ಸೃಜನಕ್ರಿಯೆ ಮತ್ತು ವಿಮರ್ಶನ ಕ್ರಿಯೆ ಎರಡರಲ್ಲೂ ತಮ್ಮನ್ನು ಸಮನಾಗಿ ತೊಡಗಿಸಿಕೊಂಡಿರುವ ಮಾಧವ ಕುಲಕರ್ಣಿಯವರು ಕನ್ನಡದ ‘ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ’ಗಳ ಸಂಕಲನ ಹಲವು ದೃಷ್ಟಿಯಿಂದ ಮಹತ್ವದ್ದಾಗಿದೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗೆ ಇದು ಕೆಲವು ಸೂತ್ರಗಳನ್ನು ಹೊಸದಾಗಿ ಸೇರಿಸುವುದರಿಂದ ವಿಮರ್ಶೆಯ ಅಭ್ಯಾಸಿಗಳು ಇದರ ಓದಿನಿಂದ ಲಾಭ ಪಡೆಯಬಹುದಾಗಿದೆ. ಅವರ ವಿಮರ್ಶೆಯ ಮೀಮಾಂಸೆಯನ್ನು ಗುರುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. ಗೋಕಾಕರ ಸಮರಸವೇ ಜೀವನ ಕಾದಂಬರಿಯ ಬಗ್ಗೆ ಇರುವ ಮೊದಲ ಲೇಖನದಲ್ಲಿ ಪಾತ್ರ ಸೃಷ್ಟಿ ಮತ್ತು ಮೌಲ್ಯವ್ಯವಸ್ಥೆಯ ಸೃಷ್ಟಿ ಹಾಗೂ...
ಸಾವೆಂಬುದು ಅನಿವಾರ್ಯದ ಸತ್ಯ. ಸಾಹಿತಿಗಳು ತಮ್ಮ ಕೃತಿಗಳಲ್ಲಿ ಸಾವನ್ನು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಮಹಾಕವಿ ಕುವೆಂಪು ಅವರು ತಮ್ಮ ಸಮಗ್ರ ಸಾಹಿತ್ಯದಲ್ಲಿ ಸಾವನ್ನು ವರ್ಣಿಸಿದ ರೀತಿಯನ್ನು ಡಾ.ಟಿ.ಸಿ.ಪೂರ್ಣಿಮಾ ಮತ್ತು ಡಾ.ಮಂಜುಳಾ ಹುಲ್ಲಹಳ್ಳಿ ಸಂಶೋಧನೆ ಮಾಡಿ ‘ದಿಟದ ಮನೆ’ ಎಂಬ ಕೃತಿಯನ್ನು ರಚಿಸಿದ್ದಾರೆ. ‘ಕಾಲದೇವನ ಮನೆ ದಲ್ ದಿಟಂ ದಿಟದ ಮನೆ’ ಎಂದು ಕುವೆಂಪು ಅವರೇ ಒಂದೆಡೆ ಹೇಳಿದ್ದಾರೆ. ಈ ಇಬ್ಬರು ಸಂಶೋಧಕಿಯರು ಆಯ್ಕೆ ಮಾಡಿಕೊಂಡ ವಿಷಯವೇ ಬೆರಗನ್ನು ಮೂಡಿಸುತ್ತದೆ. ಕುವೆಂಪು ಅವರ ಸಾಹಿತ್ಯವೇ ಸಾಗರದಷ್ಟು ಅಪಾರವಾದದ್ದು. ಅಂಥದ್ದರಲ್ಲಿ...
ಆಧುನಿಕ ಕನ್ನಡದ ಹಿರಿಯ ತಲೆಮಾರಿನ ಮುಸ್ಲಿಂ ಕವಿಗಳಲ್ಲಿ ತಟ್ಟನೆ ಪ್ರಸ್ತಾಪವಾಗುವ ಹೆಸರುಗಳು ಎಂ.ಅಕಬರ ಅಲಿ ಮತ್ತು ಪ್ರೊ.ಕೆ.ಎಸ್.ನಿಸಾರ್ ಅಹಮದ್. ಅದೇ ಸಾಲಿನ ಮತ್ತೊಂದು ಹೆಸರು ಬಿ.ಎ.ಸನದಿ. ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಕಾವ್ಯೋದ್ಯೋಗದಲ್ಲಿ ತೊಡಗಿಕೊಂಡಿರುವ ಸನದಿಯವರು ಆಗಾಗ ಗದ್ಯದಲ್ಲೂ ಕೃಷಿ ಮಾಡಿದವರು. ವೈಚಾರಿಕ ಬರೆಹಗಳು, ವಿಮರ್ಶೆ, ವ್ಯಕ್ತಿಚಿತ್ರಗಳು, ಸಂಪಾದನೆ, ನಾಟಕ, ಅನುವಾದ, ಗೀತರೂಪಕ, ಶಿಶುಸಾಹಿತ್ಯ ಹೀಗೆ ಅವರ ಬರೆಹಗಳಲ್ಲಿ ವೈವಿಧ್ಯವಿದೆ. ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ತಮ್ಮ ವೃತ್ತಿಯ ಬಹುಭಾಗವನ್ನು ಮುಂಬಯಿಯಲ್ಲಿ ಕಳೆದವರು. ಸದ್ಯ ತಮ್ಮ ನಿವೃತ್ತಿ ಜೀವನವನ್ನು...