*ಕುರುಕ್ಷೇತ್ರ ನಡೆಯದ ಮನೆ ಇದೆಯೆ?

ದೇನು ಮಾರಾಯ, ಅವರ ಮನೆ ಒಂದು ಕುರುಕ್ಷೇತ್ರ ಆಗಿದೆ ಎಂದೋ, ಅವರ ಸಂಸಾರ ಕುರುಕ್ಷೇತ್ರ ಎಂದೋ ತೀರ ಸಹಜವಾಗಿ ಹೇಳಿಬಿಡುತ್ತೇವೆ. ಕೇಳಿಸಿಕೊಂಡವನಿಗೆ, ಆ ಮನೆಯಲ್ಲಿ ಎಲ್ಲವೂ ಸರಿ ಇಲ್ಲ, ನಿತ್ಯ ಜಗಳ, ಒಳಸಂಚು ನಡೆಯುತ್ತಿದೆ ಎಂಬ ಅರ್ಥವನ್ನು ರವಾನಿಸುತ್ತದೆ.
`ಅದೇನು ಮಹಾಭಾರತ ನಡೆಸಿದ್ದೀರೋ?'ಅದೆಲ್ಲ ರಾಮಾಯಣ ನನಗೆ ಹೇಳಬೇಡ’ ಎಂದು ಹೇಳುವುದನ್ನೂ ಕೇಳಿದ್ದೇವೆ. ಈ ಎರಡು ಮಹಾಕಾವ್ಯಗಳು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೇವಲ ಹಿಂದೂಗಳಷ್ಟೇ ಅಲ್ಲ, ಇತರ ಧರ್ಮದವರೂ ಈ ಎರಡು ಮಹಾಕಾವ್ಯದ ಉದಾಹರಣೆ ಹೇಳುತ್ತಾರೆ.
ಕುರುಕ್ಷೇತ್ರ ಕೌರವ ಪಾಂಡವರ ಯುದ್ಧ ನಡೆದ ಸ್ಥಳ. ದಾಯಾದಿಗಳಲ್ಲೇ ಜಗಳ ನಡೆಯುತ್ತಿದ್ದರೆ, ಒಬ್ಬರ ಅವನತಿಗೆ ಇನ್ನೊಬ್ಬರು ಯತ್ನಿಸುತ್ತಿದ್ದರೆ ಆಗ ಕುರುಕ್ಷೇತ್ರ, ಮಹಾಭಾರತಗಳೆಲ್ಲ ಉದಾಹರಣೆಗಳಾಗುತ್ತವೆ. ಹೇಗೆ ಬದುಕಬೇಕು ಎನ್ನುವುದಕ್ಕೂ ಹೇಗೆ ಬದುಕಬಾರದು ಎನ್ನುವುದಕ್ಕೂ ಇವು ಉತ್ತಮ ಉದಾಹರಣೆಗಳಾಗಿವೆ.