ಡೆಲ್ಲಿಯಲ್ಲಿ ದಲ್ಲಾಳಿಗಳುಅಂಗಡಿ ತೆರೆದಿದ್ದಾರೆಅಳೆದಳೆದು ತೂಗಿ ತೂಗಿರತ್ನಗಳನ್ನು ಮಾರುತ್ತಿದ್ದಾರೆ ಕೂಗಿ ಕೂಗಿ ಕರೆಯುತ್ತಿದ್ದಾರೆಬನ್ನಿ ಬನ್ನಿಕೈ ಬದಲಾಯಿಸಿ ನೋಡಿಬೆರಳು ಬೆರಳಿಗೂಮುತ್ತು ರತ್ನ ಪಚ್ಚೆ ಪವನಿನ ಉಂಗುರ ನಿಮ್ಮಲ್ಲಿ ಎಷ್ಟಿದೆಯೋ ಅಷ್ಟೇ ತನ್ನಿಅದಕ್ಕೆ ತಕ್ಕಂತೆನಿಮ್ಮ ಬೆರಳು ಕೊರಳುಅಳತೆಗೆ ಎರಕ ಹೊಯ್ದುಸ್ಥಳದಲ್ಲೇ ಸುಂದರ ರತ್ನದ ಹಾರ ಅದನ್ನು ತೊಟ್ಟರೆನಿಮ್ಮ ಗುರುತು ನಿಮಗೇ ಹತ್ತುವುದಿಲ್ಲನಮ್ಮ ಆಭರಣವೇ ನಿಮಗೆ ಹೂರಣಎಲ್ಲ ಕಡೆ ಸಲ್ಲುವ ನಿಮಗೆಹೋದಕಡೆಗೆಲ್ಲ ತೋರಣ ನೀವು ನಡೆವ ದಾರಿಯಲಿತಾವರೆಯ ಪಕಳೆಗಳುಕಮಲ ಕೊಳದಲ್ಲಿ ಮುಳುಗೆದ್ದರೆನೀವು ತುಳಿದ ಕೊಳಚೆಯೆಲ್ಲಇಲ್ಲಿ ಮಡಿಯಾಗಿ ನೀವು ಶುದ್ಧವೋ ಶುದ್ಧ ನೀವು ಏನೇ...
ಕೆ.ಸತ್ಯನಾರಾಯಣ ಅವರ ಹೊಸ ಪುಸ್ತಕ `ಚಿಕ್ಕಪುಟ್ಟಮ್ಮನವರ ಗೃಹನ್ಯಾಯ’. ಇದಕ್ಕೆ ಅವರು ಟೆಕ್ಸ್ಟ್ ಬುಕ್ ಸ್ತ್ರೀವಾದ ಮತ್ತು ಹವ್ಯಾಸಿ ಸ್ತ್ರೀವಾದಿಗಳ ಬರವಣಿಗೆಯ ಆಚೆಗೂ ಇರುವ ಹೆಣ್ಣು ಕಥೆಗಳು ಎಂದು ಉಪಶೀರ್ಷಿಕೆ ನೀಡಿದ್ದಾರೆ. ಇಲ್ಲಿಯ ಕಥಾ ಜಗತ್ತಿನ ಹಿಂದೆ ಇರುವ ಇನ್ನೊಂದು ಜಗತ್ತು ನನಗೆ ಸಿಕ್ಕಿದೆಯೆನಿಸಿದಾಗ ಬರವಣಿಗೆ ತಾನೇತಾನಾಗಿ ರೂಪುಗೊಂಡಿದೆ ಎಂದು ಲೇಖಕರು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಆ ಇನ್ನೊಂದು ಜಗತ್ತುಎಂದರೆ ಸೃಷ್ಟಿಕ್ರಿಯೆಯ ಶರೀರದ ಒಳಗಿರುವ ಆತ್ಮ. ಅದೇ ಧ್ವನಿ. ಪ್ರತಿಯೊಂದು ಕೃತಿಯೂ ಸಾರ್ಥಕವೋ ವಿಫಲವೋ ಎನ್ನುವುದು ಅದು ಹೊರಡಿಸುವ ಧ್ವನಿ...
