾಷ್ಟ್ರವಾದರೆ ಇನ್ನೊಂದು ಕಮ್ಯುನಿಸ್ಟ್‌ ರಾಷ್ಟ್ರ. ಎರಡನೆ ಮಹಾಯುದ್ದದ ಬಳಿಕ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ಹಾವು...