*ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು
ನಮ್ಮೂರ ಶಂಕರ ಜೀವನದಲ್ಲಿ ನೆಲೆ ನಿಲ್ಲಲು ಏನೇನೋ ಮಾಡಿದ. ಮೊದಲು ಗೇರುಬೀಜದ ವ್ಯಾಪಾರ, ನಂತರ ಚಹಾದಂಗಡಿ, ನಂತರ ಕಲ್ಲಂಗಡಿ ಬೆಳೆ, ಐಸ್ಕ್ಯಾಂಡಿ ಫ್ಯಾಕ್ಟರಿ ಹೀಗೆ ಒಂದಾದ ಮೇಲೆ ಒಂದನ್ನು ಮಾಡುತ್ತ ಹೋದ. ಕೊನೆಗೆ ಅವನು ಸಿನಿಮಾ ಟಾಕೀಸಿನಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟವನ್ನೂ ಮಾಡಿದ.
ಊರಿನಲ್ಲಿ, ಶಂಕರ ಈಗ ಏನು ಮಾಡ್ತಿದ್ದಾನೆ ಎಂದು ಯಾರನ್ನಾದರೂ ಕೇಳಿದರೆ, `ಎಲ್ಲ ಬಿಟ್ಟ ಬಂಗಿ ನೆಟ್ಟ' ಎಂದು ಹೇಳುತ್ತಾರೆ. ಶಂಕರನ ಇತ್ಯೋಪರಿ ಎಲ್ಲ ತಿಳಿದವರಿಗೆ ಈ ಮಾತಿನ ತಾತ್ಪರ್ಯ ತಕ್ಷಣ ಅರ್ಥವಾಗುತ್ತದೆ. ಶಂಕರ ಇಲ್ಲಿ ಒಂದು ಉದಾಹರಣೆ ಮಾತ್ರ. ಶಂಕರನ ಹಾಗೆ ಜೀವನದಲ್ಲಿ ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು ಅನೇಕರು ಕಾಣಸಿಗುತ್ತಾರೆ. ಆಗೆಲ್ಲ ಈ ಮಾತನ್ನು ಹೇಳುತ್ತಾರೆ. ಯಾವುದೇ ಒಂದರಲ್ಲಿ ಮನಸ್ಸನ್ನು ನೆಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಎಲ್ಲದರಲ್ಲಿಯೂ ಒಂದು ಕೈ ನೋಡುವ ಪ್ರವೃತ್ತಿ ಅಪಾಯಕಾರಿ. ಚಂಚಲ ಪ್ರವೃತ್ತಿಯವರು ಬದುಕಿನಲ್ಲಿ ಯಶಸ್ವಿಯಾಗುವುದಿಲ್ಲ ಎನ್ನುವುದನ್ನು ಇದು ಧ್ವನಿಸುತ್ತದೆ. ಹತ್ತು ಒಳ್ಳೆಯ ಕೆಲಸ ಮಾಡಿದರೂ ಒಂದರಲ್ಲೂ ಯಶಸ್ಸನ್ನು ಕಾಣದೇ ಹೋದಾಗ ಹತಾಶೆ ಸಹಜ. ಅಂಥ ಸಂದರ್ಭದಲ್ಲಿ ಅಡ್ಡದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ಅಡ್ಡದಾರಿಯನ್ನು ಇಲ್ಲಿಯ
ಬಂಗಿ ನೆಟ್ಟ’ ಮಾತು ಚೆನ್ನಾಗಿ ಧ್ವನಿಸುತ್ತದೆ. ಬಂಗಿ ಎಂದರೆ ಅಫೀಮು, ಗಾಂಜಾ. ಇದನ್ನು ಬೆಳೆಯುವುದು ಹೇಗೆ ಕಾನೂನು ಬಾಹಿರವೋ ಅದರ ಸೇವನೆ ಕೂಡ ಕಾನೂನು ಬಾಹಿರ. ನೆಟ್ಟ ಎಂದರೆ ಗಿಡವನ್ನು ನಾಟಿ ಮಾಡಿದ ಎಂಬ ಅರ್ಥದ ಜೊತೆಯಲ್ಲಿ ಬಾಯಲ್ಲಿ ಇಟ್ಟು ಸೇದಿದ ಎಂಬ ಅರ್ಥವನ್ನೂ ಧ್ವನಿಸುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.