ಜಿ.ಎಸ್.ಸದಾಶಿವ ಅವರು ಮೂರು ಕೃತಿಗಳು ಕನ್ನಡ ಕಾವ್ಯಲೋಕಕ್ಕೆ ಒಬ್ಬರು ಜಿಎಸ್ಎಸ್ ಇದ್ದಾರೆ. ಅದೇ ರೀತಿ ಕನ್ನಡ ಪತ್ರಿಕಾ ಲೋಕಕ್ಕೂ ಒಬ್ಬರು ಜಿಎಸ್ಎಸ್ ಇದ್ದರು. ಅವರೇ ಡೂಮನೆ ಶ್ರೀಪಾದರಾವ್ ಸದಾಶಿವ. ಕಾಲೇಜಿನಲ್ಲಿ ಪ್ರೊಫೆಸರ್ ಆಗಬೇಕು ಎಂದುಕೊಂಡಿದ್ದ ಸದಾಶಿವ ಪತ್ರಿಕಾರಂಗಕ್ಕೆ ಬಂದದ್ದು ತೀರ ಆಕಸ್ಮಿಕ. `ಸಂಯುಕ್ತ ಕರ್ನಾಟಕ'ದಲ್ಲಿ ವೃತ್ತಿ ಆರಂಭಿಸಿದ ಅವರು `ಪ್ರಜಾವಾಣಿ', `ಸುಧಾ' ಬಳಿಕ `ಕನ್ನಡಪ್ರಭ'ಕ್ಕೂ ಕಾಲಿಟ್ಟರು. ಮಹಾಮೌನಿಯಾಗಿದ್ದ ಸದಾಶಿವ ಅವರೊಳಗೊಬ್ಬ ನಗೆಗಾರ ಇದ್ದ ಎಂದರೆ ನಂಬುವುದಕ್ಕೇ ಆಗುವುದಿಲ್ಲ. ಸದಾಶಿವ ಕಥೆಗಾರರೆಂದು ಪ್ರಸಿದ್ಧರಾದವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನೂ ಅವರು...
ಅವತರಿಸುವ ಮುನ್ನ (1995ರ ಸುಮಾರಿಗೆ ಬರೆದ ನಾಟಕ ಇದು. ಆಗ ನಾನು ಬೆಳಗಾವಿಯ ನಾಡೋಜ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ.) ಅವತಾರದ ರಚನಾ ಶಿಲ್ಪದಲ್ಲಿ ಪೌರಾಣಿಕ ಕಲ್ಪನೆ ಇದ್ದರೂ ಅದು ಸ್ಫೋಟಗೊಳಿಸುವ ಬೀಜಾಣುಗಳು ತೀರ ಸಮಕಾಲೀನವಾದುದಾಗಿದೆ. ಅದು ಹೇಳಹೊರಟ ಗುರಿಯತ್ತ ತಡೆಯಿಲ್ಲದೆ ಸಾಗಿದೆ ಎಂಬುದು ನನ್ನ ಭಾವನೆ. ಜಾನಪದ ಗೇಯತೆಯುಳ್ಳ ಪದ್ಯಗಳ ಬಾಹುಳ್ಯತೆಯಿಂದಾಗಿ ಇದೊಂದು ಸಂಗೀತ ನಾಟಕವೇನೋ ಎನ್ನುವ ಗುಮಾನಿಯೂ ಬರಬಹುದು.ವಿಶೇಷ ಸಲಕರಣೆಗಳಿಲ್ಲದೆ, ರಂಗದಲ್ಲಿಯೇ ಜೋಡಿಸಬಹುದಾದ ಖುರ್ಚಿಯೊಂದನ್ನುಳಿದು, ಇದನ್ನು ಬೀದಿ ನಾಟಕವನ್ನಾಗಿಯೂ ನಟಿಸಬಹುದಾದ ಸಾಧ್ಯತೆ ಇದೆ. ರಂಗಪ್ರಯೋಗದ ವೇಳೆಯಲ್ಲಿ...