ರಾಮಾಯಣದ ಮೇಲೆ ಈಗಾಗಲೆ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕೃತಿಗಳು ಬಂದಿವೆ. ವಾಲ್ಮೀಕಿ ರಾಮಾಯಣವೇ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ವಿವಿಧ ಲೇಖಕರಿಂದ ಗದ್ಯವೋ ಪದ್ಯ ರೂಪದಲ್ಲೋ ಬಂದಿದೆ. ಈ ಸಾಲಿಗೆ ಡಾ.ಪದ್ಮಾಕರ ವಿ. ವರ್ತಕ ಅವರು ಬರೆದಿರುವ ‘ವಾಸ್ತವ ರಾಮಾಯಣ’ವು ಸೇರಿದೆ. ಇದೊಂದು ವಸ್ತುನಿಷ್ಠ ಸಂಶೋಧನಾ ಗ್ರಂಥ ಎಂದು ಹೇಳಲಾಗಿದೆ. ಇದನ್ನು ಹೇಮಂತರಾಜ ಕುಲಕರ್ಣಿಯವರು ಕನ್ನಡಕ್ಕೆ ತಂದಿದ್ದಾರೆ. ವರ್ತಕ ಅವರು ಕೃತಿಯಲ್ಲಿ ವಿವಿಧ ಅಂಶಗಳ ಮೂಲವನ್ನು ಶೋಧಿಸುವುದರಲ್ಲಿ ಯಾವುದೇ ಚೌಕಾಶಿಗೆ ಒಪ್ಪಿಕೊಂಡಿಲ್ಲ. ‘ಸತ್ಯನಿಷ್ಠತೆ ಹಾಗೂ ಸತ್ಯಶೋಧನೆ ಇವು ವರ್ತಕರ...
ತೆಲುಗಿನ ಜನಪ್ರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಅವರು ಕನ್ನಡದಲ್ಲಿಯೂ ಜನಪ್ರಿಯರಾಗಿದ್ದಾರೆ. ಇದಕ್ಕೆ ಅವರ ಕೃತಿಗಳ ಅನುವಾದವೇ ಕಾರಣವಾಗಿದೆ. ಅವರ ಕೃತಿಗಳನ್ನು ಕನ್ನಡಿಸುತ್ತಿರುವವರಲ್ಲಿ ಯತಿರಾಜ್ ವೀರಾಂಬುಧಿಯವರು ಪ್ರಮುಖರು. ಇದೀಗ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ‘ಕಣಿವೆಯಿಂದ ಶಿಖರಕ್ಕೆ’ ಕನ್ನಡ ಓದುಗರಿಗೆ ದೊರೆಯುವಂತೆ ಮಾಡಿದ್ದಾರೆ ವೀರಾಂಬುಧಿಯವರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಶೇಷತೆಗಳಿರುತ್ತವೆ. ಮರೆವೆಯಿಂದಲೋ ಆಲಸ್ಯದಿಂದಲೋ ಆ ವಿಶೇಷತೆಗಳು ಹೊರಬರುವುದೇ ಇಲ್ಲ. ಹನುಮಂತನಿಗೆ ಆತನ ಸಾಮರ್ಥ್ಯವನ್ನು ಬೇರೆಯವರು ಹೇಳಿದ ಮೇಲಷ್ಟೆ ಅರಿವಿಗೆ ಬರುತ್ತಿತ್ತಂತೆ. ಋಷಿಗಳ ಶಾಪದಿಂದ ಆತನಿಗೆ ಹಾಗೆ ಆಗಿತ್ತು. ತಮ್ಮ ನೈಜ...