ಈ ದೇಶದ ಕಾನೂನು ಯಾರಿಗೂ ತಮ್ಮ ಸಾವನ್ನು ತಾವೇ ತಂದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿಲ್ಲ. ಬೇರೆಯವರ ಜೀವವನ್ನು ತೆಗೆಯುವುದು ಹೇಗೆ ಅಪರಾಧವೋ ತಮ್ಮ ಜೀವವನ್ನು ತೆಗೆದುಕೊಳ್ಳುವುದೂ ಅಪರಾಧವೇ. ಇಂಥ ಕಾನೂನಿನ ವ್ಯವಸ್ಥೆ ಇರುವ ದೇಶದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಎನ್ನುವ ಮಾತು ಅಪರಾಧವೇ. ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ.ಗಾಂಧೀಜಿಯ ನಾಡಿನಲ್ಲಿ ಉಪವಾಸ ಸತ್ಯಾಗ್ರಹ ಹಾದಿ ತಪ್ಪುತ್ತಿದೆಯೆ ಎಂಬ ಪ್ರಶ್ನೆ ಕಾಡುತ್ತಿದೆ. ಉಪವಾಸ ಸತ್ಯಾಗ್ರಹ ಗಾಂಧೀಜಿಯವರ ದೃಷ್ಟಿಯಲ್ಲಿ ಆತ್ಮಶುದ್ಧಿಯ ಸಾಧನವಾಗಿತ್ತು. ಅವರು ಯಾವುದೇ ಬೇಡಿಕೆ ಇಲ್ಲದೆಯೂ, ಕೆಲವೊಮ್ಮೆ ಪ್ರಾಯಶ್ಚಿತ್ತ ರೂಪದಲ್ಲಿ...
ಈಗ ಕವನ ಬರೆಯುವುದು ಸುಲಭವಲ್ಲ ಗೆಳೆಯ ಏಕೆಂಬೆಯಾಏಕೆಂದರೆ ಕವನಬರೆಯುವುದೆಂದರೆ ಸತ್ಯವನ್ನುಹೇಳಬೇಕು, ಕವನಬರೆಯುವುದೆಂದರೆ ಮಾಡಿದ್ದನ್ನೇಮಾಡಿದ್ದೇನೆ ಎನ್ನಬೇಕುಕವನ ಬರೆಯುವುದೆಂದರೆಜಗ ಮೆಚ್ಚಿ ಅಹುದಹುದುಎನಬೇಕು.ಆದರೆಸತ್ಯ ಹೇಳುವುದುಅಷ್ಟು ಸುಲಭವಲ್ಲಮಾಡಿದ್ದನ್ನೆಲ್ಲ ಹೇಳಿ ಬೆತ್ತಲಾಗುವ ಎದೆಗಾರಿಕೆ ಇಲ್ಲಇನ್ನು ಜಗ ಎಲ್ಲಿಮೆಚ್ಚಬೇಕು ಹೇಳು?ಅದಕ್ಕೇ ಕವನ ಬರೆಯುವುದುಈಗ ಸುಲಭವಲ್ಲ.
ಶರಾವತಿ ದಡದಲ್ಲಿ ಅನಗೋಡು ಎಂಬ ಊರಿದೆ. ಈ ಅನಗೋಡಿನ ಬಗ್ಗೆ ಇತ್ತೀಚಿನ ಹೊಸ ಮಾಹಿತಿ ಎಂದರೆ ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದ ಕೆಲವು ಭಾಗವನ್ನು ಚಿತ್ರೀಕರಿಸಿದ್ದು ಇಲ್ಲಿಯೇ. ಅನಗೋಡಿನ ಜಾನಪದ ಪರಂಪರೆಯಲ್ಲಿ ನಡೆಯುವ ಊರ ಹಬ್ಬ ಪ್ರತಿ ವರ್ಷ ಮೇ ತಿಂಗಳ 21ರಂದು ನಡೆಯುತ್ತದೆ. ಈ ಬಾರಿ ನನಗೆ ಅನಗೋಡು ಹಬ್ಬವನ್ನು ನೋಡುವ ಅವಕಾಶ ದೊರೆಯಿತು. ಅನಗೋಡು ಹಬ್ಬದಲ್ಲಿ ಕುಮಾರರಾಮನನ್ನು ಮತ್ತು ಸತಿಹೋದ ಆತನ ಪತ್ನಿಯರನ್ನು ಪೂಜೆ ಮಾಡುತ್ತಾರೆ. ಮೂಲತಃ ಕುಮಾರರಾಮನು ಕಳ್ಳನೇ ಎಂದು...