ಪ್ರೇಮದ ಪರಿಕಲ್ಪನೆ ವಿಭಿನ್ನವಾದದ್ದು. ಗ್ರಹಿಸುವವರ ಮನಸ್ಥಿತಿಯನ್ನು ಇದು ಅವಲಂಬಿಸಿರುತ್ತದೆ. ಸಖ ಮತ್ತು ಸಖಿಯನ್ನು ನಾವು ಲೌಖಿಕದ ನೆಲೆಯಲ್ಲೂ ನೋಡಬಹುದು ಅಧ್ಯಾತ್ಮದ ನೆಲೆಯಲ್ಲೂ ನೋಡಬಹುದು. ಪರಮಾತ್ಮನನ್ನೇ ತಮ್ಮ ಪತಿಯೆಂದು ಬಗೆದು ಆರಾಧಿಸುವ ಶರಣ ಪರಂಪರೆ ದಾಸ ಪರಂಪರೆ ನಮ್ಮಲ್ಲಿದೆ. ಪುರುಷರೂ ಭಗವಂತನನ್ನು ಪತಿಯೆಂದು ಬಗೆದು ತಮ್ಮನ್ನು ಸತೀತ್ವದಲ್ಲಿರಿಸಿಕೊಂಡು ಆರಾಧಿಸಿದವರಿದ್ದಾರೆ. ಬೇಂದ್ರೆಯವರ ‘ಸಖೀಗೀತ’ ಲೌಖಿಕದ ಪ್ರೇಮಪ್ರಪಂಚದಿಂದ ಅಧ್ಯಾತ್ಮದ ಭಕ್ತಿಪ್ರಪಂಚದ ವರೆಗೆ ಭಾವವನ್ನು ಬೆಳಗಿದೆ. ಅಕ್ಕಮಹಾದೇವಿಯ ಹರ ಪ್ರೇಮ, ಸಂತ ಮೀರಾಳ ಹರಿ ಪ್ರೇಮ ಕಾವ್ಯ ಮಾಧ್ಯಮದಲ್ಲಿ ಅಭಿವ್ಯಕ್ತಿ ಪಡೆದುದನ್ನು ಗಮನಿಸಬಹುದು....
‘ದಾದಾಗಿರಿಯ ದಿನಗಳು’ ಮೂಲಕ ಭೂಗತ ಜಗತ್ತಿನ ಹತ್ತಿರದ ಚಿತ್ರಣವನ್ನು ಕನ್ನಡ ಸಾಹಿತ್ಯ ರಸಿಕರಿಗೆ ಉಣಬಡಿಸಿರುವ ಅಗ್ನಿ ಶ್ರೀಧರ ಅವರ ಹೊಸ ಕಾದಂಬರಿ ‘ತೊಟ್ಟಿಕ್ಕುತ್ತಲೇ ಇದೆ ನೆತ್ತರು’. ಇದು ಕೂಡ ಭೂಗತ ಜಗತ್ತಿನ ವಸ್ತುವನ್ನೇ ಹೊಂದಿದೆ. ಒಬ್ಬ ಮಜೂರ್ (ಕಿಸೆಗಳ್ಳ) ಆಗಿದ್ದ ಆಸೀಫ್ನನ್ನು ಇಬ್ಬರು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗುವುದರೊಂದಿಗೆ ಈ ಕಾದಂಬರಿ ಆರಂಭವಾಗುತ್ತದೆ. ನಿರಪರಾಧಿಗಳೂ, ಅವಕಾಶಕೊಟ್ಟರೆ ಸುಧಾರಣೆಯ ಬದುಕನ್ನು ಬದುಕಬಲ್ಲ ಪುಡಿ ಅಪರಾಧಿಗಳು ಪೊಲೀಸರ ತಂತ್ರ ಕುತಂತ್ರಗಳಿಂದಾಗಿ ಹೇಗೆ ಸಮಾಜಘಾತಕರಾಗಬಹುದು ಎಂಬುದನ್ನ ಆಸೀಫ್, ವರದ ಮೊದಲಾದವರ...
ರಾಷ್ಟ್ರಕವಿ ಪದವಿ ಮತ್ತು ಜನಸಾಮಾನ್ಯ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ನಿಧನರಾಗಿ ಬಹು ದಿನಗಳಾಗಿಹೋದವು. ಅವರ ನಿಧನದೊಂದಿಗೆ ರಾಷ್ಟ್ರಕವಿ ಎಂಬ ಗೌರವ ಹಾಗೆಯೇ ಉಳಿದುಬಿಟ್ಟಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಮೂವರು ರಾಷ್ಟ್ರಕವಿಗಳು ಆಗಿಹೋಗಿದ್ದಾರೆ. ಎಂ.ಗೋವಿಂದಪೈಯವರು ಮದ್ರಾಸ್ ಸರ್ಕಾರದಿಂದ ರಾಷ್ಟ್ರಕವಿ ಗೌರವವಕ್ಕೆ ಪಾತ್ರರಾಗಿದ್ದರು. ಅವರ ಬಳಿಕ ಕುವೆಂಪು ಅವರು ಕರ್ನಾಟಕ ಸರ್ಕಾರದಿಂದಲೇ ರಾಷ್ಟ್ರಕವಿಯಾದರು. ಅವರ ನಿಧನದ ಬಳಿಕ ಜಿ.ಎಸ್.ಶಿವರುದ್ರಪ್ಪನವರಿಗೆ ಆ ಗೌರವ ಬಂತು. ಈಗ ಅವರೂ ನಿಧನರಾಗಿದ್ದಾರೆ. ಈಗ ಆ ಗೌರವವನ್ನು ಯಾರಿಗೆ ನೀಡಬೇಕು? ಇದು ಇನ್ನೂ ಸಾರ್ವಜನಿಕರ ಚರ್ಚೆಯ ವಿಷಯವಾಗಿಲ್ಲ. ನಮ್ಮಲ್ಲಿ...