(ಈ ಲೇಖನ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ 26-1-2003ರಂದು ಪ್ರಕಟವಾದದ್ದು)ಮೋಹನದಾಸ ಕರಮಚಂದ ಗಾಂಧಿ ಉರ್ಫ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು 1948ರ ಜನವರಿ 30ರಂದು ನಥೂರಾಮ ಗೋಡಸೆ ದಿಲ್ಲಿಯ ಬಿರ್ಲಾ ಭವನದಲ್ಲಿ ಗುಂಡಿಕ್ಕಿ ಕೊಂದು ಹಾಕಿದ. ಈ ಹತ್ಯೆಗಾಗಿ ಅವನನ್ನು ಗಲ್ಲಿಗೇರಿಸಲಾಯತು.ಈ ಎರಡು ವಾಕ್ಯಗಳಲ್ಲಿ ಸ್ವತಂತ್ರ ಭಾರತದ ಅತ್ಯಂತ ದುರಂತವಾದ ಘಟನೆಯೊಂದನ್ನು ಪೊಲೀಸ್ ಶೈಲಿಯಲ್ಲಿ ಹೇಳಿ ಮುಗಿಸಬಹುದು. ಗಾಂಧೀಜಿಯವರ ಹತ್ಯೆ ನಡೆದು 55 ವರ್ಷಗಳಾದವು. ಗಾಂಧೀಜಿ ಹತ್ಯೆ ನಂತರದ ಎರಡನೆ ತಲೆಮಾರು ಗಾಂಧೀಜಿ ಹತ್ಯೆಯ ವಿವರಗಳ ಬಗೆಗೆ ಕತ್ತಲೆಯಲ್ಲಿದೆ....