ನೆದರ್‌ಲ್ಯಾಂಡ್ಸ್‌ ಬದುಕಿನ ಒಳನೋಟಗಳು- ಹುಡುಗುಗಣ್ಣಿನ ಮೂಲಕ

ಬಹುವಿಧ ಜೀವನಾನುಭವವನ್ನು ಹೊಂದಿರುವ ಕೆ.ಸತ್ಯನಾರಾಯಣ ಅವರು ``ನೆದರ್‌ಲ್ಯಾಂಡ್ಸ್‌ ಬಾಣಂತನ'' ಎನ್ನುವ ಪ್ರವಾಸ ಪ್ರಬಂಧ ಪುಸ್ತಕವನ್ನು ಇತ್ತೀಚೆ ಬರೆದಿರುವರು. ಪ್ರವಾಸ ಕಥನ ಎನ್ನದೆ ಪ್ರವಾಸ ಪ್ರಬಂಧ ಎಂದು ಅವರು ಇದನ್ನು ಕರೆದಿರುವುದು ವಿಶೇಷ. ಈ ಹಿಂದೆಯೂ ಅವರು ಪ್ರವಾಸಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಬರೆದಿರುವರು. ಈ ಕೃತಿಯ ಮೊದಲ ಅಧ್ಯಾಯವೇ `ವಿದೇಶಿ ಪ್ರವಾಸಾನುಭವ ಅಂದರೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವಾಗಿದೆ. ಪರದೇಶಗಳಿಗೆ ಹೋಗುವುದು, ಪ್ರವಾಸ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು ಎಂದುಕೊಂಡಿದ್ದ ಅವರು `ಅದೊಂದು...