ಮಾತನಾಡಬೇಡ.(Don`t Speak) ಇದು ಈ ಬಾರಿಯ ನೊಬೆಲ್ ಪ್ರಶಸ್ತಿ ಪಡೆದ ಚೀನದ ಸಾಹಿತಿ ಗುಆನ್ ಮೋಯೆಯ ಕಾವ್ಯನಾಮ “ಮೋ ಯಾನ್” ಎಂಬುದರ ಅರ್ಥ. ಮಾತು ಮಾಣಿಕ್ಯ, ಮಾತೆಂಬುದು ಜ್ಯೋತಿರ್ಲಿಂಗ ಎಂದು ಮಾತಿನ ಮಹತ್ವವನ್ನು ವರ್ಣಿಸಿದ ನಾಡು ನಮ್ಮದು. ಆದರೆ ಚೀನದಂಥ ಕಮ್ಯುನಿಸ್ಟ್ ದೇಶದಲ್ಲಿ ಇಲ್ಲವೆ ಮಿಲಿಟರಿ ಸರ್ವಾಧಿಕಾರಿಗಳು ಇರುವ ದೇಶದಲ್ಲಿ ಸೃಜನಶೀಲ ಬರೆಹಗಾರನೊಬ್ಬನ ಸ್ಥಿತಿ ಇದು. ಈ ಸ್ಥಿತಿಯನ್ನೇ ತನ್ನ ಕಾವ್ಯನಾಮ ಮಾಡಿಕೊಂಡ ಗೋಆನ್ ಮೋಯೆ ಒಂದರ್ಥದಲ್ಲಿ ವ್ಯವಸ್ಥೆಗೆ ಧಿಕ್ಕಾರ ಹೇಳಿದವರು. ತಮ್ಮ ದೇಶದ ಸಾಮಾಜಿಕ ಮತ್ತು...